ಜೀವನದ ದಿಕ್ಕು ಬದಲಿಸುವ 21 ದಿನಗಳು | ಬ್ರಾಹ್ಮೀ ಮುಹೂರ್ತದ ಲಾಭಗಳು

0

ಬ್ರಾಹ್ಮೀ ಮುಹೂರ್ತದ ಕುರಿತಾದ ಲಾಭಗಳನ್ನುತಿಳಿಯೋಣ. ಬ್ರಾಹ್ಮೀ ಮುಹೂರ್ತ ಯಾವಾಗ ಪ್ರಾರಂಭವಾಗುತ್ತೆ ಎನ್ನುವುದನ್ನು ಆಯುರ್ವೇದ ಸಿದ್ಧಾಂತದ ಪ್ರಕಾರ ನೋಡಿದರೆ ಸೂರ್ಯೋದಯವಾಗುವ 96 ನಿಮಿಷಗಳ ಕಾಲ ಹಿಂದೆ ಹೋಗಬೇಕು ಹಾಗೂ ಈ ಸಮಯದಲ್ಲಿ 48 ನಿಮಿಷ ಮುಂದೆ ಹೋಗಬೇಕು ಈ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಈ ದಿನ ಸೂರ್ಯೋದಯವು 6 ಗಂಟೆ 06 ನಿಮಿಷವಾದರೆ, 96 ನಿಮಿಷ ಹಿಂದೆ ಎಂದರೆ 4 ಗಂಟೆ 24 ನಿಮಿಷಗಳು, ಈ ಸಮಯದಿಂದ 48 ನಿಮಿಷ ಮುಂದೆ ಬರಬೇಕು ಅಂದರೆ 5 ಗಂಟೆ 18 ನಿಮಿಷಗಳು.

ಆದ್ದರಿಂದ 4:24 ರಿಂದ 5:18 ರವರೆ ಬ್ರಾಹ್ಮೀ ಮುಹೂರ್ತದ ಸಮಯವಾಯಿತು. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ನಮ್ಮ ಆಯಸ್ಸು ಮತ್ತು ನಮ್ಮ ಸ್ವಾಸ್ಥ್ಯ ಜಾಗೃತವಾಗುತ್ತದೆ. ವೇದ ಶಾಸ್ತ್ರ, ಶೈವ ತಂತ್ರ ಯೋಗ, ಹಠಯೋಗ, ಅಷ್ಠಾಂಗ ಯೋಗ ಇತ್ಯಾದಿ… ಇವುಗಳಲ್ಲಿ 3:20 ನಿಮಿಷದಿಂದ 3:40 ನಿಮಿಷದವರೆಗೂ ಅತ್ಯಂತ ಶಕ್ತಿಶಾಲಿಯಾದ ಬ್ರಾಹ್ಮೀ ಮುಹೂರ್ತ ಎಂದು ಹೇಳುತ್ತವೆ. ಆಯುರ್ವೇದದ ಪ್ರಕಾರ 4:00 ಗಂಟೆಯಿಂದ 5:30 ಒಳಗಡೆ ಬ್ರಹ್ಮೀ ಮುಹೂರ್ತ ಪ್ರಶಸ್ತ ಸಮಯವಾಗಿರುತ್ತದೆ.

ಯೋಗಶಾಸ್ತ್ರದ ಉಲ್ಲೇಖದ ಪ್ರಕಾರ 3:20 ನಿಮಿಷದಿಂದ 3:40 ನಿಮಿಷದ ಒಳಗೆ ವಿಶ್ವಶಕ್ತಿ ಜಾಗೃತವಾಗಿರುತ್ತದೆ. ಈ ಸಮಯದಲ್ಲಿ ನಾವು ಏಳುವುದರಿಂದ ನಮ್ಮಲ್ಲಿ ಅತೀಂದ್ರಿಯ ಶಕ್ತಿಗಳು ಶರೀರದಲ್ಲಿ ಪ್ರವೇಶ ಮಾಡುತ್ತವೆ. ಇಂದ್ರಿಯ-ಅತೀಂದ್ರಿಯ ಶಕ್ತಿ ಎಂದು ಎರಡು ವಿಭಾಗ. ಇಂದ್ರಿಯ ಶಕ್ತಿ ಎಂದರೆ ನಮ್ಮ ಕಣ್ಣಿನ ದೃಷ್ಟಿ ಎಲ್ಲಿಯವರೆಗೆ ಸಾಧ್ಯ ಅಷ್ಟು ಮಾತ್ರ ನೋಡಬಹುದು, ಒಂದು ಮಿತಿಯಿರುತ್ತದೆ.. ಆದರೆ ಅತೀಂದ್ರಿಯ ಶಕ್ತಿಗೆ ಮಿತಿಯಿರುವುದಿಲ್ಲ ನಮ್ಮ ಶರಣರು ಕುಳಿತಲ್ಲೇ ಅಖಿಲಾಂಡ ಕೋಟಿ ಬ್ರಹ್ಮಾಂಡಗಳ ವಿಶ್ಲೇಷಣೆಗಳನ್ನು ಮಾಡಿದರು.

ಆದಿ ಅನಾದಿಗಳಿಲ್ಲದಂದು ಸುರಾಳ-ನಿರಾಳಗಳಿಲ್ಲದಂದು ಅಖಿಲಾಂಡ ಕೋಟಿ ಬ್ರಹ್ಮಾಂಡ ಉದಯವಾಗದಂದು ನೀನು ಇದ್ದೆಯಯ್ಯಾ ಇಲ್ಲದಂತೆ ಅಂತ ಹೇಳಿದರು. ಆ ಬ್ರಹ್ಮಾಂಡದ ಸಂತರು, ಜ್ಞಾನಿಗಳು, ಮಹಾನ್ ಪುರುಷರು, ದೈವೀ ಪುರುಷರು ಇಲ್ಲೇ ಕುಳಿತು ಈ ಗ್ರಹ ನಕ್ಷತ್ರ ಎಲ್ಲವನ್ನೂ ನೋಡಿದರು ಹೇಗೆ? ಇದೇ ಅತೀಂದ್ರಿಯ ಶಕ್ತಿಯಿಂದಾಗಿ. ನಮ್ಮ ಶರೀದ ಶಕ್ತಿ ಇಂದ್ರಿಯ ಶಕ್ತಿಯ ಜೊತೆಗೆ ಅತೀಂದ್ರಿಯ ಶಕ್ತಿಯನ್ನು ಪ್ರವೇಶ ಮಾಡಿಕೊಂಡರೆ, ಮನುಷ್ಯ ದೇವ ಮಾನವನಾಗುತ್ತಾನೆ, ಅವನ ನುಡಿ ದೇವನುಡಿಯಾಗುತ್ತದೆ, ನೋಟ ದೇವನೋಟವಾಗುತ್ತದೆ, ಅದಕ್ಕೆ ಮನುಷ್ಯನ ನಡೆ ದೇವನಡೆಯಾಗುತ್ತದೆ.

ಅದಕ್ಕೆ ನೇತ್ರ ಪರುಷ, ನುಡಿ ಪರುಷ ಹಾಗೂ ನಡೆ ಪರುಷ ಎಂದು ಹೇಳುತ್ತಾರೆ. ಎಲ್ಲಾ ಪಂಥದ ಗುರುಗಳು ಇದೇ ಬ್ರಾಹ್ಮೀ ಮುಹೂರ್ತದಲ್ಲಿ ಸಾಧನೆಯನ್ನು ಮಾಡಬೇಕೆಂದು ತಿಳಿಸುತ್ತಾರೆ. ಪ್ರಕೃತಿಯೇ ವಿಶ್ವಧರ್ಮ ಎಂದು ಎಲ್ಲಾ ಪಂಥದಲ್ಲಿಯೂ ತಿಳಿಸುವ ಸಾರ. ಎಲ್ಲಾ ಪಂಥಗಳ ಸಾತ್ವಿಕ ಮೊತ್ತವೇ ಧರ್ಮ, ಪ್ರಕೃತಿಯೇ ಧರ್ಮ ಆದ್ದರಿಂದ ನಾವೆಲ್ಲಾ ಪ್ರಕೃತಿ ಧರ್ಮವನ್ನು ನಂಬಿ ನಡೆದರೆ ನಮ್ಮ ಆಯಸ್ಸು ಗಟ್ಟಿಯಾಗಿರುತ್ತದೆ. ಆರೋಗ್ಯ ಬಲಿಷ್ಠವಾಗಿರುತ್ತದೆ.

ಸುಪ್ರಭಾತ ಸಮಯದಲ್ಲಿ ಅತ್ತಿಯಲ್ಲಿ ಲಿಂಗವ ನೆನದರೆ ತಪ್ಪುವುದು ಅಪಮೃತ್ಯು ಕಾಲ-ಕರ್ಮಂಗಳೆಲ್ಲಾ. ಲಿಂಗ ಅಂತ ಹೇಳಿದರೆ, ಪ್ರಕೃತಿ, ಜೀವ ಶಕ್ತಿ, ಬ್ರಹ್ಮ ಜ್ಞಾನ, ತ್ಯಾಗ- ಪ್ರೀತಿ- ವಾತ್ಸಲ್ಯ-ಮಮತೆ-ಕರುಣೆ ಅನುಕಂಪದ ಮೂಲ ಮಂತ್ರ ಎಂದು ಹೇಳಬಹುದು. ಸುಪ್ರಭಾತ ಸಮಯದಲ್ಲಿ ಪ್ರಾಣಾಯಾಮ, ಪ್ರವಚನ, ಧ್ಯಾನ ಅಭ್ಯಾಸಗಳನ್ನು ಮಾಡುವುದರ ಮೂಲಕ ಆತ್ಮದ ಆಹಾರವನ್ನು ಕೊಡಬಹದು. ಯಾರೂ ಕೂಡ ಆತ್ಮಶಕ್ತಿ, ಆತ್ಮ ಜ್ಞಾನ, ಆತ್ಮದ ಅರಿವು, ಅಂತರಂಗದ ಅನುಭಾವ ಇದನ್ನು ನೋಡುತ್ತಲೇ ಇಲ್ಲ ಅವರೇನಾಗಿದಾರೆ ಎಂದರೆ ಕೃತಕ ಯಾಂತ್ರಿಕ ಜೀವನದಲ್ಲಿ ತಮ್ಮ ಭವಿಷ್ಯದ ಅಧ್ವುಬವಾಗಿರುತ್ತಕ್ಕಂತಹ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡು

ತಮ್ಮ ಹುಟ್ಟಿನ ಮೂಲ ಅಂಶವನ್ನು ತಿಳಿದುಕೊಳ್ಳದೇ ತಮ್ಮ ಜೀವನವನ್ನು ಮೌಲ್ಯಹೀನವಾಗಿ – ಅರ್ಥಹೀನವಾಗಿ ನಡೆಸುತ್ತಿದ್ದಾರೆಂದು ತಿಳಿಯಬೇಕು. ನಾವು ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಇಂತಹ ಒಂದು ಪವಿತ್ರವಾದ ಪ್ರಕ್ರಿಯೆಗಳನ್ನು ಮಾಡುವುದರಿಂದ ನಮ್ಮಲ್ಲಿ ಜೀವಶಕ್ತಿ ಕ್ರಿಯಾಶೀಲವಾಗುತ್ತದೆ. ಅಂದರೆ ನಮ್ಮಲ್ಲಿ ಸಪ್ತಧಾತುಗಳ ಉತ್ತೇಜನವಾಗುತ್ತದೆ.

ಸಪ್ತಧಾತುಗಳು ಉತ್ತೇಜನಗೊಂಡಾಗ ನಮ್ಮಲ್ಲಿ ದೈಹಿಕ ಮಾನಸಿಕ ಭಾವನಾತ್ಮಕ ಶಕ್ತಿಯು ಗಟ್ಟಿಯಾಗುತ್ತದೆ. ಹೆಲ್ತ್ ಎಂದರೆ ಕೇವಲ ದೈಹಿಕ ಆರೋಗ್ಯವಲ್ಲ, ಆಯುರ್ವೇದದಲ್ಲಿ ಇಂದ್ರಿಯ ಮನಸ್ಸು ಪ್ರಸನ್ನವಾದಂತಹ ಆತ್ಮ ಪ್ರಸನ್ನವಾಗಿರಬೇಕು ದೋಷಗಳು ಸಮಾನವಾಗಿರುಬೇಕು ಧಾತುಗಳು ಸಮಾನವಾಗಿರಬೇಕು ಅಗ್ನಿ ಕ್ರಿಯಾಶೀಲವಾಗಿರಬೇಕು ಹೀಗಿರುವಾಗ ಮಾತ್ರ ಸಂಪೂರ್ಣವಾಗಿರ ತಕ್ಕಂತ ಸ್ವಸ್ಥ ವ್ಯಕ್ತಿಯೆಂದು ಆಯುರ್ವೇದವು ಹೇಳುತ್ತದೆ. ಮೆಂಟಲ್ಲಿ ಫಿಸಿಕಲ್ಲಿ ಸೋಷಿಯಲ್ಲಿ ಎಮೋಷನಲ್ಲಿ ಸ್ಪಿರಿಟಿಯಲ್ಲಿ ವೆಲ್ ಬೀಯಿಂಗ್ ಎಂದು ಹೇಳಬಹುದು.

ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿವಾಗಿ, ಅಧ್ಯಾತ್ಮಿಕವಾಗಿ, ಭಾವನಾತ್ಮಕವಾಗಿ ಯಾವುದೇ ಅನಾಚಾರಕ್ಕೆ ಒಳಗಾಗದ ಜೀವನವೇ ಸ್ವಸ್ಥ ಜೀವನ. ಅಂತಹ ಜೀವನವು ನಮಗೆ ಸಿಗಬೇಕೆಂದರೆ ನಾವು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು. ಆಸೆ-ಅಸೂಯೆ-ಸ್ವಾರ್ಥ ಇವುಗಳನ್ನು ದೂರವಿಡಬಹುದು. ಈ ಸಮಯದಲ್ಲಿ ನಮ್ಮ ಸಂದೇಶ / ಸಂಕಲ್ಪ ವಿಶ್ವಶಕ್ತಿಗೆ ಹೋಗಿ ತಲುಪುತ್ತದೆ. ನಿದ್ರೆ ಅದ್ಭುತವಾದಂತಹ ಧ್ಯಾನ. ಸಂಪೂರ್ಣ ಆರೋಗ್ಯಕ್ಕಾಗಿ ಬ್ರಾಹ್ಮೀ ಮುಹೂರ್ತವೇ ಪ್ರಕೃತಿಯು ನಮಗೆ ನೀಡಿರುವ ಸಮಯ, ಇದನ್ನು ಬಳಸಿಕೊಳ್ಳೋಣ. ಈ ಸಮಯದಲ್ಲಿ ಏಳುವುದರಿಂದ ಎಲ್ಲ ಖಾಯಿಲೆಗಳಿಂದ ದೂರವಿರಬಹುದು.

Leave A Reply

Your email address will not be published.