ಮೂರ್ಖ ಪುರುಷರ ಲಕ್ಷಣಗಳು

0

ನಾವು ಈ ಲೇಖನದಲ್ಲಿ ಮೂರ್ಖ ಪುರುಷರ ಲಕ್ಷಣಗಳು ಯಾವುದು ಎಂಬುದನ್ನು ತಿಳಿಯೋಣ . ಮೂರ್ಖ ಪುರುಷ ತನ್ನ ಪತ್ನಿಯನ್ನು ಮನೆ ಕೆಲಸದವಳು ಎಂದು ಭಾವಿಸಿ, ತಾನು ಕೆಲಸದವಳ ಪತಿಯಾಗಿ ಇರುತ್ತಾನೆ . ಆದರೆ ಬುದ್ಧಿವಂತ ಪುರುಷ ಹೆಂಡತಿಯನ್ನು ರಾಣಿಯಾಗಿ ನೋಡಿಕೊಂಡು ತಾನು ರಾಜನಾಗಿ ಬಾಳುತ್ತಾನೆ.

ಮೂರ್ಖ ಪುರುಷ ತನ್ನ ಹೆಂಡತಿಯನ್ನು ಬುಗುರಿಯಂತೆ ಆಡಿಸುತ್ತಾನೆ . ಬೇರೆ ಕಡೆ ಮನೆ ಮಾಡಿ ಇರೋಣ ಅಂತ ಹಠ ಹಿಡಿಯುತ್ತಾನೆ . ಅವನಿಗೆ ತಂದೆ ತಾಯಿಯೊಂದಿಗೆ ಕೂಡಿ ಬಾಳಲು ಅಷ್ಟು ಇಷ್ಟ ಇರುವುದಿಲ್ಲ.

ಆದರೆ ಬುದ್ಧಿವಂತ ಪುರುಷ ಸಂಸಾರದಲ್ಲಿ ಎಷ್ಟೇ ಕಷ್ಟವಿರಲಿ ಎಲ್ಲರನ್ನೂ ಎಲ್ಲವನ್ನು ಹೊಂದಿಕೊಂಡು, ಪರಿಸ್ಥಿತಿ ಅರ್ಥ ಮಾಡಿಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ ಹೊಂದಿರುತ್ತಾನೆ .

ಮೂರ್ಖ ಪುರುಷರು ತನ್ನ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುತ್ತಾರೆ .

ಆದರೆ ಬುದ್ಧಿವಂತ ಪುರುಷರು ಮಕ್ಕಳು ಏನೇ ತಪ್ಪು ಮಾಡಿದರು ಅದನ್ನು ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿ ಮಾತು ಹೇಳುತ್ತಾನೆ .

ಭಾವನೆಗಳಿಲ್ಲದ ಗಂಡಿನ ಮನಸ್ಸು ಬರಿದಾಗಿ ಹೋದ ಬಹು ದೊಡ್ಡ ತೋಟದಂತೆ ಬರೀ ಹೆಸರಿಗೆ ಮಾತ್ರ ದೊಡ್ಡದಾದ ತೋಟ .ಆದರೆ ಯಾವುದಕ್ಕೂ ಉಪಯೋಗವಿಲ್ಲ .

ಮೂರ್ಖ ಪುರುಷ ಕುಟುಂಬ ಮತ್ತು ಪತ್ನಿಯ ಮನೆಯವರೊಂದಿಗೆ ಅಸಾಧ್ಯವಾಗಿ ವರ್ತಿಸುತ್ತಾನೆ .

ಪತ್ನಿ ಏನೆ ಮಾಡಿದರೂ ನಗು ಮುಖದ ಬದಲು ಹುಳಿ ಮುಖದಿಂದ ಅವಳನ್ನು ನೋಡುತ್ತಾನೆ . ಸಬ್ಯತೆ ಹೊಂದಿರುವ ಪುರುಷ ಯಾವಾಗಲೂ ಪ್ರೀತಿಯಿಂದ ಮಾತನಾಡುತ್ತಾನೆ . ಕಠೋರವಾಗಿ ಮಾತನಾಡುವುದಿಲ್ಲ ಮತ್ತು ಇತರರ ಮುಂದೆ ಅಥವಾ ಮನೆಯಲ್ಲಿ ಪತ್ನಿಗೆ ಗೌರವ ನೀಡುತ್ತಾನೆ .

ಬುದ್ಧಿವಂತ ಪುರುಷನಿಗೆ ತಾಳ್ಮೆ ಇರುತ್ತದೆ . ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣ ಇರುತ್ತದೆ .

ಆದರೆ ಸ್ವಾರ್ಥ ಮನೋಭಾವನೆ ಊಟ ತಿಂಡಿ , ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರೀತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಪುರುಷ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ .

ಹೆಂಡತಿ ತನ್ನ ಪತಿಯನ್ನು ರಾಜನಂತೆ ನೋಡಿಕೊಳ್ಳಬೇಕೆಂದು ಬಯಸಿದ್ದರೆ ಗಂಡ ಕೂಡ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು .

ತಾಳಿಯನ್ನು ತೂಕವೆಂದು ಭಾವಿಸುವ ಯಾವುದೇ ಹೆಣ್ಣು ಸಂಸಾರ ನಡೆಸಲು ಯೋಗ್ಯಳಲ್ಲ . ಹೆಣ್ಣು ತನ್ನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಯೋಗ್ಯನಲ್ಲ .

Leave A Reply

Your email address will not be published.