ನಾವು ಈ ಲೇಖನದಲ್ಲಿ ಯಾರನ್ನು ಅತಿಯಾಗಿ ಪ್ರೀತಿಸಬೇಡಿ ಎಂಬ ವಿಷಯದ ಬಗ್ಗೆ ತಿಳಿಯೋಣ . ಮನುಷ್ಯ ತನ್ನಲ್ಲಿರುವ ಗುಣದಿಂದ ದೊಡ್ಡವನಾಗುತ್ತಾನೆ , ಹೊರತು ತನ್ನ ಬಳಿ ಇರುವ ಆಸ್ತಿ – ಅಂತಸ್ತಿನಿಂದ ಅಲ್ಲ .ಅಹಂಕಾರ ಎಂತಹ ವೃಕ್ಷವೆಂದರೆ , ಅದರಲ್ಲಿ ಕೇವಲ ವಿನಾಶ ಎಂಬ ಹಣ್ಣು ಸಿಗುತ್ತದೆ .
ವ್ಯಕ್ತಿ ಪರಿಸ್ಥಿತಿಯ ಕೈ ಗೊಂಬೆಯಾದಾಗ ಅವನಾಗಲಿ ಅವನ ನಿಜವಾದ ವ್ಯಕ್ತಿತ್ವವಾಗಲಿ ಮಾತನಾಡುವುದಿಲ್ಲ . ಅವನು ಎದುರಿಸುತ್ತಿರುವ ಸಮಯ ಪರಿಸ್ಥಿತಿ ಮತ್ತು ಸಂದರ್ಭಗಳು ಮಾತನಾಡುತ್ತದೆ .
ಕೆಲಸ ಮತ್ತು ದೇವರನ್ನು ಪ್ರೀತಿಸಿ .ಯಾಕೆಂದರೆ ಅವರಿಬ್ಬರು ಎಂದಿಗೂ ಮೋಸ ಮಾಡುವುದಿಲ್ಲ. ಎಲ್ಲವೂ ಕ್ಷಣಿಕ ತಿಳಿದು ಬದುಕು ನೀ ಇರುವ ತನಕ .
ನಮ್ಮ ಬದುಕೇ ಒಂದು ಹೋರಾಟ .ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು . ಏನು ಆಗಬೇಕು ಅದು ಆಗಿಯೇ ಆಗುತ್ತದೆ . ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ .
ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ ಪಾತಾಳಕ್ಕೆ ಬಿದ್ದರೂ ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ . ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಸ್ನೇಹಿ . ಮನಸ್ಸನ್ನು ಗೆಲ್ಲುವಲ್ಲಿ ವಿಫಲನಾದವನಿಗೆ ಮನಸೇ ಅತ್ಯಂತ ದೊಡ್ಡ ಶತ್ರು .
ದೂರಿ ದೂರ ಆದವರೆಲ್ಲ ದೂರವೇ ಉಳಿದು ಬಿಡಲಿ . ಒಡೆದ ಹಾಲು ನೈವೇದ್ಯಕ್ಕೆ ಯೋಗ್ಯವಲ್ಲ . ನಿನ್ನ ಕರ್ತವ್ಯ ಶ್ರದ್ಧೆಯಿಂದ ಮಾಡು ಫಲದ ಅಪೇಕ್ಷ ಬೇಡ . ಆತ್ಮ ಯಾವಾಗಲೂ ಅಮರ ಅದಕ್ಕೆ ಸಾವಿಲ್ಲ . ಬರುವಾಗ ಮತ್ತು ಹೋಗುವಾಗ ನಮ್ಮ ಕೈ ಖಾಲಿ ಇರುತ್ತದೆ .
ಕಾಮ ಕ್ರೋಧ ಮತ್ತು ದುರಾಸೆ ಬೇಡ . ಸಂಶಯಗಳನ್ನು ತೊಡೆದು ಹಾಕು . ಒಬ್ಬ ವ್ಯಕ್ತಿ ಶತ್ರುವು ಆಗಬಲ್ಲ ಮಿತ್ರನು ಆಗಬಲ್ಲ . ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಪಡೆಯುತ್ತೀರಿ . ಗೌರವ ನಿಮ್ಮದಾಗಬೇಕೆಂದರೆ ಬೇರೆಯವರನ್ನು ಗೌರವಿಸಿ .
ನಿಮ್ಮ ತಪ್ಪಿಲ್ಲದೆ ಯಾರೇ ನಿಮ್ಮನ್ನು ನಿಂದಿಸಿದರು ಪ್ರತೀಕರ ತೀರಿಸಿಕೊಳ್ಳಲು ನಿಮ್ಮ
ಕೈಯಲ್ಲಿ ಆಗದಿದ್ದರೆ , ಕಾಲ ಅವರನ್ನು ತಪ್ಪದೇ ಶಿಕ್ಷಿಸುತ್ತದೆ. ಯಾಕೆಂದರೆ ಅವರು ಮಾಡಿದ ಕರ್ಮಗಳಿಗೆ ಅವರೇ ಶಿಕ್ಷೆ ಅನುಭವಿಸಬೇಕು .
ಅಧರ್ಮದಿಂದ ಶತ್ರು ಕೆಲವೊಮ್ಮೆ ಗೆಲ್ಲಬಹುದು .ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವರನ್ನು ಸುಡಲು ಆರಂಭಿಸಿರುತ್ತೆ ಅವರ ನಿರ್ನಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ .
ಜಗತ್ತಿನ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ , ಎಂಬ ಆತ್ಮವಿಶ್ವಾಸ ಇರಲಿ. ಆದರೆ ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬೇಡ .
ಜೀವನದಲ್ಲಿ ಅತಿಯಾಗಿ ಯಾರನ್ನು ಪ್ರೀತಿಸಬೇಡಿ. ಅವರು ನಿಮ್ಮ ಶತ್ರು ಆಗಬಲ್ಲ . ಹಾಗೆಯೇ ಯಾರನ್ನು ಅತಿಯಾಗಿ ದ್ವೇಷಿಸಬೇಡಿ . ಅವನು ಮಿತ್ರನು ಆಗಬಲ್ಲ . ಜಗತ್ತನಲ್ಲಿ ಕಾಲಕ್ಕಿಂತ ಶಕ್ತಿಯುತವಾದ ವಸ್ತು ಇನ್ನೊಂದಿಲ್ಲ . ಪರಿವರ್ತನೆ ಜಗದ ನಿಯಮ .