ಕುಂಭ ರಾಶಿ ಮೇ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಮೇ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೇ ತಿಂಗಳ ಮೊದಲ ವಾರದಲ್ಲೇ ಈ ಮಾಸ ಭವಿಷ್ಯವನ್ನು ನೀವು ತಿಳಿದು ಕೊಂಡಿಲ್ಲವಾದರೆ ತಿಂಗಳ ಕೊನೆಯಲ್ಲಿ ನೀವು ಸ್ವಲ್ಪ ಪಶ್ಚಾತಾಪವನ್ನು ಪಡಬೇಕಾಗುತ್ತದೆ. ಏಕೆಂದರೆ ಕೆಲವೊಂದು ತಪ್ಪುಗಳು ನಿಮ್ಮಿಂದ ಆಗಬಹುದು . ಕುಂಭ ರಾಶಿಯವರಿಗೆ ಗಮನವಿರುವುದು ಸುಖ ಸ್ಥಾನದ ಮೇಲೆ ವೃಷಭ ರಾಶಿಯಲ್ಲಿ ಪ್ರಮುಖವಾದ ಎಲ್ಲ ಗ್ರಹಗಳು ಹೋಗಿ ನೆಲೆಸುತ್ತದೆ.

ಶನಿಯು ನಿಮ್ಮ ರಾಶಿಯಲ್ಲೇ ಇರುವುದರಿಂದ ಒಂದಷ್ಟು ವಿಷಯಗಳು ನಿಮಗೆ ಸವಾಲಾಗಿರುತ್ತದೆ. ರಾಶಿಯಾಧಿಪತಿ ರಾಶಿಯಲ್ಲಿ ಸಾಡೇ ಸಾತಿ ಜನ್ಮ ಶನಿ ಎಲ್ಲವೂ ಸಹ ಇರುತ್ತದೆ. ನಿಮ್ಮ ಗಮನ ನೆಮ್ಮದಿ ಒಂದಷ್ಟು ಸುಖದ ಕಡೆಗೆ ತೆರಳುತ್ತದೆ . ಹೊಸದಾಗಿ ಏನಾದರೂ ಮಾಡುವುದು ಬೇಡ ಯಾವುದೇ ಸವಾಲನ್ನು ತೆಗೆದುಕೊಳ್ಳುವುದು ಬೇಡ ಏರುಪೇರುಗಳು ಸಹ ಬೇಡ ಜೀವನ ಸಮಸ್ಥಿತಿಯಲ್ಲಿರಲಿ ಮನಸ್ಸು ಶಾಂತ ರೀತಿಯಲ್ಲಿರಲಿ ಎಂದು ಬಹಳಷ್ಟು ಜನ ಯೋಚನೆ ಮಾಡುತ್ತಿರುತ್ತಾರೆ.

ದೊಡ್ಡ ದೊಡ್ಡ ವ್ಯವಹಾರ ಮಾಡುವವರಿಗೆ ವಿಶೇಷ ಕಾರ್ಯಗಳಲ್ಲಿ ತೊಡಗಿಕೊಂಡಿರುವವರಿಗೂ ಸಹ ಕಷ್ಟಗಳು ಬಂದೇ ಬರುತ್ತದೆ. ಕರ್ಮದ ಫಲವನ್ನು ಸಹ ಅನುಭವಿಸಬೇಕಾಗುತ್ತದೆ. ದುಡ್ಡಿದ್ದರೆ ನೆಮ್ಮದಿ ಇರಲ್ಲ ಮತ್ತು ಮನಸ್ಸಿಗೆ ಶಾಂತಿಯು ಇರುವುದಿಲ್ಲ ಮತ್ತು ಆರೋಗ್ಯದ ಸಮಸ್ಯೆಯೂ ಸಹ ಕಾಡಬಹುದು. ಒಟ್ಟಾರೆಯಾಗಿ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಜನ್ಮ ಶನಿ ಮತ್ತು ಸಾಡೇಸಾತಿಯ ಪ್ರಭಾವದಿಂದ ಹೀಗೆ ಆಗುತ್ತದೆ. ಆದರೆ ಎಲ್ಲರಿಗೂ ಇದೇ ರೀತಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಸುಖ ಸ್ಥಾನದಲ್ಲಿ ರವಿ , ಗುರು ಶುಕ್ರ ಮತ್ತು ಹತ್ತನೇ ತಾರೀಖಿಗೆ ಬುಧನು ಸಹ ಬಂದು ಜೊತೆಯಾಗುತ್ತಾನೆ. ಇಷ್ಟು ಗ್ರಹಗಳು ಬಂದು ಕೂರುವುದರಿಂದ ಸುಖವು ನಾಶವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಚತುರ್ಥಭಾವದಲ್ಲಿ ಶುಕ್ರನು ಅಸ್ತನಾಗಿರುವುದರಿಂದ ಇಷ್ಟೆಲ್ಲ ಆಗುವುದರಿಂದ ತೊಂದರೆ ಏನು ಆಗುವುದಿಲ್ಲ .ಮಿಶ್ರ ಫಲಗಳಿಂದ ಕೂಡಿರುತ್ತದೆ. ಇದನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಕಾರಾತ್ಮಕವಾಗಿ ತೆಗೆದುಕೊಂಡವರಿಗೆ ಅದು ನಕಾರಾತ್ಮಕವಾಗಿಯೇ ಇರುತ್ತದೆ.

ಸಕಾರಾತ್ಮಕವಾಗಿ ಯೋಚನೆ ಮಾಡಿದರೆ ಅದು ಅಷ್ಟು ಪ್ರಭಾವ ಬೀರುವುದಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಚಾರವೆಂದರೆ ಸಪ್ತಮಾಧಿಪತಿ ರವಿಯು ಕೇಂದ್ರದಲ್ಲಿ ಇರುವುದು ಚತುರ್ಥ ಭಾಗದಲ್ಲಿ ಇರುತ್ತಾನೆ. ಸುಖಕ್ಕೆ ತೊಂದರೆಯಾಗುತ್ತದೆ ಮತ್ತು ದಾಂಪತ್ಯ ಜೀವನದಲ್ಲಿ ಕೆಲವೊಂದು ಆತಂಕ ಆಡತಡೆಗಳು ಉಂಟಾಗುತ್ತದೆ. ನಿಮ್ಮ ಮತ್ತು ನಿಮ್ಮ ಮನೆಯವರಿಗೆ ಕೆಲವೊಂದಷ್ಟು ರೋಗದ ಚಿಂತೆಗಳು ಕೆಲವೊಂದಷ್ಟು ಮನಸ್ಸನ್ನು ಹಾಳು ಮಾಡುವಂತಹ ಚಿಂತನೆಗಳು ಬಂದು ಒದಗುತ್ತದೆ. 4 ಚಕ್ರದ ವಾಹನದ ಮೇಲೆ ಪ್ರಯಾಣ ಬೆಳೆಸುವಾಗ ಜಾಗೃತೆ ವಹಿಸಬೇಕು.

ಪ್ರಯಾಣದಲ್ಲಿ ಅಡ್ಡಿ ಆತಂಕಗಳು ಇದರಾಗಬಹುದು. ಸಂಬಂಧಿಕರಿಂದ ಅಷ್ಟೊಂದು ಒಳ್ಳೆಯ ಸಹಾಯವೇನು ದೊರಕುವುದಿಲ್ಲ. ನಿಮ್ಮ ಜೀವನದಲ್ಲಿ ಸುಖ ದುಃಖಗಳಲ್ಲಿ ಭಾಗಿಯಾಗಿ ನಿಮ್ಮ ಜೀವನದಲ್ಲಿ ನಗುವನ್ನು ನಿಮ್ಮ ಸಂಬಂಧಿಕರು ತಂದು ಕೊಡುವುದಿಲ್ಲ. ಇವರಿಂದ ಕಿರಿಕಿರಿ ಮನಸ್ತಾಪ ‌ ಒತ್ತಡಗಳು ನಿಮಗೆ ಉಂಟಾಗುತ್ತದೆ. ಆರಾಮಾಗಿ ನಿಮ್ಮ ಮನಸ್ಸಿಗೆ ನೀವೇ ಸಮಾಧಾನವನ್ನು ಹೇಳಿಕೊಡಿ. ಗುರುವು ಮತ್ತು ರವಿಯು ನಿಮ್ಮ ಚತುರ್ಥಭಾವದಲ್ಲಿ ಶುಕ್ರ ಮತ್ತು ಬುಧ ಗ್ರಹಗಳು ಸಹ ಜೋಡಣೆಯಾಗುತ್ತದೆ. ನೆಮ್ಮದಿ ಖುಷಿ ಮತ್ತು ಹಣವನ್ನು ತಂದುಕೊಡುತ್ತದೆ.

ರವಿ ಮತ್ತು ಗುರು ಗ್ರಹದಿಂದ ಅಸಮತೋಲನ ಉಂಟಾಗುತ್ತದೆ. ಆ ತಾಪವನ್ನು ಕಡಿಮೆ ಮಾಡುವ ಕೆಲಸವನ್ನು ಈ ಗ್ರಹಗಳು ಮಾಡುತ್ತದೆ. ನೀವು ಯಾರಿಗಾದರೂ ಫೋನ್ ಮಾಡಿ ನಿಮ್ಮ ಕಷ್ಟ ಸುಖವನ್ನು ಹೇಳಿಕೊಳ್ಳಲು ಪ್ರಯತ್ನ ಪಟ್ಟಾಗ ಅವರು ನಿಮಗೆ ಅವರ ಸಮಯವನ್ನು ನೀಡದಿದ್ದಾಗ ನಿಮ್ಮ ಮಾತನ್ನು ಕೇಳದೆ ಹೋದಾಗ ನೀವು ತಲೆಕೆಡಿಸಿಕೊಳ್ಳುವುದು ಬೇಡ ಅದರ ಬದಲು ಸುಮ್ಮನೆ ನಿಮ್ಮ ಪಾಡಿಗೆ ನೀವಿದ್ದು ಬಿಡಿ ಮತ್ತೆ ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.

ಆಗ ನೀವು ಏನು ಹೇಳಬೇಕು ಎಂದುಕೊಂಡಿರುತ್ತೀರೋ ಅದನ್ನು ಬಹಳ ಸ್ಪಷ್ಟವಾಗಿ ಹೇಳಿ. ಆದರೆ ಸೂಕ್ಷ್ಮವಾದ ವಿಚಾರಗಳನ್ನು ಪ್ರಸ್ತಾಪ ಮಾಡಲು ಹೋಗಬೇಡಿ. ಆದಷ್ಟು ಸಂಬಂಧಗಳನ್ನು ಹುಷಾರಾಗಿ ನಿರ್ವಹಿಸಿ. ಆದಷ್ಟು ನೀವು ನೇರವಾದಿಗಳಾಗಿರುತ್ತೀರಾ ಈ ನಿಲುವಿನಿಂದ ಆದಷ್ಟು ಆಚೆಗೆ ಬನ್ನಿ. ಸ್ನೇಹಿತರು ದೂರದ ಸಂಬಂಧಿಗಳು ಇಂಥವರ ಹತ್ತಿರ ಆದಷ್ಟು ಹುಷಾರಾಗಿರಿ. ಮತ್ತೆ ರಾಜಿಯಾಗದಂತಹ ಭಿನ್ನಾಭಿಪ್ರಾಯಗಳು ನಿಮ್ಮ ಮುಂದೆ ಏರ್ಪಡದೆ ಇರಲಿ. ಶಾಂತ ಸ್ಥಿತಿಯಲ್ಲಿ ಸಮಾಧಾನವಾಗಿ ಬೇರೆಯವರೊಡನೆ ಮಾತನಾಡಿ. ಏನೇ ನೋವಾದರೂ ನಿಮ್ಮ ಮನಸ್ಸಿನಲ್ಲಿ ನುಂಗಿಕೊಳ್ಳಿ .

ಆದರೆ ಅಂತಹ ವೈ ಮನಸು ವೈರತ್ವ ಏನು ಬೆಳೆಯುವುದಿಲ್ಲ . ವಿದ್ಯಾರ್ಥಿಗಳ ಬಗ್ಗೆ ಗಮನಹರಿಸುವುದಾದರೆ ಮೂರು ವಿದ್ಯಾ ಗ್ರಹಗಳು ಜೊತೆಯಾಗಿ ಇವೆ. ಸೂರ್ಯನ ಬೆಳಕು ಸಹ ಇದೆ. ಆ ಬೆಳಕು ಸ್ವಲ್ಪ ನಕರಾತ್ಮಕವಾಗಿರುತ್ತದೆ. ಏಕಾಗ್ರತೆ ಚಂಚಲವಾಗಲಿದೆ. ನಿಮ್ಮ ಸೋಮಾರಿತನವನ್ನು ಬೆಳೆಸುವಂತಹ ಸಾಮರ್ಥ್ಯ ಸೂರ್ಯಗ್ರಹ ಇದೆ. ಬುಧ ಮತ್ತು ಶುಕ್ರ ಗ್ರಹಗಳು ನಿಮಗೆ ಒಳ್ಳೆಯ ರೀತಿಯ ಬದಲಾವಣೆ ಉಂಟಾಗುತ್ತದೆ. ವಿದ್ಯಾರ್ಥಿಗಳ ಮಟ್ಟಿಗೆ 75ರಷ್ಟು ಒಳ್ಳೆಯ ಬದಲಾವಣೆಗಳಿದೆ.

ವಿದ್ಯೆಗೆ ಓದಿಗೆ ಅಧ್ಯಯನಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮುಂದಾಳುಗಳು ಉಪಾಧ್ಯಾಯರಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವವರಿಗೆ ಇವರಿಗೆ ಅಂತಹ ದೊಡ್ಡ ತೊಂದರೆ ಏನು ಸಹ ಇರುವುದಿಲ್ಲ . ಈ ನಾಲ್ಕು ಗ್ರಹಗಳು ಒಂದಾಗಿ ಅಲ್ಪ ಸ್ವಲ್ಪ ಒಳ್ಳೆಯದನ್ನೇ ತಂದುಕೊಡುತ್ತದೆ. ಧನ ಸ್ಥಾನದಲ್ಲಿ ಗೊಂದಲಗಳು ಇರುತ್ತದೆ . ಯಾವುದರ ಮೇಲೆ ಹೂಡಿಕೆ ಮಾಡಿದರೆ ಸರಿ ಎಂಬ ಕಿರಿಕಿರಿ ಉಂಟಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚಿಗೆ ಒತ್ತಡವಿದೆ. ಜನ್ಮ ಶನಿ ನಡೆಯುತ್ತಿರುವುದರಿಂದ ಅದರ ಪ್ರಭಾವವಿದೆ.

ರಾಹು ಮತ್ತು ಕುಜ ಗ್ರಹಗಳು ಸೇರಿ ನಿಮಗೆ ಅನಾನುಕೂಲವನ್ನು ಮಾಡುತ್ತದೆ. ಬುಧ ಮತ್ತು ಶುಕ್ರ ಗ್ರಹಗಳು ಚತುರ್ಥ ಭಾಗದಲ್ಲಿ ಇರುವುದರಿಂದ ಅದನ್ನು ಸಮತೋಲನ ಮಾಡುವಂತಹ ಶಕ್ತಿಯನ್ನು ನಿಮಗೆ ಕೊಡುತ್ತದೆ. ಕೇಂದ್ರದಲ್ಲಿ ಗುರುಗ್ರಹವಿರುವುದರಿಂದ ನಿಮಗೆ ಒಳ್ಳೆಯದನ್ನೇ ಮಾಡುತ್ತದೆ. ರವಿ ಗ್ರಹದ ಪ್ರಭಾವದಿಂದ ಆರೋಗ್ಯ ವಾಹನಗಳಲ್ಲಿ ಸಂಚಾರದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ ದುಡ್ಡಿನ ವಿಚಾರದಲ್ಲಿ ಅಶುಭ ಗ್ರಹ ಕೇಂದ್ರದಲ್ಲಿದ್ದಾಗ ಒಳ್ಳೆಯದನ್ನು ಮಾಡುತ್ತದೆ.

ಕೇತು ಗ್ರಹ ಅಸ್ತಮದಲ್ಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಬೇಕು. ಜನ್ಮ ಶನಿ ಸುಖ ಸ್ಥಾನದಲ್ಲಿ ಗ್ರಹಗಳು ಅಷ್ಟಮದಲ್ಲಿಯೂ ಗ್ರಹ ಇವು ನಿಮಗೆ ಭ್ರಮೆಯನ್ನು ಉಂಟುಮಾಡುತ್ತದೆ . ವಿಶೇಷವಾಗಿ ಊಹಾತ್ಮಕ ಕೆಲಸದಲ್ಲಿರುವವರು ಬಿಟ್ ಕಾಯಿನ್ , ಷೇರು ಮಾರುಕಟ್ಟೆ ತುಂಬಾ ತಲೆಕೆಡಿಸಿಕೊಳ್ಳುವಂತಹ ಅಪಾಯವಿರುತ್ತದೆ . ಅದರಿಂದ ಬೇಗ ಹೊರಗೆ ಬರಬೇಕು. ಸಾಲ ಸೋಲಗಳಿಂದ ಹೊರಗೆ ಬನ್ನಿ. ಇರುವ ಉಳಿತಾಯವನ್ನು ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿ.

ಒಳ್ಳೆಯ ಶೇರುಗಳು ಮ್ಯೂಚುಯಲ್ ಫಂಡ್ ಗಳಿಗೆ ತೊಡಗಿಸಿಕೊಳ್ಳಿ. ಯಾವಾಗಲೂ ಯಶಸ್ಸನ್ನು ತಂದು ಕೊಡುತ್ತದೆ. ತುಂಬಾ ದುರಾಸೆ ಪಡಲು ಹೋಗಬೇಡಿ. ಈ ರೀತಿಯ ಭ್ರಮೆಯನ್ನು ರಾಹು ಮತ್ತು ಕೇತುವು ನಿಮಗೆ ಸೃಷ್ಟಿ ಮಾಡಬಹುದು ನೀವು ಆದಷ್ಟು ಎಚ್ಚರಿಕೆಯಿಂದ ಇರಿ. ಇದರಿಂದ ಆರೋಗ್ಯ ಮತ್ತು ನೆಮ್ಮದಿ ದುಡ್ಡು ಹಾಳಾಗುತ್ತದೆ ಎಚ್ಚರಿಕೆವಹಿಸಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಿ . ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಳ್ಳಿ . ಇದರಿಂದ ಶನಿಗ್ರಹಕ್ಕೆ ನೀವು ತುಂಬಾ ಇಷ್ಟದ ವ್ಯಕ್ತಿಯಾಗುತ್ತೀರಾ. ಅರ್ಹತೆ ಇರುವ ವ್ಯಕ್ತಿಗಳಿಗೆ ಮಾತ್ರ ದಾನ ಮಾಡಿ. ಇದು ಸಾಡೇಸಾತಿಯಿಂದ ಹೊರಗೆ ಬರುವುದಕ್ಕೆ ನಿಮಗೆ ಪ್ರೇರಣೆ ಮತ್ತು ಮಾರ್ಗವನ್ನು ತೋರಿಸುತ್ತದೆ.

Leave a Comment