ನಮ್ಮ ಮನೆಗಳಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಅದನ್ನು ತಿಳಿದ ಮೇಲೆ ನಮ್ಮ ಮನೆಯಲ್ಲಿ ಆ ದೈವಶಕ್ತಿಯನ್ನು ವೃದ್ಧಿಸಿಕೊಳ್ಳಲು ಏನು ಮಾಡಬೇಕು? ಹಾಗೇ ಮಾಡುವುದರಿಂದ ದೈವಶಕ್ತಿ ಹೇಗೆ ವೃದ್ಧಿಯಾಗುತ್ತದೆ ಎಂಬ ವಿಷಯಗಳನ್ನು ತಿಳಿದುಕೊಳ್ಳೋಣ. ದೀಪಾರಾಧನೆ ಎಂಬುದು ಬಹಳ ಮುಖ್ಯ. ನಮ್ಮ ಶಾಸ್ತ್ರ, ಸಂಪ್ರದಾಯಗಳಲ್ಲಿ ದೀಪಾರಾಧನೆಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ನಮ್ಮ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಗಳಲ್ಲೂ ಕೂಡ ತಪ್ಪದೇ ದೀಪಾರಾಧನೆ ಮಾಡುತ್ತಿದ್ದರು.
ದೇವರ ಮನೆಯಲ್ಲದೇ, ಮನೆಯಲ್ಲಿಯೂ ಕೂಡ ದೀಪವನ್ನು ಇಡುತ್ತಿದ್ದರು. ಈಗ ಕರೆಂಟ್ ಬಂದ ಮೇಲೆ ದೇವರ ಮನೆಯಲ್ಲಿ ಮಾತ್ರ ದೀಪವನ್ನು ಬೆಳಗುತ್ತಿದ್ದಾರೆ. ಬೇರೆ ಕಡೆ ಅದರ ಅವಶ್ಯಕತೆ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಜನರು ಒಳ್ಳೆಯ ಗಾಳಿಯನ್ನು ಉಸಿರಾಡುತ್ತಿದ್ದರು. ಹೆಣ್ಣಿನ ದೀಪದಿಂದ ಬರುವ ಕಾಂತಿಯನ್ನು ಸಹ ಉಸಿರಾಡುತ್ತಿದ್ದರು. ಅದರಿಂದಲೂ ಅವರಿಗೆ ಆರೋಗ್ಯ ಲಭಿಸುತ್ತಿತ್ತು.
ಅಷ್ಟೇ ಅಲ್ಲದೇ ಅವರ ಮನೆಗಳಲ್ಲಿ ಪಾಸಿಟಿವ್ ಎನರ್ಜಿ ಬೆಳೆಯುತ್ತಿತ್ತು. ಈಗಿನ ಕಾಲದಲ್ಲಿ ದೀಪಾರಾಧನೆ ಎಂಬುದು ದೇವರ ಮನೆಯಲ್ಲಿ ಮಾತ್ರ ಪರಿಮಿತಿಯಾಗಿಬಿಟ್ಟಿದೆ. ಅದು ಕೂಡ ಅದು ಬೆಳಗುವ ಸ್ವಲ್ಪ ಸಮಯ ಮಾತ್ರವೇ. ಪ್ರತಿಯೊಬ್ಬರು ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುವಂತೆ ನೋಡಿಕೊಳ್ಳಬಹುದು.
ಅದರಲ್ಲಿ ಬಳಸುವ ಎಣ್ಣೆ, ತುಪ್ಪ, ಅಥವಾ ಇನ್ನು ಕೆಲವು ಸುಗಂಧ ದ್ರವ್ಯಗಳೇ ಆಗಿರಬಹುದು. ದೀಪಾರಾಧನೆಯಿಂದ ಒಂದು ರೀತಿಯ ಪಾಸಿಟಿವ್ ಎನರ್ಜಿ ಉಂಟಾಗುತ್ತಿರುತ್ತದೆ. ಆದ್ದರಿಂದ ದೈವಶಕ್ತಿ ಹೆಚ್ಚಳವಾಗುತ್ತಿರುತ್ತದೆ. ಯಾರ ಮನೆಯಲ್ಲಿ ದೈವಶಕ್ತಿ ಇರುತ್ತದೆಯೋ ಆ ಮನೆಗಳಲ್ಲಿ ಕಷ್ಟಗಳು ಕಡಿಮೆಯಾಗುತ್ತಿರುತ್ತದೆ. ಸಂಧ್ಯಾ ದೀಪ ಬೆಳಗಿದ ಮೇಲೆ ರಾತ್ರಿ ಮಲಗುವ ವರೆಗೂ ರಾತ್ರಿ ಆ ದೀಪದ ಬೆಳಕು ಮನೆಯಲ್ಲಿರಬೇಕು. ಗೋದೂಳಿಯ ಸಮಯದಲ್ಲಿ ದೀಪವನ್ನು ಬೆಳಗುತ್ತಿರುತ್ತಾರೆ.
ಹಾಗೇ ಮಾಡುವುದರಿಂದ ಲಕ್ಷ್ಮಿ ದೇವಿ ನಮ್ಮ ಮನೆಗೆ ಆಹ್ವಾನಿಸುತ್ತಾಳೆ. ಯಾರ ಮನೆಯಲ್ಲಿ ನಿತ್ಯವೂ ದೀಪಾರಾಧನೆ ಮಾಡುತ್ತಾರೋ ಆ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ. ನಿಮ್ಮ ಮನೆಯಲ್ಲಿ ನೆಗೆಟಿವ್ ವೈಬ್ರೇಷನ್ ಇರುತ್ತದೆಯೋ ಮೊದಲು ಮಾಡಬೇಕಾದ ಕೆಲಸವೆಂದರೆ ದೀಪಾರಾಧನೆ. ದೀಪಾರಾಧನೆಯನ್ನು
ಮಾಡಬೇಕಾದರೇ ವಿವಿಧ ದೀಪಗಳಿವೆ.ಮೊದಲನೇಯದಾಗಿ ಲವಂಗದ ದೀಪ. ದೀಪದ ಎಣ್ಣೆ ಹಾಕಿ ದೀಪವನ್ನು ಬೆಳಗುವಾಗ ಎರಡು ಲವಂಗವನ್ನು ಹಾಕಬೇಕು ಆಗ ಅದು ಲವಂಗ ದೀಪವಾಗುತ್ತದೆ. ಹಾಗೇ ಮಾಡುವಾಗ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿರುತ್ತದೆ. ಕಬೇರ ಸ್ಥಾನಬಲಪಡುತ್ತದೆ. ಆಗ ಲಕ್ಷ್ಮಿದೇವಿಯ ಆಗಮನವಾಗುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆಗಳೆಲ್ಲವೂ ತೊಲಗಿ ಹೋಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ. ದೈವೀ ಶಕ್ತಿ ಇದೆಯೋ ಇಲ್ಲವೋ ಎಂಬುದು ಅರ್ಥವಾಗಿಬಿಡುತ್ತದೆ.
ಹಣಸ ವ್ಯವಹಾರ ಹೆಚ್ಚಾಗಿ ಆರ್ಥಿಕವಾಗಿ ಲಾಭಗಳು ಕಂಡುಬರುತ್ತಿದ್ದರೇ ದೈವೀಶಕ್ತಿ ಇದೆ ಎಂದು ಅರ್ಥ. ಆರ್ಥಿಕ ಶಕ್ತಿ ಬಲಗೊಳ್ಳುತ್ತಿಲ್ಲ ಎಂದಾಗ ಆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಎಂದು ತಿಳಿಯಬೇಕು. ನಮ್ಮ ಮನೆಗಳಲ್ಲಿ ಮುಂಜಾನೆ ಅಥವಾ ಸಂಜೆ ಸಮಯ ದಿನಕ್ಕೆ ಒಂದು ಬಾರಿಯಾದರೂ ದೀಪಾರಾಧನೆ ಮಾಡುತ್ತಿದ್ದೇವೆ ಎಂದರೆ ನಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ. ನೆಗೆಟಿವ್ ಎನರ್ಜಿ ಇರುವುದಿಲ್ಲ. ಮನೆಯಲ್ಲಿ ದೀಪಾರಾಧನೆಯನ್ನು ಮಾಡದೇ ಹೋದರೇ ಮನೆಯಲ್ಲಿ ದೈವಶಕ್ತಿ ಕಡಿಮೆಯಾಗುತ್ತದೆ.
ದೀಪಾರಾಧನೆ ಮಾಡುವಾಗ ಪ್ರಶಾಂತ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಯಾರ ಮನೆಗಳಲ್ಲಿ ಕಲಹಗಳಿಲ್ಲದೇ ಸಂತೋಷದಿಂದಿರುತ್ತಾರೋ ಅವರ ಮನೆಗಳಲ್ಲಿ ಲಕ್ಷ್ಮಿದೇವಿಯು ನೆಲೆಸುತ್ತಾಳೆ. ಮನೆಗೆ ಬರುವ ಅತಿಥಿಗಳಿಗೆ ಬೇಸರ ತೋರಿಸದೇ ಊಟೋಪಚಾರಗಳನ್ನು ಮಾಡುವವರಿಗೆ ದೈವಶಕ್ತಿ ಆಸರೆಯಾಗಿದೆ ಎಂದರ್ಥ. ನಮ್ಮ ಮನೆಗೆ ದೈವೀಶಕ್ತಿಗಳನ್ನು ಆಹ್ವಾನಿಸಿಕೊಂಡಿದ್ದರೇ ನಮ್ಮ ಮನೆಗಳಲ್ಲಿ ಸುಖ ಶಾಂತಿ ನೆಲೆಸುತ್ತದೆ. ಮನೆಯಲ್ಲಿ
ದೀಪಾರಾಧನೆಯನ್ನು ಮಾಡಬೇಕಾದರೇ ದೀಪದ ಎಣ್ಣೆಗೆ ಅಚ್ಚಕರ್ಪೂರದ ಪುಡಿಯನ್ನು ಹಾಕಬೇಕು. ಆ ಪುಡಿಯು ಎಣ್ಣೆಯಲ್ಲಿ ಕರಗಿ , ಈ ಕರ್ಪೂರದ ಸುವಾಸನೆಯು ಮನೆಯಲ್ಲಿ ಹರಡಿ ನೆಗೆಟಿವ್ ಎನರ್ಜಿ ಹೋಗಿ ದೈವಶಕ್ತಿಯ ಆಕರ್ಷಣೆಯಾಗುತ್ತದೆ. ಈ ಕರ್ಪೂರದ ಪುಡಿಯ ಜೊತೆ ಜಾವಾತಿಯ ಪುಡಿಯನ್ನು ಹಾಕಿಕೊಳ್ಳಬಹುದು. ಈ ಪುಡಿಯು ಗ್ರಂಥಿಗೆ ಅಂಗಡಿಗಳಲ್ಲಿ ದೊರೆಯುತ್ತದೆ. ಕರ್ಪೂರ ಮತ್ತು ಜಾವಾತಿಯ ಪುಡಿಯ ಸುವಾಸನೆಯು ಮನೆಯಲ್ಲಿ ಪಸರಿಸುತ್ತದೆಯೋ ಆ ಮನೆಗೆ ತಾಯಿ ಲಕ್ಷ್ಮಿದೇವಿಯು ಪ್ರವೇಶಿಸುತ್ತಾಳೆ ಮತ್ತು ನೆಗೆಟಿವ್ ಎನರ್ಜಿ ತೊಲಗುತ್ತದೆ. ಲಕ್ಷ್ಮಿಕುಬೇರ ಸ್ಥಾನವಾದ ಕುಬೇರ ಸ್ಥಾನವನ್ನು ಯಾವಾಗಲೂ ಬಹಳ ಶುಭ್ರವಾಗಿಟ್ಟುಕೊಳ್ಳಬೇಕು.
ಆ ಮೂಲೆಯಲ್ಲಿ ನಿಮಗೆ ಅವಕಾಶವಾದರೇ ಒಂದು ಚೊಂಬಿನಲ್ಲಿ ನೀರನ್ನು ತುಂಬಿಸಿ ಇಡಿ. ತಾಮ್ರದ ಚೊಂಬಾದರೆ ಉತ್ತಮ. ಆ ನೀರನ್ನು ಪ್ರತಿದಿನ ಬದಲಾಯಿಸಿ. ಕರ್ಪೂರ ಮತ್ತು ಜಾವಾತಿ ಪುಡಿಯನ್ನುಈ ನೀರಿಗೆ ಹಾಕಿದರೇ ಈ ಸುವಾಸನೆಗೆ ಲಕ್ಷ್ಮಿದೇವಿ ಆಕರ್ಷಿತಳಾಗುತ್ತಾಳೆ. ಮನೆಯಲ್ಲಿ ಸ್ವಚ್ಛಂಧವಾಗಿಟ್ಟುಕೊಳ್ಳಿ. ಮನೆಯಲ್ಲಿ ದೈವೀಶಕ್ತಿ ವೃದ್ಧಿಯಾಗುತ್ತದೆ. ನಮ್ಮ ಮನೆಯಲ್ಲಿ ದೈವೀಶಕ್ತಿ ಇದೆಯೋ ಇಲ್ಲವೋ ಎಂದು ಹೇಗೆ ಗೊತ್ತಾಗುತ್ತದೆ ಎಂದರೆ
ನಮ್ಮ ಮನಸ್ಸು ದೈವಾರಾಧನೆ ಮಾಡಲು ಪ್ರೇರೇಪಿಸುತ್ತಿದೆ ಎಂದರೆ ದೈವಶಕ್ತಿ ಇದ್ದಹಾಗೆ. ಅದೇ ರೀತಿ ನಮ್ಮ ಮನಸ್ಸು ದೈವದ ಕಡೆ ಮನಸ್ಸು ಮಾಡುತ್ತಿಲ್ಲವೆಂದಾದರೇ , ಧರ್ಮದ ಆಚಾರ ವಿಚಾರಗಳನ್ನು ಒಪ್ಪಿಕೊಳ್ಳದೇ ಇರುವುದು, ಧಾರ್ಮಿಕ ಕಾರ್ಯಗಳನ್ನು ವಿರೋಧಿಸುವುದು ಇವೆಲ್ಲವನ್ನು ಮಾಡುತ್ತಿದ್ದರೇ ಆ ಮನೆಯಲ್ಲಿ ದೈವಶಕ್ತಿ ಇಲ್ಲವೆಂದರ್ಥ. ದೈವಶಕ್ತಿ ನಿಮ್ಮ ಮನೆಯಲ್ಲಿ ಇಲ್ಲವೆಂದಾಗ ಅದಕ್ಕೆಲ್ಲಾ ಏನು ಮಾಡಬೇಕು ಅದನ್ನೆಲ್ಲಾ ಮಾಡಿ ನಿಮ್ಮ ಮನೆಗೆ ದೈವಶಕ್ತಿಯ ಆಕರ್ಷಣೆ ಮಾಡಿಕೊಳ್ಳಿ.