ತುಲಾ ರಾಶಿಯ ಐದು ವರ್ಷದ ಗುರು ಫಲ.

0

ತುಲಾ ರಾಶಿಯ ಐದು ವರ್ಷದ ಗುರು ಫಲ. ಆತ್ಮೀಯ ತುಲಾ ರಾಶಿಯ ವೀಕ್ಷಕರೆ, ನಿಮ್ಮ ಐದು ವರ್ಷದ ಶನಿಫಲದ ಬಗ್ಗೆ ಹೇಳೋದಾದ್ರೆ ಯಾವುದಕ್ಕೂ ಸ್ವಲ್ಪ ಹುಷಾರು ಸ್ವಲ್ಪ ಎಚ್ಚರಿಕೆಯಿಂದ ಇರಿ. ನೀವು ಎಚ್ಚರಿಕೆಯಿಂದ ಇರಿ ಅಂತ ಹೇಳ್ತಾ ಇದ್ದೀರಾ ಆದರೆ ನಮಗೆ ಎಲ್ಲ ಲಾಭನೆ ಆಗ್ತಾ ಇದೆ ಅಂತ ನಿಮಗೆ ಅನ್ನಿಸಿದ್ರೆ, ನೆನಪಿಡಿ ಇರೋದು ಬರೀ ಒಂದೇ ಗ್ರಹ ಅಲ್ಲವಲ್ಲ, ಒಟ್ಟು 9 ಗ್ರಹಗಳು ಇದಾವೆ. ಅವರ ಬಲಾಬಲನು ಅಷ್ಟೇ ಮುಖ್ಯ. ಇವತ್ತು ನಾವು ಅಂತದ್ದೇ ಒಂದು ವಿಚಾರದ ಜೊತೆಗೆ ನಿಮ್ಮ ಮುಂದೆ ಬಂದಿದ್ದೀವಿ.

” ಧ್ಯಾನಂ ಮೂಲಂ ಗುರುರ್ ಮೂರ್ತಿ, ಪೂಜಾ ಮೂಲಂ ಗುರುರ್ ಪಾದಂ, ಮಂತ್ರಂ ಮೂಲಂ ಗುರುರ್ ವಾಕ್ಯಂ, ಮೋಕ್ಷ ಮೂಲಂ ಗುರುರ್ ಕೃಪಾ ” ಧ್ಯಾನದ ಮೂಲ ಗುರುವಿನ ರೂಪ, ಪೂಜೆಯ ಮೂಲ ಗುರುವಿನ ಪಾದಗಳು, ಮಂತ್ರದ ಮೂಲ ಗುರುವಿನ ಮಾತಾದ್ರೆ, ಗುರುವಿನ ಕೃಪೆಯಿಂದ ಮಾತ್ರ ಮೋಕ್ಷ ಸಿಗುತ್ತೆ ಅನ್ನೋದು ಇದರ ಅರ್ಥ. ಇಂತಹ ಮಹಾ ಗುರುವಿನಿಂದ ತುಲಾ ರಾಶಿಯವರಿಗೆ ಏನು ಲಾಭ? ಗುರುವಿನಿಂದ ಯಾವಾಗ ಹೆಚ್ಚಿನ ಹೆಸರು, ಹಣ, ಕೀರ್ತಿ ಬರಲಿದೆ? ಯಾವ ವರ್ಷ ನಿಮಗೆ ಅದೃಷ್ಟ ಖುಲಾಯಿಸುವುದಿದೆ?

ಇದೆಲ್ಲವನ್ನು ಇವತ್ತು ಇಲ್ಲಿ ನೋಡೋಣ ಬನ್ನಿ. ಐದು ವರ್ಷದ ಗುರುವಿನ ಫಲದ ಬಗ್ಗೆ ಇಲ್ಲಿ ವಿಶೇಷವಾಗಿ ತಿಳಿಸಲಾಗಿದೆ. ಗ್ರಹಗಳ ಬಲಾಬಲ, ಸ್ಥಾನ ನೋಡಿ ವಿಮರ್ಶೆ ಮಾಡಿ ಫಲಗಳನ್ನು ಹೇಳುತ್ತೇವೆ. ಇದನ್ನು ಸೂಚನೆ ಹಾಗೆ ಬಳಸಿ. ನಿಮ್ಮ ಬಗ್ಗೆ, ನಿಮ್ಮ ಕುಟುಂಬದವರ ಬಗ್ಗೆ, ನಿಮ್ಮ ಸ್ನೇಹಿತರ ಬಗ್ಗೆ ತಿಳಿಯಿರಿ. ಆತ್ಮೀಯ ವೀಕ್ಷಕರೆ ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಲೈಫ್ ನಲ್ಲಿ ದಿ ಬೆಸ್ಟ್ ಅನ್ನಿಸುವಂತಹ ಘಟನೆಗಳು ಮೂರು ಡಿಫ್ರೆಂಟ್ ಪಿರಿಯಡ್ ಗಳಲ್ಲಿ ಆಗುತ್ತೆ.

ಆ ಟೈಮ್ ಯಾವಾಗ ಅಂತ ಮೊದಲು ನೋಡೋಣ. ಏಪ್ರಿಲ್ 22, 2023 ರಿಂದ ಮೇ 1, 2024 ಈ ಡೇಟ್ ನೆನಪಿಟ್ಟುಕೊಳ್ಳಿ. ಒಂದೊಂದೆ ಒಳ್ಳೆದಾಗೋ ಸೂಚನೆ. ಇದು ನನ್ ಹತ್ರ ಆಗಲ್ಲ ಅಂತ ಬಿಟ್ಟಿರೋ ಕೆಲಸಗಳು ಮುಂದುವರಿಯುವ ಸಾಧ್ಯತೆ ಹೆಚ್ಚು. ಜಾಬ್ ಫೀಲ್ಡ್ ನಲ್ಲಿ ಏನೋ ಸಾಧನೆ ಮಾಡೋದಿರಬಹುದು, ಕ್ಲೈಂಟ್ಸ್ ಮುಂದೆ ಅಪ್ರಿಷಿಯೇಶನ್ ಪಡೆಯುವುದು ಇರಬಹುದು, ಬೇರೆ ರಾಜ್ಯಕ್ಕೆ, ದೇಶಕ್ಕೆ ಹೋಗಿ ಸಾಧನೆ ಮಾಡಿ ಗೌರವವನ್ನು ಹೆಚ್ಚಿಸುವುದು, ಇಲ್ಲ ಯಾವುದೋ ಪ್ರತಿಷ್ಠಿತ ಸಂಸ್ಥೆಗೆ ಆಯ್ಕೆಯಾಗಿ ಮುನ್ನುಡಿಗೆ ಬರೋದು ಹೀಗೆಲ್ಲಾ ಆಗೋ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ.

ಮೊದಲು ಮರಿಚೀಕೆ ಆಗಿದ್ರೆ, ನೀವು ಯಾರು? ನಿಮ್ಮ ಪವರ್ ಏನು? ನಿಮ್ಮ ಕೆಪ್ಯಾಸಿಟಿ ಹೇಗೆ? ಅನ್ನೋದು ಜನರಿಗೆ ತೋರ್ಸೋಕಾಲ ಇದು. ಹೊಸ ಹೊಸ ಆಪರ್ಚುನಿಟಿಗಳು ಬಂದಾಗ ಹೇಗೆ ಯೂಸ್ ಮಾಡಿಕೊಳ್ಳಬೇಕು ಅಂತ ಕ್ಯಾಲ್ಕುಲೇಟ್ ಮಾಡಿ. ಹೇಳಿ ಕೇಳಿ ತುಲಾದವರಾಗಿ ನೀವು ಸರಿ ಯಾವುದು, ತಪ್ಪು ಯಾವುದು ಅಂತ ತಕ್ಕಡಿಯಲ್ಲಿ ತೂಗದೆ ಮುಂದುವರೆಯುವುದಿಲ್ಲ. ಆದ್ರೂ ಏಕಾಏಕಿ ಏನನ್ನು ಫೈನಲ್ ಮಾಡಬೇಡಿ. ಟೈಮ್ ತಗೋಳಿ. ಇನ್ವೆಸ್ಟ್ಮೆಂಟ್ ಮಾಡ್ಲಿಕ್ಕೆ,

ಆಸ್ತಿ ಖರೀದಿ, ವಾಹನ ಖರೀದಿ, ಹಾಗೆ ಮನೆ ಕಟ್ಟುವ ಪ್ಲಾನ್ ಇದ್ರೆ ಹೆಚ್ಚಿನ ಮಟ್ಟದಲ್ಲಿ ಲಾಭ ಆಗೋ ಟೈಮ್ ಇದು ಅಂತಾನೆ ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿ ಯಶಸ್ಸು ಗಳಿಸಲಿಕ್ಕೆ ಸಂಗಾತಿಯ ಸಹಾಯ ಇಂಪಾರ್ಟೆಂಟ್ ಆಗುತ್ತೆ. ಮನೆಯಲ್ಲಿ ಎಲ್ಲಾ ಶಾಂತಿಯಿಂದ ಇದ್ರೆ ಕೆಲಸ ಮಾಡುವ ಉತ್ಸಾಹ ಹೆಚ್ಚಾಗುತ್ತೆ. ಮನೇಲಿ ಸಪೋರ್ಟ್ ಮಾಡೋದ್ ಇರ್ಬೋದು, ಹೆಂಡತಿ ಮಕ್ಕಳ ಜೊತೆ ಟೈಮ್ ಸ್ಪೆಂಡ್ ಮಾಡೋದಿರ್ಬೋದು, ಅವರು ಕೇಳಿದ್ದು ಕೊಡಿಸಿ ಖುಷಿಪಡಿಸುವುದು ಇಂತದಕ್ಕೆಲ್ಲಾ ರೈಟ್ ಟೈಮ್ ಇದು. ಕುಟುಂಬದಲ್ಲಿ ಸಂಬಂಧ ಚೆನ್ನಾಗಿರುತ್ತೆ.

ಅಣ್ಣ- ತಂಗಿ ,ಅಕ್ಕ – ತಮ್ಮ ಹೀಗೆ ಸಹೋದರ ಸಹೋದರಿಯರ ಮಧ್ಯೆ ಬಾಂಧವ್ಯ ಇನ್ನು ಬಿಗಿಯಾಗುತ್ತೆ. ಮನೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಬಂದ್ರೆ ರಾಜಿ ಆಗಬಹುದು ಇಲ್ಲ ಸೆಟ್ಲ್ಮೆಂಟ್ಗೆ ಅವಕಾಶ ಬರಬಹುದು. ಪ್ರೀತಿ ವಿಷಯದಲ್ಲಿ ಅದೃಷ್ಟ ಪರೀಕ್ಷೆ ಮಾಡ್ಲಿಕ್ಕೆ ಹೋಗುವವರಿಗೆ ಆಲ್ ದಿ ಬೆಸ್ಟ್. ಗಂಡ ಹೆಂಡತಿ ಮಧ್ಯೆ ಮನಸ್ತಾಪ ಇದ್ರೆ ಆ ಸಂಬಂಧ ಟ್ರ್ಯಾಕಿಗೆ ಬರೋ ಲಕ್ಷಣ ಇದೆ.

ಒಟ್ಟಿನಲ್ಲಿ ಓವರ್ ಆಲ್ ಆಗಿ ಹೇಳೋದಾದ್ರೆ ಲೈಫ್ ನಲ್ಲಿ ನೆಮ್ಮದಿ, ಸಂತೋಷ. ಮಕ್ಕಳು ಓದುತ್ತಾರೋ ಇಲ್ವೋ? ಯಾವ ಸ್ಕೂಲಿಗೆ ಹಾಕಲ ಕಾಲೇಜಲ್ಲಿ ರ್‍ಯಾಂಕ್ ಬಂದ್ರೆ ಸಾಕು ಅಂತೆಲ್ಲ ತಲೆ ಕೆಡಿಸಿಕೊಳ್ಳುವುದನ್ನು ಕಡಿಮೆ ಮಾಡಿ. ಮಕ್ಕಳ ಬಗ್ಗೆ ಹೆಚ್ಚಿನ ಟೆನ್ಶನ್ ಬೇಡ. ಚೆನ್ನಾಗಿ ಓದ್ತಾರೆ. ಒಳ್ಳೆಯ ಸ್ಕೂಲ್ ಅಥವಾ ಕಾಲೇಜಿನಲ್ಲಿ ಸೀಟ್ ಸಿಕ್ಕಿ ನೀವ್ ಇಷ್ಟ ಪಡೋ ಹಾಗೆ ಆಗೋ ಚಾನ್ಸನ್ನ ಹೆಚ್ಚಾಗಿ ಕಾಣಬಹುದು. ಕಾಂಪಿಟೇಟಿವ್ ಎಕ್ಸಾಮ್ಗಳಿಗೆ ತಯಾರಿ ಮಾಡಬಹುದು.

ದೊಡ್ಡ ಕೆಲಸಕ್ಕೆ ಸೇರಿ ಮುಂದುವರೆಯುವ ಮೊದಲು ಮನೆಯವರೆ ಸಲಹೆ ಕೇಳಿ ಮುಂದುವರೆದರೆ ಲಾಭವಿದೆ. ಯಾಕಂದ್ರೆ ಹಿರಿಯರು ಎಲ್ಲೋ ನೋಡಿ, ಯಾರೋ ಹೇಳಿದ್ದು ಕೇಳಿ ಮಾತಾಡಲ್ಲ. ಸ್ವಂತ ಅನುಭವದಿಂದ ಹೇಳುತ್ತಾರೆ. ನಿಮ್ಮಿಷ್ಟದ ಪ್ರಕಾರ ಜೀವನ ಸುಖ, ಸಂತೋಷದಿಂದ ನಡೆಯುತ್ತೆ. ಇವಿಷ್ಟು ಈ ಟೈಮಲ್ಲಿ ಹೆಚ್ಚಾಗಿ ನಡೆಯೋ ಸಾಧ್ಯತೆ ಇರೋ ಘಟನೆಗಳು. ಒಳ್ಳೇದಾಗುವ ಇನ್ನೂ ಒಂದು ಲಾಂಗ್ ಪಿರಿಯಡ್ ಬಾಕಿ ಇದೆ. ಈಗ ಜಸ್ಟ್ ಇಂಟರ್ವಲ್ ಬಂತು, ಇನ್ನು ಯಾವ ವರ್ಷ ಇಂತದ್ದೇ ಒಳ್ಳೆಯ ಘಟನೆಗಳು ನಡೆಯುವುದಿದೆ? ಅದೃಷ್ಟ ಬದಲಾಗುವ ವರ್ಷಗಳು ಯಾವ್ ಯಾವುದು ಅಂತ ಕ್ಲೈಮ್ಯಾಕ್ಸ್ ನಲ್ಲಿ ಹೇಳ್ತೀನಿ.

ಹಗಲು ರಾತ್ರಿ ದಿನ ನಾವು ನೋಡುವ ಎರಡು ಮುಖ್ಯ ಘಟನೆಗಳು. ಯಾವಾಗಲೂ ಹಗಲೇ ಇರಲ್ಲ, ಯಾವಾಗಲೂ ರಾತ್ರಿ ಕೂಡ ಇರಲ್ಲ. ಒಂದು ಇದ್ರೆನೇ ಮತ್ತೊಂದಕ್ಕೆ ಬೆಲೆ. ಜೀವನದಲ್ಲೂ ಹಾಗೆ ಬರಿ ಸುಖ, ಸಂತೋಷ ನೋಡಿ, ತಿಂದು ಉಂಡಿಕೊಂಡು ಎಂಜಾಯ್ ಮಾಡ್ತಾ ಇದ್ರೆ ನಮ್ಮ ಶಕ್ತಿ ಏನು ಅಂತ ನಮಗೆ ಗೊತ್ತಾಗಲ್ಲ. ಈಗ ನಾನು ಹೇಳುವ ಪೀರಿಯಡ್ ನಲ್ಲಿ ಹೆಚ್ಚಿನವರು ಸ್ಟ್ರಗಲ್ ಮಾಡಿದ್ರು ಒಂದು ಒಳ್ಳೆ ಜೀವನ ಪಾಠವನ್ನು ಕಲಿತಾರೆ. ಅದೇನು? ಹೇಗೆ? ಯಾವಾಗ? ಅಂತ ನೋಡೋಣ ಬನ್ನಿ.

2022ರ ಏಪ್ರಿಲ್ 13ಕ್ಕೆ ಗುರು ಮೀನ ರಾಶಿಗೆ ಬಂದಿದ್ದಾನೆ. ಸಷ್ಟಮ ಭಾಗದಲ್ಲಿ ಇದ್ದಾನೆ. ಗುರು ಸ್ವಲ್ಪ ಬಲ ಕಳೆದುಕೊಳ್ಳುವುದರಿಂದ ಜಾಗೃತೆ. ನಿಮಗೆ ಆಗದೇ ಇರುವವರು, ಹಿತ ಶತ್ರುಗಳು ಸ್ವಲ್ಪ ಟೆನ್ಶನ್ ಕೊಡಬಹುದು. ಮಕ್ಕಳು ಹೇಳಿದ್ದು ಕೇಳದೆ ಇದ್ರೆ ತಲೆ ಹನ್ನೆರಡಾಣೆ ಆಗೋ ಸಾಧ್ಯತೆ, ಸಾಲ ಮಾಡಿದ್ರೆ ಬಡ್ಡಿ ಚಿಂತೆ, ಮನೇಲಿ ಸ್ವಲ್ಪ ಅಶಾಂತಿ, ಆರೋಗ್ಯ ಸಮಸ್ಯೆ ಕೂಡ ಕಾಡಬಹುದು. ನೆಂಟರಿಷ್ಟರು ಮನೆಯವರ ಮಧ್ಯ ಏನಾದರೂ ಭಿನ್ನಾಭಿಪ್ರಾಯ ಅಥವಾ ದಾಯಾದಿ ಕಲಹದ ಸೂಚನೆ ಹೆಚ್ಚಾಗಿ ಕಾಣ್ತಾ ಇದೆ.

ಅದು ಬಿಟ್ಟರೆ ಮೇ 1, 2024 ರಿಂದ ಮೇ 14, 2025 ರವರೆಗೆ ಸ್ವಲ್ಪ ಎಡವಟ್ಟುಗಳಾಗುವ ಸಾಧ್ಯತೆ ಇದೆ. ಗುರು ಒಂತರ ಎಟಿಎಂ ಇರೋ ಹಾಗೆ. ಚೆನ್ನಾಗಿದ್ದಾಗ ಮಸ್ತ್ ಲಾಭ, ಸ್ವಲ್ಪ ಡೌನ್ ಆದಾಗ ಹಣಕಾಸಿಗೆ ಹೊಡೆತ ಕೊಡೋ ಸಂದರ್ಭಗಳು ಸೃಷ್ಟಿಯಾಗಬಹುದು. ಇನ್ವೆಸ್ಟ್ ಮಾಡೋಕೆ ಹೋಗಿ ವ್ಯವಹಾರ ಡೌನ್ ಆಗೋದು, ಹೊಸ ಪ್ರೊಡೆಕ್ಟ್ ಲಾಂಚ್ ಮಾಡಿರ್ತೀರ ಆದರೆ ಅದು ಜನರು ಗಮನ ಸೆಳೆಯೋಕಾಗದೆ ಇರಬಹುದು, ಬಡ್ಡಿ ಸ್ವಲ್ಪ ಹೆಚ್ಚು ಬರುತ್ತೆ ಅನ್ನೋ ಆಸೆಯಿಂದ ಯಾರಿಗೋ ಸಾಲ ಕೊಟ್ಟಿರ್ತೀರ ಆ ಆಸಾಮಿ ಕೊಟ್ಟು ಮೂರು ಸೋಮವಾರ ಆದ್ರೂ ಪತ್ತೇನೇ ಇಲ್ಲ.

ಅವನ ಹುಡುಕೊಂಡು ನೀವು ಅಲೆಯೋ ಹಾಗೆ ಆಗಬಹುದು, ನೀವು ಮನೆ ಕಟ್ಟೋಣ ಅಂತ ಜಾಗ ಎಲ್ಲ ರೆಡಿ ಮಾಡ್ಕೊಂಡು ಸೆಟ್ ಆಗಿರ್ತೀರಾ, ಆ ಜಾಗದ ಪಕ್ಕ ಇರುವವರು ಸುಮ್ಮನೆ ಖ್ಯಾತೆ ತೆಗೆಯಬಹುದು, ಇಲ್ಲ ಏನಾದ್ರೂ ಕೋರ್ಟ್ ಕಚೇರಿಗಳ ಅಲೆದಾಟ, ಕಾಗದಪತ್ರಗಳ ವ್ಯವಹಾರ ಹೀಗೆ ತಿರುಗಾಟಗಳು ಹೆಚ್ಚಾಗುವ ಸ್ಥಿತಿ ಹೆಚ್ಚಿನವರಿಗೆ ಆಗೋ ಸಾಧ್ಯತೆಗಳಿದೆ. ಓಡಾಟದಿಂದ ಸುಸ್ತು, ಆಯಾಸ ಒಂದು ಕಡೆ ಆದರೆ ಜನರ ಮಾತುಗಳು ಇನ್ನೊಂದು ಕಡೆಗೆ. ಅದೃಷ್ಟ ಸ್ವಲ್ಪ ಕೈ ಕೊಡುವ ಸಾಧ್ಯತೆ ಇದೆ. ಏನಾದ್ರೂ ದುಃಖದ ಸಮಾಚಾರ ಕೇಳಬಹುದು ಹೀಗೆ ಎಕ್ಸಾಕ್ಟ್ ಅಂತ ಅಲ್ಲ ಇದೇ ರೀತಿ ಹಲವಾರು ಘಟನೆಗಳು ನಡೆಯುವ ಸಾಧ್ಯತೆ ಕಾಣ್ತಾ ಇದೆ.

ಎಲ್ಲರಿಗೂ ಎಕ್ಸಾಕ್ಟ್ ಹಿಂಗೆ ಆಗುತ್ತೆ ಅಂತ ಅಲ್ಲ. ಸೋ ನಿಮಗೆ ರೀಲ್ ಬಿಟ್ಟು ನಂಬಿಸುವುದರಿಂದ ನಮಗೆ ಏನು ಲಾಭ ಇಲ್ಲ ಅಲ್ವಾ… ಆದ್ರೂ ಹುಷಾರಾಗಿರೋದು ಮುಖ್ಯ. ವೀಕ್ಷಕರೆ ಶುಭ ಲಾಭ ಇನ್ನೂ ಒಂದು ಲಾಂಗ್ ಪಿರಿಯಡ್ ಇದೆ. ಅಲ್ಲಿ ಕೂಡ ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಆ ವರ್ಷನೂ ಬಂಪರ್ ಕೊಡುಗೆ ಸಿಗೋದಿದೆ. ಅದನ್ನ ಕೊನೆಯಲ್ಲಿ ಹೇಳ್ತೀನಿ ಅಂದಿದ್ದೆ, ಅದು 2025 ರ ಮೇ 14ರಿಂದ, 2027 ಜೂನ್ 26ರ ವರೆಗಿನ ದಿನಗಳು. ನೀವು ಅಂದುಕೊಂಡ ಕನಸುಗಳನ್ನು ಈಡೇರಿಸಿಕೊಳ್ಳುವ ಟೈಮ್ ಇದು.

ದೀರ್ಘಾವಧಿಯ ಕೆಲಸಗಳಿಗೆ ಅಡಿಗಲ್ಲು ಹಾಕುವುದಿದ್ದರೆ ಕಾಯಬೇಡಿ, ಶುಭಸ್ಯ ಶೀಘ್ರಂ ಅಂತ ಶುರು ಮಾಡಿ. ನೀವಿರುವಲ್ಲಿ ಎನರ್ಜಿ, ಉತ್ಸಾಹ, ಮೋಜು, ಮಸ್ತಿ ಎಲ್ಲವನ್ನು ಕಾಣಬಹುದು. ಜನರನ್ನ ಎಂಟರ್ಟೈನ್ ಮಾಡ್ತೀರಾ. ಹೊಗಳಿಕೆ, ಸಂತೋಷ, ನೆಮ್ಮದಿ ಅನಿಸೋ ಕ್ಷಣಗಳನ್ನು ಎಂಜಾಯ್ ಮಾಡಬಹುದು. ಹೊಸ ಜಾಬ್ ಆಫರ್, ಗೌರವ ಹಾಗೆ ಜನರೊಂದಿಗೆ ಗುರುತಿಸಿಕೊಳ್ಳುವ ಅವಕಾಶ ಹೆಚ್ಚಿನವರಿಗೆ. ಕೆಲಸ ಹುಡುಕುತ್ತಾ ಇರುವವರಿಗೆ ಹೊಸ ಹೊಸ ಅವಕಾಶಗಳು ಸಿಗಬಹುದು.

ಈಗಾಗಲೇ ಕೆಲಸದಲ್ಲಿ ಇದ್ದವರಿಗೆ ಪ್ರಮೋಷನ್, ಟ್ರಾನ್ಸ್ಫರ್ ಭಾಗ್ಯ. ಉತ್ತಮ ನಡವಳಿಕೆ, ಮಾತುಗಾರಿಕೆಗೆ ಹೆಸರಾಗಬಹುದು. ದೇವರಲ್ಲಿ ಶ್ರದ್ಧೆ, ಭಕ್ತಿ ಹೆಚ್ಚಾಗಿ ಆಸ್ತಿಕರಾಗ್ತೀರಾ. ಸತ್ಯವಂತರಾಗಿ ಕಾಣುವುದರಿಂದ ಜನ ಅವರ ಸಮಸ್ಯೆಗಳನ್ನು ನಿಮ್ಮ ಹತ್ತಿರ ಹೇಳಿಕೊಳ್ಳಬಹುದು. ಸಂಬಂಧಿಕರು, ಸಹೋದರ, ಸಹೋದರಿಯರಿಗೆ ನಿಮ್ಮ ಗುಣ ನಡುವಳಿಕೆಯಿಂದ ಸಮಾಧಾನವಾಗಿ ನಿಮ್ ಜೊತೆ ಚೆನ್ನಾಗಿ ಹೊಂದಿಕೊಂಡು ಹೋಗ್ತಾರೆ. ಹಣಕಾಸಿನ ತೊಂದರೆಗಳು ಹೆಚ್ಚಿನದಾಗಿ ಕಾಣೋದಿಲ್ಲ.

ಸಾಲ ಬಾಕಿ ತೀರಿ ಹೆಚ್ಚಿನವರು ನೆಮ್ಮದಿಯ ಉಸಿರು ಬಿಡ್ತೀರಾ. ಈ ಪಿರಿಯಡ್ ನಲ್ಲಿ ಗುರು ಕಟಕ ರಾಶಿಗೆ ವಿಸಿಟ್ ಕೊಡುವುದರಿಂದ ಎಲ್ಲೋ ಅಪರೂಪಕ್ಕೆ ಸ್ವಲ್ಪ ಡಿಮ್ ಆಗಬಹುದು. ಹಾಗಂತ ಸೀರಿಯಸ್ ಆಗಬೇಡಿ, ಅಷ್ಟೇ ಬೇಗ ರಿಕವರಿ ಆಗೋ ತಾಕತ್ತು ನಿಮಗಿದೆ. ಮಕ್ಕಳ ಬಗ್ಗೆ ಸ್ವಲ್ಪ ಗಮನ ಕೊಡ್ತಾ ಇರಿ. ಗುರು ಒಂದಲ್ಲ ಒಂದು ದಾರಿ ತೋರ್ಸೋ ಸ್ಥಾನದಲ್ಲಿ ಬಂದು ಕೂತಿರೋನು.

ಸಣ್ಣಪುಟ್ಟ ಸ್ಪೀಡ್ ಬ್ರೇಕರ್ಗಳು ಅಡ್ಡ ಬರುತ್ತೆ ಅಂತ ತಿರುಗಾಡೋದನ್ನೇ ಬಿಡ್ತೀರಾ? ಇಲ್ಲ ತಾನೇ.. ಇದು ಹಾಗೆ ಹೆಚ್ಚಿನ ಅದೃಷ್ಟ ನಿಮ್ಮ ಲೈಫ್ ನಲ್ಲಿ ಬರುವ ಸಾಧ್ಯತೆ ಇದೆ. ವಿದ್ಯಾವಂತರಾಗಿ ಜನರನ್ನು ಒಳ್ಳೆಯ ದಾರಿಯಲ್ಲಿ ನಡೆಯುವುದಕ್ಕೆ ಬೆಂಬಲ ನೀಡೋ ನೀವು ಇಲ್ಲಿ ಪ್ರಾರಂಭದಲ್ಲಿ ಹೇಳಿರುವ ಮಂತ್ರವನ್ನು ಆದಷ್ಟು ಪಠಣೆ ಮಾಡ್ತಾ ಇರಿ. 108 ಸಲ ಮಾಡುವುದರಿಂದ ಒಳ್ಳೆಯ ಫಲಗಳು ಇದಾವೆ.

Leave A Reply

Your email address will not be published.