ಮಂಚದ ಕೆಳಗೆ ಇದನ್ನು ಇಟ್ಟರೆ ಮನೆ ಸರ್ವನಾಶ ಎಚ್ಚರ! 

0

ನಾವು ಈ ಲೇಖನದಲ್ಲಿ ಮಂಚದ ಕೆಳಗೆ ಇದನ್ನು ಇಟ್ಟರೆ ಮನೆ ಹೇಗೆ ಸರ್ವನಾಶ ಆಗುತ್ತದೆ. ಎಂದು ತಿಳಿಯೋಣ . ಹಾಸಿಗೆ ಕೆಳಗೆ ಈ ವಸ್ತು ಇಟ್ಟರೆ ಬದುಕು ನರಕ ಆಗುವುದು ಖಚಿತ ಅನ್ನೋ ರಹಸ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯ, ದಾಂಪತ್ಯದಲ್ಲಿ ಮನಸ್ತಾಪ , ಕುಟುಂಬದಲ್ಲಿ ಕಲಹ , ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ , ಉದ್ಯೋಗಕ್ಕಾಗಿ ಪರದಾಟ , ಕೂಡಿ ಬರದ ಕಂಕಣ ಬಲ , ಉದ್ಯೋಗಕ್ಕಾಗಿ ಹುಡುಕಾಟ , ಹೆಚ್ಚಾಗುತ್ತಿರುವ ಸಾಲಗಳು ,

ಹೀಗೆ ಸಮಸ್ಯೆಗಳು ಒಂದಾದ ಮೇಲೆ ಒಂದರಂತೆ ಬರುತ್ತಿದ್ದರೆ , ಇದಕ್ಕೆ ವ್ಯಕ್ತಿ ಬಳಲಿ ಬೆಂಡಾಗುತ್ತಾನೆ . ಈ ಸಮಸ್ಯೆಗಳು ಪದೇಪದೇ ಏಕೆ ಬರುತ್ತಿದೆ ಎಂದು ಎಷ್ಟೇ ಯೋಚನೆ ಮಾಡಿದರು ಕೂಡ ಸಮಸ್ಯೆಯ ಮೂಲ ಸಿಗುವುದಿಲ್ಲ . ಆದರೆ ಅದರ ಮೂಲ ನಿಮ್ಮ ಮನೆಯಲ್ಲಿ ಇದೆ ಎಂದರೆ , ನಿಮಗೆ ಅಚ್ಚರಿ ಉಂಟಾಗುತ್ತದೆ . ಇದೇ ರಹಸ್ಯ ಮಾಹಿತಿಯನ್ನು ಎಲ್ಲಿ ತಿಳಿಸಲಾಗಿದೆ .

ಜೀವನದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುವುದು ನೀವು ಮಲಗುವ ಕೋಣೆಯಿಂದಲೇ , ಅಂದರೆ ನಿಮ್ಮ ಬೆಡ್ ರೂಮಿಂದ . ಈ ವಿಷಯ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ .ಮಲಗುವ ಕೋಣೆಯಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನದ ಪ್ರಮುಖ ಏಳರಿಂದ ಎಂಟು ಗಂಟೆಗಳ ಕಾಲ ವಿಶ್ರಾಂತಿ ಪಡೆದು , ನಿದ್ದೆ ಮಾಡುವ ಸ್ಥಳ . ಈ ಕೋಣೆ ಪ್ರಶಾಂತ , ಸ್ವಚ್ಛ ಅಚ್ಚುಕಟ್ಟಾಗಿ ಇದ್ದಷ್ಟು ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿಯು ಕೂಡ ಆವರಿಸಿಕೊಂಡಿರುತ್ತದೆ. ಇದೇ ಕೋಣೆಯಲ್ಲಿರುವ ಹಾಸಿಗೆ ಅನಾರೋಗ್ಯದಿಂದ ಬಳಲುತ್ತಿರುವಾಗ ,

ನೋವಿನಲ್ಲಿದ್ದಾಗ ಹಾಗೂ ವಿಶ್ರಾಂತಿ ಬಯಸಿದಾಗ ಆಸರೆ ಕೊಡುತ್ತದೆ . ಅಷ್ಟೇ ಅಲ್ಲದೆ ದೈಹಿಕ ತೃಪ್ತಿಯನ್ನು ಕೂಡ ಇದೇ ಹಾಸಿಗೆಯಲ್ಲಿ ಅನುಭವಿಸುತ್ತೀರಾ . ಇಂತಹ ಹಾಸಿಗೆ ಕೆಳಗೆ ಕೆಲವೊಂದು ವಸ್ತುಗಳನ್ನು ಇಟ್ಟು ಈ ಸ್ಥಳಕ್ಕೆ ಅಪಮಾನ ಮಾಡಲಾಗುತ್ತದೆ . ಇದರ ಪರಿಣಾಮದಿಂದ ಜೀವನದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ . ಆದ ಕಾರಣದಿಂದ ಹಾಸಿಗೆ ಕೆಳಗೆ ಕೆಲವೊಂದು ವಸ್ತುಗಳನ್ನು ಇಡಬಾರದು . ಹಾಸಿಗೆ ಕೆಳಗಡೆ ಕೆಲವೊಂದು ವಸ್ತುಗಳನ್ನು ಇಡುವುದನ್ನು ನಿಲ್ಲಿಸಬೇಕು .

ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ತನ್ನಿಂದ ತಾನೇ ಬೀಡು ಬಿಟ್ಟಿರುವ ಸಮಸ್ಯೆಗಳು ಒಂದೊಂದಾಗಿ ನಾಶವಾಗುತ್ತಾ ಹೋಗುತ್ತದೆ . ಆ ಒಂದು ವಸ್ತುವನ್ನು ನೀವು ಮಲಗುವ ಕೋಣೆಯಿಂದ ತುಂಬಾ ದೂರ ಇಟ್ಟರೆ ಒಳ್ಳೆಯದು . ಆ ಒಂದು ವಸ್ತು ಯಾವುದು ಅದು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆಯೇ , ಅದು ಯಾವುದು ಎಂದರೆ, ಕಸ ಪೊರಕೆ . ಪೊರಕೆ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ .ಇದು ಇಲ್ಲದೇ ಇರುವ ಮನೆಯೇ ಇಲ್ಲ .

ಈ ಪೊರಕೆಯನ್ನು ಲಕ್ಷ್ಮಿ ಸ್ವರೂಪ ಅಂತ ಹೇಳಲಾಗುತ್ತದೆ. ಎಲ್ಲಿ ಸ್ವಚ್ಚತೆ ಇರುತ್ತದೆಯೋ , ಅಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಅಂತ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ. ದೇವಿ ಲಕ್ಷ್ಮಿ ತಾಯಿಗೆ ಹೋಲಿಕೆ ಮಾಡಿರುವ ಪೊರಕೆಗೆ ವಾಸ್ತು ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾಮುಖ್ಯತೆಯನ್ನು ಕೊಡಲಾಗಿದೆ . ಇದೇ ಪೊರಕೆಯನ್ನು ಮನೆಗೆ ಯಾವಾಗ ಬೇಕು ಆಗ ಖರೀದಿ ಮಾಡುವ ಹಾಗಿಲ್ಲ .ಅದಕ್ಕೆ ಒಂದು ಸಮಯ ಘಳಿಗೆ ಇದೆ . ಪೊರಕೆಯನ್ನು ಕೃಷ್ಣ ಪಕ್ಷದ ದಿನದಂದು ಖರೀದಿ ಮಾಡಬೇಕು .

ಯಾವುದೇ ಕಾರಣಕ್ಕೂ ಶುಕ್ಲ ಪಕ್ಷದಲ್ಲಿ ಕಸ ಪೊರಕೆಯನ್ನು ಮನೆಗೆ ತರಬಾರದು . ಇದು ದೊಡ್ಡ ಅಪಶಕುನ ಎಂದು ಹೇಳಲಾಗುತ್ತದೆ . ಇನ್ನು ಮಂಗಳವಾರ ,ರವಿವಾರ , ಶನಿವಾರ , ಹೊಸ ಪೊರಕೆಯನ್ನು ತರಬಹುದು . ಸೋಮವಾರ , ಬುಧವಾರ, ಗುರುವಾರ , ಶುಕ್ರವಾರ ಈ ದಿನಗಳಲ್ಲಿ ಪೊರಕೆಯನ್ನು ಖರೀದಿ ಮಾಡಬೇಡಿ . ಈ ದಿನದಂದು ಪೊರಕೆಯನ್ನು ಖರೀದಿ ಮಾಡಿ ಮನೆಗೆ ತಂದರೆ ಇದರ ಜೊತೆಗೆ ಕೆಟ್ಟ ಗ್ರಹಚಾರ ಕೂಡ ಮನೆಗೆ ಬರುತ್ತದೆ .

ಮನೆಗೆ ಹೊಸ ಪೊರಕೆಯನ್ನು ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಇಡುವ ವ್ಯವಸ್ಥೆಯನ್ನು ಮಾಡಬೇಡಿ . ಇದೇ ಎಲ್ಲರೂ ಮಾಡುವ ದೊಡ್ಡ ತಪ್ಪು . ಮಂಚದ ಕೆಳಗೆ ಖಾಲಿ ಜಾಗ ಇದೆ ಎಂದು ಸಿಕ್ಕ ಸಿಕ್ಕ ವಸ್ತುಗಳನ್ನು ಇಡುತ್ತೇವೆ.. ಅದೆಷ್ಟೋ ವಸ್ತುಗಳು ನಮ್ಮ ಮಂಚದ ಕೆಳಗೆ ಇರುತ್ತದೆ .ವಾಸ್ತು ಶಾಸ್ತ್ರದ ಪ್ರಕಾರ ಅಪ್ಪಿ ತಪ್ಪಿಯೂ ಹಾಸಿಗೆ ಕೆಳಗೆ ಈ ವಸ್ತುಗಳನ್ನು ಇಡಬಾರದು . ಏಕೆಂದರೆ ಇದರಿಂದ ಉಂಟಾಗುವ ವಾಸ್ತು ದೋಷಗಳು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಸುಟ್ಟಿ ಹಾಕುತ್ತದೆ. ಮತ್ತು ಹಣಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ .ಸಾಮಾನ್ಯವಾಗಿ ಮಂಚದ ಕೆಳಗೆ ಪೊರಕೆ ಇಡುವ ಅಭ್ಯಾಸ ಅನೇಕರಿಗೆ ಇರುತ್ತದೆ.

ಮೊದಲು ಈ ಅಭ್ಯಾಸವನ್ನು ಬಿಟ್ಟುಬಿಡಿ . ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಕಸದ ಪೊರಕೆ ಇಡುವುದರಿಂದ ಮನಸ್ಸು ಮತ್ತು ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ . ಹೀಗೆ ಮಾಡುವುದರಿಂದ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುವುದಕ್ಕೆ ಆರಂಭವಾಗುತ್ತದೆ .ಮತ್ತು ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಾ ಹೋಗುತ್ತದೆ . ಮತ್ತು ಗಂಡ ಹೆಂಡತಿಯ ನಡುವೆ ಮನಸ್ತಾಪ ವಿರಸಗಳು ಹೆಚ್ಚಾಗುತ್ತಾ ಹೋಗುತ್ತದೆ . ಗಂಡ ಹೆಂಡತಿಯ ನಡುವೆ ಸಾಮರಸ್ಯ ಇರಬೇಕು ಎಂದರೆ,

ಹಾಸಿಗೆ ಕೆಳಗೆ ಮಾತ್ರವಲ್ಲ ಮಲಗುವ ಕೋಣೆಯಲ್ಲಿ ಪೊರಕೆ ಇಡಬಾರದು . ಮಲಗುವ ಹಾಸಿಗೆ ಮೇಲೆ ಇರುವ ಬೆಡ್ ಶೀಟ್ ಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಾರದು. ಇದು ಕೂಡ ಇವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ . ವೈ ಮನಸ್ಸು ಹೆಚ್ಚಾಗಿ ಇವರಿಬ್ಬರೂ ಕೂಡ ದೂರ ಆಗುವ ಸಾಧ್ಯತೆ ಇರುತ್ತದೆ . ಎರಡು ಬೇರೆ ಬೇರೆ ಬೆಡ್ ಶೀಟ್ ಗಳ ಬದಲಿಗೆ ಒಂದೇ ಬೆಡ್ ಶೀಟ್ ಬಳಸಿ . ಜೊತೆಗೆ ಪೊರಕೆಯನ್ನು ಅಡುಗೆ ಮನೆಯಲ್ಲಿ ಕೂಡ ಇಡಬಾರದು . ಅಡುಗೆ ತಯಾರಿಸುವಾಗ ಸಾಮಾನ್ಯವಾಗಿ ಕಸ ಬೀಳುತ್ತಿರುತ್ತದೆ .

ಆದ್ದರಿಂದ ಪದೇ ಪದೇ ಕಸ ಗುಡಿಸ ಬೇಕಾಗುತ್ತದೆ . ಹಾಗಾಗಿ ಗೃಹಿಣಿಯರು ಕಸ ಗುಡಿಸುವುದಕ್ಕೆ ಅಡಿಗೆ ಮನೆಯಲ್ಲಿ ಪೊರಕೆಯನ್ನು ಇಟ್ಟಿರುತ್ತಾರೆ . ಅಡುಗೆ ಮನೆಯಲ್ಲಿ ಪೊರಕೆ ಇಡುವುದರಿಂದ ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ . ಅದರ ಬದಲಿಗೆ ಬಟ್ಟೆಯಿಂದ ಸ್ವಚ್ಛಗೊಳಿಸಿ . ಇನ್ನು ಪೊರಕೆಯನ್ನು ಬಳಸುವ ಮೊದಲು ಅದಕ್ಕೆ ನಮಸ್ಕಾರ ಮಾಡಿ . ಪೊರಕೆ ಅನುಮತಿ ಪಡೆದ ನಂತರವೇ ಅದನ್ನು ಬಳಸಬೇಕು . ಈ ರೀತಿ ಮಾಡುವುದರಿಂದ ಮನೆಯಲ್ಲಿ ದುರಾದೃಷ್ಟ ನಕಾರಾತ್ಮಕ ಶಕ್ತಿಗಳು ತೊಡೆದು ಹಾಕುವುದಕ್ಕೆ ಪೊರಕೆಯನ್ನು ಪ್ರಾರ್ಥಿಸಬೇಕು .

ಪೊರಕೆಯನ್ನು ನಮಸ್ಕರಿಸುವುದರಿಂದ ಪೊರಕೆಯಲ್ಲಿ ಇರುವ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಪ್ರಾಪ್ತಿ ಆಗುತ್ತದೆ . ಹಾಗೆಯೇ ಕಸ ಗುಡಿಸುವಾಗ ಯಾರಿಗಾದರೂ ಪೊರಕೆ ತಾಕಿದರೆ ನಮಸ್ಕಾರ ಮಾಡಿ ವಾಸ್ತು ಶಾಸ್ತ್ರದ ಪ್ರಕಾರ ಹೊಡೆದ ಅಥವಾ ಮುರಿದ ಪೊರಕೆಯನ್ನು ಬಳಸಬಾರದು . ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ . ಪೊರಕೆಯನ್ನು ಕಾಲಕಾಲಕ್ಕೆ ಬದಲಾಯಿಸಬೇಕು . ಹೆಚ್ಚು ಸವೆದಿರುವ ಪೊರಕೆಯನ್ನು ಬಳಸಬಾರದು .ಅದರ ಬದಲಿಗೆ ಹೊಸ ಪೊರಕೆಯನ್ನು ಮನೆಗೆ ತರಬೇಕು . ಒದ್ದೆಯಾಗಿರುವ ಪೊರಕೆಯನ್ನು ಬಳಸಬಾರದು .

ಇದೇ ವಾಸ್ತು ಶಾಸ್ತ್ರದಲ್ಲಿ ಪೊರಕೆಯ ಹೊರತಾಗಿ ಇನ್ನು ಕೆಲವು ವಸ್ತುಗಳನ್ನು ಹಾಸಿಗೆ ಕೆಳಗೆ ಇಡದಿರುವಂತೆ ಸೂಚಿಸಲಾಗಿದೆ . ಚಪ್ಪಲಿಗಳನ್ನು ಕೂಡ ಇಡಬಾರದು . ಕೆಲವರು ಮಲಗುವ ಮೊದಲು ಹಾಸಿಗೆ ಕೆಳಗಡೆ ಚಪ್ಪಲಿಯನ್ನು ಬಿಟ್ಟು ಮಲಗುತ್ತಾರೆ.. ಹೆಚ್ಚಾಗಿ ಶ್ರೀಮಂತರಿಗೆ ಈ ಅಭ್ಯಾಸ ಇರುತ್ತದೆ . ಹಾಸಿಗೆ ಕೆಳಗೆ ಇವುಗಳನ್ನು ಇಡಬಾರದು . ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುತ್ತದೆ . ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ತುಕ್ಕು ಹಿಡಿದ ಕಬ್ಬಿಣದ ವಸ್ತುಗಳನ್ನು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ನಿಮ್ಮ ಹಾಸಿಗೆ ಕೆಳಗಡೆ ಇಡಬೇಡಿ . ಇದರಿಂದ ಮನೆಯಲ್ಲಿ ವಾಸ್ತುದೋಷ ಮತ್ತು ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

Leave A Reply

Your email address will not be published.