ಮಕರ ರಾಶಿ ಕೇತು ಪರಿವರ್ತನೆ

0

ಮಕರ ರಾಶಿಯವರಿಗೆ ಕೇತು ಫಲ ಹೇಗಿದೆ ಎಂದು ತಿಳಿದುಕೊಳ್ಳೋಣ. ಕೇತುವನ್ನು ಮಕರ ರಾಶಿಯವರು ಅಸಡ್ಡೆ ಮಾಡಿದರೆ ನಿಮಗೆ ಕೆಲವೊಂದಿಷ್ಟು ಹೊಡೆತ ಬೀಳಬಹುದು. ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆ ಕನ್ಯಾ ರಾಶಿಯಲ್ಲಿ ಆಗುತ್ತಿದೆ. 9ನೇ ಮನೆ ಆಗುತ್ತದೆ. ಈ ಮನೆಗೆ ಬಯಸ್ತಾನ ಎಂದು ಕರೆಯುತ್ತೇವೆ. ಕೇತು ಈ ಮನೆಗೆ ಬಂದು ಕುಳಿತ ಮೇಲೆ ನಿಮ್ಮಲ್ಲಿ ಕೆಲವು ಜನರಿಗೆ ತುಂಬಾ ಭಯ ಉಂಟಾಗಬಹುದು. ಕಳ್ಳ ಕಾಕರ ಭಯ ದುಡ್ಡು ಕಳೆದುಕೊಳ್ಳುವ ಭಯ ಉಂಟಾಗಬಹುದು ಎಂದು ಹೇಳಬಹುದು.

ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮುಂದಾಲೋಚನೆ ಮಾಡಿ ತೆಗೆದುಕೊಳ್ಳಬೇಕು. ನೀವು ಉಧ್ಯಮದಾರರಾಗಿದ್ದರೆ ಕೆಲಸಗಾರರಿಂದ ನಿಮಗೆ ತೊಂದರೆ ಆಗುವ ಅವಕಾಶವಿರುತ್ತದೆ ಎಚ್ಚರಿಕೆಯಿಂದ ನಿರ್ವಹಿಸಿ. ದೇವರು ಜಾಸ್ತಿ ಮಾಡುವ ದೇವರ ಪೂಜೆ ಹೆಚ್ಚು ಮಾಡುವವರು ಇಂತಹ ಸಮಯದಲ್ಲಿ ಸ್ವಲ್ಪ ಕಮ್ಮಿ ಮಾಡುವ ಸಾಧ್ಯತೆ ಇರುತ್ತದೆ.

ಜನರ ಜೊತೆ ಬೆರೆಯುವುದು ಕಮ್ಮಿಯಾಗಬಹುದು ಒಂಟಿಯಾಗಿರಲು ಯೋಚನೆ ಬರಬಹುದು. ಅದಕ್ಕಾಗಿ ಧನಾತ್ಮಕವಾಗಿ ಯೋಚನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಜನರ ಜೊತೆ ಬೆರೆಯಬೇಕು.
“ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಂ ಕೇತವೇ ನಮಃ” ಮಂತ್ರವನ್ನು ದಿನ ಸಂಜೆ 108 ಸಲ ಹೇಳಿಕೊಳ್ಳ ಬೇಕು. ಧನಾತ್ಮಕ ಲಾಭಗಳು ಏನೆಂದರೆ, ಮುಂದಾಲೋಚನೆ ವಹಿಸಿ ಮಾಡುವ ಕೆಲಸಗಳಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರ.

9ನೇ ಸ್ಥಾನವನ್ನು ಪಿತೃ ಸ್ಥಾನ ಅಂತನು ಹೇಳಲಾಗುತ್ತದೆ ,ಅದರಿಂದ ಹಿರಿಯರಿಂದ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಯಾವ ವಿಚಾರದಲ್ಲಿ ಅಂದರೆ ಆಸ್ತಿ ಜಮೀನಿನ ವಿಷಯದಲ್ಲಿ, ಲಾಭ ಪಡೆದುಕೊಳ್ಳುತ್ತೀರಾ. ತಂದೆ ತಾಯಿ ತಂದೆ ಸಮಾನರು ನಿಮ್ಮ ಬೆಂಬಲಕ್ಕೆ ನಿಲ್ಲಬಹುದು. ಶ್ರದ್ಧೆ ವಹಿಸಿ ಕೆಲಸ ಮಾಡುವುದರಿಂದ ಮುಂದಿನ ಒಂದು ವರ್ಷದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲವರಿಗೆ ವಿದೇಶಿ ಪ್ರಯಾಣದ ಯೋಗ ಬರಲಿದೆ.

Leave A Reply

Your email address will not be published.