ಜನವರಿ 2024 ಗೋಮಾತೆಗೆ ತಿನ್ನಿಸಿ ಈ 1 ವಸ್ತು ಇಡೀ ವರ್ಷ ಮನೆಗೆ ಹಣ ಧನಸಂಪತ್ತು ಬರುತ್ತದೆ

0

ನಾವು ಈ ಲೇಖನದಲ್ಲಿ ಜನವರಿ 2024 ರಂದು ಗೋ ಮಾತೆಗೆ ಈ ಒಂದು ವಸ್ತು ತಿನ್ನಿಸುವದರಿಂದ , ಇಡೀ ವರ್ಷ ಮನೆಗೆ ಹಣ ಧನ ಸಂಪತ್ತು ಹೇಗೆ ಬರುತ್ತದೆ. ಎಂದು ನೋಡೋಣ . ಒಂದು ಬಾರಿ ದ್ವಾರಕೆಗೆ ಭಗವಂತನಾದ ಶ್ರೀ ಕೃಷ್ಣನನ್ನು ಭೇಟಿ ಮಾಡಲು ಇವರ ಒಬ್ಬ ಸ್ನೇಹಿತನು ಬರುತ್ತಾನೆ. ಇವರು ಮಧ್ಯ ದೇಶದಲ್ಲಿ ವಾಸ ಮಾಡುತ್ತಿದ್ದರು.. ಶ್ರೀ ಕೃಷ್ಣನ ಮಿತ್ರನು ಅತ್ಯಂತ ದರಿದ್ರರು ಆಗಿದ್ದರು. ಹಾಗಾಗಿ ಶ್ರೀ ಕೃಷ್ಣನ ಬಳಿ ಬಡತನವನ್ನು ದೂರ ಮಾಡಲು ಉಪಾಯವನ್ನು ಕೇಳಲು ಬರುತ್ತಾರೆ .

ಶ್ರೀ ಕೃಷ್ಣನ ಮಿತ್ರರು ಕೇಳುತ್ತಾರೆ . ಏಕೆ ನಾನು ಅತ್ಯಂತ ದುಃಖ ಮತ್ತು ದರಿದ್ರನು ಆಗಿದ್ದೇನೆ . ಇಲ್ಲಿ ಎಷ್ಟೇ ಪ್ರಯತ್ನ ಮಾಡಿದರು ನನ್ನ ಕುಟುಂಬವನ್ನು ಸಾಕಲು ಬೇಕಾಗಿರುವಷ್ಟು ಧನ ಸಂಪತ್ತು ಸಿಗುತ್ತಿಲ್ಲ . ದ್ವಾರಕಾಧೀಶನೇ ನಾನು ಧನ ಸಂಪತ್ತು ಕೇಳಲು ಬಂದಿಲ್ಲ . ಆದರೆ ನೀವು ಆ ಒಂದು ಉಪಾಯವನ್ನು ತಿಳಿಸಿಕೊಡಿ . ಇದರಿಂದ ನನ್ನ ದರಿದ್ರತೆ ದೂರವಾಗಬೇಕು . ನಾನು ನನ್ನ ಕುಟುಂಬವನ್ನು ನಡೆಸುವಂತೆ ಆಗಬೇಕು . ಇಲ್ಲಿ ನಾನು ಯಾವುದೇ ಲಾಭದ ಕಾರಣದಿಂದಾಗಿ ನಿಮ್ಮ ಮುಂದೆ ಬಂದಿಲ್ಲ .

ನನಗೆ ಹಣವು ಕೂಡ ಬೇಕಾಗಿಲ್ಲ . ಇಲ್ಲಿ ನಿಮ್ಮ ಕೃಪೆ ನನ್ನ ಮೇಲೆ ಇರಲಿ ಎಂದು ಬಯಸುತ್ತೇನೆ . ದಯವಿಟ್ಟು ನನ್ನ ಬಡತನ ದೂರ ಮಾಡಲು ಯಾವುದಾದರು ಒಂದು ಉಪಾಯವನ್ನು ತಿಳಿಸಿ ಕೊಡಿ . ಜೀವನವಿಡೀ ನಾನು ನಿಮಗೆ ಋಣಿಯಾಗಿ ಇರುತ್ತೇನೆ . ಸ್ನೇಹಿತನು ಈ ರೀತಿ ಪ್ರಾರ್ಥನೆ ಮಾಡಿದ ನಂತರ , ಭಗವಂತನಾದ ಶ್ರೀ ಕೃಷ್ಣ ಈ ರೀತಿ ಹೇಳುತ್ತಾರೆ . ಹೇ ಮಿತ್ರನೇ ನನಗೆಲ್ಲವೂ ತಿಳಿದಿದೆ , ನಿನ್ನ ದುಃಖದ ಬಗ್ಗೆ ಮತ್ತು ದರಿದ್ರತೆ ಇರುವ ಕಾರಣ , ನನ್ನ ಹತ್ತಿರ ನೀನು ಹಣ ಕೇಳಲು ಬಂದಿಲ್ಲ ಎನ್ನುವ ವಿಷಯ ಕೂಡ ನನಗೆ ತಿಳಿದಿದೆ .

ಒಂದು ವೇಳೆ ನಾನು ನಿನಗೆ ಧನ ಸಂಪತ್ತನ್ನು ಕೊಟ್ಟರು ನೀನು ಅದನ್ನು ಸ್ವೀಕಾರ ಮಾಡುವುದಿಲ್ಲ . ಹಾಗಾಗಿ ನಾನು ನಿನ್ನ ಸ್ವಾಭಿಮಾನಕ್ಕೆ ಗೌರವವನ್ನು ಕೊಡುತ್ತಾ , ನಾನು ನಿನಗೆ ಹಣವನ್ನು ಕೊಡುವುದಿಲ್ಲ . ಆದರೆ ನಾನು ನಿನಗೆ ಒಂದು ಉಪಾಯವನ್ನು ಖಂಡಿತವಾಗಿ ತಿಳಿಸುತ್ತೇನೆ . ಈ ಮೂಲಕ ನೀನು ನಿನ್ನ ಬಡತನವನ್ನು ದೂರ ಮಾಡಿಕೊಳ್ಳಬಹುದು . ನಿನ್ನ ದರಿದ್ರತೆಯ ನಾಶವಾಗುತ್ತದೆ . ನಿನಗೆ ಅಪಾರ ಧನ ಸಂಪತ್ತಿನ ಪ್ರಾಪ್ತಿ ಆಗುತ್ತದೆ . ಹೇ ಮಿತ್ರನೇ ಅತ್ಯಂತ ಮಹತ್ವಪೂರ್ಣವಾದ ಧನ ಪ್ರಾಪ್ತಿಯ ಉಪಾಯವನ್ನು ತಿಳಿಸುವ ಮುನ್ನ ,

ನಾನು ನಿನಗೆ ಒಂದು ಮಹಾನ್ ಕಥೆಯನ್ನು ಹೇಳುತ್ತೇನೆ . ಇದನ್ನು ಕೇವಲ ಕೇಳಿದರೆ ಸಾಕು ನಿನ್ನ ಎಲ್ಲಾ ಮನಸ್ಥಿತಿಗಳು ಈಡೇರುತ್ತದೆ . ಇಲ್ಲಿ ನಾನು ತಿಳಿಸುವ ಉಪಾಯವನ್ನು ನೀನು ಮಾಡಿದರೆ , ನಿನ್ನ ದರದ್ರತೆಯು ದೂರವಾಗುತ್ತದೆ . ಹಾಗಾಗಿ ಈ ಕಥೆಯನ್ನು ಗಮನವಿಟ್ಟು ಕೇಳು .ಈ ಕಥೆಯಲ್ಲಿ ನಾನು ನಿನಗೆ ಸಂಪೂರ್ಣ ಮನ ಸ್ಥಿತಿಗಳನ್ನು ಪೂರ್ಣ ಗೊಳಿಸುವಂತಹ ಕಾಮಧೇನು ಮಾತೆಯ ಕೃಪೆಯನ್ನು ಪಡೆದು ಕೊಳ್ಳುವಂತಹ ಉಪಾಯವನ್ನು ತಿಳಿಸುತ್ತೇನೆ .

ನೀನು ಪ್ರತಿ ನಿತ್ಯ ಒಂದು ವಸ್ತುವನ್ನು ಗೋ ಮಾತೆಗೆ ತಿನ್ನಿಸಬೇಕು . ಈ ರೀತಿ ಮಾಡುವುದರಿಂದ ನಿನ್ನ ದರಿದ್ರತೆ ದೂರವಾಗುತ್ತದೆ .ಇದು ಪ್ರಾಚೀನ ಕಾಲದ ವಿಷಯವಾಗಿದೆ . ಪೂರ್ವ ದೇಶದಲ್ಲಿ ಒಬ್ಬ ಅತ್ಯಂತ ಶ್ರೀಮಂತ ವ್ಯಕ್ತಿ ಇದ್ದ . ಆತನ ಹೆಸರು ಪುಷ್ಪರಾಗ . ಆತನ ಬಳಿ ಹಣದ ಕೊರತೆ ಇರಲಿಲ್ಲ . ಆ ಶ್ರೀಮಂತನ ಹೆಂಡತಿಯಾದ ಲೀಲಾವತಿ ಅತ್ಯಂತ ಸುಂದರವಾಗಿದ್ದಳು . ಮತ್ತು ಪತಿವ್ರತೆ ಯ ನಾರಿಯಾಗಿ ಇದ್ದಳು. ಶ್ರೀಮಂತನಿಗೆ ಐದು ಮಕ್ಕಳು ಇದ್ದರು. ಅವರು ತನ್ನ ತಂದೆಗೆ ಕೆಲಸ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದರು . ಪುಷ್ಪರಾಗನ ಸ್ವಭಾವ ತುಂಬಾ ದುರಾಸೆ ಪಡುವಂತಹ ಸ್ವಾರ್ಥಿಯು ಆಗಿದ್ದನು . ಇತ

ನು ತುಂಬಾ ದುರ್ಬಲ ಜನರ ಲಾಭವನ್ನು ಪಡೆದುಕೊಂಡು ಹಣವನ್ನು ಕೂಡಿ ಹಾಕಿದ್ದ . ಈ ಶ್ರೀಮಂತ ವ್ಯಕ್ತಿ ತುಂಬಾ ಹಣವನ್ನು ಕೂಡಿ ಹಾಕಿದ್ದ .ಆದರೆ ಈತ ಯಾವುದೇ ಪುಣ್ಯ ಕಾರ್ಯವನ್ನು ಮಾಡಿರಲಿಲ್ಲ . ಶಾಸ್ತ್ರ ಹೇಳುತ್ತದೆ ಮನುಷ್ಯ ಎಷ್ಟು ಗಳಿಸುತ್ತಾನೆ, ಅದರ ಒಂದು ಭಾಗವನ್ನ ದಾನ ಮಾಡಬೇಕು. ಸ್ವಾರ್ಥ ಮತ್ತು ದುರಾಸೆಯ ಕಾರಣದಿಂದಾಗಿ , ಆ ಶ್ರೀಮಂತ ವ್ಯಕ್ತಿ ಯಾವತ್ತಿಗೂ ಒಂದು ಕಾಳನ್ನು ಕೂಡ ದಾನ ಮಾಡಿರಲಿಲ್ಲ . ಆತನ ದ್ವಾರದ ಹತ್ತಿರ ಬಂದ ಯಾವುದೇ ಭಿಕ್ಷಕರಿಗೂ ಕೂಡ

ಈತ ಒಂದು ಕವಡೆ ಎಷ್ಟು ಸಹ ದಾನ ಮಾಡಿರಲಿಲ್ಲ . ಈ ಒಂದು ಕಾರಣದಿಂದಾಗಿ ಈತನ ಪುಣ್ಯ ಯಾವುದೇ ಸಮವಾಗಿ ಇರಲಿಲ್ಲ .ಇಲ್ಲಿ ಒಂದು ದಿನ ಶ್ರೀಮಂತ ವ್ಯಕ್ತಿಯ ಮನೆಯ ಮೇಲೆ ಕೆಲವು ಕಳ್ಳರು ದಾಳಿ ಮಾಡುತ್ತಾರೆ .ಈತನ ಎಲ್ಲಾ ಜನ ಸಂಪತ್ತನ್ನು ಲೂಟಿ ಮಾಡುತ್ತಾರೆ . ಒಂದೇ ಬಾರಿ ಲಕ್ಷ್ಮಿಯನ್ನು ಕಳೆದುಕೊಂಡ ಕಾರಣ , ಈ ವ್ಯಕ್ತಿ ತುಂಬಾ ನಿರಾಸೆಗೆ ಒಳಗಾಗುತ್ತಾನೆ . ಯಾವತ್ತಿಗೂ ಚಿಂತೆಯಲ್ಲಿ ಮುಳುಗಿ ಬೀಳುತ್ತಾನೆ. ಈ ಒಂದು ಕಾರಣದಿಂದಾಗಿ ದೇಹದಲ್ಲಿ ನಾನಾ ಪ್ರಕಾರದ ಕಾಯಿಲೆಗಳು ಅಥವಾ ರೋಗಗಳು ಪ್ರಕಟಗೊಳ್ಳುತ್ತವೆ .

ಈತ ಅನಾರೋಗ್ಯದಿಂದ ಮನೆಯಲ್ಲಿ ಬಳಲಲು ಶುರು ಮಾಡುತ್ತಾನೆ. ಹಣದ ಕೊರತೆಯ ಕಾರಣದಿಂದಾಗಿ ಈತನ
ಕುಟುಂಬ ಬಡತನದಲ್ಲಿ ಜೀವನ ಸಾಗಲು ಶುರುಮಾಡುತ್ತದೆ .ಈತನ ಮಕ್ಕಳು ಹೊಲದಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ . ಆದರೆ ಇವರು ತುಂಬಾ ಶ್ರಮ ಪಟ್ಟರು ಸ್ವಲ್ಪ ಹಣ ಗಳಿಸುತ್ತಿದ್ದರು . ತಮ್ಮ ಕುಟುಂಬದ ಹೊಟ್ಟೆಯನ್ನು ತುಂಬಿಸುತ್ತಿದ್ದರು . ಹಲವಾರು ದಿನಗಳು ಕಳೆಯುತ್ತಾ ಆ ವ್ಯಕ್ತಿಯ ಆರೋಗ್ಯ ದಿನದಿಂದ ದಿನಕ್ಕೆ ಹಾಳಾಗುತ್ತಾ ಹೋಗುತ್ತಿತ್ತು .ಈತನಿಗೆ ಸಾವಿನ ಭಯ ಕಾಣಲು ಶುರು ಮಾಡಿತು . ಈತನ ಹೆಂಡತಿ ತುಂಬಾ ಸೇವೆಯನ್ನು ಮಾಡುತ್ತಿದ್ದರು .

ಇದರಲ್ಲಿ ಯಾವುದೇ ಉಪಾಯ ಮಾಡಿದರು ಈ ವ್ಯಕ್ತಿಯ ಆರೋಗ್ಯ ಸರಿ ಹೋಗುತ್ತಿರಲಿಲ್ಲ . ನಂತರ ಒಂದು ದಿನ ಈ ವ್ಯಕ್ತಿಯ ದ್ವಾರದ ಮುಂದೆ ಯಮರಾಜ ಹಾಜರಾದರು . ಒಂದು ಸಾಧುವಿನ ವೇಷದಲ್ಲಿ ಬರುತ್ತಾರೆ .ನಂತರ ಇವರು ಆ ವ್ಯಕ್ತಿಯ ಹೆಂಡತಿಗೆ ಹಣ್ಣು ದಾನ ಮಾಡಲು ಕೇಳುತ್ತಾರೆ .ಶ್ರೀಮಂತ ವ್ಯಕ್ತಿಯ ಹೆಂಡತಿಯ ಸ್ವಭಾವ ಸ್ವಲ್ಪ ಒಳ್ಳೆಯದು ಆಗಿತ್ತು .ಹಾಗಾಗಿ ಸಾಧು ಮಹತ್ವ ರನ್ನು ಅವರು ಒಳಗಡೆ ಕರೆಯುತ್ತಾರೆ . ಅಡುಗೆ ಮನೆಯಲ್ಲಿ ಏನು ಇತ್ತು ಅದನ್ನ ಅವರಿಗೆ ಆಹಾರದ ರೂಪದಲ್ಲಿ ತಿನ್ನಿಸುತ್ತಾರೆ.

ಇದರಿಂದ , ಆ ಸಾಧು ಅವರಿಗೆ ತೃಪ್ತಿಯಾಗುತ್ತದೆ . ನಂತರ ಒಂದು ಮಾತನ್ನು ಹೇಳುತ್ತಾರೆ . ಹೇ ತಾಯಿಯೇ ಇಂದು ನೀವು ಹಸಿವಿನಿಂದ ಬಳಲುತ್ತಿದ್ದ ಸಾಧುವಿನ ಹೊಟ್ಟೆಯನ್ನು ತುಂಬಿಸಿದ್ದೀರಿ .ಮತ್ತು ದೊಡ್ಡದಾದ ಪುಣ್ಯದ ಕೆಲಸವನ್ನು ಮಾಡಿದ್ದೀರಿ . ನನ್ನ ಮನಸ್ಸಿನಲ್ಲಿ ನಿಮಗೆ ಯಾವುದಾದರೂ ವರ ಕೊಡುವ ಆಸೆ ಆಗುತ್ತಿದೆ . ಹಾಗಾಗಿ ಇಂದು ನೀವು ಏನೇ ಕೇಳಿದರೂ ಖಂಡಿತವಾಗಿ ಅದನ್ನು ಪೂರ್ತಿಗೊಳಿಸುತ್ತೇನೆ ಎಂದು ಹೇಳುತ್ತಾರೆ . ಸಾಧು ಅವರ ಈ ವಚನ ಕೇಳಿದ ಆ ಶ್ರೀಮಂತ ವ್ಯಕ್ತಿಯ ಹೆಂಡತಿ ಈ ರೀತಿ ಹೇಳುತ್ತಾರೆ .

ಹೇ ಮಹಾತ್ಮರೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು . ಹೇ ಸಾಧುಗಳೇ ಸ್ವಲ್ಪ ಸಮಯದ ಹಿಂದೆ ನಾವು ಶ್ರೀಮಂತರಾಗಿದ್ದೆವು . ಆದರೆ ಕಳ್ಳರು ನಮ್ಮ ಹತ್ತಿರ ಇದ್ದ ಸಂಪತ್ತನ್ನು ಲೂಟಿ ಮಾಡಿದರು .ಈ ಒಂದು ಕಾರಣದಿಂದ ನಾವು ದರಿದ್ರತೆಯಿಂದ ಬದುಕುತ್ತಿದ್ದೇವೆ .ನನ್ನ ಗಂಡನ ಆರೋಗ್ಯ ಕೂಡ ಕೆಟ್ಟಿತು . ಅವರೂ ಸಹ ಮೃತ್ಯುವಿನ ಮಂಚದ ಮೇಲೆ ಮಲಗಿದ್ದಾರೆ. ದಯವಿಟ್ಟು ನೀವು ಒಂದು ಉಪಾಯವನ್ನು ತಿಳಿಸಿ ಕೊಡಿ . ಇದರ ಮೂಲಕ ನಮ್ಮ ದುಃಖ ದೂರ ವಾಗುವಂತೆ ಇರಬೇಕು.

ಆ ಶ್ರೀಮಂತ ವ್ಯಕ್ತಿಯ ಹೆಂಡತಿಯ ಮಾತು ಕೇಳಿದ ಆ ಸಾಧು ಮಹಾತ್ಮರು ಈ ರೀತಿ ಹೇಳುತ್ತಾರೆ . ಹೇ ತಾಯಿ ಈ ದುರ್ದೆಶೆ ನಿಮ್ಮ ಗಂಡನ ಕಾರಣದಿಂದಾಗಿಯೇ ಆಗಿದೆ. ಆತನು ತನ್ನ ಜೀವನದಲ್ಲಿ ಯಾವತ್ತೂ ದಾನ ಧರ್ಮ ಮಾಡಿಲ್ಲ . ಯಾವುದೇ ಪುಣ್ಯ ಕೆಲಸವನ್ನು ಕೂಡ ಮಾಡಿಲ್ಲ. ಅವನು ಬೇರೆಯವರಿಗೆ ದುಃಖ ಕೊಟ್ಟು ಇಷ್ಟೆಲ್ಲಾ ಧನ ಸಂಪತ್ತನ್ನು ಸಂಪಾದಿಸಿದ್ದಾನೆ .ಹಾಗಾಗಿ ದುರ್ಭಾಗ್ಯವು ಅವರನ್ನು ಬೆನ್ನಟ್ಟಿದೆ . ಆದರೆ ನೀನು ಈ ದುರ್ಭಾಗ್ಯವನ್ನು ದೂರ ಮಾಡಿಕೊಳ್ಳಲು ಇಷ್ಟ ಪಡುತ್ತಿದ್ದರೆ , ನಾನು ನಿನಗೆ ಖಂಡಿತವಾಗಿ ಒಂದು ಉಪಾಯವನ್ನು ತಿಳಿಸುತ್ತೇನೆ .

ಎಲ್ಲಾ ಮನ ಸ್ಥಿತಿಗಳನ್ನು ಪೂರ್ಣ ಗೊಳಿಸುವಂತಹ ಕಾಮಧೇನುವಿನ ಶರಣಕ್ಕೆ ಹೋಗು ತಾಯಿ ಖಂಡಿತವಾಗಿ ನಿನ್ನ ದುಃಖಗಳನ್ನು ದೂರ ಮಾಡುವಳು. ನೀನು ಒಂದು ಹಸುವನ್ನು ಮನೆಗೆ ತಂದು ಅದರ ಸೇವೆ ಮಾಡು . ಪ್ರತಿದಿನ ಅದಕ್ಕೆ ಏನಾದರೂ ತಿನ್ನಿಸಬೇಕು . ಇದರಿಂದ ನಿನ್ನ ದರಿದ್ರತೆ ದೂರವಾಗುತ್ತದೆ .ಈ ರೀತಿಯಾಗಿ ಆ ಸಾಧು ಅವರು ಶ್ರೀಮಂತ ವ್ಯಕ್ತಿ ಹೆಂಡತಿಗೆ ಒಂದು ಉಪಾಯವನ್ನು ಹೇಳುತ್ತಾರೆ. ಅದೇ ಸ್ಥಾನದಲ್ಲಿ ಅವರು ಅಂತರ್ಧ್ಯಾನ ಆಗುತ್ತಾರೆ.

ಈ ಚಮತ್ಕಾರವನ್ನು ನೋಡಿದ ಆ ಶ್ರೀಮಂತ ವ್ಯಕ್ತಿಯ ಹೆಂಡತಿಗೆ ಆಶ್ಚರ್ಯವಾಗುತ್ತದೆ .ನಂತರ ಆ ಸಾಧು ಅವರು ತಿಳಿಸಿದ ಉಪಾಯವನ್ನು ಮಾಡಲು ಮುಂದಾಗುತ್ತಾಳೆ . ಆ ಸಮಯದಲ್ಲಿ ಹಸುವನ್ನು ಖರೀದಿ ಮಾಡುವಷ್ಟು ಧನ ಸಂಪತ್ತು ಅವಳ ಬಳಿ ಇರಲಿಲ್ಲ . ಹಾಗಾಗಿ ಊರಿನ ಹತ್ತಿರ ಇರುವ ಗೋಶಾಲೆಗೆ ಹೋಗಿ ಈ ಉಪಾಯವನ್ನು ಮಾಡುತ್ತಾಳೆ . ಆಕೆ ಪ್ರತಿ ದಿನ ಮನೆಯಿಂದ ಗೋಶಾಲೆಗೆ ಹೋಗಿ ಸಾಧು ಅವರು ಹೇಳಿದಂತೆ ಆ ವಸ್ತುವನ್ನು ಗೋ ಮಾತೆಗೆ ತಿನ್ನಿಸಲು ಶುರು ಮಾಡುತ್ತಾಳೆ .

ಒಂದು ದಿನ ಅಚಾನಕ್ಕಾಗಿ ಒಂದು ಸುದ್ದಿ ಇವರಿಗೆ ತಿಳಿದು ಬರುತ್ತದೆ. ರಾಜರು ಕಳ್ಳರನ್ನು ಹಿಡಿದಿದ್ದಾರೆ . ಶ್ರೀಮಂತನ ಧನ ಸಂಪತ್ತನ್ನೇ ಲೂಟಿ ಮಾಡಿದ್ದರು.ಈ ರೀತಿಯಾಗಿ ಗೋಮಾತೆ ಆಶೀರ್ವಾದದಿಂದ ಆ ಶ್ರೀಮಂತ ವ್ಯಕ್ತಿಗೆ ಮರಳಿ ಧನ ಸಂಪತ್ತು ಸಿಕ್ಕಿತು. ಆ ನಂತರ ಶ್ರೀಮಂತ ವ್ಯಕ್ತಿ ತನ್ನ ಹೆಂಡತಿಯ ಜೊತೆಗೆ ಗೋಶಾಲೆಗೆ ಹೋಗಲು ಶುರು ಮಾಡುತ್ತಾನೆ . ನಂತರ ಗೋ ಮಾತೆಗೆ ಸೇವೆ ಸಲ್ಲಿಸಲು ಕೂಡ ಶುರು ಮಾಡುತ್ತಾರೆ . ಆ ನಂತರ ಇವರ ರೋಗಗಳು ಕೂಡ ಗುಣವಾಗಲು ಶುರುವಾಗುತ್ತದೆ .

ಮರಳಿ ಇವರು ಆರೋಗ್ಯವಂತ ವ್ಯಕ್ತಿಯು ಕೂಡ ಆಗುತ್ತಾರೆ .ಈ ರೀತಿಯಾಗಿ ಗೋಮಾತೆಯ ಸೇವೆ ಮಾಡಿದ ಇವರಿಗೆ ಎಲ್ಲಾ ಸಂಪತ್ತು ಸಿಗುತ್ತದೆ . ಈತ ಪ್ರತಿದಿನ ದಾನ ಧರ್ಮ ಮಾಡಲು ಶುರು ಮಾಡುತ್ತಾನೆ . ತನ್ನ ಮನೆಯ ಹತ್ತಿರ ಗೋ ಶಾಲೆಯನ್ನು ನಿರ್ಮಿಸುತ್ತಾನೆ . ಪ್ರತಿ ದಿನ ಗೋ ಮಾತೆಯ ಸೇವೆ ಮಾಡಲು ಶುರು ಮಾಡುತ್ತಾನೆ .ಮಿತ್ರನೇ ಗೋ ಮಾತೆಯ ಸೇವೆ ಹೇಗೆ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತದೆ . ಮತ್ತು ಹಸುವಿಗೆ ಯಾವ ರೀತಿ ವಸ್ತುಗಳನ್ನು ತಿನ್ನಿಸುವುದರಿಂದ ಧನ ಪ್ರಾಪ್ತಿಯಾಗುತ್ತದೆ. .ಶಾಸ್ತ್ರದಲ್ಲಿ ಹಸುವಿಗೆ ತಾಯಿಯ ಸ್ಥಾನ ನೀಡಿದ್ದಾರೆ . ಎಲ್ಲಾ ದೇವಾನು ದೇವತೆಗಳು ಇದರ ಪೂಜೆಯನ್ನು ಮಾಡುತ್ತಾರೆ .

ಗೋ ಮಾತೆಯ ಆರು ಅಂಗ ಗೊಬ್ಬರ , ಹಾಲು , ಹಸುವಿನ ಮೂತ್ರ , ಮೊಸರು ಮತ್ತು ತುಪ್ಪ ಇದು ಅತ್ಯಂತ ಪವಿತ್ರ . ಮತ್ತು ಶುದ್ಧವಾದ ಸಾಧನವೂ ಕೂಡ ಆಗಿದೆ .ಗೊಬ್ಬರದಿಂದ ಬಿಲ್ವ ಪತ್ರ ಮರ ಉತ್ಪತ್ತಿಯಾಗಿದೆ .ಇದರಲ್ಲಿ ಲಕ್ಷ್ಮಿ ವಿದ್ಯಾ ಮಾನರಾಗಿದ್ದಾರೆ .ಹಾಗಾಗಿ ಇದನ್ನು ಸ್ತ್ರೀ ವೃಕ್ಷ ಎಂದು ಕರೆಯುತ್ತಾರೆ . ಗೊಬ್ಬರದಿಂದಲೇ ಕಮಲದ ಬೀಜಗಳ ಉತ್ಪತ್ತಿಯಾಗಿರುತ್ತದೆ . ಗೋ ಮೂತ್ರದಿಂದ ಗೂ ಗಳದ ಉತ್ಪತ್ತಿಯಾಗಿದೆ. ಇದನ್ನು ನೋಡಲು ಪ್ರಿಯ ಮತ್ತು ಸುಗಂಧದಿಂದ ತುಂಬಿರುತ್ತದೆ .

ಇದು ಎಲ್ಲಾ ದೇವಾನು ದೇವತೆಗಳ ಆಹಾರ ಆಗಿದೆ . ಜಗತ್ತಿನಲ್ಲಿ ಮೂಲಭೂತ ಹಸುವಿನ ಹಾಲಿನಿಂದ ಉತ್ಪತ್ತಿ ಆಗಿದೆ. ಎಲ್ಲಾ ಮಂಗಳ ಕಾರಿ ಪದಾರ್ಥಗಳು ಹಾಲಿನಿಂದ ಉತ್ಪತ್ತಿ ಆಗಿದೆ. ತುಪ್ಪದಿಂದ ಅಮೃತ ಉತ್ಪತ್ತಿಯಾಗುತ್ತದೆ . ಇದು ದೇವರ ತೃಪ್ತಿಯ ಸಾಧನವು ಆಗಿದೆ . ಹಸುವಿನಿಂದ ಯಜ್ಞವು ನಡೆಯುತ್ತದೆ. ಗೋಮಾತೆಯ ಶರೀರದಲ್ಲಿ 33 ಕೋಟಿ ದೇವರ ವಾಸವು ಇದೆ. ಹಸು ಒಂದು ಪವಿತ್ರ ನಿರ್ಮಲ , ಶಾಂತ , ಮತ್ತು ನಿಷ್ಪಾಪ ಜೀವಿಯು ಆಗಿದೆ . ಋಗ್ವೇವೇದದಲ್ಲಿ ಇದನ್ನು ಸಂಸಾರದ ಪಾಲನೆ ಪೋಷಣೆ ಮಾಡುವಂತಹ ಕಾಮಧೇನು ಎಂದು ಹೇಳುತ್ತಾರೆ .ಕೇವಲ ಇದರ ದರ್ಶನ ಮಾಡಿದರೆ ಮನುಷ್ಯನ ಸಾವಿರಾರು ಪಾಪಗಳು ದೂರವಾಗುತ್ತದೆ .

ಹಾಗಾಗಿ ಗೋ ಮಾತೆಗೆ ಯಾವತ್ತೂ ಹಿಂಸೆಯನ್ನು ಮಾಡಬಾರದು . ಹಸುವಿಗೆ ಯಾವತ್ತು ಹೊಡೆಯಬಾರದು .ಹಸುಗಳಿಗೆ ಕಷ್ಟವನ್ನು ಕೊಡಬಾರದು . ಹಸುವನ್ನು ಹೊಡೆಯುವುದು ಶಾಸ್ತ್ರದಲ್ಲಿ ದೊಡ್ಡ ಪಾಪ ಎಂದು ಹೇಳಲಾಗಿದೆ .ಯಾರು ಹಸುವಿನ ನಿಸ್ವಾರ್ಥ ಸೇವೆಯನ್ನು ಮಾಡುತ್ತಾರೋ , ಅವರು ಸುಖ ಸಮೃದ್ಧಿಯನ್ನು ಪಡೆದುಕೊಳ್ಳುತ್ತಾರೆ . ಯಾವ ಸ್ತ್ರೀಯರು ಅಡುಗೆ ಮನೆಯಲ್ಲಿ ತಯಾರಾದ ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸುತ್ತಾರೋ ,

ಆಗ ಇವರು ಸೌಭಾಗ್ಯ ವತಿಯಾಗಿ ಇರುತ್ತಾರೆ . ಯಾರು ಯಾರು ತಮ್ಮ ಮನೆಯಲ್ಲಿ ಹಸುವಿನಿಂದ ಪಡೆದಂತಹ ಪಂಚ ಗವ್ಯ ಗಳನ್ನು ಇಟ್ಟುಕೊಂಡಿರುತ್ತಾರೆ , ಆ ಸ್ಥಾನದಲ್ಲಿ ದುಃಖ ದರಿದ್ರತೆಗಳು ಬರುವುದಿಲ್ಲ . ಯಾವ ವ್ಯಕ್ತಿಗಳು ಪ್ರತಿ ದಿನ ಯಾವುದಾದರೂ ಒಂದು ರೂಪದಲ್ಲಿ ಗೋಮಾತೆಯ ಸೇವೆಯನ್ನು ಮಾಡುತ್ತಾರೆ , ಅವರು ಅಧಿಕ ಪುಣ್ಯವಂತರು ಆಗುತ್ತಾರೆ . ಶಾಸ್ತ್ರಗಳಲ್ಲಿ ಗೋಮಾತೆಯನ್ನು ತಾಯಿ ಲಕ್ಷ್ಮಿ ದೇವಿಯ ರೂಪ ಎಂದು ತಿಳಿಯಲಾಗಿದೆ .

ಹಾಗಾಗಿ ಇದರ ಪೂಜೆಯನ್ನು ಮಾಡಿದರೆ ದರಿದ್ರತೆ ದೂರವಾಗುತ್ತದೆ .ಪ್ರಾಚೀನ ಕಾಲದಿಂದಲೂ ಗೋಮಾತೆಯ ಸಂರಕ್ಷಣೆ ಮತ್ತು ಸೇವೆ ಮಾಡುವ ಪರಂಪರೆ ಬೆಳೆದು ಬಂದಿದೆ . ಹಲವಾರು ಋಷಿಮುನಿಗಳು ತಮ್ಮ ಕುಟೀರದಲ್ಲಿ ಹಸುಗಳನ್ನು ಸಾಕುತ್ತಿದ್ದರು . ಜೊತೆಗೆ ರಾಜ ಮಹಾರಾಜರು ಗೋ ಮಾತೆಗಳನ್ನು ದಾನ ಮಾಡುತ್ತಿದ್ದರು.ಗೋ ದಾನವನ್ನು ಎಲ್ಲಕ್ಕಿಂತ ದೊಡ್ಡದಾದ ದಾನ ಎಂದು ಹೇಳಿದ್ದಾರೆ .ಗೋದಾನ ಮಾಡುವುದರಿಂದ ಎಲ್ಲಾ ಜನ್ಮದ ಪಾಪಗಳು ದೂರವಾಗುತ್ತವೆ .

ಮನುಷ್ಯನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ . ಗೋಮಾತೆ ದರ್ಶನ ಮಾಡುವುದು ಅತ್ಯಂತ ಶುಭವಾಗಿ ಇರುತ್ತದೆ .ಶಾಸ್ತ್ರ ಈ ರೀತಿ ಹೇಳುತ್ತದೆ .ಪ್ರತಿದಿನ ಬೆಳಗ್ಗೆ ಗೋಮಾತೆಯ ದರ್ಶನ ಮಾಡುವುದರಿಂದ, ಪುಣ್ಯದ ಪ್ರಾಪ್ತಿ ಆಗುತ್ತದೆ .ಮುಂಜಾನೆ ಗೊಬ್ಬರದ ದರ್ಶನ ಆದರೆ ಲಕ್ಷ್ಮಿ ದೇವಿಯ ಪ್ರಾಪ್ತಿಯಾಗುತ್ತದೆ . ಒಂದು ವೇಳೆ ನೀವು ಯಾವುದಾದರೂ ಒಂದು ಮಹತ್ವಪೂರ್ಣವಾದ ಕಾರ್ಯಗಳಿಗೆ ಹೋಗುತ್ತಿದ್ದರೆ , ಆಕಸ್ಮಿಕವಾಗಿ ಗೋಮಾತೆ ನೀವು ಹೋಗುವ ದಾರಿಯಲ್ಲಿ ಅಡ್ಡ ಬಂದರೆ ,

ಖಂಡಿತವಾಗಿ ಆ ಕಾರ್ಯ ಪೂರ್ಣಗೊಳಿಸುತ್ತದೆ . ಯಾವುದಾದರೂ ಪ್ರಯಾಣ ಮಾಡುವಾಗ ಗೋಮಾತೆಯ ದರ್ಶನ ಆದರೆ, ಆ ಪ್ರಯಾಣ ಸುಖಕರವಾಗಿ ಇರುತ್ತದೆ . ಕುಂಡಲಿಯಲ್ಲಿ ಪಿತೃ ದೋಷ ಇದ್ದರೆ, ಬೇರೆ ಉಪಾಯಗಳ ಜೊತೆಗೆ ಪ್ರತಿದಿನ ಗೋ ಮಾತೆಗೆ ರೊಟ್ಟಿ ಮತ್ತು ಹುಲ್ಲನ್ನು ತಿನ್ನಿಸುವುದರಿಂದ ದೋಷ ಖಂಡಿತವಾಗಿ ಪರಿಹಾರ ಆಗುತ್ತದೆ. ಇದೇ ರೀತಿಯಲ್ಲಿ ಕುಂಡಲಿಯಲ್ಲಿ ಶನಿಯ ಮಹಾ ದೆಶೆ ಸಾಡೇಸಾತಿ ನಂತರ ಸಮಸ್ಯೆಗಳು ಇದ್ದರೆ, ಪ್ರತೀ ಶನಿವಾರ ಮತ್ತು ಅಮವಾಸ್ಯೆಯ ದಿನ ಕಪ್ಪು ಬಣ್ಣದ ಹಸುವಿಗೆ ಹುಲ್ಲು ಮತ್ತು ರೊಟ್ಟಿಯನ್ನು ತಿನ್ನಿಸಿ ಅದರ ಸೇವೆ ಮಾಡುವುದರಿಂದ ಶನಿ ದೋಷ ಕಡಿಮೆಯಾಗುತ್ತದೆ .

ಗೋಮೂತ್ರ ತುಂಬಾ ಪವಿತ್ರವಾದದ್ದು . ಗೋಮೂತ್ರ ಆರೋಗ್ಯದ ದೃಷ್ಟಿಯಿಂದ ತುಂಬಾ ಆರೋಗ್ಯಕರವಾಗಿದೆ . ಆಧ್ಯಾತ್ಮಿಕ ದೃಷ್ಟಿಯಿಂದಲೂ ಗೋ ಮೂತ್ರಕ್ಕೆ ತುಂಬಾ ಮಹತ್ವ ಇದೆ . ಮತ್ತು ವೈಜ್ಞಾನಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಗೋಮೂತ್ರದಿಂದ ಹಲವಾರು ಲಾಭಗಳು ಇದೆ .ಗೋ ಮೂತ್ರದಲ್ಲಿ ಹಲವಾರು ಖನಿಜ ಪದಾರ್ಥಗಳು ಮತ್ತು ಆರೋಗ್ಯ ತತ್ವ ಕೂಡ ಇದೆ . ಇದು ನಮ್ಮ ಶರೀರವನ್ನು ಶುದ್ದಿ ಮಾಡುತ್ತದೆ .ಮತ್ತೆ ತುಂಬಾ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ .

ಗೋಮೂತ್ರವನ್ನು ಮನೆಗೆ ಸಿಂಪಡಿಸುವುದರಿಂದ ವಾತಾವರಣದಲ್ಲಿ ಶುದ್ಧತೆ ಮತ್ತು ಪವಿತ್ರತೆ ಹರಡುತ್ತದೆ . ಹಾಗಾಗಿ ನಮ್ಮ ಶಾಸ್ತ್ರದಲ್ಲಿ ಶರೀರವನ್ನು ನಿರೋಗಿಯನ್ನಾಗಿಸಲು ಪ್ರತಿ ದಿನ ಗೋಮೂತ್ರ ಸೇವಿಸಲು ಮತ್ತು ಮನೆಗೆ ಸಿಂಪಡಿಸಲು ಹೇಳುತ್ತಾರೆ. ಕುಂಡಲಿಯಲ್ಲಿ ಇರುವ ಶುಕ್ರ ಗ್ರಹವನ್ನು ಶಕ್ತಿ ಶಾಲಿಯನ್ನಾಗಿಸಲು ಜ್ಯೋತಿಷ್ಯದ ಅನುಸಾರವಾಗಿ ಮುಂಜಾನೆ ತಯಾರು ಮಾಡುವ ಆಹಾರದಲ್ಲಿ ಎಲ್ಲಕ್ಕಿಂತ ಮೊದಲು ಮಾಡುವ ರೊಟ್ಟಿಯನ್ನು ತೆಗೆದುಕೊಂಡು ಒಂದು ಶುಭ್ರ ಬಣ್ಣದ ಹಸುವಿಗೆ ತಿನ್ನಿಸುವುದು ಅತ್ಯಂತ ಶುಭ ಎಂದು ಹೇಳಲಾಗಿದೆ .

ಒಂದು ವೇಳೆ ಕುಂಡಲಿಯಲ್ಲಿ ಬುಧ ಗ್ರಹ ದುರ್ಬಲವಾಗಿ ಇದ್ದರೆ , ಅಥವಾ ಯಾವುದಾದರೂ ಒಂದು ಕಾರಣದಿಂದ ಇದರ ಪ್ರಭಾವ ಕಾಡುತ್ತಿದ್ದರೆ , ಪ್ರತಿ ಬುಧವಾರದ ದಿನ ಹಸುವಿಗೆ ಹಸಿರು ಮೇವು ತಿನ್ನಿಸಬೇಕು . ಇದರಿಂದ ಬುಧಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ .ಒಂದು ವೇಳೆ ಕುಂಡಲಿಯಲ್ಲಿ ಮಂಗಳ ದೋಷವಿದ್ದರೆ , ಇದರ ಕಾರಣದಿಂದ ನಿಮ್ಮ ಜೀವನದಲ್ಲಿ ಹಲವಾರು ಕಷ್ಟಗಳು ಇದ್ದರೆ, ಕಂದು ಬಣ್ಣದ ಹಸುವಿನ ಸೇವೆಯನ್ನು ಮಾಡಬೇಕು . ಮಂಗಳವಾರ ಹಸುವಿನ ಪೂಜೆಯನ್ನು ಮಾಡಿ ,

ಅದಕ್ಕೆ ಬೆಲ್ಲ ಕಡಲೆ ಇತ್ಯಾದಿಗಳನ್ನು ತಿನ್ನಿಸಬೇಕು . ಬೃಹಸ್ಪತಿ ಅಂದರೆ ಗುರು ಗ್ರಹವನ್ನು ಜೀವನದ ಎಲ್ಲಾ ಮಂಗಳಕರ ಕಾರ್ಯಗಳ ಕಾರಕ ಗ್ರಹ ಎಂದು ತಿಳಿಯಲಾಗಿದೆ . ನಿಮ್ಮ ಜೀವನದಲ್ಲಿ ಏನೇ ಅಡೆತಡೆಗಳು .ಮತ್ತು ವಿವಾಹ ಕಾರ್ಯಗಳು ನಿಧಾನ ಆಗುತ್ತಿದ್ದರೆ , ಬೃಹಸ್ಪತಿ ಗ್ರಹವನ್ನು ಶಕ್ತಿ ಶಾಲಿಯನ್ನಾಗಿಸಲು ರೊಟ್ಟಿಯ ಮೇಲೆ ಬೆಲ್ಲ ಕಡಲೆ ಕಾಳು ಇಟ್ಟು ಹಸುವಿಗೆ ಅದನ್ನು ತಿನ್ನಿಸಬೇಕು . ಇದರಿಂದ ಶುಭ ಪರಿಣಾಮಗಳು ದೊರೆಯುತ್ತವೆ .ಒಂದು ವೇಳೆ ಮನೆಯಲ್ಲಿ ಅಶಾಂತಿ ಮತ್ತು ಜಗಳಗಳು ಆಗುತ್ತಿದ್ದರೆ ,

ಮನೆಯಲ್ಲಿ ಸುಖ – ಶಾಂತಿ ನೆಲೆಸಬೇಕು ಅಂದರೆ , ಮನೆಯಲ್ಲಿ ಹಸುವಿನ ಗೊಬ್ಬರದಿಂದ ತಯಾರಾದ ಹೊಟ್ಟಿನಿಂದ ದೀಪವನ್ನು ಹುರಿಸಬೇಕು. ಆ ಹೊಗೆಯನ್ನು ಇಡೀ ಮನೆಯಲ್ಲಿ ತೋರಿಸಬೇಕು . ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ . ಮತ್ತು ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ . ಹಸುವಿನ ಹಾಲು , ಗೊಬ್ಬರ, ತುಪ್ಪ, ಬೆಣ್ಣೆ ಮತ್ತು ಗೋ ಮೂತ್ರ ಇವುಗಳ ಮಿಶ್ರಣದಿಂದ ತಯಾರಾಗುವ ಪಂಚ ಘವ್ಯ ಗಳನ್ನು ರೋಗ ನಾಶಕ ಎಂದು ಕರೆಯುತ್ತಾರೆ .

ಹಿಂದೂ ಧರ್ಮದಲ್ಲಿ ಒಂದು ರೀತಿ ಪ್ರಾಯಶ್ಚಿತ್ತಕ್ಕಾಗಿ ಇದು ನಡೆಯುತ್ತದೆ .ಪಂಚ ಘವ್ಯಗಳನ್ನು ತಯಾರು ಮಾಡಲು ಬಳಸುವಂತಹ ಎಲ್ಲಾ ವಸ್ತುಗಳು ಅತ್ಯಂತ ಉಪಯೋಗಕಾರಿ ಆಗಿದೆ .ಇದು ಆರೋಗ್ಯಕ್ಕೆ ಲಾಭವನ್ನು ಕೊಡುವುದರ ಜೊತೆಗೆ ಔಷಧಿಯ ಗುಣಗಳನ್ನು ಹೊಂದಿದೆ . ಒಂದು ವೇಳೆ ಮನೆಯ ದ್ವಾರದ ಬಳಿ ಹಸು ಬಂದರೆ , ಅದಕ್ಕೆ ರೊಟ್ಟಿಯನ್ನು ತಿನ್ನಿಸದೇ ಮರಳಿ ಹೋಗಲು ಬಿಡಬೇಡಿ. ಇಲ್ಲವಾದಲ್ಲಿ ದೌರ್ಭಾಗ್ಯಗಳನ್ನು ಎದುರಿಸಬೇಕಾಗುತ್ತದೆ .

ಯಾರ ಮನೆಯ ದ್ವಾರದಿಂದ ಹಸುವು ಏನನ್ನು ಪಡೆಯದೆ ಹೋಗುತ್ತದೆಯೋ , ಅವರ ಮನೆಯಿಂದ ಲಕ್ಷ್ಮಿ ಕೂಡ ಮರಳಿ ಹೋಗುತ್ತಾಳೆ .ಪ್ರತಿಯೊಬ್ಬ ಸ್ತ್ರೀಯರು ಮನೆಯಲ್ಲಿ ಹಸುವಿಗಾಗಿ ಒಂದು ರೊಟ್ಟಿಯನ್ನು ತಯಾರು ಮಾಡಬೇಕು .ಪ್ರೀತಿಯಿಂದ ಹಸುವಿಗೆ ತಿನ್ನಿಸಬೇಕು .ಇದರಿಂದ ಗೋಮಾತೆಯ ಆಶೀರ್ವಾದ ಸಿಗುತ್ತದೆ .ಕೆಲವು ಜನರು ಹಸುವಿಗೆ ಹಳಸಿದ ಪದಾರ್ಥ ಆಹಾರಗಳನ್ನು ತಿನ್ನಿಸುತ್ತಾರೆ . ಎಂಜಲು ಆಹಾರವನ್ನು ತಿನ್ನಿಸುತ್ತಾರೆ .ಇದನ್ನು ಪಾಪ ಎಂದು ತಿಳಿಯಲಾಗಿದೆ .

ನೀವು ಬೇರೆ ಪಶುಗಳಿಗೆ ತಿನ್ನಿಸಬಹುದು ಆದರೆ ಹಸುಗಳಿಗೆ ತಿನ್ನಿಸಬಾರದು . ಹಸಿವಿನ ಕಾರಣದಿಂದ ಗೋಮಾತೆ ತಿಂದು ಬಿಡುತ್ತದೆ . ಆದರೆ ಇದರ ಪಾಪ ತಿನ್ನಿಸಿದ ವ್ಯಕ್ತಿಗೆ ಅಂಟಿಕೊಳ್ಳುತ್ತದೆ .ಗೋಮಾತೆ ಒಂದು ಶಾಖಾಹಾರಿ ಮತ್ತು ಪವಿತ್ರವಾದ ಪಶು ಆಗಿದ್ದು , ಗೋಮಾತೆ ಆಹಾರದಲ್ಲಿ ಮಾಂಸ ಮೊಟ್ಟೆ ಯಾವುದೇ ರೀತಿಯ ವಸ್ತುಗಳನ್ನು ನೀಡಬಾರದು .ಈ ರೀತಿ ಮಾಡಿದಾಗ ಮಹಾ ಪಾಪ ನಿಮಗೆ ಅಂಟಿಕೊಳ್ಳುತ್ತದೆ . ಕುಂಡಲಿಯಲ್ಲಿ ಚಂದ್ರ ದೋಷ ಇದ್ದರೆ , ಇದರ ಕಾರಣದಿಂದ ನಿರಂತರವಾಗಿ ಸಮಸ್ಯೆಗಳು ಎದುರಾಗುತ್ತಿದ್ದರೆ ,

ರೊಟ್ಟಿಯ ಮೇಲೆ ಶುಭ್ರವಾದ ಬೆಣ್ಣೆ ತುಪ್ಪ ಹಚ್ಚಿ ಗೋ ಮಾತೆಗೆ ತಿನ್ನಿಸಬೇಕು. ಒಂದು ವೇಳೆ ಶನಿ ದೋಷ ಇದ್ದರೆ , ಹಿಟ್ಟಿನಲ್ಲಿ ಕಪ್ಪು ಎಳ್ಳನ್ನು ಸೇರಿಸಿ ರೊಟ್ಟಿ ಮಾಡಿ ಇದನ್ನು ಹಸುವಿಗೆ ತಿನ್ನಿಸುವುದರಿಂದ ದೋಷ ದೂರವಾಗುತ್ತದೆ .ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ ಗುರುವಾರ ಹಸುವಿಗೆ ಬಾಳೆಹಣ್ಣನ್ನು ತಿನ್ನಿಸಬೇಕು . ಇದರಿಂದ ದರಿದ್ರತೆ ದೂರವಾಗುತ್ತದೆ . ಗೋಮಾತೆಯ ಬೆನ್ನಿನ ಮೇಲೆ ಉಬ್ಬಿದ ಭಾಗ ಇರುತ್ತದೆ . ಅದರಲ್ಲಿ ಸೂರ್ಯ ಕೇತು ನಾಡಿ ಇರುತ್ತದೆ .

ಇಂತಹ ಹಸು ಮನೆ ಮುಂದೆ ಬಂದಾಗ ಆ ಉಬ್ಬಿದ ಭಾಗವನ್ನು ಖಂಡಿತವಾಗಿ ಸ್ಪರ್ಶ ಮಾಡಿ . ಇದರಿಂದಾಗಿ ಜೀವನದ ಎಲ್ಲಾ ರೋಗಗಳ ಅಂತ್ಯ ಆಗುತ್ತದೆ. ಮತ್ತು ಧನ ಸಂಪತ್ತಿನ ಪ್ರಾಪ್ತಿಯಾಗುತ್ತದೆ . ಶಾಸ್ತ್ರಗಳಲ್ಲಿ ಈ ರೀತಿಯಾಗಿ ಹೇಳಿದ್ದಾರೆ ಯಾವ ಮನುಷ್ಯರು ಒಳ್ಳೆಯ ಮನಸ್ಸಿನಿಂದ ಗೋಮಾತೆಯ ಸೇವೆ ಮಾಡುತ್ತಾರೆ ..ಅವರು ಮೃತ್ಯುವಿನ ನಂತರ ವೇದಾವತಿ ನದಿಯನ್ನು ಹಸುವಿನ ಬಾಲ ಹಿಡಿದುಕೊಂಡು ದಾಟಿ ಹೋಗುತ್ತಾರೆ. ಈ ವ್ಯಕ್ತಿಗೆ ಅಕಾಲಿಕ ಮೃತ್ಯು ಆಗುವುದಿಲ್ಲ .

ಈತನಿಗೆ ಮೋಕ್ಷ ದೊರೆಯುತ್ತದೆ .ಯಾವ ವ್ಯಕ್ತಿಯ ಅದೃಷ್ಟ ರೇಖೆ ಮಲಗಿರುತ್ತದೆಯೋ ಅಂತ ಹ ವ್ಯಕ್ತಿ ಅಂಗೈಯಲ್ಲಿ ಬೆಲ್ಲ ಇಟ್ಟುಕೊಂಡು ಗೋಮಾತೆಯ ನಾಲಿಗೆಯಿಂದ ಸವರಿಸುತ್ತಾರೋ ಇವರ ಮಲಗಿದ್ದ ಅದೃಷ್ಟದ ರೇಖೆಗಳು ಎದ್ದೇಳುತ್ತದೆ .ಇವರ ದೌರ್ಭಾಗ್ಯಗಳು ಸೌಭಾಗ್ಯವಾಗಿ ಬದಲಾಗುತ್ತದೆ .ಈ ರೀತಿಯಾಗಿ ಭಗವಂತನಾದ ಶ್ರೀ ಕೃಷ್ಣ ಗೋಮಾತೆಯ ಮಹತ್ವವನ್ನು ತಿಳಿಸಿದ್ದಾರೆ .ನೀವು ಈ ರೀತಿ ಮಾಡುವುದರಿಂದ ನಿಮ್ಮ ಮನಸ್ಸಿನ ಈಚ್ಛೆಗಳು ಈಡೇರುತ್ತದೆ .ಎಲ್ಲರೂ ಗೋಮಾತೆಯ ಸೇವೆಯನ್ನು ಮಾಡಿ ಎಂದು ಹೇಳಲಾಗಿದೆ..

Leave A Reply

Your email address will not be published.