ನಿಮ್ಮ ಕೈ ಹಸ್ತದಲ್ಲಿ ಕೆಲವೊಂದು ಚಿಕ್ಕ ರೇಖೆಗಳ ಮತ್ತು ದೊಡ್ಡ ರೇಖೆಗಳನ್ನು ನಾವು ನೋಡಿರುತ್ತೇವೆ ಈ ಒಂದು ರೇಖೆಗಳಿಂದ ಕೆಲವೊಂದು ಚಿಹ್ನೆಗಳು ಮೂಡಿರುತ್ತದೆ. ಕೆಲವೊಂದು ಚಿಹ್ನೆಗಳು ಶುಭಫಲಗಳನ್ನು ನೀಡಿದರೆ ಮತ್ತೆ ಕೆಲವೊಂದು ಚಿಹ್ನೆಗಳು ಅಶುಭ ಫಲಗಳನ್ನು ನೀಡುತ್ತದೆ. ಮತ್ತು ಮಿಶ್ರ ಫಲಗಳನ್ನು ನೀಡುತ್ತದೆ. ಹಸ್ತ ಸಮುದ್ರಿಕಗಳ ಪ್ರಕಾರ ಶಂಖ,
ಸ್ವಸ್ತಿಕ್ ,ಮಸ್ಯ, ಧ್ವಜ, ಚಕ್ರ ತ್ರಿಶೂಲ ಮತ್ತು ಕ್ರಾಸ್ ಇತ್ಯಾದಿ ಚಿನ್ಹೆಗಳು ತುಂಬಾ ಮಹತ್ವಪೂರ್ಣವಾಗಿದೆ. ಈ ಚಿನ್ನೆಗಳ ಪ್ರಭಾವದಿಂದ ಶುಭ ಮತ್ತು ಅಶುಭ ಫಲಗಳನ್ನು ತಿಳಿಸಲಾಗಿದೆ. ನಮ್ಮ ಹಸ್ತದಲ್ಲಿರುವ ಕ್ರಾಸ್ ಚಿನ್ನೆಯು ಎಂತಹ ಪ್ರಭಾವ ಬೀರುತ್ತದೆ ಎಂದು ತಿಳಿದುಕೊಳ್ಳೋಣ. ಯಾರ ಕೈಯಲ್ಲಿ ಶಂಕದ ಚಿನ್ಹೆ ಇರುತ್ತದೆಯೋ ಅವರು ಸೌಭಾಗ್ಯ ಶಾಲಿಗಳಾಗಿರುತ್ತಾರೆ.
ಶಾಸ್ತ್ರಗಳ ಪ್ರಕಾರ ಶಂಖ ವಿಷ್ಣು ಮತ್ತು ಲಕ್ಷ್ಮೀದೇವಿಗೆ ಅತ್ಯಂತ ಪ್ರಿಯವಾಗಿದೆ. ಇದರಿಂದ ಶಂಖ ಚಿನ್ನೆ ಇರುವವರ ಜೀವನ ಐಶ್ವರ್ಯ ಮತ್ತು ಸಂಪತ್ತಿನಿಂದ ಕೂಡಿರುತ್ತದೆ. ಇವರ ವ್ಯಕ್ತಿತ್ವವು ತುಂಬಾ ಪ್ರಭಾವಶಾಲಿ ಮತ್ತು ಆಕರ್ಷಕವಾಗಿರುತ್ತದೆ.ಯಾರ ಕೈಯಲ್ಲಿ ಮೀನಿನ ಚಿತ್ರವಿರುತ್ತದೆಯೋ ಅದು ವಿಭಿನ್ನ ಫಲಗಳನ್ನು ನೀಡುತ್ತದೆ. ಅವರ ಫಲವು ಶುಭದಾಯಕವಾಗಿರುತ್ತದೆ.
ಇಂತಹ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ತುಂಬಾ ಪ್ರಸಿದ್ಧವಾಗಿರುತ್ತಾರೆ. ತಮ್ಮ ಸಾಮರ್ಥ್ಯದ ಮೇಲೆ ಹೆಸರು ಗಳಿಸುತ್ತಾರೆ ನೋಡಲು ತುಂಬಾ ಸುಂದರವಾಗಿರುತ್ತಾರೆ. ಜೊತೆಗೆ ಧಾರ್ಮಿಕ ಪ್ರವೃತ್ತರಾಗಿರುತ್ತಾರೆ.
ನಿಮ್ಮ ಕೈಯಲ್ಲಿ ತ್ರಿಶೂಲ ಆಕಾರ ಇದ್ದರೆ ಇದು ಕೂಡ ಶುಭಫಲಗಳನ್ನು ಕೊಡುತ್ತದೆ. ತ್ರಿಶೂಲವು ಭಗವಾನ್ ಶಿವನ ಆಯುಧವಾಗಿದೆ.
ಕೈಯಲ್ಲಿ ಇಂಥ ಚಿನ್ಹೆ ಇದ್ದರೆ ಅವರ ಕೈಯಲ್ಲಿ ಸಾಕಷ್ಟು ಹಣ ಇರುತ್ತದೆ. ಬುದ್ಧಿವಂತಿಕೆ ಮೇಲೆ ಹಣ ಸಂಪಾದಿಸಿರುತ್ತಾರೆ. ಸದಾಕಾಲ ಶಿವನ ಕೃಪೆ ಇವರ ಮೇಲಿರುತ್ತದೆ. ಕೈಯಲ್ಲಿ ಎಕ್ಸ್ ನ ಚಿಹ್ನೆ ಇರುವವರು ತುಂಬಾ ವಿರಳವಾಗಿರುತ್ತಾರೆ. ಯಾರ ಎರಡು ಕೈಗಳನ್ನು ಎಕ್ಸ್ ಗುರುತು ಇರುತ್ತದೆಯೋ ಅವರು ಶುಭಫಲಗಳನ್ನು ಪಡೆದುಕೊಳ್ಳುತ್ತಾರೆ.
ಜನಪ್ರಿಯ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ಅವರನ್ನು ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಆ ರೀತಿ ಇರುತ್ತಾರೆ. ಇವರ ವ್ಯಕ್ತಿತ್ವ ಜನರನ್ನು ಆಕರ್ಷಣೆ ಮಾಡುತ್ತದೆ. ಅನೇಕ ಜನರಿಗೆ ಪ್ರೇರಣೆಯಾಗಿರುತ್ತಾರೆ. ಇಂತಹ ಜನರು ಹೃದಯದ ಮೇಲೆ ಸಾಮ್ರಾಜ್ಯ ಕಟ್ಟುವ ಕೆಲಸ ಮಾಡುವವರಾಗಿರುತ್ತಾರೆ. ನಮ್ಮ ಕೈಯಲ್ಲಿ ಮೂರು ರೇಖೆಗಳು ಇರುತ್ತದೆ ಆಯುಷ್ಯ ರೇಖೆ, ಮೆದುಳು ರೇಖೆ, ಹೃದಯ ರೇಖೆ ಯಾರ ವ್ಯಕ್ತಿಯ ಕೈಯಲ್ಲಿ ಮೆದುಳು ಮತ್ತು ಹೃದಯ ರೇಖೆಯ ಮಧ್ಯ ಎಕ್ಸ್ನ ಚಿನ್ಹೆ ಇದ್ದರೆ ಇವರು ನಾಯಕತ್ವದ ಗುಣ ಹೊಂದಿರುತ್ತಾರೆ.
ಇವರು ಬೇರೆಯವರಿಗೆ ಸಹಾಯ ಮಾಡಲು ಸದಾ ಸಿದ್ದರಾಗಿರುತ್ತಾರೆ. ಹೃದಯ ರೇಖೆ ಮತ್ತು ಆಯುಷ್ಯ ರೇಖೆಯ ಮಧ್ಯದಲ್ಲಿ ಎಕ್ಸ್ ರೇಖೆ ಇದ್ದರೆ, ಇಂತಹ ವ್ಯಕ್ತಿಗಳು ಪರೋಪಕಾರಿ ಪ್ರವೃತ್ತಿ ಅವರಾಗಿರುತ್ತಾರೆ. ಎಂತಹ ವಿಪತ್ತಿನ ಸಂದರ್ಭದಲ್ಲಿ ಬೇರೆಯವರಿಗೆ ಸಹಾಯ ಮಾಡಲು ಮುಂದಾಗಿರುತ್ತಾರೆ. ಇಂಥವರಿಗೆ ಯಾರು ಸಹ ಕಷ್ಟ ಮತ್ತು ದುಃಖದಲ್ಲಿರುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ.
ಎಲ್ಲರೂ ಸಹ ಸುಖವಾಗಿರಬೇಕು ಎಂಬುದು ಇವರ ಬಯಕೆ ಆಗಿರುತ್ತದೆ. ಕೈಯಲ್ಲಿ ಕ್ರಾಸ್ ಹೊಂದಿರುವ ವ್ಯಕ್ತಿಗಳು ಆರು ಇಂದ್ರಿಯಗಳು ತುಂಬಾ ಸ್ಟ್ರಾಂಗ್ ಆಗಿ ಇರುತ್ತದೆ. ಇವರಿಗೆ ಮುಂದಾಗುವ ಸಂಕಷ್ಟಗಳ ಬಗ್ಗೆ ಮುಂಚಿತವಾಗಿ ತಿಳಿದಿರುತ್ತದೆ. ಅವರಿಗೆ ಯಾರು ಸಹ ಕೆಟ್ಟದನ್ನು ಮಾಡಲು ಸಾಧ್ಯವಿಲ್ಲ.