ಎದೆ ಚುಚ್ಚೋ ವಿಷಯ! 

0

ಫಸ್ಟ್ ಲವ್ ಇಸ್ ದ ಬೆಸ್ಟ್ ಲವ್ ಎಂಬ ಮಾತಿದೆ. ಆದರೆ ಎಲ್ಲರಿಗೂ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತಾವೇ ದುಡುಕಿ ಪ್ರೀತಿಯನ್ನು ಕಳೆದುಕೊಳ್ಳುವವರು ಇದ್ದಾರೆ. ಒಪ್ಪದೇ ದೂರವಾಗುವವರು ಇದ್ದಾರೆ. ಮನಸ್ಸಿನಲ್ಲಿ ಪ್ರೀತಿ ಇದ್ದರೂ ಹೇಳದೆ ಒಂದು ಸೈಡ್ ಲವ್ ಟ್ಯಾಗ್ಲೈನ್ ಹಾಕಿಕೊಳ್ಳುವವರು ಕಮ್ಮಿ ಏನಿಲ್ಲ. ಹುಟ್ಟಿದ ರಾಶಿಗೂ, ಪ್ರೀತಿ ಪ್ರೇಮಕ್ಕು ಕನೆಕ್ಷನ್ ಇದೆ. ಈ ಐದು ರಾಶಿಯ ಜನ ತಮ್ಮ ಮೊದಲ ಪ್ರೀತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವಂತೆ.

ಇವರ ಮೊದಲ ಪ್ರೀತಿ ಯಶಸ್ವಿಯಾದರೆ, ಅದೊಂದು ಮಿರಾಕಲ್ ಎಂದೆ ಹೇಳಬಹುದು. ಪ್ರೀತಿ ಪ್ರೇಮವನ್ನು ಮಾತಿನಲ್ಲಿ ಹೇಳುವುದು, ವಿವರಿಸುವುದು ಕಷ್ಟ. ಕೆಲವರಿಗೆ ಲಾಭ ಫಸ್ಟ್ ಸೈಟ್ ಆಗಬಹುದು. ಇನ್ನು ಕೆಲವರು ಕಾದು ಪ್ರೀತಿಯನ್ನು ಪಡೆದುಕೊಂಡ ಉದಾಹರಣೆಯು ಇದೆ. ಈಗಿನ ಕಾಲದಲ್ಲಿ ಆಕರ್ಷಣೆ ಯಾವುದು ಪ್ರೀತಿ ಯಾವುದು ಎಂಬ ಡಿಫರೆನ್ಸ್ ತಿಳಿಯುವುದಿಲ್ಲ.

ಆದರೂ ಮನಸಾರೆ ಹುಟ್ಟಿದ ಪ್ರೀತಿಗೆ ಈ ಐದು ರಾಶಿಯವರಿಗೆ ಮೊದಲ ಪ್ರೀತಿ ಕೊನೆಯವರೆಗೂ ಇರುವುದು ಅನುಮಾನವಂತೆ. ಅದರಲ್ಲೂ ಒಂದು ರಾಶಿಯ ಜನ ಸೀಕ್ರೆಟ್ ಮೆಂಟೇನ್ ಮಾಡುವುದರಲ್ಲಿಯೇ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೊಂದು ರಾಶಿಯವರು ಹೆಸರು ಯಶಸ್ಸಿನ ಬೆನ್ನುಬಿದ್ದು ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.

ಮೊದಲನೆಯದವರು, ಇವರ ಮೈಂಡ್ ಡಿಸ್ಟರ್ಬ್ ಆಗಿದ್ದರೆ ದುರ್ವಾಸನ ಅಪರವತಾರ. ಕಾರಣದಿಂದ ಕೆಲವೊಂದು ವಿಚಾರದಲ್ಲಿ ಎಡವುತ್ತಾರೆ. ಸಿಟ್ಟನ್ನು ಪ್ರದರ್ಶಿಸಿದಾಗ ಅವರ ದೂರ ಹೋಗುತ್ತಾರೆ. ಇವರೇ ಧನು ರಾಶಿಯವರು. ಇವರದ್ದು ಸಾಹಸ ಗುಣ. ಯಾವಾಗಲೂ ಹೊಸ ಜಾಗಕ್ಕೆ ಹೋಗಬೇಕು. ಹೊಸದನ್ನು ಪ್ರಯೋಗಿಸುವ ಆಸೆ ಹೆಚ್ಚು ಇದೇ ಕಾರಣದಿಂದ ತಮ್ಮ ಸಂಗಾತಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ.

ಮೊದಲ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದರೆ ಅದನ್ನು ಹೇಗೆ ಮುಂದುವರಿಸಬೇಕು ಹೇಗೆ ವರ್ತಿಸಬೇಕು ಅದನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದು ಸವಾಲಿನ ವಿಷಯ. ಕೆಲವೊಮ್ಮೆ ಕಾಲ್ ಮಾಡಿದಾಗಲೂ ರಿಸೀವ್ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಇದಕ್ಕೆ ಕಾರಣ ಒಂದು ಜಾಬ್ ಹಾಗೂ ಪರ್ಸನಲ್ ಡೆವಲಪ್ಮೆಂಟ್ ಆದರೆ, ಇನ್ನೊಂದು ಇವರ ದ್ವಂದ್ವ ಸ್ವಭಾವ.

ಕೆಲವೊಮ್ಮೆ ಪ್ರೀತಿ ಅಥವಾ ಮನೆ ಎಂಬ ಮಾತು ಬಂದಾಗ ಇವರು ಪ್ರೀತಿಯನ್ನು ಬಿಟ್ಟು ಕೊಡುತ್ತಾರೆ ಎನ್ನಬಹುದು. ಇವರಿಗೆ ಫಸ್ಟ್ ಲವ್ ಎನ್ನುವುದು ಮರೀಚಿಕೆ.ಎರಡನೆಯದು ಕನ್ಯಾ ರಾಶಿ. ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಆದರೆ ಜನರದ್ದು ಫಸ್ಟ್ ಲವ್ ಫೇಲ್ಯೂರ್ ಆದವರು ಎನ್ನಬಹುದು. ಈ ರಾಶಿಯವರು ಬೆಸ್ಟ್ ಪಾರ್ಟ್ನರ್ ಆಗುತ್ತಾರೆ.

ಆದರೆ ಫಸ್ಟ್ ಲವ್ ವಿಚಾರದಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಕಾರಣವೆಂದರೆ ಇವರಿಗೆ ಎಲ್ಲ ವಿಷಯಕ್ಕೂ ಕ್ಲಾರಿಫಿಕೇಷನ್ ಕೊಡಬೇಕು ಎನ್ನುತ್ತಾರೆ. ಸಣ್ಣ ಪುಟ್ಟ ವಿಚಾರವನ್ನು ಡಿಟೇಲಾಗಿ ಅನಲೈಸ್ ಮಾಡುತ್ತಾರೆ. ಯಾವುದೇ ವಿಚಾರ ಶುರು ಮಾಡಿದರು ಅದರಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಮತ್ತೆ ಕೆಲವರಿಗೆ ತಾವು ಚೆನ್ನಾಗಿದ್ದೇವೆ ಎಂಬ ಭಾವನೆ ಹೆಚ್ಚಾಗಿ ಇರುತ್ತದೆ.

ತಮ್ಮ ಸಂಗಾತಿಯ ವಿಷಯಕ್ಕೆ ಬಂದರೆ, ಪೋಸಸಿವ್ನೆಸ್ ಹೆಚ್ಚಾಗಿಯೇ ಇರುತ್ತದೆ. ಅವರ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಾರೆ. ತಾವು ಹೇಳಿದ್ದನ್ನು ಕೇಳುತ್ತಾರೆಯೋ ಇಲ್ಲವೋ, ಇವರನ್ನು ಕಂಟ್ರೋಲ್ ಮಾಡಬೇಕು ಎಂದು ಯೋಚಿಸುತ್ತಾರೆ. ಇದು ಪದೇ ಪದೇ ರಿಪೀಟ್ ಆದಾಗ ಬ್ರೇಕ್ ಅಪ್ ಹಂತವನ್ನು ತಲುಪುತ್ತದೆ.
ಮೂರನೇ ರಾಶಿ ಕುಂಭ ರಾಶಿ.

ಹೆಚ್ಚಿನ ಜನರಿಗೆ ಪ್ರೀತಿ ಪ್ರೇಮ ಹಣಕಾಸು ವಿದ್ಯೆ ಈ ವಿಚಾರವಾಗಿ ಸಂಘರ್ಷ ಇರುತ್ತದೆ. ಈ ಕುಂಭ ರಾಶಿಯವರಿಗೆ ಯಾವುದು ಈಸಿಯಾಗಿ ಸಿಗುವುದಿಲ್ಲ. ಅಪ್ಪ ನೆಟ್ಟ ಆಲದ ಮರ ಎಂದು ಜೋತು ಬೀಳುವವರಿದ್ದರೆ ಅದು ಕೂಡ ಹೆಚ್ಚಿನ ಸಲ ಸುಳ್ಳಾಗುವುದು. ಫಸ್ಟ್ ಲವ್ ವಿಚಾರವಾಗಿ ನೀವು ಸ್ವತಂತ್ರವಾಗಿರಲು ಬಯಸುತ್ತೀರಾ. ನೀವು ವೈಯಕ್ತಿಕ ವಿಚಾರವಾಗಿ ಮೂಗು ತೂರಿಸುವುದಿಲ್ಲ.

ಯಾರೇ ಆಗಲಿ ಅವರ ಪರ್ಸನಲ್ ವಿಚಾರಗಳು ಅವರಿಗೆ ಮುಖ್ಯ ಎನ್ನುತ್ತೀರಾ. ನಿಮ್ಮಲ್ಲಿರುವ ಈ ಗುಣವನ್ನು ಮೆಚ್ಚಲೇಬೇಕು. ಆದರೆ ನಿಮ್ಮ ಪ್ರೀತಿಯ ವಿಚಾರದಲ್ಲಿ ಎಲ್ಲ ಗುಣ ಉಲ್ಟಾ ಹೊಡೆಯುವ ಸಾಧ್ಯತೆ ಹೆಚ್ಚು ಏಕೆಂದರೆ ನಿಮ್ಮ ವೈಯಕ್ತಿಕ ವಿಚಾರಕ್ಕೆ ಯಾರಾದರೂ ತಲೆ ಹಾಕಿದರೆ ನೀವು ಬಯ್ಯುತ್ತಿರ. ನಿಮ್ಮ ಫಸ್ಟ್ ಲವ್ ವಿಚಾರದಲ್ಲಿ ಎಲ್ಲದಕ್ಕೂ ಇನ್ವಾಲ್ ಆಗುತ್ತೀರಾ.

ಕೆಲವೊಬ್ಬರು ನಿಮ್ಮ ಫಸ್ಟ್ ಲವ್ ನ ಹ್ಯಾಬಿಟ್, ಮೊದಲಿಂದಲೂ ಬಂದಿರುವ ಆಚರಣೆ ಗುಣ ಇವೆಲ್ಲವನ್ನೂ ವಿರೋಧಿಸುವ ಸಾಧ್ಯತೆ ಇರುತ್ತದೆ. ನಿಮಗೆ ಇಷ್ಟವಿಲ್ಲದೆ ಸಣ್ಣ ಕೆಲಸ ಮಾಡಿದರು ಸಿಟ್ಟು ಬರುತ್ತದೆ. ಇದು ಅತಿರಕವಾದರೆ ದೊಡ್ಡ ಕಂದಕ ನಿರ್ಮಾಣವಾಗುತ್ತದೆ. ಆದ್ದರಿಂದ ನೀವು ಕಂಟ್ರೋಲಿಂಗ್ ನೇಚರನ್ನು ಬಿಡಬೇಕು. ಮುಂದುವರೆದರೆ ನೀವು ಕೂಡ ಫಸ್ಟ್ ಲವ್ ಅನ್ನು ಕಳೆದುಕೊಳ್ಳುತ್ತೀರ.

ಈಗ ಹೇಳುವ ರಾಶಿಯ ಜನ ಗುಟ್ಟುಮಾಡಿ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಅವರೇ ವೃಶ್ಚಿಕ ರಾಶಿಯವರು. ಸ್ವಲ್ಪ ಜಾಸ್ತಿನೇ ಭಾವುಕರು. ಅಕಸ್ಮಾತ್ ತಮ್ಮಲ್ಲಿರುವ ನಕಾರಾತ್ಮಕ ಗುಣಗಳನ್ನು ನೋಡಿ ಮೊದಲ ಪ್ರೀತಿ ದೂರವಾದರೆ, ಅಥವಾ ತಮ್ಮ ವೀಕ್ನೆಸ್ ಗೊತ್ತಾಗಿ ಬಿಟ್ಟು ಹೋದರೆ, ಸಣ್ಣ ಪುಟ್ಟ ವಿಚಾರಗಳಿಗೆ ಸುಳ್ಳು ಹೇಳಿದ್ದು ಗೊತ್ತಾಗಿ ದೊಡ್ಡ ರಾಮಾಯಣವಾಗಿ ಬಿಟ್ಟರೆ ಎಂಬ ಭಯಕೆ ಗುಟ್ಟು ಮಾಡುತ್ತಾರೆ.

ಅವರು ಬ್ಲಾಕ್ ಮೇಲ್ ಮಾಡಿ ಅಥವಾ ಅಡ್ಡದಾರಿ ಹಿಡಿದು ತಮ್ಮ ಮೊದಲನೆ ಪ್ರೀತಿಯನ್ನು ಸಂಪಾದಿಸಿರಬಹುದು. ತಳಕು ಬಳಕು ಪ್ರದರ್ಶನ ಮಾಡುವವರು ಇದ್ದಾರೆ. ಹೀಗೆ ಮಾಡಿದರೆ ಅದರ ವ್ಯಾಲಿಡಿಟಿ ಕಡಿಮೆ. ಯಶಸ್ವಿಯಾಗುವುದಿಲ್ಲ. ಈ ರಾಶಿಯವರು ಸ್ವಲ್ಪ ಜಾಸ್ತಿನೇ ಪ್ರಶ್ನೆ ಮಾಡುತ್ತಾರೆ. ಪದೇ ಪದೇ ಕಣ್ಣೀರು ಹಾಕುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ.

ಈ ಎಲ್ಲ ಕಾರಣದಿಂದ ಅವರ ಫಸ್ಟ್ ಲವ್ ಬ್ರೇಕ್ ಅಪ್ ಆಗುವ ಸಾಧ್ಯತೆ ಇರುತ್ತದೆ. ಐದನೇ ರಾಶಿಯವರು ಹಣ ಸಕ್ಸಸ್ ಹಿಂದೆ ಹೋಗಿ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಅವರು ಮಕರ ರಾಶಿಯವರು. ಶ್ರಮಿಕರ ಪರ ಇವರು. ಶನಿ ರಾಶಿಯಾಧಿಪತಿ. ದುಡಿಯಬೇಕು ಗಳಿಸಬೇಕು ಹೆಸರು ಮಾಡಬೇಕು ಸಾಧನೆ ಮಾಡಬೇಕು ಎನ್ನುವ ಛಲ. ಆಕಾಂಕ್ಷೆ ಜಾಸ್ತಿ.

ಗುರಿ ಸಾಧನೆ ಮೇಲೆ ಗಮನ ಹೆಚ್ಚು. ಪ್ರೀತಿ ಪ್ರೇಮ ಇದ್ದರೂ ಸಕ್ಸಸ್ ಹೆಸರು ಎಂಬ ತಿರುಗಾಟ ಹೆಚ್ಚು. ಮೊದಲ ಪ್ರೀತಿಯನ್ನು ಕಾಳಜಿ ಮಾಡುವುದು, ಗುಣಾತ್ಮಕ ಸಮಯವನ್ನು ವಿನೋಗಿಸುವುದು ಕಷ್ಟ ಸಾಧ್ಯ. ಇವರಲ್ಲಿ ಎಮೋಷನ್ಸ್ ಕಡಿಮೆನೇ. ಪ್ರೀತಿ ತೋರಿಸಲು ಕಂಜೂಸ್ ತನ ಮಾಡುತ್ತಾರೆ. ನಿಜವಾದ ಪ್ರೀತಿ ಇದ್ದರೂ ಅದನ್ನು ವ್ಯಕ್ತಪಡಿಸಲು ಎಡಗುತ್ತಾರೆ. ಯಾವ ರೀತಿ ವ್ಯಕ್ತಪಡಿಸಬೇಕು. ಯಾವ ರೀತಿ ಪ್ರೀತಿ ತೋರಿಸಬೇಕು ಎಂಬುದು ಹೆಚ್ಚಿನ ಜನಕ್ಕೆ ಗೊತ್ತಿಲ್ಲದ ಕಾರಣ ಇವರಿಗೆ ಮೊದಲ ಪ್ರೀತಿ ಮರೀಚಿಕೆ.

Leave A Reply

Your email address will not be published.