ಸಿಂಹ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಸಿಂಹ ರಾಶಿ ಜನವರಿ ತಿಂಗಳ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ಸಿಂಹ ರಾಶಿಯವರನ್ನು ಹೇಗೆ ಇದ್ದೀರಾ ಎಂದು ಕೇಳಿದಾಗ ತುಂಬಾ ಚೆನ್ನಾಗಿದ್ದೀವಿ ಎಂದು ಹೇಳುತ್ತಾರೆ . ಆದರೆ ಹಣದ ದಾರಿಗಳು ನಿಗೂಢವಾಗಿ ಕಾಣಿಸುತ್ತದೆ . ಹೀಗೆ ಏನು ಮಾಡಬೇಕು ಎಂಬುದು ನಿಮಗೆ ತೋಚುವುದಿಲ್ಲ . ಎಲ್ಲಿ ಹಣ ಸೋರಿಕೆ ಆಗುತ್ತಿದೆ ಎಂಬುದು ನಿಮಗೆ ತಿಳಿಯುವುದಿಲ್ಲ . ಏರುಪೇರುಗಳು ಕೆಲವು ವ್ಯಕ್ತಿಗಳಿಗೆ ವೈಯಕ್ತಿಕ ಜೀವನದಲ್ಲಿ ಕೆಲವರಿಗೆ ಇರುತ್ತದೆ .

ಅಭ್ಯಾಸ ಬಲದಿಂದ ಮಾಡುವ ಕೆಲವೊಂದು ಕೆಲಸಗಳು ಮತ್ತು ನಿಮ್ಮ ಇತಿ ಮಿತಿಗೆ ಸಿಗದ ಮಾತುಗಳು ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ . ಮಾಡಿದ ತಪ್ಪಿಗೆ ಆನಂತರ ಯೋಚನೆ ಮಾಡುವ ಪರಿಸ್ಥಿತಿ ನಿಮ್ಮದು ಆಗಿರುತ್ತದೆ . ನರದ ಮೇಲೆ ವ್ಯತಿರಿಕ್ತ ಪ್ರಭಾವ ಸ್ವಲ್ಪ ಮಟ್ಟಿಗೆ ಇರುತ್ತದೆ . ನೀವು ಹೇಳುವುದು ಒಂದು ತರವಾದರೆ ಅವರು ಅರ್ಥ ಮಾಡಿಕೊಳ್ಳುವುದು ಇನ್ನೊಂದು ತರವಾಗಿರುತ್ತದೆ .ಅಷ್ಟಮದಲ್ಲಿ ರಾಹುವಿನ ಪ್ರಭಾವ ಇದೆ . ಅಷ್ಟಮ ಶನಿ ಬರುವುದಕ್ಕೂ ಮೊದಲು ಅಷ್ಟಮ ರಾಹು ಇರುತ್ತದೆ .

ಈ ರಾಹು ಸ್ವಲ್ಪ ಕಿತಾಪತಿಯನ್ನು ಮಾಡುತ್ತದೆ .ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದಕ್ಕೆ ಎರಡು ಪಟ್ಟು ಮಾನಸಿಕ ತಲ್ಲಣಗಳು ಇರುತ್ತದೆ . ಆಲೋಚನೆಗಳು ಸ್ವಲ್ಪ ನಕಾರಾತ್ಮಕತೆಯ ಕಡೆಗೆ ತಿರುಗುತ್ತದೆ .ಧನಾತ್ಮಕ ಚಿಂತನೆಗಳು ಬರದೇ ಇರಬಹುದು .ಇದೆಲ್ಲಾ ಒಟ್ಟಾರೆಯಾಗಿ ಹೇಳುವ ವಿಚಾರಗಳು ನಿಮಗೆ ಅನ್ವಯಿಸುತ್ತದೆಯೇ ಎಂದು ಮೊದಲು ನೋಡಿಕೊಳ್ಳಿ .

ಒಂದು ಅಂಶ ಒಳ್ಳೆಯದು ಯಾವುದು ಎಂದರೆ, ಸಪ್ತಮದಲ್ಲಿ ಶನಿ ಮತ್ತು ಅಷ್ಟಮದಲ್ಲಿ ರಾಹು ರಾಶಿಯಾಧಿ ಪತಿಯಾದ ರವಿ ಕೂಡ ಒಂದು ದಿನಾಂಕದ ವರೆಗೆ ಅನುಕೂಲಕರವಾದ ಸ್ಥಿತಿಯಲ್ಲಿ ಇರುವುದಿಲ್ಲ .ರವಿ ಬಲ ನಿಮಗೆ ಕಡಿಮೆ ಇರುತ್ತದೆ .ಇಷ್ಟೆಲ್ಲಾ ಅನಾನುಕೂಲಗಳು ಇದ್ದರೂ , ಒಂದು ವಿಷಯ ನಿಮಗೆ ಒಳ್ಳೆಯದಾಗಲಿದೆ .9ನೇ ಮನೆಯಲ್ಲಿರುವ ಗುರು ನಿಮ್ಮನ್ನು ಕಾಪಾಡುತ್ತಿರುತ್ತಾನೆ .

ಮುಂದೆ ಕೂಡ ಕಾಪಾಡುವುದು ಮುಂದುವರೆಯುತ್ತದೆ . ಸ್ವಲ್ಪ ಧನಾತ್ಮಕ ಆಲೋಚನೆಗಳು ನಡೆಯಬೇಕು ಅಂದರೆ ನಿಮಗೆ ಗುರುವಿನಿಂದ ಮಾತ್ರ ಸಾಧ್ಯ . ಪಂಚಮದಲ್ಲಿ ಇರುವ ಮೂರು ಗ್ರಹಗಳು ಮಕ್ಕಳ ಮೇಲೆ ಗಮನ ಕೊಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡುತ್ತದೆ . ಸಣ್ಣ ಪುಟ್ಟ ಅನಾರೋಗ್ಯಗಳು , ಬಿದ್ದು ಪೆಟ್ಟು ಮಾಡಿಕೊಳ್ಳುವಂತಹದ್ದು , ಶಾಲೆಗಳ ರಾಧಾಂತಗಳು ಇರಬಹುದು . ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣದೇ ಇರುವುದು . ಈ ತರಹದ ಬೆಳವಣಿಗೆಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ .

ಇದನ್ನು ಹೇಗೆ ನಿಭಾಯಿಸುತ್ತೀರಾ ಅನ್ನುವುದು ನಿಮಗೆ ಸವಾಲಾಗುತ್ತದೆ . ದ್ವಿತೀಯದಲ್ಲಿ ಇರುವುದು ಕೇತು . ಹಾಗಾಗಿ ತಾಳ್ಮೆ ಇರಬೇಕು. ನೇರವಾಗಿ ಯಾವುದನ್ನು ಮಾತನಾಡುವುದಿಲ್ಲ . ತಪ್ಪು ಮಾಡುವುದಕ್ಕೆ ಸಾವಿರ ವಿಧಾನಗಳು ಇರುತ್ತದೆ .ಇದೆಲ್ಲವನ್ನು ಸರಿ ಮಾಡಿಕೊಳ್ಳುವುದಕ್ಕೆ ತಾಳ್ಮೆ ಇರಬೇಕು . ಚಿಂತೆ ಮಾಡುವ ಅಗತ್ಯವಿಲ್ಲ 15ನೇ ತಾರೀಖಿನಂದು ರವಿ ಗ್ರಹ ನಿಮ್ಮ ರಾಶಿಯಿಂದ ಮುಂದಿನ ರಾಶಿಗೆ ಚಲಿಸುತ್ತದೆ. ಅದ್ಭುತವಾದ ಬದಲಾವಣೆಗಳನ್ನು ತರುವ ಯೋಗ ಇದಾಗುತ್ತದೆ ಎಂದು ಹೇಳಬಹುದು .

ಯಾವುದೇ ಚಿಂತೆಯ ಅವಶ್ಯಕತೆ ಇರುವುದಿಲ್ಲ .ವಿಶೇಷವಾಗಿ ಸರ್ಕಾರಿ ನೌಕರರಿಗೆ ಕೆಲಸ ಸಿಗುವುದು ಪಕ್ಕಾ ಆಗುತ್ತದೆ . ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಉತ್ಸಾಹಗಳು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ .ಜೀವನದಲ್ಲಿ ಸ್ವಲ್ಪ ನೆಮ್ಮದಿ ಮತ್ತು ನಿಯಂತ್ರಣ ಬರುತ್ತದೆ ಎಂದು ಹೇಳಬಹುದು .ಜೀವನದಲ್ಲಿ ಚೇತರಿಸಿಕೊಳ್ಳುವ ಶಕ್ತಿಯನ್ನು ರಾಶಿಯಾಧಿಪತಿಯಾದ ರವಿ ನಿಮಗೆ ಕೊಡುತ್ತಾನೆ ಎಂದು ಹೇಳಲಾಗಿದೆ . 15ನೇ ತಾರೀಖಿನ ನಂತರ ಜಯ ನಿಮ್ಮದಾಗುತ್ತದೆ .

ಸಣ್ಣ ಪುಟ್ಟ ಚಿಂತೆ ರೋಗಗಳು ದೂರವಾಗುತ್ತದೆ .ಶತ್ರುಗಳಿಂದ ಜಯ ಸಿಗುತ್ತದೆ .ಸ್ಪರ್ಧೆಗಳಲ್ಲಿ ಇವರದ್ದೇ ಮೇಲು ಗೈ ಆಗುತ್ತದೆ .ಬಹಳಷ್ಟು ವಿಚಾರದಲ್ಲಿ ಪ್ರಗತಿ ಕಾಣಬಹುದು .ತಿಂಗಳ ಅರ್ಧಭಾಗ ಬಹಳ ಚೆನ್ನಾಗಿದೆ . ನೀವು ನೆಮ್ಮದಿಯಾಗಿ ಇರಬಹುದು . ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ . ನಿಮ್ಮನ್ನು ನೀವು ಪ್ರೇರೆಪಿಸಿಕೊಳ್ಳಲು . ಚತುರ್ಥದಲ್ಲಿ ಅಂದರೆ ಸುಖ ಸ್ಥಾನದಲ್ಲಿ ಶುಕ್ರ ಇರುವುದು ಕೂಡ ಬಹಳ ಒಳ್ಳೆಯ ಅಂಶ .ದುಡ್ಡು ಕಾಸಿನ ವ್ಯವಸ್ಥೆ ಸ್ವಲ್ಪ ಆಗುತ್ತದೆ .

ಒಂದು ಕಡೆ ಗುರು ಭಾಗ್ಯದಲ್ಲಿ ಇರುವುದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿರುತ್ತದೆ . ಇದಕ್ಕೆ ಶುಕ್ರನ ಸಾತ್ ಕೂಡ ಇರುತ್ತದೆ .ಕೆಲವೊಂದು ಅಡಚಣೆಗಳು ಕೂಡ ಇರುತ್ತದೆ . ಒಂದು ಅಂಶ ನಕಾರಾತ್ಮಕದ ಕಡೆ ಇದ್ದರೆ ಮತ್ತೊಂದು ಅಂಶ ಧನಾತ್ಮಕ ದ ಕಡೆ ಇರುತ್ತದೆ . ಚತುರ್ಥದಲ್ಲಿ ಸುಖ ನಿಮಗೆ ಸಿಗುತ್ತದೆ .ಅಮ್ಮನ ವಿಷಯದಲ್ಲಿ ಒಳ್ಳೆಯ ಸುದ್ದಿ ಬರುತ್ತದೆ . ಅಂದರೆ ಅವರ ಆರೋಗ್ಯದಲ್ಲಿ ಬೆಳವಣಿಗೆ ಕಾಣಬಹುದು .ನೀವು ಬೆಳಗ್ಗೆ ಎದ್ದ ತಕ್ಷಣ ಸೂರ್ಯನನ್ನು ನೋಡುವುದು ಅಥವಾ ಸೂರ್ಯ ನಮಸ್ಕಾರ ಮಾಡಬಹುದು .ಅಥವಾ ಬೆಳಕನ್ನಾದರೂ ನೋಡಬೇಕು .

ಎಳೇ ಬಿಸಿಲನ್ನು ನೋಡಬೇಕು .ಹೀಗೆ ಮಾಡುವುದರಿಂದ ಒಳ್ಳೆಯ ಪ್ರೇರಣೆ ಕೊಡುವುದಕ್ಕೆ ಸಾಧ್ಯವಾಗುತ್ತದೆ .ಒಂದು ಪ್ರಾರ್ಥನಾ ಭಾವವನ್ನು ಮನಸ್ಸಿನಲ್ಲಿ ತಂದುಕೊಳ್ಳಬೇಕು . ಇಂತಹ ಕೆಲಸವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣಬಹುದು .ಬೆಳಗಿನ ಸೂರ್ಯೋದಯದ ಬೆಳಕು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು . ಹಲವಾರು ಪೋಷಕಾಂಶಗಳು ಕೂಡ ಇದರಿಂದ ಸಿಗುತ್ತವೆ . ನಿಮಗೆ ಬೆಳಗಿನ ಸಮಯ ಅಂದರೆ ಸೂರ್ಯೋದಯದ ಸಮಯದಲ್ಲಿ ಮಾತ್ರ ಅತ್ಯಂತ ಶುಭ್ರವಾದ ಗಾಳಿ ಸಿಗುತ್ತದೆ . ಹೀಗೆ ಸಿಂಹ ರಾಶಿಯವರಿಗೆ ಭಗವಂತನಾದ ಸೂರ್ಯನಾರಾಯಣನ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ ಎಂದು ಹೇಳೋಣ

Leave a Comment