ಸಿಂಹ ರಾಶಿಯವರ ಸ್ವಭಾವ , ಗುಣಲಕ್ಷಣ ಹೇಗೆ ಇರುತ್ತದೆ.

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಸ್ವಭಾವ , ಗುಣಲಕ್ಷಣ ಹೇಗೆ ಇರುತ್ತದೆ. ಎಂದು ತಿಳಿಯೋಣ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು , 27 ನಕ್ಷತ್ರಗಳು ತನ್ನದೇ ಆದ ಗುಣ ಧರ್ಮಗಳನ್ನು ಹೊಂದಿರುತ್ತವೆ . ಪ್ರತಿಯೊಬ್ಬ ವ್ಯಕ್ತಿಗೂ ಆತ ಜನಿಸಿದ ದಿನಾಂಕ , ಸ್ಥಳ , ಸಮಯಕ್ಕೆ ಅನುಗುಣವಾಗಿ ಆತನ ನಕ್ಷತ್ರ , ರಾಶಿ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಜನಿಸಿದ ಸ್ವಭಾವ, ಗುಣ ಲಕ್ಷಣದ ಬಗ್ಗೆ ತಿಳಿಯೋಣ .ಸಿಂಹ ರಾಶಿಯ ಪುರುಷರ ಗುಣ ಲಕ್ಷಣಗಳು ,

ಈ ರಾಶಿಯವರು ಸ್ವಾಭಿಮಾನದ ಮಹತ್ವಾಕಾಂಕ್ಷೆಯ ತ್ವರಿತ ಕಾರ್ಯ ಮಾಡುವ ಉದಾರ ಮನೋಭಾವದ ವ್ಯಕ್ತಿ ಆಗಿರುತ್ತಾರೆ. ಮೂಲತಹ: ಉದಾರ ಸ್ವಭಾವದವರು ಆಗಿದ್ದು, ಜೀವನವನ್ನು ಪ್ರೀತಿಸುತ್ತಾರೆ . ಮಹಿಳೆಯರು ಇಷ್ಟ ಪಡುವಂತಹ ದಿಟ್ಟ ಬಲಶಾಲಿಗಳು ಹಾಗೂ ಪ್ರಾಮಾಣಿಕರು ಆಗಿರುತ್ತಾರೆ. ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ . ಈ ರಾಶಿ ಅವರು ಆಕರ್ಷಕ ವ್ಯಕ್ತಿ ಆಗಿರುವುದರಿಂದ ಸದಾ ನಿಮ್ಮ ಸುತ್ತ ಜನರು ಇರುತ್ತಾರೆ . ನಿಮ್ಮಲ್ಲಿ ಅಹಂಕಾರ ಶೀಘ್ರ ಕೋಪ ಹೆಚ್ಚಾಗಿರುತ್ತದೆ .

ಸಿಂಹ ರಾಶಿ ಮಹಿಳೆಯರ ಗುಣಲಕ್ಷಣಗಳು , ಯಾವಾಗಲೂ ಸುಂದರವಾಗಿ ಕಾಣಬಯಸುವ ಇವರು ಉಡುಪು ಧರಿಸುವುದರಲ್ಲಿ ಹಾಗೂ ಶೃಂಗಾರ ಮಾಡಿ ಕೊಳ್ಳುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾರೆ. ಸಭೆ ಸಮಾರಂಭ , ಸಂತೋಷ ಕೂಟಗಳಲ್ಲಿ ಎಲ್ಲರ ಗಮನ ಸೆಳೆಯುವ ನೀವು ಆಕರ್ಷಕವಾಗಿ ಇರುವುದರಿಂದ ಕೇಂದ್ರ ಬಿಂದು ಆಗಿರುತ್ತಾರೆ . ಜೀವನವನ್ನು , ಜನರನ್ನು , ಮನೋರಂಜನಾ ಕೂಟಗಳನ್ನು ನೀವು ಬಹಳ ಇಷ್ಟು ಪಡುತ್ತೀರಿ. ಶೀಘ್ರ ಕೋಪಿಗಳಾದ ಇವರು ಉತ್ತಮ ಮೌಲ್ಯಗಳನ್ನು ಹೊಂದಿರುತ್ತಾರೆ . ಅಹಂಭಾವ, ಹುಡುಗಾಟಿಕೆ ಹೆಚ್ಚಾಗಿ ಇರುತ್ತದೆ .

ಸಿಂಹ ರಾಶಿಯವರು ಪ್ರೇಮ ವಿಚಾರದಲ್ಲಿ ಪ್ರೇಮವೇ ಸರ್ವಸ್ವ ಎಂದು ಭಾವಿಸುವ ಅವರು ಪ್ರಣಯ ಭರಿತ ಜೀವನವನ್ನು ನಡೆಸುತ್ತಾರೆ . ಪ್ರೇಮ ಸಂಪಾದನೆಗೋಸ್ಕರ ಇವರು ತಮ್ಮ ಬಗ್ಗೆ ಸುಳ್ಳು ಹೇಳಲು ಹಿಂಜರಿಯುವುದಿಲ್ಲ . ಉದಾರತನ ಹಾಗೂ ಆಕರ್ಷಕ ವ್ಯಕ್ತಿತ್ವದಿಂದ ಅನೇಕ ಆನಂದದಾಯಕ ಪ್ರೇಮ ಅನುಭವ ಹೊಂದುತ್ತಾರೆ.

ಸಿಂಹ ರಾಶಿ ಅವರ ಮದುವೆ ವಿಚಾರದಲ್ಲಿ, ಮದುವೆ ಎಂಬುದು ಅವರ ಪಾಲಿಗೆ ಉಲ್ಲಾಸಕರವಾದ ತನು ಮನಗಳ ಮಿಲನ ಆಗಿದೆ. ಹುಟ್ಟು ಪ್ರೇಮಿಗಳು ಎಂಬ ಒಂದೇ ಕಾರಣಕ್ಕೆ ಮದುವೆಯನ್ನು ಸ್ವೀಕರಿಸಿದರೆ ಅದು ನಿಮ್ಮ ಪಾಲಿಗೆ ವಿನಾಶಕಾರಿಯಾಗುತ್ತದೆ . ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿದ್ದಲ್ಲಿ , ನಿಮ್ಮ ಜೀವನ ಸಂತೋಷಮಯವಾಗಿ ಇರುತ್ತದೆ .

ಸಿಂಹ ರಾಶಿಯವರ ಹಣಕಾಸಿನ ವಿಚಾರದಲ್ಲಿ ಹಣ ಹೆಚ್ಚಾಗಿ ಗಳಿಸಿದಂತೆ ಖರ್ಚು ಕೂಡ ಹೆಚ್ಚಾಗುತ್ತದೆ . ಹಣ ಖರ್ಚು ಆಗುವ ರೀತಿ ಕೂಡ ಗಮನಕ್ಕೆ ಬರುವುದಿಲ್ಲ. ಒತ್ತಾಯದ ಉಳಿತಾಯದಿಂದ ಸ್ಥಿರ ಆಸ್ತಿ ಮಾಡಲು ಸಾಧ್ಯ .

ಸಿಂಹ ರಾಶಿಯವರ ವೃತ್ತಿ ಜೀವನ ಯಶಸ್ಸು ಎನ್ನುವುದು ನಿಮ್ಮ ಶ್ರೇಷ್ಠತೆಯ ರಕ್ಷಣೆ . ಯಶಸ್ಸು ನಿಮ್ಮ ಬೆನ್ನ ಹಿಂದೆ ಇರುವುದರಿಂದ , ನಟರಾಗಿ ,ನಿರ್ದೇಶಕರಾಗಿ , ವರ್ಣ ಚಿತ್ರಕಾರರಾಗಿ , ಶಿಕ್ಷಕರಾಗಿ , ಬರಹದಾರರಾಗಿ, ಸಾಹಿತ್ಯಕಾರರಾಗಿ ,
ಅಥವಾ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ , ಈ ರಾಶಿಯವರು ಮುನ್ನಡೆಯನ್ನು ಸಾಧಿಸಬಹುದು . ವ್ಯಾಪಾರದಲ್ಲಿ ತೀವ್ರತೆಯ ಲಾಭ , ಅವಸರದ ನಿರ್ಧಾರಗಳು ಬೇಡ . ಸ್ನೇಹಕ್ಕೆ ಕಟ್ಟು ಬಿದ್ದು ಹಾಳು ಮಾಡಿಕೊಳ್ಳಬೇಡಿ .ಇವರು ಆಕರ್ಷಕ ವ್ಯಕ್ತಿತ್ವದ ಸ್ನೇಹಜೀವಿ ಆಗಿರುವುದರಿಂದ , ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ . ಆತ್ಮೀಯ ಗೆಳೆಯರೊಂದಿಗೆ ಇವರು ಪ್ರಾಮಾಣಿಕರಾಗಿ ಮತ್ತು ನಿಷ್ಠಾವಂತರಾಗಿ ನಡೆದುಕೊಳ್ಳುತ್ತಾರೆ . ಇವರು ಕುಟುಂಬದವರಿಗಿಂತ ಹೆಚ್ಚಾಗಿ ಸ್ನೇಹಿತರೊಂದಿಗೆ ನಿಕಟ ಆತ್ಮೀಯ ಸಂಬಂಧ ಹೊಂದಿರುತ್ತಾರೆ .

ಸಿಂಹ ರಾಶಿಯವರ ಆರೋಗ್ಯ ವಿಚಾರ , ಮಧ್ಯ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ . ಹೃದಯಾಘಾತ ಅಪಾಯ ಹೆಚ್ಚಾಗಿದ್ದು , ಕ್ರಮಬದ್ಧ ವ್ಯಾಯಾಮ ಮಾಡಬೇಕು . ಸಾಮಾನ್ಯವಾಗಿ ಇವರು ಆರೋಗ್ಯವಂತರಾಗಿ ಇರುತ್ತಾರೆ .

ಸಿಂಹ ರಾಶಿಯವರ ಮನೆ ವಿಶಿಷ್ಟ ಶೈಲಿಯಾಗಿದ್ದು , ಐಷಾರಾಮಿ ಗೃಹ ಉಪಯೋಗಿ ವಸ್ತುಗಳಿಂದ ಕೂಡಿರುತ್ತದೆ . ಮನೆಯಲ್ಲಿ ಧನ ಹಾಗೂ ಧಾನ್ಯ ಸಮೃದ್ಧಿಗೆ ಕೊರತೆ ಇರುವುದಿಲ್ಲ . ಸೃಜನಶೀಲರಾದ ಇವರು ಮನೆಯನ್ನು ವರ್ಣ ರಂಜಿತವಾಗಿ ಮನೆಯನ್ನು ಅಲಂಕಾರ ಮಾಡುತ್ತಾರೆ.

ಸಿಂಹ ರಾಶಿಯವರು ಹಿನ್ನಡೆಯಾಗಲು ಕಾರಣ ಮತ್ತು ಪರಿಹಾರ . ಅವರ ಅಹಂಭಾವ ಮತ್ತು ದುರಾಭಿಮಾನ ಜೀವನದಲ್ಲಿ ಮುನ್ನಡೆಗೆ ಅಡ್ಡಿ ಆಗುತ್ತದೆ. ಜೀವನದಲ್ಲಿ ಯಶಸ್ಸು ಬೇಕಾದರೆ ಶಾಂತಚಿತ್ತರಾಗಿ ಮತ್ತು ನಮ್ರತರಾಗಿ . ನಿಮ್ಮ ಅಭಿಪ್ರಾಯವನ್ನು ಮತ್ತೊಬ್ಬರ ಮೇಲೆ ಹೇರಬೇಡಿ.

ಸಿಂಹ ರಾಶಿಯವರು ಬೇರೆ ರಾಶಿಯವರೊಂದಿಗೆ ಪ್ರೇಮ ಮತ್ತು ಅನುರೂಪತೆ .
ಸಿಂಹ ರಾಶಿಯೊಂದಿಗೆ ಸಿಂಹ ರಾಶಿಯವರು ಈ ಜೋಡಿಯು ಪರಸ್ಪರ ಅಪಾರ ಪ್ರೀತಿಯನ್ನು ಅನುಭವಿಸುತ್ತಾರೆ. ಇಲ್ಲವೇ ಹಲವಾರು ಕಾರಣಗಳಿಂದ ಪರಸ್ಪರರನ್ನು ಅತಿಯಾಗಿ ತಿರಸ್ಕರಿಸುತ್ತಾರೆ . ಅಥವಾ ಪ್ರೇಮ ಮತ್ತು ತಿರಸ್ಕಾರ ಇವೆರಡನ್ನು ಅನುಭವಿಸುತ್ತಾರೆ.

ಕನ್ಯಾ ರಾಶಿಯೊಡನೆ ಸಿಂಹ ರಾಶಿಯವರು . ಕನ್ಯಾ ರಾಶಿಯ ಪುರುಷ ಮತ್ತು ಸಿಂಹ ರಾಶಿಯ ಮಹಿಳೆಯ ನಡುವೆ ವಿರಸವೇ ಹೆಚ್ಚಾಗಿ ಇರುವುದರಿಂದ, ಇವರಿಬ್ಬರ ವೈವಾಹಿಕ ಜೀವನ ಸರಳವಾಗಿ ಸಾಗುವುದಿಲ್ಲ . ಆದರೆ ಸಿಂಹ ರಾಶಿಯ ಪುರುಷ ಹಾಗೂ ಕನ್ಯಾ ರಾಶಿಯ ಮಹಿಳೆ ಜೋಡಿ ಅತ್ಯಂತ ಅನುರೂಪವಾಗಿ ಇದ್ದು, ಜೀವನದುದ್ದಕ್ಕೂ ಪ್ರೀತಿಯಿಂದ ಬಾಳುತ್ತಾರೆ.

ತುಲಾ ರಾಶಿಯೊಂದಿಗೆ ಸಿಂಹ ರಾಶಿಯವರು : ಸಿಂಹ ರಾಶಿಯ ಮಹಿಳೆ ಮತ್ತು ತುಲಾ ರಾಶಿಯ ಪುರುಷ ಜೀವನದಲ್ಲಿ ಸುಖ ದುಃಖಗಳನ್ನು ಹಂಚಿಕೊಳ್ಳುವ ಮೂಲಕ ಮಾಧರಿ ಎನಿಸುವ ಸಹಬಾಳ್ವೆಯನ್ನು ನಡೆಸುತ್ತಾರೆ. ತುಲಾ ರಾಶಿಯ ಮಹಿಳೆ ಅತ್ಯಂತ ವಾಸ್ತಲ್ಯ ಮಯ, ಸಹನಾ ಜೀವಿ ಆಗಿರುವುದರಿಂದ ,ಸಿಂಹ ರಾಶಿಯ ಪುರುಷನೊಂದಿಗೆ ಆಕೆಯ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ.

ವೃಶ್ಚಿಕ ರಾಶಿಯವರೊಂದಿಗೆ ಸಿಂಹ ರಾಶಿಯವರು . ಸಿಂಹ ರಾಶಿಯ ಮಹಿಳೆ ಮತ್ತು ವೃಶ್ಚಿಕ ರಾಶಿಯ ಪುರುಷನ ಸಂಬಂಧ ಆಕರ್ಷಣೆ ಮತ್ತು ರೋಮಾಂಚನದಿಂದ ಕೂಡಿದ್ದು , ಸ್ಥಿರತೆಯನ್ನು ಹೊಂದಿದೆ. ಆದರೆ, ಸಿಂಹ ರಾಶಿಯ ಪುರುಷ ಹಾಗೂ ವೃಶ್ಚಿಕ ರಾಶಿಯ ಮಹಿಳೆಯ ಸಂಬಂಧವನ್ನು ಯಶಸ್ವಿ ಗೊಳಿಸುವುದು ಅವರಿಬ್ಬರಿಗೂ ಒಂದು ಸವಾಲು ಆಗಿದೆ.

ಧನಸ್ಸು ರಾಶಿಯೊಂದಿಗೆ ಸಿಂಹ ರಾಶಿಯವರು. ಧನಸ್ಸು ರಾಶಿಯ ಮಹಿಳೆ ತನ್ನ ಪತಿಯ ಆಸೆ , ಆಕಾಂಕ್ಷೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಿದ್ದಲ್ಲಿ, ಸಿಂಹ ರಾಶಿಯ ಮಹಿಳೆ ಅವನೊಂದಿಗೆ ಸುಂದರವಾದ ವೈವಾಹಿಕ ಜೀವನವನ್ನು ಅನುಭವಿಸುತ್ತಾಳೆ. ಸಿಂಹ ರಾಶಿಯ ಪುರುಷ ಮತ್ತು ಧನು ರಾಶಿಯ ಮಹಿಳೆ ವೈವಾಹಿಕ ಜೀವನದಲ್ಲಿ ಯಥೇಚ್ಛವಾಗಿ ಸುಖ ಸಂತೋಷವನ್ನು ಅನುಭವಿಸುತ್ತಾರೆ.

ಮಕರ ರಾಶಿಯವರೊಂದಿಗೆ ಸಿಂಹ ರಾಶಿಯವರು . ಸಿಂಹ ರಾಶಿಯ ಮಹಿಳೆ ಮತ್ತು ಮಕರ ರಾಶಿಯ ಪುರುಷನ ಜೋಡಿಯು ಜನ ಮೆಚ್ಚುಗೆ ಗಳಿಸುವ ಜೋಡಿ ಆಗಿದೆ. ಮಕರ ರಾಶಿಯ ಪುರುಷನಿಗೆ ಮಾರು ಹೋಗಿ ತನ್ನ ಸರ್ವಸ್ವವನ್ನು ಧಾರೆ ಹೆರೆಯುತ್ತಾಳೆ. ವೈವಾಹಿಕ ಸಂಬಂಧದ ದೃಷ್ಟಿಯಿಂದ ಈ ಜೋಡಿ
ಅನುರೂಪವಾಗಿದೆ.

ಕುಂಭ ರಾಶಿಯೊಂದಿಗೆ ಸಿಂಹ ರಾಶಿಯವರು . ಕುಂಭ ರಾಶಿಯ ಪತಿಯ ಆಸಕ್ತಿಯನ್ನು ತನ್ನತ್ತ ಸೆಳೆಯುವಂತೆ ಸಿಂಹ ರಾಶಿಯ ಮಹಿಳೆ ಬಹಳ ಪ್ರಯಾಸ ಪಡಬೇಕು. ಬಹಳ ಸಹನೆ ತಾಳ್ಮೆಯಿಂದ ಆಕೆ ಅವನ ಮನಸ್ಸನ್ನು ಗೆಲ್ಲಬಹುದು. ಇಲ್ಲದಿದ್ದರೆ, ಅವರ ದಾಂಪತ್ಯ ಜೀವನದಲ್ಲಿ ವಿರಸ , ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ .
ಸಿಂಹ ರಾಶಿಯ ಪುರುಷ ಮತ್ತು ಕುಂಭ ರಾಶಿಯ ಮಹಿಳೆಯ ಜೀವನ ಸಫಲವಾಗಬೇಕು ಎಂದರೆ, ಯಾವಾಗಲೂ ಕಾರ್ಯನಿರತವಾಗಿ ಇರುವ ಪತ್ನಿಯೊಂದಿಗೆ ಪತಿ ಸಹಕರಿಸಬೇಕು. ಇಲ್ಲದಿದ್ದರೆ ಅವರ ಜೀವನದಲ್ಲಿ ಹೊಂದಾಣಿಕೆ ಅಸಾಧ್ಯ .

ಮೀನ ರಾಶಿಯೊಂದಿಗೆ ಸಿಂಹ ರಾಶಿಯವರು . ಮೀನ ರಾಶಿಯ ಪುರುಷ ವಿವಾಹೇತರ ಪ್ರಣಯ ಸಂಬಂಧಗಳಿಗಾಗಿ, ಹಂಬಲಿಸುವುದನ್ನು ನಿಲ್ಲಿಸಿದರೆ, ಮಾತ್ರ ಸಿಂಹ ರಾಶಿಯ ಮಹಿಳೆಯೊಂದಿಗೆ ಅವನ ವೈವಾಹಿಕ ಜೀವನ ಯಶಸ್ವಿಯಾಗುತ್ತದೆ. ಮೀನ ರಾಶಿಯ ಮಹಿಳೆ ಸಿಂಹ ರಾಶಿಯ ತನ್ನ ಪತಿಯ ತಾಳ್ಮೆ ಸಹನೆಗೆ ಬೆಲೆ ಕೊಡುವುದಿಲ್ಲವಾದ್ದರಿಂದ, ಹಾಗೂ ಪತಿ ಬಹಳ ಸ್ವಾರ್ಥವಾಗಿ ಇರುವುದರಿಂದ ಅವರ ವೈವಾಹಿಕ ಜೀವನ ಯಶಸ್ವಿಯಾಗುವ ಸಾಧ್ಯತೆ ಕಡಿಮೆ.

ಇನ್ನಿತರ ಗುಣಲಕ್ಷಣಗಳು ಪ್ರಭಾವಿ ಗ್ರಹ ಸೂರ್ಯ , ಮೂಲ ಧಾತು ಅಗ್ನಿ , ಗುಣಲಕ್ಷಣ ಪುರುಷ , ಮಹತ್ವಾಕಾಂಕ್ಷೆ ಅಧಿಕಾರ , ಶುಭ ದಿಕ್ಕು ಪೂರ್ವ ಉತ್ತರ , ಅದೃಷ್ಟ ಬಣ್ಣ ಕೆಂಪು, ಕಿತ್ತಳೆ ,ಹಳದಿ , ಶುಭ ದಿನ ರವಿವಾರ , ಅದೃಷ್ಟ ಸಂಖ್ಯೆ 1 , ಸಿಂಹ ರಾಶಿಯವರು ಸದಾ ಕಾಲ ಮಾಡಬೇಕಾದ ಪರಿಹಾರಗಳು , ಸಿಂಹ ರಾಶಿಯ ಅಧಿಪತಿ ಸೂರ್ಯನು ಆಗಿರುವುದರಿಂದ, ಸೂರ್ಯನಿಗೆ ಸಂಬಂಧಪಟ್ಟ ಪರಿಹಾರಗಳನ್ನು ಮಾಡಬೇಕು.

ಆದಿತ್ಯ ಉದಯ ಸ್ತೋತ್ರವನ್ನು ಪ್ರತಿ ದಿನ ಪಠಣೆ ಮಾಡುವುದರಿಂದ , ಸಾಕಷ್ಟು ಪರಿಹಾರಗಳು ದೊರೆಯುತ್ತವೆ . ಮಹಾ ವಿಷ್ಣು ಹಾಗೂ ಶ್ರೀ ರಾಮನ ದೇವಾಲಯಕ್ಕೆ ಭೇಟಿ ನೀಡಿ, ರವೆಯನ್ನು ಅರ್ಪಿಸುವುದರಿಂದ , ನಿಮ್ಮಲ್ಲಿನ ಸಾಕಷ್ಟು ಹಣಕಾಸಿನ ಸಮಸ್ಯೆಗಳು ಆರೋಗ್ಯದ ಸಮಸ್ಯೆಗಳು ಪರಿಹಾರವಾಗುತ್ತದೆ . ನಿತ್ಯ ಕಾರ್ಯ ಗಳಿಗೆ ಕೆಂಪು ವಸ್ತ್ರ ಧರಿಸಿ ಹೋಗುವುದರಿಂದ, ಜಯ ಸಿಗುತ್ತದೆ. ಸೂರ್ಯಾಸ್ತ ಸಮಯದಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪೂರ್ವಾಭಿಮುಖವಾಗಿ ಕುಳಿತು ಪಠಿಸುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ.

Leave a Comment