ನಾವು ಈ ಲೇಖನದಲ್ಲಿ ಸ್ವತಃ ರಾಮನು ಕೂಡ ಈ ಮಂತ್ರದ ಶಕ್ತಿಯನ್ನು ಒಪ್ಪಿದ್ದಾರೆ. ಮಲಗುವ ಮುನ್ನ ಕೇವಲ 1 ಬಾರಿ ಜಪ ಮಾಡಿ ನೋಡಿ ಫಲಿತಾಂಶ ಹೇಗೆ ದೊರೆಯುತ್ತದೆ. ಎಂದು ತಿಳಿಯೋಣ. ಭಗವಂತನಾದ ಶಿವನನ್ನು ದೇವರ ದೇವ ಮಹಾದೇವ ಎಂದು ಕರೆಯುತ್ತಾರೆ .ಇದಕ್ಕೆ ಇರುವ ಕಾರಣವೇನೆಂದರೆ , ಇವರನ್ನು ಸಂಹಾರದ ದೇವರು ಎಂದು ಕರೆಯುತ್ತಾರೆ . ಶಿವನು ಕ್ಷಣಮಾತ್ರದಲ್ಲಿ ಈ ಸೃಷ್ಟಿಯನ್ನು ನಾಶ ಮಾಡಬಹುದು .ಆದರೆ ಇವರಲ್ಲಿ ಒಂದು ವಿಶೇಷತೆ ಏನು ಇದೆ ಎಂದರೆ , ಇವರು ಬೋಲೆನಾಥರು ಆಗಿದ್ದಾರೆ . ಇಲ್ಲಿ ಭಕ್ತರು ಸ್ವಲ್ಪ ಪೂಜೆಯನ್ನು ಮಾಡಿದರು ಕೂಡ ,ಶಿವನು ಅವರಿಗೆ ಬೇಗ ಒಲಿಯುತ್ತಾನೆ.
ಇವರ ಎಲ್ಲ ರೋಗಗಳು ಮತ್ತು ದುಃಖ ಸಮಸ್ಯೆಗಳನ್ನು ಶಿವನು ದೂರ ಮಾಡುತ್ತಾರೆ . ಇಲ್ಲಿ ಭಗವಂತನಾದ ಶಿವನ ಯಾವ ರೀತಿಯಾದ ಚಮತ್ಕಾರಿಕ ಶಕ್ತಿಶಾಲಿಯಾದ ವಿಷಯವೆಂದರೆ, ಇದು ತನ್ನಲ್ಲಿ ತಾನು ಶಿವನ ಸ್ವರೂಪವೇ ಆಗಿದೆ. ಭಗವಂತನಾದ ಶಿವನನ್ನು ಮಹಾ ಕಾಳ ಎಂದು ಕರೆಯುತ್ತಾರೆ. ಒಂದು ವೇಳೆ ಮೃತ್ಯು ನಿಮ್ಮ ಹತ್ತಿರಕ್ಕೆ ಬಂದಾಗ , ನೀವು ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡಲು ಶುರು ಮಾಡಿದರೆ ಶಿವ ಭಕ್ತರನ್ನು ತನ್ನೊಡನೆ ಕರೆದು ಕೊಂಡು
ಹೋಗಲು ಸಹ ಯಮ ರಾಜನಿಗೂ ಧೈರ್ಯ ಬರುವುದಿಲ್ಲ. ಈ ಮಂತ್ರಕ್ಕೆ ಸಂಬಂಧ ಪಟ್ಟ ಹಲವಾರು ಕಥೆಗಳು ಮತ್ತು ಶಾಸ್ತ್ರ ಪುರಾಣಗಳಲ್ಲಿ ಇದರ ಉಲ್ಲೇಖವಿದೆ. ಇವುಗಳಲ್ಲಿ ಒಂದು ಪ್ರಸಂಗ ಈ ರೀತಿಯಾಗಿ ಬರುತ್ತದೆ. ಎಲ್ಲಾ ಶಿವ ಭಕ್ತರಲ್ಲಿ ರಾವಣನು ಎಲ್ಲಕ್ಕಿಂತ ದೊಡ್ಡ ಭಕ್ತನಾಗಿದ್ದನು. ಅವರಿಗೆ ಈ ಮಹಾ ಮೃತ್ಯುಂಜಯ ಮಂತ್ರ ಸಿದ್ಧಿಯಾಗಿತ್ತು. ಇದರ ಪ್ರಭಾವದಿಂದ ಅವರು ಸಾವನ್ನು ಕೂಡ ಗೆದ್ದಿದ್ದರು. ಇಲ್ಲಿ ಶಿವನು ಮನಸ್ಸು ಮಾಡಿದರೆ ಅವನನ್ನು ಸಂಹಾರ ಮಾಡಬಹುದಿತ್ತು. ಆದರೆ ರಾವಣನನ್ನು ಸಂಹಾರ ಮಾಡಲಿಲ್ಲ. ಭಗವಂತನಾದ ಶ್ರೀಹರಿಯನ್ನು ಅವರ ಉದ್ಧಾರಕ್ಕಾಗಿ ಮನುಷ್ಯನಾಗಿ ಹುಟ್ಟಬೇಕಾಯಿತು.
ಇಲ್ಲಿ ರಾವಣನು ಮಹಾ ಮೃತ್ಯುಂಜಯ ಮಂತ್ರದ ಮೂಲಕ ತನ್ನ ಶಿವ ಭಕ್ತಿಯಿಂದ ಶಿವನನ್ನು ತನ್ನ ವಶ ಮಾಡಿಕೊಂಡಿದ್ದರು. ಹೀಗೆ ಈ ಒಂದು ಕಾರಣಕ್ಕೆ ಶಿವನು ಸಂಹಾರ ಮಾಡಲಿಲ್ಲ. ಹಾಗಾಗಿ ವಿದ್ವಾಂಸರ ಅನುಸಾರವಾಗಿ ಈ ಮಂತ್ರವು ಎಷ್ಟು ವಿಶೇಷತೆ ಮತ್ತು ಶಕ್ತಿಶಾಲಿಯಾಗಿದೆ ಎಂದರೆ, ಈ ಮಂತ್ರದ ಜಪದಿಂದ ಗಂಭೀರವಾದ ಅನಾರೋಗ್ಯದ ವ್ಯಕ್ತಿ ಕೂಡ ಸರಿಯಾಗುತ್ತಾರೆ. ಇಲ್ಲಿ ಮೃತ್ಯುವಿಗೆ ಹತ್ತಿರವಾದ ವ್ಯಕ್ತಿ ಕೂಡ ದೀರ್ಘಾಯುಷ್ಯವನ್ನು ಪಡೆದುಕೊಳ್ಳುತ್ತಾರೆ .
ಇದೇ ಒಂದು ಕಾರಣದಿಂದಾಗಿ ಜ್ಯೋತಿಷ್ಯರಾಗಲಿ , ಪಂಡಿತರಾಗಲಿ , ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ, ಗ್ರಹ ದೋಷಗಳಿಂದ ತೊಂದರೆಯಾದ ವ್ಯಕ್ತಿಗಳಿಗೆ, ಅಕಾಲಿಕ ಮೃತ್ಯುವಿನ ಭಯದಿಂದ ಮುಕ್ತಿ ಪಡೆಯಲು ಅವರು ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡಲು ಸಲಹೆ ಕೊಡುತ್ತಾರೆ . ಇಲ್ಲಿ ಒಂದು ವಿಶೇಷವಾದ ಮಂತ್ರ ಇದೆ. “ಓಂ ಓಂ ಜೊಂ ಸಹ ” ” ಓಂ ಬೂಂ ಬುಹಃ ಸ್ವಾ: ” .. ಮತ್ತು . ” ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿ ವರ್ಧನಂ ಪೂರ್ವಾ ರುಕುಮಿ ವಾ ಬಂಧನಾತ್ ಮೃತ್ಯುರ್ಮುಕ್ಷಿಯೇ ಮಾಮೃತಾತ್ . ” ಈ ಮಂತ್ರವನ್ನು ಸರಿಯಾದ ರೀತಿಯಲ್ಲಿ ಜಪ ಮಾಡದೇ ಹೋದರೆ ಅವರಿಗೆ ಫಲ ದೊರೆಯುವುದಿಲ್ಲ.
ಇಂತಹ ಜನರು ಭಯ ಪಡುವ ಅಗತ್ಯವಿಲ್ಲ . ನಮ್ಮ ವೇದಗಳಲ್ಲಿ ಇದಕ್ಕೆ ಇರುವ ಉಪಾಯ ತಿಳಿಸಿದ್ದಾರೆ. ಇಲ್ಲಿ ಮಹಾ ಮೃತ್ಯುಂಜಯ ಮಂತ್ರದಿಂದ ಸಿದ್ದಿ ಆಗಿರುವ ಕೆಲವು ಕವಚಗಳು ಸಹ ಸಿಗುತ್ತವೆ .ಇವುಗಳನ್ನು ಎರಡುವರೆ ಲಕ್ಷ ಮಹಾ ಮೃತ್ಯುಂಜಯ ಮಂತ್ರದಿಂದ ಅಭಿ ಮಂತ್ರ ಮತ್ತು ಸಿದ್ಧಿ ಮಾಡಿರುತ್ತಾರೆ .ಒಂದು ವೇಳೆ ಈ ಮಹಾ ಮೃತ್ಯುಂಜಯ ಮಂತ್ರದ ಕವಚಗಳನ್ನು ನಿಮ್ಮ ಹೆಸರು ಮತ್ತು ಗೋತ್ರದ ಮೇಲೆ ಸಿದ್ದಿ ಮಾಡಿ ಇಟ್ಟುಕೊಂಡರೆ , ನೀವು ಹೆಚ್ಚಿನ ಪ್ರಮಾಣದಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡುವ ಅವಶ್ಯಕತೆ ಇರುವುದಿಲ್ಲ .ಮಹಾ ಮೃತ್ಯುಂಜಯ ಕವಚದ ರೂಪದಲ್ಲಿ ಮಹಾದೇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ.
ಮಹಾ ಮೃತ್ಯುಂಜಯ ಕವಚದಿಂದ ಯಾವ ರೋಗಗಳು ನಿಮ್ಮನ್ನು ಸ್ಪರ್ಶ ಮಾಡಲು ಸಾಧ್ಯವಿಲ್ಲ .ನೀವು ಯಾವುದಾದರು ಹಳೆಯ ರೋಗಗಳಿಂದ ಬಳಲುತ್ತಿದ್ದರೆ , ಆ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ . ಮಹಾ ಮೃತ್ಯುಂಜಯ ಕವಚವನ್ನು ಮನುಷ್ಯರು ಧರಿಸಿಕೊಂಡು ಎಲ್ಲಾ ಪ್ರಕಾರದ ಅಶುಭತೆಗಳಿಂದ ಉಳಿದುಕೊಳ್ಳುತ್ತಾರೆ . ಅಕಾಲಿಕ ಮೃತ್ಯುವನ್ನು ಕೂಡ ಇವರು ದಾಟಿ ಬರುತ್ತಾರೆ . ಒಂದು ವೇಳೆ ಜನ್ಮ ಕುಂಡಲಿಯಲ್ಲಿ
ಮೃತ್ಯುವಿನ ಯೋಗ ಇಲ್ಲವೆಂದರೂ ಆ ವ್ಯಕ್ತಿಗೆ ಮೃತ್ಯು ಬಂದಿದೆ ಎಂದರೆ ಅದನ್ನು ಅಕಾಲಿಕ ಮೃತ್ಯು ಎಂದು ಕರೆಯುತ್ತಾರೆ .ಪ್ರತಿ ಸಮಯದಲ್ಲಿ ಕೆಲವರಿಗೆ ಯಾವುದೇ ವಿಷಯದ ಬಗ್ಗೆ ಭಯ ಕಾಡುತ್ತಿರುತ್ತದೆ .ಇವುಗಳ ಕಾರಣದಿಂದಾಗಿ ತಾಯಿ ಭಗವತಿ ದೇವಿಯವರು ಮಹಾ ದೇವನಿಗೆ ಪ್ರಶ್ನೆಯನ್ನು ಕೇಳಿದರು . ಹೇ ಪ್ರಭು ಅಕಾಲಿಕ ಮೃತ್ಯುವಿನಿಂದ ರಕ್ಷಣೆ ಪಡೆಯಲು , ಎಲ್ಲಾ ಪ್ರಕಾರದ ಅಶುಭ ಗಳಿಂದ ಉಳಿದುಕೊಳ್ಳಲು ಉಪಾಯವನ್ನು ತಿಳಿಸಿ ಎಂದು ಕೇಳುತ್ತಾರೆ. ಆಗ ಮಹಾ ದೇವರು ಮಹಾ ಮೃತ್ಯುವಿನ ಕವಚದ ಬಗ್ಗೆ ಹೇಳುತ್ತಾರೆ .