ಕೆಲವರಿಗೆ ಸಾಮಾನ್ಯವಾಗಿ ಹುಟ್ಟುತ್ತಲೇ ಅವರ ದೇಹದಲ್ಲಿ ಕಪ್ಪು ಮಚ್ಚೆ ಇರುತ್ತದೆ ಕೆಲವರು ಜ್ಯೋತಿಷ್ಯಿಗಳು ಕಪ್ಪು ಮಚ್ಚೆ ನೋಡಿ ಮತ್ತು ನಮ್ಮ ಕೈ ನೋಡಿ ಜಾತಕವನ್ನು ಹೇಳುತ್ತಾರೆ. ಇವು ಎಲ್ಲವನ್ನೂ ಮೂಢ ನಂಬಿಕೆ ಎನ್ನುವವರು ಇದ್ದಾರೆ ಹಾಗೇ ಇದನ್ನು ನಂಬುವರು ಕೂಡ ಇದ್ದಾರೆ. ಶರೀರದ ಈ ಭಾಗಗಳಲ್ಲಿ ಕಪ್ಪು ಮಚ್ಚೆ ಇದ್ದರೆ ಏನು ಪ್ರಯೋಜನ
ಎಂದು ಸಂಪೂರ್ಣ ಮಾಹಿತಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ.ಕೆಲವರಿಗೆ ದೇಹದ ಕೆಲವು ಭಾಗದಲ್ಲಿ ಮಚ್ಚೆಗಳು ಇರುತ್ತದೆ, ಕೆಲವರಿಗೆ ಕಪ್ಪು ಮಚ್ಚೆಯ ಮೇಲೆ ಕೂದಲು ಇರುತ್ತದೆ ಅಂಥವರು ಧನವಂತರು ಮತ್ತು ಗುಣವಂತರಾಗಿರುತ್ತಾರೆ. ಗಂಡಸರಿಗೆ ಎರಡು ಕಣ್ಣಿನಲ್ಲಿ ಮಚ್ಚೆ ಇದ್ದರೆ ದೀರ್ಘ ಆಯಸ್ಸು ಹೊಂದಿರುತ್ತಾರೆ. ಹಾಗೇ ಗಂಡಸರ ತಲೆ ಮೇಲೆ ಮಚ್ಚೆ ಇದ್ದರೆ ಆತ ಗರ್ವವಂತ ಮತ್ತು ಒಳ್ಳೆಯ ವಿಮರ್ಶಕರಾಗಿರುತ್ತಾರೆ.
ಇನ್ನು ಹಣೆಯ ಮೇಲೆ ಮಚ್ಚೆ ಇದ್ದರೆ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಹಾಗೇ ದುಡ್ಡಿನ ವಿಷಯದಲ್ಲೂ ಕೂಡ ಬಲಿಷ್ಠವಾಗಿ ಇರುತ್ತೀರಾ . ಕಣ್ಣಿನ ಮೇಲೆ ಮಚ್ಚೆ ಇದ್ದರೆ ನೀವು ಮಾಡುವ ಕೆಲಸ ಎಷ್ಟೇ ಕಷ್ಟ ಇದ್ದರೂ ಯಶಸ್ವಿಯಾಗಿ ಮಾಡುತ್ತೀರಿ. ತುಟಿಯ ಮೇಲೆ ಮಚ್ಚೆ ಇದ್ದರೆ ಬಂಧುಗಳಿಂದ ತುಂಬಾ ತೊಂದರೆ ಅನುಭವಿಸುತ್ತೀರ. ಹಾಗೇ ನಾಲಿಗೆ ಮೇಲೆ ಮಚ್ಚೆ ಇದ್ದರೆ ತುಂಬಾ ಬುದ್ಧಿವಂತರು.ಭುಜದ ಮೇಲೆ ಮಚ್ಚೆ ಇದ್ದರೆ ಮರ್ಯಾದೆಯಿಂದ ಬದುಕುವ ಹಾಗೆ ಕಷ್ಟ ಪಟ್ಟು ತನ್ನಷ್ಟಕ್ಕೆ ತಾನೇ ಇರುತ್ತಾರೆ. ಹಾಗೆ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ಇರುತ್ತದೆ. ಕತ್ತಿನಾ ಎಡ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರಿಗೆ ದುರದೃಷ್ಟ ತಪ್ಪಿದಲ್ಲ ಎಂದು ಹೇಳಲಾಗುತ್ತದೆ.