ನಿನ್ನ ಸಂಬಂಧಿಕರೇ ನಿನ್ನ ಮೊದಲ ಶತ್ರುಗಳು

0

ನಿನ್ನ ಸಂಬಂಧಿಕರೇ ನಿನ್ನ ಮೊದಲ ಶತ್ರುಗಳು….. ಯಾಕೆಂದರೆ ಎಲ್ಲರಿಗಿಂತ ಚೆನ್ನಾಗಿ ಮೊದಲು ಅವರೇ ನಿನ್ನ ಬಗ್ಗೆ ತಿಳಿದುಕೊಂಡಿರುತ್ತಾರೆ…. ನೀನು ಈ ಮಾತನ್ನು ನೆನಪಿನಲ್ಲಿ ಇಟ್ಟುಕೋ ನಿನ್ನ ನೆಂಟರು, ಸಂಬಂಧಿಕರು, ಗೆಳೆಯರು
ಎಂದು ಮುಖವಾಡ ಹಾಕಿಕೊಂಡು ಓಡಾಡುವ ಜನರು ಯಾವಾಗಲೂ ಬೇಕಾದರೂ ನಿನ್ನ ಕೈಬಿಡಬಹುದು.
ಆದರೆ ನೀನು ನಂಬಿರುವ ಭಗವಂತ ಯಾವುದೋ ರೂಪದಲ್ಲಿ ಬಂದು ನಿನ್ನ ಕೈ ಹಿಡಿಯುತ್ತಾನೆ ರಕ್ಷಣೆ ಕೊಡುತ್ತಾನೆ, ನೆನಪಿರಲಿ

ನಿನ್ನ ಶತ್ರುಗಳು ನಿನ್ನನ್ನು ತಿರುಗಿ ನೋಡಬೇಕು ಹಾಗೆ ನೀನು ಬೆಳೆಯಬೇಕು…. ನಿನ್ನ ಕರ್ಮದ ಮೇಲೆ ಕರ್ತವ್ಯದ ಮೇಲೆ ನೀನು ಸದಾ ನಂಬಿಕೆ ಇಡು. ರಾಶಿಯ ಮೇಲಲ್ಲ ಏಕೆಂದರೆ ರಾಮನದು ರಾವಣನದು ಒಂದೇ ರಾಶಿಯಾಗಿತ್ತು ಆದರೆ ಅವರವರ ಕರ್ಮದ ಫಲ ಅನುಭವಿಸುವ ರೀತಿ ಬೇರೆಯಾಗಿತ್ತು ಅಷ್ಟೇ….ಏನೇ ಆಗಲಿ ನೀನು ನಿನ್ನ ಸಂಬಂಧಿಕರ ಮುಂದೆ ಬೆಳೆದು ನಿಲ್ಲಬೇಕು ನೋಯಿಸುವವರು ನೋಯಿಸಲಿ ಆಡಿಕೊಳ್ಳುವವರು ಆಡಿಕೊಳ್ಳಲಿ ನಗುವವರು ನಗಲಿ ಬಿಡಿ

ಶಾಪ ಹಾಕಿದರೆ ಹಾಕಲಿಬಿಡಿ…. ಆದರೆ ನೀನು ಮಾತ್ರ ತಲೆಕೆಡಿಸಿಕೊಳ್ಳಬೇಡ, ಗಮನ ಕೊಡು ಅವರ ಕರ್ಮದ ಫಲ ಅವರು ಅನುಭವಿಸುತ್ತಾರೆ…. ಜೀವನದಲ್ಲಿ ನಿನ್ನ ಜೊತೆ ಯಾರು ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಜೊತೆ ನೀನು ಮಾಡಿದ ಪಾಪ ಕರ್ಮ ಪುಣ್ಯದ ಫಲ ಇದ್ದೇ ಇರುತ್ತದೆ…. ಕೆಲವರು ತಮ್ಮ ಸ್ವಭಾವದಿಂದ ಕೆಟ್ಟವರು ಅನಿಸಿಕೊಳ್ಳುತ್ತಾರೆ…. ನೀನು ನಿನ್ನ ಸ್ವಭಾವ ವರ್ತನೆಯನ್ನು ಯಾವಾಗ ಬದಲಾಯಿಸುತ್ತಿಯೋ ನಿನಗೆ ಸ್ವರ್ಗದ ಬಾಗಿಲು ಅಂದೇ ತೆಗೆಯುತ್ತದೆ

ಕೆಲವು ಮನುಷ್ಯರು ಜೀವನದಲ್ಲಿ ಬೈದರು ಬುದ್ದಿ ಹೇಳಿದರೂ ತಿಳಿಸಿದರೂ, ಅನುಭವ ಹೇಳಿದರೂ, ಹೊಡೆದರೂ, ತಿಳುವಳಿಕೆ ಹೇಳಿದರೂ ಬುದ್ಧಿ ಕಲಿಯುವುದಿಲ್ಲ…. ಅವರಿಗೆ ಯಾವಾಗ ಕಷ್ಟಗಳು ಎದುರಾದಾಗ ಅನುಭವಿಸಿದಾಗ ಅವರ ಸಂಬಂಧಿಕರು ನಂಬಿದವರು ಅವರಿಗೆ ಮೋಸ ಮಾಡಿದಾಗ ಮನುಷ್ಯ ಬುದ್ಧಿ ಕಲಿಯುತ್ತಾನೆ…. ಈ ಪ್ರಪಂಚ ಹೇಗಿದೆ ಅಂದರೆ, ತನಗಾದರೆ ಮಾತ್ರ ಬೇರೆಯವರಿಗೆ ಆದರೆ ಅದು ಅವರ ಹಣೆಬರಹ ಅಂತಾರೆ…..ಈ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಂಡು ಸಮಸ್ಯೆ ಹಾಗೂ ಚಿಂತೆಗಳನ್ನು ನಿನ್ನ ತಲೆಯಿಂದ ತೆಗೆದು ಹಾಕಿ ಬಿಡು… ನಿನ್ನ ಗುರಿ ಕಡೆ ಗಮನ ಕೊಡು ಯಶಸ್ಸು ಖಂಡಿತವಾಗಿಯೂ ಸಿಕ್ಕೆ
ಸಿಗುತ್ತದೆ.

Leave A Reply

Your email address will not be published.