ಕನ್ಯಾ ರಾಶಿ ಜನವರಿ ಮಾಸ ಭವಿಷ್ಯ

0

ನಾವು ಈ ಲೇಖನದಲ್ಲಿ ಕನ್ಯಾ ರಾಶಿ ಜನವರಿ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ . ನಾವು ನೋಡುವ ಹಾಗೆ ಭವಿಷ್ಯದ ಬಗ್ಗೆ ಹೆಚ್ಚು ಹೆಚ್ಚು ಚಿಂತೆಗಳು ಜಾಸ್ತಿ ಆಗುತ್ತಾ ಹೋಗುತ್ತದೆ . ಒಬ್ಬರು ಹೇಳುವ ರಾಶಿ ಭವಿಷ್ಯದ ಬದಲಿಗೆ 10 ಜನರು ಹೇಳುವ ರಾಶಿ ಭವಿಷ್ಯದ ಬಗ್ಗೆ ನಾವು ನೋಡುತ್ತಿದ್ದೇವೆ .ಆದರೂ ಕೂಡ ಸಮಾಧಾನ ಸಿಗುತ್ತಿಲ್ಲಾ . ನಾಳೆ ಅಥವಾ ಮುಂದೆ ಏನಾಗುತ್ತದೆ ಎಂಬ ಚಿಂತೆ ಹೆಚ್ಚಾಗುತ್ತಿದೆ . ಅನುಕೂಲ ಅಥವಾ ಹಣ ಇಲ್ಲದವರಿಗೆ ಚಿಂತೆ ಆಗೋದು ಸರ್ವೇ ಸಾಮಾನ್ಯ .

ಹಣ ಇಲ್ಲದವರಿಗೆ ಹಣ ಇಲ್ಲದಿರುವುದೇ ಸಮಸ್ಯೆ ಆಗಿರುತ್ತದೆ . ಹಣ ಇದ್ದವರಿಗೆ ಎಲ್ಲಾ ರೀತಿಯ ಸಮಸ್ಯೆಗಳು ಕಾಣುತ್ತಿರುತ್ತದೆ . ಇವರಿಗೆ ಭವಿಷ್ಯದ ಬಗ್ಗೆ ತೀವ್ರವಾಗಿ ಕಾಡುವ ಪ್ರಶ್ನೆ ಎಂದರೆ , ಕೇತು ಗ್ರಹ ಇವರ ರಾಶಿಯಲ್ಲಿ ಇದೆ. ಇವರಿಗೆ ಜ್ಯೋತಿಷ್ಯ ಶಾಸ್ತ್ರದ ಕೂಡ ಆಸಕ್ತಿ ಬರುತ್ತದೆ .ಆಸಕ್ತಿ ಎನ್ನುವುದು ಬಹಳ ಪ್ರಾಮಾಣಿಕವಾಗಿ ಅಥವಾ ಶುದ್ಧವಾಗಿ ಇರುವುದಿಲ್ಲ . ಸ್ವಾರ್ಥ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಇದೆ .ಅಷ್ಟಮದಲ್ಲಿ ಗುರು ಕೂಡ ಇರುವುದರಿಂದ ಪ್ರಾರ್ಥನೆ ಮಾಡಬೇಕು ಎಂದು ಹೇಳಿರುತ್ತಾರೆ .

ಆದರೆ ನಿಮಗೆ ಅದನ್ನು ಮಾಡಲು ಮನಸ್ಸಾಗುವುದಿಲ್ಲ . ನೀವು ಬೇರೆ ಬೇರೆ ಜ್ಯೋತಿಷ್ಯರನ್ನು ಹುಡುಕಿಕೊಂಡು ಹೋಗುತ್ತೀರಿ ಸಮಸ್ಯೆಗಳನ್ನು ಎದುರಿಸಲು .ಆದರೆ ಅವರು ಹೇಳುವ ಕೆಲಸವನ್ನು ಒಂದು ಕೂಡ ಮಾಡುವುದಿಲ್ಲ .ಅಂದರೆ ಯಾವುದನ್ನು ನೀವು ನಂಬಲ್ಲ ಅದು ಕೂಡ ಸಾಧ್ಯವಾಗುವುದಿಲ್ಲ . ನಿಮಗೆ ಕೊಟ್ಟಿರುವ ಸಲಹೆಗಳನ್ನು ಮಾಡಲು ಪ್ರಯತ್ನ ಮಾಡಿ .ಅವರು ಹೇಳಿರುವ ಪ್ರಾರ್ಥನೆಯನ್ನು ಮಾಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ – ಶಾಂತಿ ಸಿಗುತ್ತದೆ .

ನಿಮಗೆ ಶಾಂತಿ ಸಿಕ್ಕಾಗ ಗೊಂದಲಗಳು ನಿಮ್ಮಿಂದ ದೂರವಾಗುತ್ತದೆ . ಆಗ ನಿಮಗೆ ಧನಾತ್ಮಕ ಶಕ್ತಿ ಬರಲು ಸಾಧ್ಯವಾಗುತ್ತದೆ .ಅಂತಹ ಧನಾತ್ಮಕ ಶಕ್ತಿ ನಿಮ್ಮನ್ನು ಮುಂದೆ ಕರೆದುಕೊಂಡು ಹೋಗುತ್ತದೆ . ಮನಸ್ಸನ್ನು ಎಷ್ಟು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ , ಅಷ್ಟು ಕೇಂದ್ರೀಕರಿಸಬೇಕು . ಈ ತಿಂಗಳಲ್ಲಿ ನಿಮಗೆ ಧನಾತ್ಮಕ ಚಿಂತನೆಗಳು ಹೆಚ್ಚಾಗಿ ಇರುತ್ತದೆ . ಜನವರಿ ತಿಂಗಳಲ್ಲಿ ನಿಮ್ಮ ಗಮನ ಹೆಚ್ಚಾಗಿ ಸುಖದ ಬಗ್ಗೆ ಇರುತ್ತದೆ . ಆದರೆ ಅದು ಅಲಭ್ಯ ಎಂದು ಹೇಳಬಹುದು .

ಆದರೆ ನೀವು ತಾಯಿಯ ಬಗ್ಗೆ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು .ಎರಡು ಕ್ರೂರ ಗ್ರಹಗಳ ಮಧ್ಯೆ ಇರುವಾಗ ಸೌಮ್ಯವಾಗಿ ಇರುವ ಬುಧ ಗ್ರಹ ಕೂಡ ಕ್ರೂರವಾಗಿಯೇ ವರ್ತಿಸುತ್ತದೆ .ಚತುರ್ಥ ಭಾವದಲ್ಲಿ ಇರುವ ಸುಖ ಸ್ಥಾನ ಮಾತೃ ಸ್ಥಾನ ಸ್ವಲ್ಪ ಕಷ್ಟ ಇರುತ್ತದೆ . ಇದೊಂದು ಕೇಂದ್ರ ಸ್ಥಾನವಾಗಿ ಇರುವುದರಿಂದ ನಕಾರಾತ್ಮಕ ವಿಚಾರಗಳು ಪದೇ ಪದೇ ನಿಮ್ಮ ತಲೆಯಲ್ಲಿ ಬಂದು ನೆಮ್ಮದಿಯನ್ನು ಹಾಳು ಮಾಡುತ್ತದೆ . ಮೊದಲೇ ಕೇತು ಈ ರಾಶಿಯಲ್ಲಿ ಇದ್ದಾನೆ .

ಇದರಿಂದ ವಿಚಾರಗಳು ನಿಗೂಢವಾಗಿ ಹೋಗುತ್ತವೆ . ವಿಚಾರಗಳನ್ನು ಗುಪ್ತವಾಗಿ ಇಡುವುದು ಮತ್ತು ಹೇಳಬೇಕಾದ ವಿಷಯಗಳನ್ನು ಹೇಳದೆ ಇರುವುದು . ಅದನ್ನು ಈ ರೀತಿ ಹೇಳುವುದಕ್ಕೆ ಪ್ರಯತ್ನಿಸುವುದು .ನೋವನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದು .ಆದರೆ ಪರಿಸ್ಥಿತಿ ಕೂಡ ಅದೇ ತರಹ ಇರುತ್ತದೆ . ಇದಕ್ಕೆ ಪ್ರಯತ್ನ ಮಾಡಬೇಡಿ . ಬೇರೆಯವರೊಂದಿಗೆ ಕಷ್ಟಗಳು ಇದ್ದರೆ ಹಂಚಿಕೊಳ್ಳಬೇಕು . ಖುಷಿಯನ್ನು ಕೂಡ ಹಂಚಿಕೊಳ್ಳಿ . ಹೀಗೆ ಮಾಡುವುದರಿಂದ ಅದು ಹೆಚ್ಚಾಗುತ್ತ ಹೋಗುತ್ತದೆ .

ಇರೋದರಲ್ಲಿ ಒಂದು ಧನಾತ್ಮಕ ವಿಚಾರ ಎಂದರೆ , ಶನಿ ಷಷ್ಟದಲ್ಲಿ ಇರುವುದು . ಇದರಿಂದ ನಿಧಾನವಾಗಿ ಪರಿವರ್ತನೆಗಳು ಶುರುವಾಗಲಿದೆ .ಆದರೆ ವೇಗವನ್ನ ಜಾಸ್ತಿ ಮಾಡುವುದು ನಿಮ್ಮ ಕೈಯಲ್ಲಿಯೇ ಇರುತ್ತದೆ . ಕೆಲಸದಲ್ಲಿ ಪ್ರಗತಿ ಸಾಧ್ಯವಾಗುತ್ತದೆ . ಶತ್ರುಗಳು ಕೂಡ ದೂರವಾಗುತ್ತಾರೆ . ಸ್ಪರ್ಧೆ ಅನ್ನೋದು ಹೇಳ ಹೆಸರಿಲ್ಲದ ತರಆಗುತ್ತದೆ. ಇಷ್ಟೆಲ್ಲ ಇದ್ದರೂ ಚಿಂತೆ ಯಾಕೆ ಎಂದು ಕೇಳುವುದಾದರೆ , ಈ ರಾಶಿಯಲ್ಲಿ ಸಪ್ತಮದಲ್ಲಿ ರಾಹು ಕೇತು ಇರುವುದರಿಂದ ಇದು ನಕಾರಾತ್ಮಕ ಕರ್ಣೀಯ ಆಗಿರುತ್ತದೆ .

ತೊಂದರೆ ಆಗುವುದು ಒಂದು ವಿಚಾರ ಆದರೆ , ತೊಂದರೆ ಬಂದೇ ಬಿಡುತ್ತದೆ ಎನ್ನುವುದು ಒಂದು ಚಿಂತೆ ಆಗಿರುತ್ತದೆ . ಈ ತೊಂದರೆ ಅನ್ನೋದು ತುಂಬಾ ದೊಡ್ಡದಾಗಿ ಕಾಣುತ್ತದೆ . ಈ ಸಮಸ್ಯೆಗಳು ಉಲ್ಬಣ ಆಗುವುದಕ್ಕೆ ಕಾರಣವಾಗುತ್ತದೆ .ಕೆಲವೊಂದು ವಿಚಾರಗಳನ್ನು ಎಲ್ಲಾ ಸಮಯದಲ್ಲೂ ಪ್ರಸ್ತಾಪ ಮಾಡಿಕೊಂಡು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬಾರದು .

ಮಾನಸಿಕ ಕಾರಣಗಳ ಜೊತೆಗೆ ದೈಹಿಕ ಕಾರಣಗಳು ಇರುತ್ತವೆ ನೆನಪಿನಲ್ಲಿಟ್ಟುಕೊಳ್ಳಬೇಕು . ಏಕೆಂದರೆ ಗುರು ಅಷ್ಟಮದಲ್ಲಿ ಇರುವಾಗ ಸ್ವಲ್ಪ ಶೋಭೆ ಇರುತ್ತದೆ. ಆರೋಗ್ಯದ ಬಗ್ಗೆ ಕೂಡ ಸಮಸ್ಯೆಗಳು ಇರುತ್ತದೆ .ದೇಹದ ಆರೋಗ್ಯ ಎನ್ನುವುದು ಮನಸ್ಸಿನ ಸಮಸ್ಯೆಗಳನ್ನು ಉಲ್ಬಣ ಮಾಡುವುದಕ್ಕೆ ಕಾರಣವಾಗುತ್ತದೆ . ವಿಶೇಷವಾಗಿ ನಿಮ್ಮ ಜೀವನ ಶೈಲಿಯನ್ನು ನೀವು ಬದಲಾಯಿಸಿಕೊಳ್ಳಬೇಕು .ಏನೆಂದು ಹೇಳಿದರೆ ಊಟ , ನಿದ್ರೆ , ಆರೋಗ್ಯ, ವಿಶ್ರಾಂತಿ ,ಕೆಲಸ , ಇವುಗಳ ಮೇಲೆ ನಿಯಂತ್ರಣ ಇರಬೇಕು .

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು . ಈ ತರಹದ ಅನಗತ್ಯ ಖರ್ಚುಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ .ಧನಾತ್ಮಕ ಚಿಂತನೆ ಏನೆಂದು ಕೇಳುವುದಾದರೆ , ತೃತೀಯದಲ್ಲಿ ಇರುವ ಶುಕ್ರ ಒಂದು ಮಟ್ಟದ ಸ್ಥಿರತೆಯನ್ನು ನಿಮಗೆ ತಂದು ಕೊಡುತ್ತಾನೆ . ವ್ಯಾಪಾರ ಮಾಡುವಂತಹ ವ್ಯಕ್ತಿಗಳಿಗೆ ಲಾಭ ಅತ್ಯಂತ ಸ್ಥಿರವಾಗುತ್ತಾ ಹೋಗುತ್ತದೆ . ಚಂಚಲತೆ ದೂರವಾಗಿ ಸ್ಥಿರವಾಗಿ ನೆಲೆಗೊಳ್ಳುವ ಹಾಗೆ ಆಗುತ್ತದೆ . ವ್ಯಾಪಾರ ವ್ಯವಹಾರದಲ್ಲಿ ಒಂದು ಮಟ್ಟದಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ .

15ನೇ ತಾರೀಖಿನ ನಂತರ ರವಿ ಗ್ರಹ ಬದಲಾವಣೆಯಾಗುತ್ತದೆ . ಚತುರ್ಥದಿಂದ ಪಂಚಮಕ್ಕೆ ಹೋದಾಗ , ಸ್ವಲ್ಪ ಪರಿವರ್ತನೆ ಆಗುವ ಸಾಧ್ಯತೆ ಇದೆ. ನಿಮಗೆ ತಳಮಳ ದೂರ ಆಗುವ ವರೆಗೆ ನಿಮ್ಮ ಮನಸ್ಸು ಉಪಸ್ಥಿತಿಯಲ್ಲಿ ಇರುತ್ತದೆ . ಆದರೆ ಮಕ್ಕಳ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು .ಆರೋಗ್ಯದ ವಿಚಾರದಲ್ಲಿ ಹೊರಗಡೆ ಹೋದಾಗ ಈ ರೀತಿಯಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು .ಸಾಕಷ್ಟು ಸೂಚನೆಗಳನ್ನು ಕನ್ಯಾ ರಾಶಿಯವರಿಗೆ ನೀಡಲಾಗಿದೆ .

Leave A Reply

Your email address will not be published.