ಹೆಣ್ಣುಮಕ್ಕಳು ಯಾಕೆ ಘಂಟೆ ಬಾರಿಸಬಾರದು ? 

ಹೆಣ್ಣುಮಕ್ಕಳು ಗಂಟೆಯನ್ನು ಬಾರಿಸಬಾರದ ಬಾರಿಸುದರೆ ಏನಾಗುತ್ತದೆ ಎಂಬ ಕುತೂಹಲ ಮಾಹಿತಿ ನಿಮಗಾಗಿ
ಗಂಟಾನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೆ ಯೋ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ.

ಗಂಟೆಯನ್ನು ಬಾರಿಸದೆ ಪೂಜೆ ಮಾಡಿದ್ದ ಸಂದರ್ಭದಲ್ಲಿ ಅದು ಸಾರ್ಥಕ ಆಗುವುದಿಲ್ಲ ಹಾಗಾಗಿ ಗಂಟಾನಾದ ಮಾಡಲೇಬೇಕು. ಗಂಟಾನಾದವನ್ನು ಯಾವಾಗ ಮಾಡಬೇಕು. ದೇವರಿಗೆ ದೂಪ ತೋರಿಸಿದಾಗ ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಗಂಟನಾದವನ್ನು ಮಾಡಲೇಬೇಕು. ಗಂಟೆಯ ಎತ್ತರ 5 ಇಂಚು ಇದ್ದರೆ ಸಾಕು ಇನ್ನು ಎತ್ತರ ಇದ್ದರು ಪರವಾಗಿಲ್ಲ ಆದರೆ ಚಿಕ್ಕದಿರಬಾರದು ಗಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ

ನಂದೇಶ್ವರ ಮೂರ್ತಿ ಇರುವಂತಹ ಗಂಟೆಯನ್ನು ಬಳಸಿದರೆ ಒಳ್ಳೆಯದು ಇನ್ನು ಕೆಲವರು ಶಂಕು ಚಕ್ರ ಇರುವ ಗಂಟೆಯನ್ನು ಬಳಸುತ್ತಾರೆ ಅದು ಕೂಡ ತುಂಬಾನೇ ಒಳ್ಳೆಯದು. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಬೇಕೆಂದರೆ ಮನೆಯ ಮೂಲೆ ಮೂಲೆಯಲ್ಲೂ ಗಂಟೆ ಬಾರಿಸಬೇಕು ಬೆಳಗ್ಗೆ ಗಂಡು ಮಕ್ಕಳು ಸಂಜೆ ವೇಳೆ ಹೆಣ್ಣು ಮಕ್ಕಳು ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ

ಇದರಿಂದ ಮನೆಯಲ್ಲಿ ಧನಾಭಿ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಗಂಟೆಯ ಶಬ್ದ ಓಂಕಾರ ಕ್ಕೆ ಸಮನಾಗಿರುತ್ತದೆ ಆದ್ದರಿಂದ ನೀವು ಓಂಕಾರ ಜಪಿಸಿದಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ ಪುರಾಣಗಳ ಪ್ರಕಾರ ಪೂಜಾ ಸಮಯದಲ್ಲಿ ಗಂಟೆ ಬಾರಿಸಿದಾಗ ಅದು ದೇವರ ಎದುರು ನಿಂತಿರುವ ವ್ಯಕ್ತಿ ಉಪಸ್ಥಿತಿಯನ್ನು ದೇವರಿಗೆ ಖಚಿತಪಡಿಸುತ್ತದೆ ಜೊತೆಗೆ ದೇವರನ್ನು ಎಚ್ಚರಗೊಳಿಸಲು ಕೂಡ ಎಂದು ಹೇಳುತ್ತಾರೆ.

ಗಂಟೆ ಬಾರಿಸುವ ಮೂಲಕ ವ್ಯಕ್ತಿಗಳ ಮನಸ್ಸಲ್ಲಿ ಧಾರ್ಮಿಕ ಭಾವಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಸದ್ದು ಪರಿಸರವನ್ನು ಶುದ್ಧ ಮಾಡುತ್ತದೆ. ಈ ಶಬ್ದದಿಂದ ಹೊರ ಬರುವ ಕಂಪನಗಳು ಆ ಪ್ರದೇಶದಲ್ಲಿರುವ ಹಾನಿಕಾರಕ ವೈರಸ್ ಗಳು ಬ್ಯಾಕ್ಟೀರಿಯಾ ಗಳು ಮತ್ತು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ ಇದರಿಂದ ದೇವಾಲಯ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಯಾವ ಸಮಯದಲ್ಲಿ ಗಂಟೆ ಬಾರಿಸಬಾರದು

ದೇವರಿಗೆ ಅಲಂಕಾರ ಮಾಡುವಾಗ ರಾತ್ರಿ ಸಮಯದಲ್ಲಿ ಗಂಟೆ ಬಾರಿಸಬಾರದು ಅದು ಸಕಲ ಜೀವಿಗಳಿಗೂ ವಿಶ್ರಾಂತಿ ಸಮಯ ಈ ಸಮಯದಲ್ಲಿ ಗಂಟನಾದವನ್ನು ಮಾಡಿದರೆ ಪುಣ್ಯಫಲ ದೊರೆಯುವುದಿಲ್ಲ ಏಕೆಂದರೆ ವಿಶ್ರಾಂತಿ ಪಡೆಯುತ್ತಿರುವವರನ್ನು ಅಥವಾ ಊಟ ಮಾಡುತ್ತಿರುವವರನ್ನು ತೊಂದರೆಗೊಳಪಡಿಸಿದರೆ ದೋಷ ಉಂಟಾಗುತ್ತದೆ

ಸೂತಕದ ಮನೆಯವರು ಗಂಟ ನಾದವನ್ನು ಮಾಡಬಾರದು ಏಕೆಂದರೆ ಸೂತಕ ಕಲೆಯುವವರೆಗೂ ಆತ್ಮಗಳು ಕುಟುಂಬಸ್ಥರ ಜೊತೆಯೇ ಇರುತ್ತದೆ. ಮನೆಯಲ್ಲಿ ಗಂಟ ನಾದ ಮಾಡುವುದು ಕಲಹ ಶಬ್ದ ಮಾಡುವುದು ಜೋರು ಪಾತ್ರೆ ಶಬ್ದ ಮಾಡುವುದು ಇದೆಲ್ಲ ಆ ಆತ್ಮಕ್ಕೆ ತುಂಬಾ ನೋವಾಗುತ್ತದೆ ಆತ್ಮಗಳು ಬಹಳ ಸೂಕ್ಷ್ಮವಾಗಿರುತ್ತದೆ ಎಂದು ಹೇಳುತ್ತಾರೆ

ಮಹಿಳೆಯರು ಗಂಟ ನಾದ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಇದು ಸುಮಾರು ವರ್ಷದಿಂದ ನಡೆದು ಬಂದ ಪದ್ದತಿ ಹಿರಿಯರು ಇದನ್ನು ಪಾಲಿಸಿದ್ದಾರೆ ಅದೇ ರೀತಿ ಸುಮಾರು ಮನೆಗಳಲ್ಲಿ ಸ್ತ್ರೀಯರು ಗಂಟನಾದ ಮಾಡುವುದಿಲ್ಲ ಸ್ತ್ರೀಯರ ಎಡಗೈನರವು ಗರ್ಭಕೋಶಕ್ಕೆ ಸೇರಿರುತ್ತದೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ.

Leave a Comment