ಮನೆಯ ಈ 4 ಜಾಗದಲ್ಲಿ ಇವುಗಳನ್ನು ಇಟ್ಟರೆ ಮನೆಯಲ್ಲಿ ದುಡ್ಡೆ ದುಡ್ಡು ಲಕ್ಷ್ಮಿ ನಿವಾಸ

ನಿಮ್ಮ ಮನೆಯಲ್ಲಿ ಯಾರಿಗೂ ಹೇಳದೇ ಈ ನಾಲ್ಕು ಜಾಗದಲ್ಲಿ ಈ ವಸ್ತುಗಳನ್ನು ಇಟ್ಟರೇ ಮನೆಗೆ ಧನಾಕರ್ಷಣೆ ಉಂಟಾಗುತ್ತದೆ. ಮನೆಯಲ್ಲಿರುವ ಪ್ರತಿಸಮಸ್ಯೆಗಳು ಕಳಿದು ವಿಶೇಷ ಧನಲಾಭ ಏರ್ಪಡುತ್ತದೆ. ಸಾಲದ ಸುಳಿ, ಹಣದ ಸಮಸ್ಯೆ, ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ ನಾಲ್ಕು ವಸ್ತುಗಳನ್ನ ನಾಲ್ಕು ದಿಕ್ಕಿನಲ್ಲಿ ಇಟ್ಟು ನೋಡಿ ಚಮತ್ಕಾರ ನಡೆಯುತ್ತದೆ.

ಆ ನಾಲ್ಕು ವಸ್ತುಗಳು ಯಾವುವು ಮತ್ತು ಆ ನಾಲ್ಕು ಜಾಗಗಳು ಯಾವುವು ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನಿಮ್ಮ ಮನೆಯ ಬಾಗಿಲಿನಲ್ಲಿ, ಅಡುಗೆ ಕೋಣೆಯಲ್ಲಿ, ಮನೆಯಲ್ಲಿರುವ ಬೀರುವಿನ ಒಳಗಡೆ ಹಾಗೂ ದೇವರ ಕೋಣೆಯಲ್ಲಿ ಈ ನಾಲ್ಕು ಜಾಗಗಳಲ್ಲಿ ಪ್ರತ್ಯೇಕವಾಗಿ ನಾಲ್ಕು ಸೂಚನೆಗಳನ್ನ ಪಾಲಿಸಿದರೆ ನಿಮ್ಮ ಮನೆಗೆ ಧನಾರ್ಕಷಣೆ ಆಗುತ್ತದೆ.

ಮೊಟ್ಟ ಮೊದಲನೇಯ ಜಾಗ ನಿಮ್ಮ ಮನೆಯ ಬಾಗಿಲು ಯಾವುದಾದರೂ ಶುಕ್ರವಾರದ ದಿನ ಒಂದು ಅರಿಶಿಣ ಬಣ್ಣದ ಬಟ್ಟೆಯಲ್ಲಿ ನವಧಾನ್ಯಗಳು ಮತ್ತು ಅಕ್ಷತೆಯನ್ನ ಹಾಕಿ ಮೂಟೆಯ ರೀತಿಯಲ್ಲಿ ಕಟ್ಟಿ ಆ ಮೂಟೆಯನ್ನ ನಿಮ್ಮ ಮನೆಯ ಬಾಗಿಲಿನ ಒಳಭಾಗದ ಮೇಲ್ಭಾಗದಲ್ಲಿ ನೇತುಹಾಕಬೇಕು. ಶುಕ್ರವಾರದ ದಿನ ಈ ಕೆಲಸವನ್ನ ಮಾಡಿದರೆ ಧನಾಕರ್ಷಣೆ ಉಂಟಾಗುತ್ತದೆ.

ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ನವಧಾನ್ಯಗಳ ಶಕ್ತಿ ಮನೆಯ ಸದಸ್ಯರಿಗೆ ಪ್ರಾಪ್ತಿಯಾಗುತ್ತದೆ. ಎರಡನೆಯದಾಗಿ ಅಡುಗೆ ಕೋಣೆಯಲ್ಲಿ ಶುಕ್ರವಾರದ ದಿನ ಬೆಳಿಗ್ಗೆ 6ರಿಂದ 7 ಗಂಟೆಯ ಒಳಗೆ, ಮಧ್ಯಾಹ್ನ 1ರಿಂದ 2 ಗಂಟೆಯ ಒಳಗೆ, ರಾತ್ರಿ 8 ರಿಂದ 9 ಗಂಟೆಯ ಒಳಗೆ ಈ ಮೂರು ಸಮಯದಲ್ಲಿ ಒಂದು

ಬಟ್ಟಲಿಗೆ ಕಲ್ಲುಉಪ್ಪನ್ನು ಹಾಕಿ ಅದರ ಮೇಲೆ ಒಂದು ಅರಿಶಿಣದ ಕೊಂಬನ್ನು ಇಡಬೇಕು. ಹೀಗೆ ಮಾಡಿದರೆ ಮನೆಗೆ ವಿಶೇಷವಾಗಿ ಧನಾಕರ್ಷಣೆ ಉಂಟಾಗುತ್ತದೆ. ಅಂದರೆ ಶುಕ್ರವಾರ 6ರಿಂದ 7ರ ಒಳಗೆ ಒಂದು ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು ಹಾಕಿ ಅದರ ಮೇಲೆ ಒಂದು ಅರಿಶಿಣದ ಕೊಂಬನ್ನು ಇಡಬೇಕು ಮತ್ತೆ ಮಧ್ಯಾಹ್ನ 1 ಗಂಟೆಯಿಂದ 2 ಗಂಟೆಯ ಒಳಗಾಗಿ

ಆ ಬಟ್ಟಲಿನ ಪಕ್ಕದಲ್ಲಿಯೇ ಮತ್ತೊಂದು ಬಟ್ಟಲನ್ನು ಇಟ್ಟು ಅದರಲ್ಲೂ ಕೂಡ ಕಲ್ಲುಉಪ್ಪನ್ನು ಹಾಕಿ ಅರಿಶಿಣದ ಕೊಂಬನ್ನು ಇಡಬೇಕು ಮತ್ತೆ ರಾತ್ರಿ ಸಮಯದಲ್ಲಿ 8ರಿಂದ 9 ಗಂಟೆಯ ಒಳಗಾಗಿ ಆ ಎರಡು ಬಟ್ಟಲಿನ ಪಕ್ಕದಲ್ಲಿ ಮತ್ತೊಂದು ಬಟ್ಟಲನ್ನು ಇಟ್ಟು ಅದರಲ್ಲೂ ಕೂಡ ಕಲ್ಲುಉಪ್ಪನ್ನು ಹಾಕಿ ಅರಿಶಿಣದ ಕೊಂಬನ್ನು ಇಡಬೇಕು. ಹೀಗೆ 3 ಬಟ್ಟಲಿನಲ್ಲಿ ಮೂರು ಸಮಯದಲ್ಲಿ ಶುಕ್ರವಾರದ ದಿನ

ಈ ವಿಧವಾಗಿ ಇಡಬೇಕು. ಈ ಕೆಲಸದಿಂದ ಮನೆಯಲ್ಲಿ ಧನಾಕರ್ಷಣೆ ಉಂಟಾಗುತ್ತದೆ. ನಿಮ್ಮ ಮನೆಯ ಅಡುಗೆ ಮನೆಯ ಯಾವ ಮೂಲೆಯಲ್ಲಿಯಾದರೂ ಈ ಬಟ್ಟಲುಗಳನ್ನು ಇಟ್ಟುಕೊಳ್ಳಬಹುದು. ಮರುದಿನ ಶನಿವಾರದ ದಿನ ಯಾರೂ ಓಡಾಡದೇ ಇರುವ ಜಾಗದಲ್ಲಿ ಅಥವಾ ಮರದ ಬುಡದ ಕೆಳಗೆ ಅಥವಾ ಹರಿಯುವ ನೀರಿಗೆ ಈ ಕಲ್ಲುಉಪ್ಪು ಮತ್ತು ಅರಿಶಿಣದ ಕೊಂಬುಗಳನ್ನು ಹಾಕಿ ಬರಬೇಕು.

ಮೂರನೇಯದಾಗಿ ಮನೆಯಲ್ಲಿ ಹಣಕಾಸು ಚೆನ್ನಾಗಿ ವೃದ್ಧಿಯಾಗಲು ನಿಮ್ಮ ಮನೆಯ ಬೀರುವಿನ ಒಳಭಾಗದಲ್ಲಿ ಬಿಳಿ ಅಥವಾ ಅರಿಶಿಣ ಬಣ್ಣದ ವಸ್ತ್ರದಲ್ಲಿ ಸ್ವಲ್ಪ ಪಚ್ಚೆಕರ್ಪೂರ, ಏಲಕ್ಕಿಯನ್ನು ಹಾಕಿ ಮೂಟೆಯಾಕಾರದಲ್ಲಿ ಕಟ್ಟಿ ಬೀರುವಿನ ಒಳಭಾಗದಲ್ಲಿ ಅಥವಾ ದುಡ್ಡು ಇಡುವ ಜಾಗದಲ್ಲಿ ಇಡಬೇಕು. ಈ ರೀತಿ ಮಾಡಿದಾಗ ಧನಾಕರ್ಷಣೆಯಾಗುತ್ತದೆಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಿದ್ದಾರೆ.

ನಾಲ್ಕನೇಯದಾಗಿ ಪ್ರತಿನಿತ್ಯ ದೇವರ ಕೋಣೆಯಲ್ಲಿ ದೇವರಿಗೆ ಪೂಜೆಯನ್ನ ಮಾಡಬೇಕಾದರೆ, ದೀಪಾರಾಧನೆಯನ್ನ ಮಾಡಬೇಕಾದರೆ ಹಸಿ ಹಾಲನ್ನು ನೈವೇದ್ಯವಾಗಿ ಇಡಬೇಕು. ಮನೆಯಲ್ಲಿ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಸಂಮೃದ್ಧಿಯಾಗಬೇಕಾದರೇ ಹಸಿ ಹಾಲಿನ ನೈವೇದ್ಯ ಮಾಡಬೇಕು. ನಂತರ ಈ ಹಾಲನ್ನು ಕಾಫಿ ಅಥವಾ ಟೀ ಮಾಡಲು ಬಳಸಿಕೊಳ್ಳಬಹುದು.

ಮನೆಯ ಒಳಗಡೆ ಕಟ್ಟಿರುವ ಧಾನ್ಯಗಳನ್ನ ಪ್ರತಿ ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತಾ ಬರಬೇಕು. ಬದಲಿಸಿದಂತಹ ನವಧಾನ್ಯಗಳನ್ನ ಅರಳಿಮರದ ಬುಡಕ್ಕೆ ಹಾಕಿ ಬರಬೇಕು. ಜೊತೆಗೆ ಬೀರುವಿನಲ್ಲಿ ಗಂಟು ಕಟ್ಟಿ ಇಟ್ಟಿರುವ ಪಚ್ಚಕರ್ಪೂರ, ಏಲಕ್ಕಿಯನ್ನ ಕೂಡ ಮೂರು ತಿಂಗಳಿಗೊಮ್ಮೆ ಅರಳಿಮರದ ಬುಡಕ್ಕೆ ಹಾಕಬೇಕು.
ನಿಮ್ಮ ಮನೆಯಲ್ಲಿ ಈ ನಾಲ್ಕು ಸೂಚನೆಗಳನ್ನ ಪಾಲಿಸಿದ್ದೇ ಆಗಿದ್ದಲ್ಲೀ ಹಣಕಾಸಿನ ಸಮಸ್ಯೆಗಳು ಮನೆಯಲ್ಲಿ ಕ್ರಮೇಣ ಕಡಿಮೆಯಾಗುತ್ತದೆ. ಮನೆಯ ಸದಸ್ಯರಿಗೆ ಧನಾಗಮನ ಉಂಟಾಗುತ್ತದೆ.

Leave a Comment