ತಪ್ಪು ಇಲ್ಲದಕಡೆ ತಲೆ ತಗ್ಗಿಸಬೇಡ

0

ನಾವು ಈ ಲೇಖನದಲ್ಲಿ ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬಾರದು ಎಂಬುದರ ಬಗ್ಗೆ ತಿಳಿಯೋಣ . ನೀತಿ ಪಾಠ ಹೇಳುವವರೆಲ್ಲಾ ಊಟ ಹಾಕುವುದಿಲ್ಲ. ಹಸಿದವನಿಗೆ ಆದರ್ಶಗಳು ಉಪಯೋಗಕ್ಕೆ ಬರುವುದಿಲ್ಲ. ಭಾವನೆಗಳು ಹೆಚ್ಚಾದಾಗ ಸಣ್ಣ ಪ್ರತಿಕ್ರಿಯೆ ಕೂಡ ಅತಿ ದೊಡ್ಡದಾಗಿ ಪರಿಣಮಿಸುತ್ತದೆ .

ದುಡ್ಡು ಬದುಕಿಗೆ ಅವಶ್ಯಕ , ಎಂಬುವುದು ಎಷ್ಟು ಸತ್ಯವೋ, ಬದುಕಿಗೆ ದುಡ್ಡು ಒಂದೇ ಅವಶ್ಯಕವಲ್ಲ ಎಂಬುವುದು ಅಷ್ಟೇ ಸತ್ಯ . ನಾವು ಮೌನವಾದಷ್ಟು ಜನರು ಹೆಚ್ಚು ಅರ್ಥವಾಗುತ್ತಾ ಹೋಗುತ್ತಾರೆ . ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ . ಅದೇ ರೀತಿ ನಂಬಿಕೆ ಇಲ್ಲದ ಕಡೆ ಎಂದಿಗೂ ವಾದಿಸಬೇಡ .

ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದು, ನಾವು ವಿಷ ಕುಡಿದು ಅವರು ಸಾಯಲಿ ಎಂದು ಕಾಯುತ್ತಾ ಕುಳಿತಂತೆ ಆಗುತ್ತದೆ. ಬದುಕಿನಲ್ಲಿ ನಿರೀಕ್ಷೆಗಳು ಸುಳ್ಳು ಆದಾಗ, ಮನುಷ್ಯ ತಾನಾಗೇ ಬದಲಾಗುತ್ತಾನೆ . ಅದು ಅವನ ಗಟ್ಟಿ ತನವೂ ಅಲ್ಲ. ಅತಿಯಾದ ಅಹಂಕಾರವೂ ಅಲ್ಲ . ನೊಂದ ಮನಸ್ಸಿನ ನಿರ್ಧಾರವಷ್ಟೇ.

ಮಾತು ಸಂಬಂಧವನ್ನು ಕೂಡಿಸುವಂತೆ ಇರಬೇಕು. ಹೊರತು ಸಂಬಂಧವನ್ನು ಹಾಳು ಮಾಡುವಂತೆ ಇರಬಾರದು . ಯಾವಾಗ ನಿಮ್ಮ ಸಮಯ ಸರಿಯಾಗಿ ಇರುವುದಿಲ್ಲವೊ, ಆಗ ಜನ ನಿಮ್ಮ ಕ್ಷಮತೆಯನ್ನೇ ಪ್ರಶ್ನೆ ಮಾಡುತ್ತಾರೆ . ಕೋಪದಿಂದ ಬಿಟ್ಟು ಹೋದವರು ಒಂದು ವೇಳೆ ತಿರುಗಿ ಬರಬಹುದು. ಆದರೆ ಮುಗುಳ್ನಗುತ್ತಾ ಬಿಟ್ಟು ಹೋದವರು ಯಾವತ್ತು ತಿರುಗಿ ಬರುವುದಿಲ್ಲ .

ಬಹಳ ಕೆಲಸ ಮಾಡುವುದರಿಂದ ಯಶಸ್ವಿ ಆಗೋದಿಲ್ಲ . ಕೆಲಸವನ್ನು ಸರಿಯಾದ ಕ್ರಮದಲ್ಲಿ ಮಾಡುವುದರಿಂದ ಯಶಸ್ವಿಯಾಗುತ್ತೀರಾ . ಸ್ನೇಹ ಮಾಡಲು ವ್ಯಕ್ತಿಯು ಬೇಕೆಂದಿಲ್ಲ . ಸರಿ ಹೊಂದುವ ಮನಸ್ಸು ಸಿಕ್ಕರೆ ಸಾಕು . ಜನರಿಗೆ ಮಾತನಾಡಲು ವಿಷಯ ಬೇಕು. ಅದು ನನ್ನದಾದರೂ ಸರಿ. ನಿನ್ನದಾದರೂ ಸರಿ . ಇದಕ್ಕೆಲ್ಲಾ ತಲೆ ಕೆಡಿಸಿಕೊಂಡು ಕೊರಗುವುದರಲ್ಲಿ ಅಥ೯ವಿಲ್ಲ .

ಯಾರು ಸಮಯ ಸಾಧಕರಾಗಿ ಒಬ್ಬ ವ್ಯಕ್ತಿಗೆ ಮೋಸ ಮಾಡುತ್ತಾರೋ, ಅವರ ಮೋಸಕ್ಕೆ ಸಮಯವೇ ಒಂದು ದಿನ ಪಾಠ ಕಲಿಸುತ್ತದೆ . ಒಂದು ಕ್ಷಣದ ಸಂತೋಷಕ್ಕಾಗಿ ಇತರರನ್ನು ಆಡಿಕೊಂಡು ನಗಬೇಡಿ. ಮೊದಲು ನಿಮಗಾಗಿ ಸುರಕ್ಷಿತ ನೆಲೆಯನ್ನು ಮಾಡಿಕೊಳ್ಳಿ . ನಂತರ ಇತರರ ಬಗ್ಗೆ ಯೋಚಿಸಿ .

ನಿಮ್ಮ ಸಂಪಾದನೆಗೆ ಬೆಲೆ ಕೊಡುವವರು ನಿಮ್ಮವರಲ್ಲ . ಕಷ್ಟ ಸುಖಕ್ಕೆ ಹೆಗಲು ಕೊಡುವವರು ನಿಮ್ಮವರು . ಬೇರೊಬ್ಬರಿಗೆ ಬೆಸರವಾದರೂ ಪರವಾಗಿಲ್ಲ. ನಿಮ್ಮ ವ್ಯಕ್ತಿತ್ವವನ್ನು ಸ್ವಾಭಿಮಾನವನ್ನು ಬಿಟ್ಟು ಬದುಕಬೇಡಿ . ಪ್ರೀತಿ ಅಂದರೆ ಕಾಡುವುದಲ್ಲ . ಪ್ರಾಣ ಇರುವವರಿಗೆ ನೆರಳಾಗಿ ಕಾಯುವುದು .

ಬಯಸಿ ಹೋಗುವ ಪ್ರೀತಿಗಿಂತ , ಬಯಸಿ ಬಂದ ಪ್ರೀತಿಯನ್ನು ಅಥವಾ ಹೃದಯವನ್ನು ಪ್ರೀತಿಸಿ . ಬೇರೆಯವರು ಹಾಳಾಗಲಿ ಎಂದು ಬಯಸುವ ಜನ ದೇವರಲ್ಲಿ ಮಾತ್ರ ನನಗೆ ಒಳ್ಳೆಯದು ಮಾಡು ಎಂದು ಕೇಳಿಕೊಳ್ಳುತ್ತಾರೆ, ವಿಪರ್ಯಾಸವಲ್ಲವೇ .

ಕ್ಷಮೆ ಮತ್ತು ಧನ್ಯವಾದ ತುಂಬಾ ಚಿಕ್ಕ ಪದಗಳು ಎಂದೆನಿಸಿದರು, ಎಷ್ಟೋ ಸಂಬಂಧಗಳು ಒಡೆಯದಂತೆ ನೋಡಿಕೊಳ್ಳುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ . ಯಾರನ್ನು ಹೆಚ್ಚು ಮನಸ್ಸಿಗೆ ಹಚ್ಚಿ ಕೊಳ್ಳಬೇಡಿ. ಅವರಿಗೆ ನೀವು
ಬೇಡವಾದಗ ನಿಮ್ಮನ್ನು ನೀವೇ ಸಮಾಧಾನವಾಗದಷ್ಟು ನೋವಾಗುತ್ತದೆ .

ಸಮಾಧಾನ ಮಾಡುವವರು ಯಾರು ಇಲ್ಲದಿದ್ದಾಗ ದುಃಖದಲ್ಲಿ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ . ಎಲ್ಲಿ ಗೌರವವಿಲ್ಲವೊ ಅಲ್ಲಿಗೆ ಹೋಗಬೇಡ. ಯಾರು ಮಾತು ಕೇಳುವುದಿಲ್ಲವೋ ಅವರಿಗೆ ಅರ್ಥ ಮಾಡಿಸಬೇಡ .

ಯಾವುದು ಪಚಿಸುವುದಿಲ್ಲವೋ ಅದನ್ನು ತಿನ್ನಬೇಡ .ಸತ್ಯ ಹೇಳಿದರು ಕೋಪಿಸಿಕೊಳ್ಳುವವರನ್ನು
ರಮಿಸಬೇಡ . ಕಣ್ಣೀರು ಒಂದು ಪರ್ಸೆಂಟ್ ನೀರಿನಿಂದ ಕೂಡಿದ್ದರೆ , 99 ಪರ್ಸೆಂಟ್ ಭಾವನೆಗಳಿಂದ ಕೂಡಿರುತ್ತದೆ . ಸಮಸ್ಯೆಗಳ ಆಯಸ್ಸು ತುಂಬಾ ಕಡಿಮೆ. ಅವು ನಮ್ಮ ಜೀವನದ ಪುಟದಲ್ಲಿ ಅನುಭವದ ಸಹಿ ಹಾಕಿ ಹೊರಟು ಹೊಗುತ್ತದೆ .

Leave A Reply

Your email address will not be published.