ವೃಷಭ ರಾಶಿ ಮಾರ್ಚ್ ಮಾಸ ಭವಿಷ್ಯ

0

ಸ್ನೇಹಿತರೇ ಮಾರ್ಚ್ ತಿಂಗಳಿನ ವೃಷಭ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ವೃಷಭ ಎಂದರೆ ಗೂಳಿ. ವೃಷಭ ರಾಶಿಯವರಿಗೆ ಕೆಲಸದ ಮೇಲೆ ಹೆಚ್ಚು ಫೋಕಸ್ ಇರುತ್ತದೆ. ನಾವು ಏನು ಕೆಲಸ ಮಾಡುತ್ತೀವಿ? ಹೇಗೆ ಮಾಡುತ್ತೀವಿ? ನಮ್ಮ ಪರ್ಫಾರ್ಮೆನ್ಸ್ ಯಾವ ರೀತಿ ಇರುತ್ತದೆ, ನಾವು ಪರಿಶ್ರಮ ಪಟ್ಟಿದ್ದಕ್ಕೆ ಸರಿಯಾದ ರಿವಾರ್ಡ್ ಸಿಗುತ್ತದೆಯಾ, ಈ ತಿಂಗಳಿನಲ್ಲಿಯೇ ಸಿಗುತ್ತದೆಯಾ ಎಂಬ ಪ್ರಶ್ನೆಗಳು ಬರಬಹುದು. ನೀವು ಹೆಚ್ಚು ಹಾರ್ಡ್ ವರ್ಕ್ ಮಾಡುವವರಾಗಿರುವುದರಿಂದ ನಿರೀಕ್ಷೆಗಳು ಇರಲೇಬೇಕು.

ಏಫ್ರಿಲ್ ತಿಂಗಳಿನಲ್ಲಿ ಬಹುತೇಕ ಕಂಪನಿಗಳಲ್ಲಿ ಸಂಬಳ ಹೆಚ್ಚು ಆಗಬಹುದು. ಹಾಗೆಯೇ ಬ್ಯುಜಿನೆಸ್ ಮಾಡುವವರಿಗೆ, ಉದ್ಯೋಗಿಗಳಿಗೆ ಮತ್ತು ಎಲ್ಲಾ ಕೆಲಸಗಾರರಿಗೂ ಒಳ್ಳೆಯ ದಿನಗಳು ಇದಾಗಿರುತ್ತದೆ. ನೀವು ಯಾವುದಾದರೂ ಕೆಲಸಕ್ಕೆ ಗಮನ ಕೊಟ್ಟರೇ ನಿಧಾನವಾಗಿ ಅದರ ಫಲ ಸಿಗುತ್ತದೆ. ಸಾಮಾನ್ಯವಾಗಿ ಹಾರ್ಡ್ ವರ್ಕ್ ಮಾಡಲು ಶುರುಮಾಡಿದ ಮೇಲೆ ಎಷ್ಟೋ ದಿನಗಳಾದ ಮೇಲೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಈಗ ಆಗಲೇ ಕೆಲಸ ಮಾಡಿರುವವರಾಗಿದ್ದರೇ

ಮಾರ್ಚ್ ತಿಂಗಳು ಲಾಭಗಳು ಸಿಗುತ್ತದೆ ಏಕೆಂದರೆ ಶನಿಗ್ರಹವು ಆಗಲೇ ಇರುವುದರಿಂದ ಸ್ವಲ್ಪ ನಿಧಾನವಾದರೂ ಏನು ಸಿಗಬೇಕು ಅದು ಸಿಕ್ಕೇ ಸಿಗುತ್ತದೆ. ಶುಕ್ರ ಗ್ರಹವು 7ನೇ ತಾರೀಖಿಗೆ ಬರುತ್ತದೆ. ದಶಮ ಭಾವದಿಂದ ಏಕದಶ ಭಾವಕ್ಕೆ ಬರುತ್ತದೆ. ಸಣ್ಣ ವ್ಯವಹಾರ ಇರಲೀ, ದೊಡ್ಡ ವ್ಯವಹಾರ ಮಾಡುತ್ತಿರಲಿ ಅದಕ್ಕೆ ಸೇಫ್ಟಿ ಫಿಲಿಂಗ್ ಸಿಗುತ್ತದೆ. ದೊಡ್ಡ ದೊಡ್ಡ ವ್ಯವಹಾರಗಳನ್ನು ರಿಸ್ಕ್ ತೆಗೆದುಕೊಂಡು ಮಾಡುತ್ತಿದ್ದರೇ ಲಾಭ ಸಿಗುತ್ತದೆ. ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲದೇ ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ.

ರವಿ ಗ್ರಹವು ತುಂಬಾ ಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಕುಂಭರಾಶಿಯಲ್ಲಿ ದಶಮಭಾವದಲ್ಲಿ ರವಿ ಇರುತ್ತದೆ ಆದ್ದರಿಂದ ಕೆಲಸದಲ್ಲಿ ಪರಿವರ್ತನೆಗಳು ಉಂಟಾಗುತ್ತದೆ. ನಿಮ್ಮ ಹೊಸ ಯೋಜನೆ, ಆಲೋಚನೆಗಳಿಗೆ, ವ್ಯವಹಾರಗಳಿಗೆ ಪರಿವರ್ತನೆಗಳು ಉಂಟಾಗುತ್ತದೆ. ಒಳ್ಳೆಯ ವಿಚಾರ ರವಿಗ್ರಹದಿಂದ ಸಿಗುತ್ತದೆ. ಮಹತ್ತ್ವವಾದ ಕೆಲಸಗಳಲ್ಲಿ ಜಯ ಸಿಗುತ್ತದೆ. ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಅಷ್ಟು ಶ್ರದ್ಧೆಯಿಂದ ಕೆಲಸ ಮಾಡಿದರೇ ಅದರಲ್ಲೇ ಮುಂದೆ ಹೋಗಲು

ಹಸಿರು ನಿಶಾನೆ ಸಿಗುವುದು ಅಥವಾ ಅದನ್ನು ಪೂರ್ಣಗೊಳಿಸಿದಾಗ ಆನಂದ, ಖುಷಿ ಸಿಗುತ್ತದೆ. ಪ್ರಮೋಷನ್ ಸಿಗುವುದು ಇದೆಲ್ಲವೂ ನಿಮಗೆ ಸಂತೋಷವನ್ನು ತಂದುಕೊಡುತ್ತದೆ. ಇದು 14ನೇ ತಾರೀಖಿನ ವರೆಗೆ ನಡೆಯುತ್ತದೆ.14ನೇ ತಾರೀಖಿನ ನಂತರ ಏನು ನಡೆಯುತ್ತದೆ ಎಂದು ಯೋಚನೆ ಮಾಡಿದರೇ ವಿಶೇಷವಾಗಿ ಗೌರವ, ಪುರಸ್ಕಾರ, ಪ್ರಶಸ್ತಿ, ಹಿರಿಯರು ನಿಮ್ಮ ಬೆನ್ನತಟ್ಟುವುದು, ಕಿರಿಯರು ನಿಮ್ಮನ್ನು ಗೌರವಿಸುವುದು ನಡೆಯುತ್ತದೆ. ಕೌಟುಂಬಿಕವಾಗಿ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ವ್ಯವಹಾರದಲ್ಲಿ ನಿಮ್ಮ ಕ್ಲೈಂಟ್ ಮತ್ತು ವೆಂಡರ್ ಗಳಲ್ಲಿ ನಿಮ್ಮ ರೈಂಟಿಗ್ ಹೆಚ್ಚು ಆಗುತ್ತದೆ.

ನಿಮ್ಮ ಶ್ರಮಕ್ಕೆ ಪೂರ್ಣವಾದ ಪ್ರತಿಫಲ ಹಲವಾರು ವಿಭಾಗಗಳಿಂದ ಸಿಗುತ್ತದೆ. ವ್ಯವಹಾರ ಮಾಡುವವರಿಗೆ ಈ ಮಾರ್ಚ್ ತಿಂಗಳಿನಲ್ಲಿ ಬಹಳ ಲಾಭವನ್ನು ಪಡೆದುಕೊಳ್ಳಬಹುದು. ನಿಮ್ಮ ಜಾತಕದಲ್ಲಿ ಏನಾದರೂ ದೋಷಗಳು ಇದ್ದರೇ ಇಲ್ಲಿರುವ ಫಲಗಳು ಸಿಗುವುದಿಲ್ಲ, ಏನೂ ದೋಷಗಳಿಲ್ಲವೆಂದಾದರೇ ಬಹಳಷ್ಟು ವಿಷಯಗಳಲ್ಲಿ ಶುಭಗಳನ್ನು ಪಡೆಯಬಹುದು. ವೃಷಭ ರಾಶಿಯವರಿಗೆ ಅಷ್ಟೇನೂ ಸಮಸ್ಯೆಗಳು ಇರುವುದಿಲ್ಲ ಏಕೆಂದರೆ ಮಾರ್ಚ್ 7ನೇ ತಾರೀಖಿನ ನಂತರ ಏಕಾದಶ ಭಾವದಲ್ಲಿ ಬುಧ ಗ್ರಹ ಇರುತ್ತದೆ.

ಬುಧ ಗ್ರಹವು ಸಂತೋಷ ಮತ್ತು ಉತ್ಸಾಹವನ್ನು ಉಂಟುಮಾಡುವಂತಹ ಗ್ರಹವಾಗಿದೆ. ಪಾಸಿಟಿವ್ ಎನರ್ಜಿಯನ್ನು ಕೊಡುತ್ತದೆ. ಯಾವುದೋ ವಿಷಯವನ್ನು ಮಾಡಬೇಕೆಂದರೇ ಬಹಳ ನಿಖರವಾಗಿ ಮಾಡುವ ಸಾಮರ್ಥ್ಯವನ್ನು ತಂದುಕೊಡುತ್ತದೆ. ವೃಷಭ ರಾಶಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ವಿಷಯದ ಪರೀಕ್ಷೆಗಳಲ್ಲಿ ಟೆನ್ಷನ್ ಇದ್ದರೇ ಅದನ್ನು ಬಿಡಿ, ಸಾಕಷ್ಟು ಒಳ್ಳೆಯ ಪ್ರಯತ್ನಗಳನ್ನು ಮಾಡಿದ್ದೇ ಆದರೇ ಚೆನ್ನಾಗಿ ಸಕ್ಸಸ್ ಸಿಗುತ್ತದೆ. ಶನಿಗ್ರಹವು 10ನೇ ರಾಶಿಯಲ್ಲಿದೆ, ರವಿ ಶನಿ ಜೊತೆಯಾಗುತ್ತಾರೆ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಇರುತ್ತದೆ. ಸ್ವಲ್ಪ ತಾಳ್ಮೆ ಇರುತ್ತದೆ. ಕೆಲಸವನ್ನು ಅಚ್ಚುಕಟ್ಟಾಗಿ ಸಮಯಕ್ಕೆ ಸರಿಯಾಗಿ ಮಾಡುವುದನ್ನು ಕಲಿತರೇ ಬಹಳ ಒಳ್ಳೆಯ ಫಲಗಳು ಸಿಗುತ್ತದೆ.

Leave A Reply

Your email address will not be published.