ನವಿಲುಗರಿಯನ್ನು ಮನೆಯಲ್ಲಿ ಈ ದಿಕ್ಕಿನಲ್ಲಿಟ್ಟರೆ ಅತೀ ಬೇಗ ಸಾಲ ತೀರುತ್ತೆ

ಸ್ನೇಹಿತರೇ ಒಂದು ನವಿಲುಗರಿಯನ್ನು ಈ ದಿಕ್ಕಿನಲ್ಲಿ ಇಡಿ ಸಾಲ ಬಹುಬೇಗನೆ ತೀರುತ್ತದೆ ಹೇಗೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಇಂದಿಗೂ ಕೂಡ ನವಿಲು ಜಗತ್ತಿನ ಅತ್ಯಂತ ಪ್ರಾಚೀನ ಅಲಂಕಾರಿಕ ಪಕ್ಷಿಯಾಗಿಯೇ ಉಳಿದಿದೆ. ನಮ್ಮ ರಾಷ್ಟ್ರ ಪಕ್ಷಿ ಕೂಡ ನವಿಲು. ನವಿಲಿನ ದೀರ್ಘಕಾಲಿನ ಅಸ್ತಿತ್ವದ ಹಿಂದಿರುವ ರಹಸ್ಯದ ಕುರಿತು, ನವಿಲಿನ ಬಗ್ಗೆ ಇರುವ ದಂತಕಥೆಗಳ ಕುರಿತು ನಿಮಗೆ ತಿಳಿದರೆ ನೀವೂ ಅಚ್ಚರಿಗೊಳ್ಳುವುದು ಖಂಡಿತ. ಹಿಂದೂಧರ್ಮದಲ್ಲಿ ನವಿಲಿನ ಹಾಗೂ ನವಿಲುಗರಿಗಳ ಮಹತ್ತ್ವವನ್ನು ಎತ್ತಿ ಹಿಡಿಯುವ ಕಥೆಗಳು ಕೂಡ ಇವೆ. ಇವುಗಳನ್ನು ಹಿಂದೂ ಪುರಾಣ ಶಾಸ್ತ್ರಗಳಲ್ಲಿ ಕಾಣುತ್ತೇವೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನವಿಲನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೊಂದಿಗೂ ಕೂಡ ಗುರುತಿಸಲಾಗುತ್ತದೆ. ಈ ಕಾರಣದಿಂದಲೇ ಜನರು ನವಿಲುಗರಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವೆಂದು ಭಾವಿಸುತ್ತಾರೆ. ಏಕೆಂದರೆ ನವಿಲುಗರಿಗಳು ಮನೆಗೆ ಸಂಪತ್ತು ಹಾಗೂ ಅಭ್ಯುದಯವನ್ನು ತರುತ್ತದೆಂದು ನಂಬಲಾಗುತ್ತದೆ. ಜೊತೆಗೆ ನವಿಲುಗರಿಗಳು ಮನೆಯನ್ನು ಸೊಳ್ಳೆಗಳು ಹಾಗೂ ಇತರೆ ಕೀಟಗಳಿಂದ ಮುಕ್ತವಾಗಿರಿಸುತ್ತದೆ. ಹಿಂದೂಧರ್ಮದಲ್ಲಿ ನವಿಲುಗರಿಗೆ ಅತ್ಯಂತ ಮಹತ್ತ್ವವಿದೆ. ಹಿಂದೂಧರ್ಮದಲ್ಲಿ ನವಿಲುಗರಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಏಕೆಂದರೆ ಈ ಗರಿಯು ಕೃಷ್ಣನಿಗೆ ಬಹಳ ಪ್ರಿಯವಾಗಿತ್ತು. ಶ್ರೀಕೃಷ್ಣನು ಯಾವಾಗಲೂ ತನ್ನ ತಲೆಯ ಮೇಲೆ ನವಿಲುಗರಿಯನ್ನು ಧರಿಸಿರುವುದಕ್ಕೆ ಇದೇ ಕಾರಣ. ಇದಲ್ಲದೇ ಗಣೇಶ, ಕಾರ್ತೀಕೇಯ, ಮಾತಾ ಸರಸ್ವತಿ, ಇಂದ್ರದೇವ ಮುಂತಾದ ಅನೇಕ ದೇವತೆಗಳು ನವಿಲುಗರಿಯನ್ನು ತುಂಬಾನೇ ಇಷ್ಟಪಡುತ್ತಾರೆ. ಭಗವಾನ್ ಶ್ರೀಕೃಷ್ಣ ತನ್ನ ಕಿರೀಟದ ಮೇಲೆ ಯಾವಾಗಲೂ ನವಿಲುಗರಿಯನ್ನು ಸಿಗಿಸಿಕೊಂಡಿರುತ್ತಾನೆ. ಶಕ್ತಿಯ ಮತ್ತೊಂದು ಸ್ವರೂಪಿಣಿಯಾಗಿರುವ ಕೌಮಾರಿಯೂ ಕೂಡ ನವಿಲನ್ನೇ ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ.

ಭಗವಾನ್ ಕಾರ್ತೀಕೇಯನೂ ಕೂಡ ನವಿಲನ್ನೇ ತನ್ನ ವಾಹನವನ್ನಾಗಿಸಿಕೊಂಡಿದ್ದಾನೆ. ನವಿಲು ನೋಡಲು ತುಂಬಾನೇ ಸುಂದರವಾದ ಪಕ್ಷಿ. ನವಿಲು ಯುಗಯುಗಗಳಿಂದ ಪ್ರಕೃತಿ ಮತ್ತು ಸೌಂದರ್ಯದ ಜೊತೆ ಆಳವಾದ ಸಂಬಂಧವನ್ನು ಹೊಂದಿದೆ. ಆದ್ದರಿಂದ ಮನೆಯಲ್ಲಿ ಯಾವಾಗಲೂ ನವಿಲಿನ ವರ್ಣಚಿತ್ರವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಇದರಿಂದ ಮನೆಗೆ ಶುಭವಾಗುತ್ತದೆ ಎನ್ನುವ ನಂಬಿಕೆ ಹಲವರದ್ದು. ಪ್ರಾಚೀನ ಕಾಲದಲ್ಲಿ ನವಿಲುಗರಿಯನ್ನು ದೇಹದಲ್ಲಿನ ವಿಷವನ್ನು ತೆಗೆದು ಹಾಕಲು ಉಪಯೋಗಿಸಲಾಗುತ್ತಿತ್ತು. ಈ ಕಾರಣದಿಂದ ನವಿಲುಗರಿಯು ವ್ಯಕ್ತಿಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ನವಿಲುಗರಿಯು ನೋಡುವುದಕ್ಕೆ ಅತ್ಯಂತ ಆಕರ್ಷಕವಾಗಿದ್ದು ಇದಕ್ಕೆ ಅಂದಕ್ಕೆ ಮನಸೋಲುವವರು ಇಲ್ಲವೇ ಇಲ್ಲ. ಶ್ರೀಕೃಷ್ಣನ ಮುಡಿಯನ್ನು ಅಲಂಕರಿಸುವ ನವಿಲುಗರಿಯನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅಷ್ಟೇಅಲ್ಲದೆ ನವಿಲುಗರಿಯನ್ನು ನವಗ್ರಹದ ಸಂಕೇತವೆಂದು ಹೇಳಲಾಗಿದೆ. ಇದರ ಜೊತೆಗೆ ಈ ಗರಿಯಿಂದ ಜಾತಕದ ದೋಷ ಹಾಗೂ ಮನೆಯ ವಾಸ್ತುದೋಷವನ್ನು ಹೋಗಲಾಡಿಸಬಹುದು. ನವಿಲುಗರಿಯನ್ನು ನಮ್ಮ ಸುತ್ತಲು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

ವ್ಯಕ್ತಿಯ ಸುತ್ತಲೂ ಸಕಾರಾತ್ಮಕ ಶಕ್ತಿ ಸುತ್ತವರೆಯುತ್ತದೆ ಅದಕ್ಕಾಗಿಯೇ ಜ್ಯೋತಿಷ್ಯಶಾಸ್ತ್ರದಲ್ಲಿ ನವಿಲುಗರಿಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ನವಿಲುಗರಿ ನಿಮ್ಮ ಮನೆಯಲ್ಲಿ ಇದ್ದರೆ ಆರ್ಥಿಕವಾಗಿಯೂ ಕೂಡ ಲಾಭ ಉಂಟಾಗುತ್ತದೆ. ನವಿಲುಗರಿ ಎಂದ ತಕ್ಷಣ ಅದರ ಚಂದದ ಗರಿಗಳು ಕಣ್ಣ ಮುಂದೆ ಬಣ್ಣ ಬಣ್ಣವಾಗಿ ಕಾಣಿಸಿ ಮನಸ್ಸಿಗೆ ಸಂಭ್ರಮವನ್ನು ಉಂಟುಮಾಡುತ್ತದೆ. ದೊಡ್ಡವರು ಚಿಕ್ಕವರೆನ್ನದೇ ತನ್ನತ್ತ ಆಕರ್ಷಿಸುತ್ತದೆ. ನವಿಲುಗರಿಯು ಇತ್ತೀಚೆಗೆ ಎಲ್ಲಾ ಕಡೆ ಮಾರಾಟಕ್ಕೆ ಸಿಗುತ್ತದೆ. ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ನವಿಲುಗರಿಯನ್ನು ಮನೆಯ ಸೌಂದರ್ಯ ಹೆಚ್ಚಿಸುವುದಕ್ಕೆ, ಅಲಂಕಾರ ಮಾಡಲು ಪ್ರತಿಯೊಬ್ಬರು ನವಿಲುಗರಿಯನ್ನು ಬಳಸುವುದು ಸಹಜ.

ಇನ್ನು ಈ ನವಿಲುಗರಿಯು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಇದು ಇರುವ ಜಾಗದಲ್ಲಿ ಹಲ್ಲಿಗಳು ಓಡಾಡುವುದನ್ನು ತಪ್ಪಿಸಬಹುದು. ಹಲ್ಲಿಗಳು ಮನೆಯಲ್ಲಿ ಓಡಾಡುವುದನ್ನು ತಪ್ಪಿಸಲು ತಪ್ಪದೇ ಮನೆಗೆ ತನ್ನಿ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ, ಮನೆಗೆ ಪಾಸಿಟಿವ್ ಶಕ್ತಿಯನ್ನು ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ. ಕುಟುಂಬದಲ್ಲಿ ಮನೆಯಲ್ಲಿ ಪಾಸಿಟಿವ್ ಶಕ್ತಿ ಇರುವುದರಿಂದ ಸುಖ, ಶಾಂತಿ, ನೆಮ್ಮದಿಯನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೇ ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಶುಭಲಾಭಗಳು ಉಂಟಾಗುತ್ತದೆ. ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ.

ನವಿಲುಗರಿ ಇದ್ದ ಸ್ಥಳದಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ ಆಕೆಯ ಕರುಣೆ ಮತ್ತು ಲಕ್ಷ್ಮಿಕಟಾಕ್ಷ ಅವರ ಮೇಲೆ ಇರುವುದರಿಂದ ನವಿಲುಗರಿಯನ್ನು ಜಾತಿ, ಮತಬೇಧವಿಲ್ಲದೆ ಎಲ್ಲರೂ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ದಾಂಪತ್ಯದಲ್ಲಿ ಯಾವುದೇ ಕಲಹ ಬರಬಾರದೆಂದರೆ ಮಲಗುವ ಕೋಣೆಯಲ್ಲಿ ನವಿಲು ಗರಿಬಿಚ್ಚಿ ನಾಟ್ಯ ಮಾಡುವ ಫೋಟೋವನ್ನು ಇಟ್ಟುಕೊಂಡರೆ ಬಾಂಧವ್ಯ ಗಟ್ಟಿಯಾಗುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ನವಿಲುಗರಿಯನ್ನು ನೋಡುವುದರಿಂದ ರಾಹುಗ್ರಹದ ದೋಷಗಳು ಸುಲಭವಾಗಿ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.

ಲಿವಿಂಗ್‍ರೂಂನಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಕೋಣೆ ಚೆನ್ನಾಗಿ ಕಾಣುವುದರ ಜೊತೆಗೆ ಮನೆಯಲ್ಲಿ ಒಂದು ಬಗೆಯ ಹಗುರವಾದ ವಾತಾವರಣ ಉಂಟಾಗಿ ಮನೆಯಲ್ಲಿ ಪಾಸಿಟಿವ್ ವಾತಾವರಣ ಉಂಟಾಗುತ್ತದೆ. ಇನ್ನು ವಾಸ್ತುಶಾಸ್ತ್ರದ ಪ್ರಕಾರ ನವಿಲುಗರಿಯನ್ನು ಬಳಸಿ ವಾಸ್ತುದೋಷವನ್ನು ನಿವಾರಣೆ ಮಾಡಲಾಗುತ್ತದೆ. ಅದು ಹೇಗೆಂದರೆ ಮನೆಯಲ್ಲಿ ವಾಸ್ತು ಸಮಸ್ಯೆ ಇದ್ದರೆ ಎಂಟು ನವಿಲುಗರಿಗಳನ್ನು ಒಟ್ಟಾಗಿ ಒಂದು ಬಿಳಿದಾರದಿಂದ ಕಟ್ಟಿ ಕೈಯಲ್ಲಿ ಇಡಿದು ಓಂ ಸೋಮಾಯ ನಮಃ ಎಂಬ ಮಂತ್ರವನ್ನು ಉಚ್ಚರಣೆ ಮಾಡಿದರೆ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ.

ಮೂರು ನವಿಲುಗರಿಗಳನ್ನು ಕಟ್ಟಿ ಅದರ ಜೊತೆ ಮೂರು ಅಡಿಕೆಗಳನ್ನು ಇಟ್ಟು ಈ ಕಟ್ಟಿಗೆ ನೀರನ್ನು ಸಿಂಪಡಿಸಬೇಕು. ನೀರನ್ನು ಪ್ರೋಕ್ಷಣೆ ಮಾಡುವ ಸಮಯದಲ್ಲಿ ಓಂ ಶನೇಶ್ವರಾಯ ನಮಃ ಎನ್ನುವ ಮಂತ್ರವನ್ನು ಜಪಿಸುವುದರಿಂದ ಶನಿದೋಷದಿಂದ ಮುಕ್ತಿ ಹೊಂದಬಹುದು. ಇನ್ನು ಅತಿಯಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಮನೆಯ ಹಣವಿರುವ ಜಾಗದಲ್ಲಿ ಇಡಿ ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ನವಿಲುಗರಿಯು ಧಾರ್ಮಿಕವಾಗಿ ಮಾತ್ರವಲ್ಲದೇ ಜ್ಯೋತಿಷ್ಯಶಾಸ್ತ್ರದಲ್ಲಿಯೂ ಪ್ರಾಮುಖ್ಯತೆಯನ್ನು ಹೊಂದಿದೆ. ನವಿಲುಗರಿಯು ಇದ್ದ ಮನೆಯಲ್ಲಿ ಎಲ್ಲಾ ದುರಾದೃಷ್ಟಗಳು ಕೊನೆಗೊಳ್ಳುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಮನೆಯ ಮುಖ್ಯದ್ವಾರಕ್ಕೆ ನವಿಲುಗರಿಯ ಮುಖ್ಯದ್ವಾರಕ್ಕೆ ನವಿಲುಗರಿಯಿಂದ ರೌಂಡ್ ಆಗಿ ಜೋಡಿಸಿ ಇಟ್ಟರೆ ಒಳ್ಳೆಯದು.

ಜನರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಶತೃಗಳ ಬಾಧೆಯನ್ನು ನಿವಾರಿಸಿಕೊಳ್ಳಲು ನವಿಲುಗರಿಯಿಂದ ಈ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗುವುದು, ಪತಿಪತ್ನಿ ನಡುವೆ ಕಿರಿಕಿರಿ ಹೆಚ್ಚಾಗುವುದು ಇಂತಹ ತೊಂದರೆಗಳು ಆಗುತ್ತಿದ್ದರೆ ಮುಖ್ಯದ್ವಾರದ ಹೊರ ಬಾಗಿಲಿಗೆ ವಿಶೇಷವಾಗಿ ಜನರಿಗೆ ಕಾಣುವ ಹಾಗೆ ಮೂರು ನವಿಲುಗರಿಗಳನ್ನು ನೇತು ಹಾಕಬೇಕು ಅಂದರೆ ತ್ರಿಶೂಲಾಕಾರದಲ್ಲಿ ಮುಖ್ಯದ್ವಾರದಲ್ಲಿ ನೇತುಹಾಕಬೇಕು. ಹೀಗೆ ಮಾಡಿದ್ದೇ ಆದರೆ ಮನೆಗೆ ರಕ್ಷಣೆ ಸಿಗುತ್ತದೆ.

ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ನವಿಲುಗರಿಯನ್ನು ಹುಡುಕಿಕೊಂಡು ತಂದು ತ್ರಿಶೂಲಾಕಾರದಲ್ಲಿ ತಂದು ನೇತು ಹಾಕಿದರೆ ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲೆಸುತ್ತದೆ. ದೈವ ಬಲವು ಮನೆಗೆ ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಶತೃಗಳ ಕಾಟ ಹೆಚ್ಚಾಗಿದ್ದರೆ ಜೀವನದಲ್ಲಿ ಬಹಳ ತೊಂದರೆಯಾಗುತ್ತಿದ್ದರೆ ಈ ಪರಿಹಾರವನ್ನು ಮಾಡಿ ನೋಡಿ. ಒಂದು ನವಿಲುಗರಿಯನ್ನು ತೆಗೆದುಕೊಂಡು ಸಿಂಧೂರವನ್ನು ಇಟ್ಟು ಶತೃಗಳ ಹೆಸರನ್ನು ಹೇಳಿ ಸಂಕಲ್ಪ ಮಾಡಿ ಹರಿಯುವ ನೀರಿನಲ್ಲಿ ಬಿಟ್ಟರೆ ಶತೃಗಳ ಬಾಧೆ ಕಡಿಮೆಯಾಗುತ್ತದೆ. ಶತೃಗಳು ನಿಮ್ಮ ಮಿತ್ರರಾಗುತ್ತಾರೆ.

ವ್ಯಾಪಾರದಲ್ಲಿ ನಷ್ಟವಾಗುತ್ತಿದ್ದರೆ, ವ್ಯಾಪಾರದಲ್ಲಿ ಏಳಿಗೆಯನ್ನು ಕಾಣಬೇಕಾದರೆ ರಾಧಕೃಷ್ಣರ ಚಿತ್ರದ ಮುಂದೆ ಒಂದು ನವಿಲುಗರಿಯನ್ನು ಇಟ್ಟು ದೀಪವನ್ನು ಬೆಳಗಿಸಬೇಕು. ಈ ಕೆಲಸವನ್ನು 41 ದಿನ ತಪ್ಪದೇ ಮನೆಯಲ್ಲಿ ಮಾಡಬೇಕು. 41 ದಿನ ಕಳೆದ ನಂತರ ನೀವು ಉದ್ಯೋಗ ಮಾಡುತ್ತಿರುವ ಅಥವಾ ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ವಿಶೇಷವಾದ ಬದಲಾವಣೆಗಳು ಉಂಟಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ ನೆಲಸಬೇಕು, ಉದ್ಯೋಗದಲ್ಲಿ ಏಳಿಗೆಯಾಗಬೇಕೆಂದರೆ ಮನೆಯ ಈಶಾನ್ಯದಿಕ್ಕಿನಲ್ಲಿ ಕೃಷ್ಣನ ಫೋಟೋ ಇಡಬೇಕು ಇದರ ಜೊತೆಗೆ ಒಂದು ನವಿಲುಗರಿಯನ್ನು ಇಟ್ಟು ಪ್ರತಿ ದಿನ ನಮಸ್ಕಾರ ಮಾಡಬೇಕು. ಇದರಿಂದ ಮನೆಯ ಸದಸ್ಯರಿಗೆ ಯಶಸ್ಸು ಸಿಗುತ್ತದೆ.

ಇನ್ನು ಉದ್ಯೋಗ ಮಾಡುವ ಸ್ಥಳದಲ್ಲಿ ಕಿರಿಕಿರಿಯಾದಾಗ, ಹಣದ ಸಮಸ್ಯೆ ಎದುರಾದಾಗ ಈ ಪರಿಹಾರವನ್ನು ಮಾಡಿಕೊಳ್ಳಿ. ನವಿಲುಗರಿಯನ್ನು ತಲೆದಿಂಬಿನ ಕೆಳಗೆ ಇಟ್ಟು ನಿದ್ದೆ ಮಾಡಿದಾಗ ನಿಮ್ಮ ಜೀವನದಲ್ಲಿದ್ದ ಕಷ್ಟಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ. ವಿಶೇಷವಾಗಿ ಮಕ್ಕಳು ದಿಂಬಿನ ಕೆಳಗೆ ನವಿಲುಗರಿಯನ್ನು ಇಟ್ಟುಕೊಂಡು ಮಲಗುವುದರಿಂದ ಮಾನಸಿಕ ಗೊಂದಲುಗಳು ದೂರವಾಗುತ್ತದೆ. ವಿದ್ಯೆಯಲ್ಲಿ ವಿಶೇಷವಾದ ಉನ್ನತಿಯಾಗುತ್ತದೆ. ನವಿಲುಗರಿಯ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಕುಬೇರನ ಬಳಿ ಇದ್ದ ನವನಿಧಿಗಳಲ್ಲಿ ಅಕ್ಷಯವಾಗುತ್ತಿದ್ದ ನಿಧಿಯನ್ನು ಶಂಖನಿಧಿ ಎಂದು ಕರೆಯಲಾಗುತ್ತದೆ.

ಕೆಲವು ಪ್ರಮುಖ ದೇವಾಲಯಗಳಲ್ಲಿ ಅವರದೇ ಆದ ವಾದ್ಯವೃಂದವಿದ್ದು ಅಲ್ಲಿ ಶಂಖನಾದಕ್ಕೆ ಪ್ರಮುಖ ಸ್ಥಾನವಿರುತ್ತದೆ. ಅಂತಹ ಶಂಖಗಳನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿರುತ್ತಾರೆ. ಊದುವ ಭಾಗಕ್ಕೆ ಬೆಳ್ಳಿಯ ತಗಡಿನ ನವಿಲುಗರಿ ರೂಪದ ಕೆತ್ತನೆ ಕೆಲಸವನ್ನು ಮಾಡಿರುತ್ತಾರೆ. ಶಂಖವನ್ನು ಎರಡೂ ಕಡೆಯಿಂದಲೂ ಊದಬಹುದು. ಇದು ಊದಲು ಬಹಳ ಕಷ್ಟ ಮತ್ತು ಇದನ್ನು ಕಲಿಯಲು ಬಲವಾದ ಕಾರಣಬೇಕು ಅಷ್ಟು ಜನಪ್ರಿಯವಾಗಿಲ್ಲ. ನವಿಲುಗರಿಯನ್ನು ಮನೆಯಲ್ಲಿ ವಾಸ್ತುದೋಷ ನಿವಾರಣೆಗೆ ಬಳಸುವುದರಿಂದ ದೂಳು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನವಿಲುಗರಿಯನ್ನು ಸೂಕ್ತರೀತಿಯಲ್ಲಿ ಇಟ್ಟುಕೊಂಡಿಲ್ಲವೆಂದಾದರೇ ಅದೃಷ್ಟದ ಬದಲು ದುರಾದೃಷ್ಟ ಎದುರಾಗುತ್ತದೆ. ನವಿಲುಗರಿಯಿಂದ ಏನೇಲ್ಲಾ ಉಪಯೋಗವಿದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment