ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲಾ ಹೋಗಿ ಅದ್ಭುತ ನಡೆಯಬೇಕಾದರೆ ಉಪ್ಪಿನಿಂದ

0

ನಾವು ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲಾ ಹೋಗಿ ಅದ್ಭುತ ನಡೆಯಬೇಕಾದರೆ ಉಪ್ಪಿನಿಂದ ಈ ಸಣ್ಣ ಪರಿಹಾರವನ್ನು ಹೇಗೆ ಮಾಡುವುದು ಎಂದು ತಿಳಿಯೋಣ .
ಉಪ್ಪು ತರುವ ಅದೃಷ್ಟದ ಬಗ್ಗೆ ತಿಳಿಯೋಣ .ಉಪ್ಪು ಹೇಗೆ ಅದೃಷ್ಟ ತರುತ್ತದೆ ಎಂದರೆ, ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಶಕ್ತಿ ತುಂಬಾ ಹೆಚ್ಚಾಗಿರುತ್ತದೆ . ಉಪ್ಪಿಗೆ ದರಿದ್ರ ದೇವಿಯನ್ನು ಮನೆಯಿಂದ ಕಳಿಸುವ ಶಕ್ತಿ ಇದೆ . ಉಪ್ಪನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸಲಾಗಿದೆ . ನಾವು ಕಲ್ಲು ಉಪ್ಪನ್ನು ಸರಿಯಾದ ವಿಧಾನದಲ್ಲಿ ಉಪಯೋಗಿಸಿದರೆ ,

ಧನ ಸಂಪತ್ತಿಗೆ ಸಂಬಂಧಿಸಿದ ಎಲ್ಲಾ ಆರ್ಥಿಕ ಕಷ್ಟಗಳು ದೂರವಾಗುತ್ತದೆ . ಹಾಗೆ ಬೇರೆ ಸಮಸ್ಯೆಗಳಿಂದಲೂ ಸಹ ಹೇಗೆ ಬಹಳ ಸುಲಭವಾಗಿ ಹೊರಬಂದು ಲಕ್ಷ್ಮಿ ಕಟಾಕ್ಷವನ್ನು ಪಡೆಯಬಹುದು ಎಂಬುದನ್ನು ಇಲ್ಲಿ ತಿಳಿಯೋಣ . ಮನೆಯ ವಾಯುವ್ಯ ದಿಕ್ಕು ಎಂದರೆ, ಈಶಾನ್ಯ ದಿಕ್ಕಿನ ಮುಂದೆ ಬರುವ ದಿಕ್ಕನ್ನು ವಾಯುವ್ಯ ದಿಕ್ಕು ಎನ್ನುತ್ತಾರೆ. ಈ ದಿಕ್ಕಿನಲ್ಲಿ ನೀವು ಉಪಯೋಗಿಸುವ ಕಲ್ಲು ಉಪ್ಪನ್ನು ಇಡಬೇಕು . ಇದನ್ನು ಗಾಜಿನ ಡಬ್ಬದಲ್ಲಿ ಅಥವಾ ಪಿಂಗಾಣಿ ಡಬ್ಬದಲ್ಲಿ ಇಡಬೇಕು .

ನಾವು ಯಾವಾಗಲೂ ಪ್ಲಾಸ್ಟಿಕ್ ಅಥವಾ ಬೇರೆ ಡಬ್ಬಗಳಲ್ಲಿ ಉಪ್ಪನ್ನು ಇಡಬಾರದು . ನಾವು ಈ ದಿಕ್ಕಿನಲ್ಲಿ ಸದಾ ಕಾಲ ಇಟ್ಟು , ನಮಗೆ ಯಾವಾಗ ಬೇಕು ಅದನ್ನು ಅಲ್ಲಿ೦ದಲೇ ತೆಗೆದುಕೊಂಡು ಬಳಸಬೇಕಾಗುತ್ತದೆ . ನಿಮಗೆ ಈ ರೀತಿ ಇಡಲು ಕಷ್ಟವಾದರೆ ಒಂದು ಚಿಕ್ಕ ಪಿಂಗಾಣಿ ಡಬ್ಬಿಯಲ್ಲಿ ಅಡುಗೆ ಮನೆಯಲ್ಲಿ ಇಟ್ಟುಕೊಂಡು ಬಳಸಬಹುದು . ಹೀಗೆ ಕಲ್ಲುಪ್ಪನ್ನು ಉಪಯೋಗಿಸುವುದರಿಂದ ಕಷ್ಟಗಳು ದೂರವಾಗುತ್ತದೆ . ತುಂಬಾ ಜನರಿಗೆ ಕಷ್ಟಪಟ್ಟು ದುಡಿದರು ಅವರ ಹತ್ತಿರ ಹಣ ನಿಲ್ಲುತ್ತಿರುವುದಿಲ್ಲ .

ಅಂತಹವರು ಸಂಬಳ ಬಂದ ತಕ್ಷಣ ಮೊದಲಿಗೆ ಕಲ್ಲು ಉಪ್ಪನ್ನು ಖರೀದಿ ಮಾಡಬೇಕು . ಹೀಗೆ ಖರೀದಿಸುವುದರಿಂದ ಮನೆಯಲ್ಲಿ ಖರ್ಚುಗಳು ಕಡಿಮೆಯಾಗುತ್ತಾ ಹೋಗುತ್ತದೆ . ಹಾಗೆಯೇ ಆಕಸ್ಮಿಕ ಖರ್ಚುಗಳು ಸಹ ಬರುವುದಿಲ್ಲ . ನಿಮಗೆ ಧನ ಆಕರ್ಷಣೆ ಆಗಬೇಕು ಎಂದರೆ , ಯಾವಾಗಲೂ ಡೈನಿಂಗ್ ರೂಮಿನಲ್ಲಿ ಒಂದು ಚಿಕ್ಕ ಗಾಜಿನ ಡಬ್ಬಿಯಲ್ಲಿ ಉಪ್ಪನ್ನು ಇಡಬೇಕು . ಹೀಗೆ ಮಾಡುವುದರಿಂದ ಧನಾಕರ್ಷಣೆ ಆಗುತ್ತದೆ . ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕು ಎಂದರೆ , ನೀವು ಪ್ರತಿದಿನ ಸ್ನಾನ ಮಾಡುವಾಗ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಬೆರೆಸಿ ಸ್ನಾನ ಮಾಡಬೇಕು .

ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ನಕಾರಾತ್ಮಕತೆ ಮತ್ತು ನಿರುತ್ಸಾಹ ದೂರವಾಗಿ , ಸಕಾರಾತ್ಮಕ ಶಕ್ತಿ ತುಂಬಾ ಹೆಚ್ಚಾಗುತ್ತದೆ . ನಿಮ್ಮ ಮನೆಯಲ್ಲಿ ವಾಸ್ತು ದೋಷ ಇದ್ದರೆ , ಸ್ನಾನದ ಕೋಣೆಯಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು ಇಡಬೇಕು . ಉಪ್ಪು ಹೇಗೆ ಕರಗುತ್ತಾ ಹೋಗುತ್ತದೆ ಹಾಗೆ ನಿಮ್ಮ ಕಷ್ಟಗಳು ಕೂಡ ಕರಗುತ್ತದೆ . ಇದನ್ನು ವಾರಕ್ಕೆ ಒಂದು ಸಲ ಬದಲಾಯಿಸುತ್ತಾ ಇರಬೇಕು . ಹೀಗೆ ಮಾಡುವುದರಿಂದ ನಿಮ್ಮ ಕಷ್ಟಗಳು ಬೇಗ ದೂರವಾಗುತ್ತದೆ . ನಿಮಗೆ ಆರ್ಥಿಕ ಕಷ್ಟ ಇದ್ದರೆ , ಸ್ವಲ್ಪ ಕಲ್ಲು ಉಪ್ಪು ತೆಗೆದುಕೊಂಡು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಳ್ಳಿ ,

ಉಪ್ಪನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ , ದೇವರ ಮುಂದೆ ಸಂಕಲ್ಪ ಮಾಡಬೇಕು . ನಿಮ್ಮ ಕಷ್ಟಗಳು ಅತಿ ಬೇಗ ದೂರವಾಗಲಿ ಎಂದು ಸಂಕಲ್ಪ ಮಾಡಿದ ನಂತರ ,ಅದನ್ನು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು . ಇಲ್ಲವಾದರೆ ಚಿನ್ನಾಭರಣ ಇಡುವ ಸ್ಥಳದಲ್ಲಿ ಇಡಬಹುದು . ಹೀಗೆ ಮಾಡುವುದರಿಂದ ಅತಿ ಶೀಘ್ರವಾಗಿ ಆರ್ಥಿಕ ಕಷ್ಟಗಳು ದೂರವಾಗುತ್ತದೆ . ಹಾಗೆಯೇ ಮನೆಯಲ್ಲಿ ನಕಾರಾತ್ಮಕತೆ ತುಂಬಾ ಹೆಚ್ಚಾಗಿ ಇದ್ದರೆ , ನೀವು ನೆಲ ಒರೆಸಬೇಕಾದರೆ

ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ , ಮನೆಯನ್ನು ಒರಿಸಬೇಕು . ಹೀಗೆ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕತೆ ದೂರವಾಗಿ , ಸಕಾರಾತ್ಮಕತೆ ಹೆಚ್ಚಾಗುತ್ತದೆ . ಹೀಗೆ ತುಂಬಾ ಚಿಕ್ಕ – ಚಿಕ್ಕ ಪರಿಹಾರಗಳನ್ನು ನೀವು ಮಾಡಿಕೊಂಡು , ಮನೆಯಲ್ಲಿರುವ ನಕಾರಾತ್ಮಕತೆ ದೂರವಾಗಿ , ಸಕಾರಾತ್ಮಕತೆ ಹೆಚ್ಚಾಗಿ ತಾಯಿ ಮಹಾಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಆಹ್ವಾನಿಸಿ ತುಂಬಾ ಸಂತೋಷದಿಂದ ಬಾಳಿ ಎಂದು ಹೇಳಲಾಗಿದೆ..

Leave A Reply

Your email address will not be published.