ಹೆಣ್ಣು ಮಕ್ಕಳು ಈ 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು

ಹೆಣ್ಣು ಮಕ್ಕಳು ಈ 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು. ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂಥದ್ದು ಅಂತಾ ಅವರಿಗಷ್ಟೇ ಗೊತ್ತಿರುತ್ತದೆ. ಅ ನೋವನ್ನು ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಯಾವ 5 ತಪ್ಪುಗಳನ್ನು ಮಾಡಬಾರದು. ಅದು ಯಾವುವು ಎಂದರೆ

ಹಗಲು ನಿದ್ರಿಸುವುದು. ಆಯುರ್ವೇದದ ಪ್ರಕಾರ, ನೀವು ಮುಟ್ಟಾದಾಗ, ಹಗಲಲ್ಲಿ ನಿದ್ರಿಸಿದರೆ, ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ. ಕಫದ ಪ್ರಮಾಣ ಹೆಚ್ಚಾದಾಗ, ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಿಶ್ಯಕ್ತಿಯಾಗುತ್ತದೆ. ಹಾಗಾಗಿ ಮುಟ್ಟಾದಾಗ, ಹಗಲಲ್ಲಿ ನಿದ್ರಿಸಬೇಡಿ. ನಿದ್ರಿಸಲೇಬೇಕು ಎಂದಿದ್ದರೇ, ಅರ್ಧ ಗಂಟೆ ನಿದ್ರಿಸಿದರೆ ಸಾಕು.

ಕರಿದ, ಹೆಚ್ಚು ಖಾರವಾದ, ಹೆಚ್ಚು ಸಿಹಿಯಾದ ಆಹಾರವನ್ನು ಸೇವಿಸುವುದು. ನೀವು ಮುಟ್ಟಾದಾಗ, ಹಾಲು, ತುಪ್ಪ, ಮೊಸರು, ಬೆಣ್ಣೆ, ಹಣ್ಣು, ತರಕಾರಿ, ಸೊಪ್ಪು ಸೇವಿಸಬೇಕು. ಆದರೆ ತುಂಬಾ ಜನ ಕರಿದ ಪದಾರ್ಥ, ಹೆಚ್ಚು ಖಾರವಾದ ಪದಾರ್ಥ, ನಾನ್ವೆಜ್, ಚಾಕೋಲೆಟ್ಸ್, ಕೇಕ್ ಇದೆಲ್ಲವನ್ನು ತಿನ್ನುತ್ತಾರೆ. ಈ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಕೆಲವರು ತಂಪು ಆಹಾರ ಸೇವಿಸಬೇಕು ಎಂದು ಫ್ರಿಜ್ ನಲ್ಲಿದ್ದ ಆಹಾರ ಅಥವಾ ಐಸ್ ಹಾಕಿದ ಪಾನೀಯವನ್ನು ಕುಡಿಯುತ್ತಾರೆ. ಇದು ತಪ್ಪು ಫ್ರಿಜ್ ನಲ್ಲಿರುವ ವಸ್ತು ನಾಲಿಗೆಗೆ ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚೆಚ್ಚು ಶುದ್ಧವಾದ ನೀರು ಕುಡಿಯಿರಿ.

ಹೆಚ್ಚು ಶ್ರಮವಹಿಸಿ ಕೆಲಸ ಮಾಡುವುದು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಾಡುವಂಥ ಕೆಲಸವನ್ನ, ಮುಟ್ಟಿನ ದಿನಗಳಲ್ಲಿ ಮಾಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂದಿನ ಕಾಲದಲ್ಲಿ ಮಹಿಳೆಯರು ಕೆಲಸಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೆಲಸದ ಬಗ್ಗೆ ಟೆನ್ಷನ್ ಇರುವುದು ಸಾಮಾನ್ಯ ಆದರೇ ನೀವು ಈ ಸಮಯದಲ್ಲಿ ಆ ಬಗ್ಗೆ ಹೆಚ್ಚು ಟೆನ್ಷನ್ ತೆಗೆದುಕೊಳ್ಳಬಾರದು. ಹೆಚ್ಚು ಮನೆಗೆಲಸವೂ ಮಾಡಬಾರದು. ನೀವೇನಾದರೂ ಇಂಥ ಕೆಲಸ ಮಾಡಿದರೇ ಭವಿಷ್ಯದಲ್ಲಿ ನಿಮಗೆ ವೀಕ್ ನೆಸ್ ಬರುವ ಸಾಧ್ಯತೆ ಇರುತ್ತದೆ.

ಸಂಭೋಗ ಮಾಡುವುದು. ಸಾಮಾನ್ಯವಾಗಿ ಹಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಸಂಭೋಗ ಮಾಡುವುದಿಲ್ಲ. ಆದರೆ ಕೆಲ ಕಾಮುಕ ಪುರುಷರ ಒತ್ತಾಯಕ್ಕೆ, ಮಹಿಳೆಯರು ಒಳಗಾಗುತ್ತಾರೆ. ಯಾವುದೇ ಕಾರಣಕ್ಕೂ ಮುಟ್ಟಿನ ಸಮಯದಲ್ಲಿ ನೀವು ಈ ಕೆಲಸಕ್ಕೆ ಮುಂದಾಗದಿದ್ದರೆ ಒಳ್ಳೆಯದು.

ತಲೆ ಸ್ನಾನ ಮಾಡುವುದು. ನೀವು ಮುಟ್ಟಾಗಿದ್ದರೆ, ಆ ಮೂರು ದಿನಗಳ ಕಾಲ ತಲೆಸ್ನಾನ ಮಾಡುವಂತಿಲ್ಲ. ಬರೀ ಮೈಸ್ನಾನವಷ್ಟೇ ಮಾಡಬಹುದು. ನೀವು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಅದರ ಪರಿಣಾಮ ನಿಮ್ಮ ಮೂಲಾಧಾರ ಚಕ್ರದ ಮೇಲಾಗುತ್ತದೆ. ಇದು ನೀವು ಮೂತ್ರ ವಿಸರ್ಜನೆ ಮಾಡುವ ಸ್ಥಳದ ಬಳಿ ಇರುವ ಚಕ್ರವಾಗಿದೆ. ಈ ಚಕ್ರದ ಮೇಲೆ ಪರಿಣಾಮ ಬೀರಿದರೆ, ಹೆಣ್ಣು ಮಕ್ಕಳಿಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ತಲೆ ಸ್ನಾನ ಮಾಡಬಾರದು ಅನ್ನೋದು ಅಷ್ಟೇ ಮುಖ್ಯವಾಗಿದೆ.

Leave a Comment