ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ 5 ವರ್ಷದ ಗುರುವಿನ ಫಲ ಹೇಗಿರುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ . ಗುರು ಕತ್ತಲೆಯನ್ನು ಓಡಿಸುವವನಾಗಿ ಇರುತ್ತಾನೆ .ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತಾನೆ .ಸಂಸ್ಕೃತದಲ್ಲಿ ‘ಗು ‘ ಎಂದರೆ ಅಂಧಕಾರ ಮತ್ತು “ರು’ ‘ ಎಂದರೆ ಬೆಳಕು .ಸಾವಿರಾರು ಸೂರ್ಯ ಚಂದ್ರ ರಿಂದಲೂ ಆಗದೇ ಇರುವ ಅಜ್ಞಾನವನ್ನು ದೂರ ಮಾಡುವ ಕೆಲಸ ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ಸಾಧ್ಯ .
ಗುರು ಇಲ್ಲದೇ ಯಾವುದು ಇಲ್ಲ . ಜಾತಕದಲ್ಲಿ ಎಷ್ಟೇ ಶ್ರೇಷ್ಠವಾದ ಯೋಗವಿದ್ದರೂ ಗುರು ಇಲ್ಲದೆ ಅಪೂರ್ಣ ವೆನಿಸುತ್ತದೆ .ಅದಕ್ಕೆ ಗುರು ಹಿರಿಯರು ಹೇಳಿರುವ ಹಾಗೆ “ನಾ ಗುರು ರಾಧಿಕಂ ತತ್ವಂ ನಾ ಗುರು ರಾಧಿಕಂ ತಪಃ ತತ್ವ ಜ್ಞಾನ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ ” ಅಂದರೆ ಗುರುವಿಗಿಂತ ಯಾವ ತತ್ವವು ಶ್ರೇಷ್ಠವಲ್ಲ . ಗುರುವಿಗಿಂತ ಕಠಿಣತೆ ಇಲ್ಲ .
ಗುರು ಕಲಿಸಿದ ಜ್ಞಾನಕ್ಕಿಂತ ಮೀರಿದ್ದು ಏನು ಇರುವುದಿಲ್ಲ .ಅಂತಹ ಗುರುವಿಗೆ ನಮಸ್ಕಾರ ಎಂದು ಹೇಳಲಾಗುತ್ತದೆ . ಗರ್ಭದಲ್ಲೇ ಸತ್ತ ಮಗು ಜೀವಂತವಾಗಿರುವ ಮಗುವಿನ ಕಥೆಯನ್ನು ಮಹಾಭಾರತದಲ್ಲಿ ಕೇಳಿರುತ್ತೇವೆ .ಅದೇ ತರ ಬೃಹಸ್ಪತಿ ಕೂಡ ಗರ್ಭದಲ್ಲೇ ಸತ್ತು ಹುಟ್ಟಿರುತ್ತಾನೆ .ಪುತ್ರ ಕಾರಕ ವಾಣಿ ಕಾರಕ ಕೋಶಾಧ್ಯಕ್ಷ ಅನ್ನುವುದು ನಿಮಗೆ ತಿಳಿದಿರುತ್ತದೆ . ಅದರ ಜೊತೆಗೆ ಆಹಾರಗಳ ಕಾರಕ ಕೂಡ ಇದೆ .ಹೊಟ್ಟೆಗೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುವುದು ಕೂಡ ಗುರುವಿನಿಂದಲೇ .
ವೇದಿಕ ಜ್ಯೋತಿಷ್ಯದಲ್ಲಿ ಗುರುವೇ ಶ್ರೇಷ್ಠ ಎಂದು ಹೇಳಲಾಗಿದೆ . ತನಗೆ ತಾನೇ ಸಾಟಿ ಎಂದು ಹೇಳುವ ಈ ಗುರುವಿನಿಂದ ಕನ್ಯಾ ರಾಶಿಯವರಿಗೆ ಐದು ವರ್ಷಗಳಲ್ಲಿ ಯಾವ ಯಾವ ಪ್ರಯೋಜನಗಳು ಇವೆ ಎಂಬುದನ್ನು ಯಾವಾಗ ಮೇಲುಗೈ ಮತ್ತು ಯಾವಾಗ ಸೋಲುವ ಭಯ ಮತ್ತು ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಒಳ್ಳೆಯ ಸಮಯ ಯಾವಾಗ ಎಂಬುದನ್ನು ನಾವು ಈ ಲೇಖನದಲ್ಲಿ ನೋಡಬಹುದು . ಏಪ್ರಿಲ್ 13 2022 ಕ್ಕೆ ಗುರು ಮೀನ ರಾಶಿಗೆ ಬಂದಿರುತ್ತಾನೆ . ಇಲ್ಲಿ ಏಪ್ರಿಲ್ 22 2023ರ ವರೆಗೆ ಇರುತ್ತಾನೆ .
ಗುರುವಿನ ದೃಷ್ಟಿಯಿಂದ ಹೇಳುವುದಾದರೆ ಈಗ ನಡೆಯುತ್ತಿರುವ ಸಮಯ ನಿಮಗೆ ಅತ್ಯಂತ ಶುಭ ಎಂದು ಹೇಳಲಾಗುತ್ತದೆ .ಕಂಕಣ ಭಾಗ್ಯ ಕೂಡಿ ಬರುವುದಕ್ಕೆ ಗುರುವಿನ ಪಾತ್ರ ಅತ್ಯಂತ ಮುಖ್ಯ .ಗುರುಬಲ ಇದ್ದರೆ ಮಾತುಕತೆ ಮುಂದುವರೆಯುತ್ತದೆ . ಮದುವೆಯಾಗದೆ ಇರುವವರಿಗೆ ಮದುವೆ ಕೂಡಿ ಬರುತ್ತದೆ . ನಿಂತು ಹೋಗಿರುವ ಮದುವೆಗಳಿಗೆ ಕೂಡ ಈ ಸಮಯ ತುಂಬಾ ಉಪಯುಕ್ತ .ಅಡ್ಡಿ ಆತಂಕಗಳು ಇರುವವರೆಗೂ ಕೂಡ ಗುರು ಈ ಸಮಯದಲ್ಲಿ ತೀರ್ಪು ನೀಡುತ್ತಾನೆ .
ಮನೆ ಕಟ್ಟುವವರು ಅರ್ಧಕ್ಕೆ ನಿಂತು ಹೋಗಿದ್ದರೆ ಈ ಸಮಯದಲ್ಲಿ ಮುಂದುವರೆಸಲು ತುಂಬಾ ಪ್ರಯೋಜನಕಾರಿಯಾಗಿದೆ .ಮನೆಯಲ್ಲಿ ದೇವತಾ ಕಾರ್ಯ ಗೃಹ ಪ್ರವೇಶ ಮಾಡಲು ಇದು ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ .ಶುಭ ಕಾರ್ಯಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳಲಾಗುತ್ತದೆ . ಕೆಲವರು ಪಂಚಮ ಶನಿಯಿಂದ ತಾಳ್ಮೆ ಕಳೆದುಕೊಂಡಿರುತ್ತಾರೆ . ಗುರು ಇಲ್ಲಿ ತಾಳಿದವನು ಬಾಳಿಯಾನು ಎಂಬ ಪಾಠವನ್ನು ಹೇಳಿ ಕೊಡುತ್ತಾನೆ. ಶನಿ ಕಾಟದಿಂದ ಬೇಸತ್ತು ಹೋದ ನಿಮಗೆ ಗುರುವಿನಿಂದ ಭರ್ಜರಿ ಬಹುಮಾನ ಸಿಗುತ್ತದೆ. ಧನ ಸಂಪತ್ತು ಬರುವ ಸೂಚನೆ ತೋರುತ್ತಾನೆ .
ಹಣ ಬರುವ ಮೂಲಗಳು ಹೆಚ್ಚಾಗುತ್ತಾ ಹೋಗುತ್ತದೆ . ಸಾಲ ಕೊಟ್ಟಿರುವುದು ವಾಪಸ್ಸು ಬರುವ ಸಾಧ್ಯತೆ ಕೂಡ ಇದೆ. ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚಿನ ಬರುವ ಸಾಧ್ಯತೆ ಇರುತ್ತದೆ . ಉದ್ಯೋಗದಲ್ಲಿ ಸಮಸ್ಯೆಗಳು ಇದ್ದರೆ ಅದಕ್ಕೆ ಪರಿಹಾರ ಕೂಡ ಇವರಿಗೆ ಸಿಗುತ್ತದೆ. ದೊಡ್ಡ ದೊಡ್ಡ ಹುದ್ದೆಗಳು ಕೂಡ ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಇವರು ಪ್ರಾಮಾಣಿಕತೆಯನ್ನು ತೋರುತ್ತಾರೆ. ಕೀರ್ತಿ ಯಶಸ್ಸು ಗೌರವ ನಿಮ್ಮನ್ನು ಹುಡುಕಿಕೊಂಡು ಅದಾಗಿಯೇ ಬರುತ್ತದೆ. ಅಥವಾ ಬಹುಮಾನಗಳು ಬರುವ ಸಾಧ್ಯತೆ ಇರುತ್ತದೆ .
ತಂದೆ- ತಾಯಿ ಅಣ್ಣ ತಮ್ಮ ಸ್ನೇಹಿತರ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಾರೆ. ಮನೆಯಲ್ಲಿ ಶಾಂತಿ ನೆಮ್ಮದಿ ಆರೋಗ್ಯದ ಸಮಸ್ಯೆಗಳು ಕೂಡ ಬರುವುದಿಲ್ಲ . ಇದೆಲ್ಲಾ ಇವರಿಗೆ ಖುಷಿಯ ವಿಚಾರವೇ ಆಗಿರುತ್ತದೆ. ಏಪ್ರಿಲ್ 22 2023 ಕ್ಕೆ ಗುರು ಅಷ್ಟಮ ಸ್ಥಾನವಾದ ಮೇಷ ರಾಶಿಗೆ ಹೋಗುತ್ತಾನೆ . ಅಂದರೆ ಮೇ 1 2024ರ ವರೆಗೆ ಸ್ವಲ್ಪ ಹುಷಾರಾಗಿ ಇರಬೇಕು .ಹಣಕಾಸಿನಲ್ಲಿ ಲೆಕ್ಕಾಚಾರ ಇಡಬೇಕಾಗುತ್ತದೆ . ನೀವು ಕಂಪನಿಗಳನ್ನು ನಡೆಸುತ್ತಿದ್ದರೆ ಅದರಲ್ಲಿ ಗೋಲ್ಮಾಲ್ ಆಗಿ ನಿಮ್ಮ ತಲೆಗೆ ಬರುವ ಸಾಧ್ಯತೆ ಇರುತ್ತದೆ .
ನೀವು ಸ್ನೇಹಿತರನ್ನು ನಂಬುವುದರಿಂದ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ .ಈ ಸಮಯ ನಿಮಗೆ ಅದೃಷ್ಟ ದಾಯಕವಾಗಿ ಇರುವುದಿಲ್ಲ .ಬೇಡದೆ ಇರುವ ಸುತ್ತಾಟಗಳು ಉಂಟಾಗುತ್ತದೆ .ಮನಸ್ಸಿಗೆ ನೋವಾಗುವ ಘಟನೆಗಳು ಕೂಡ ನಡೆಯುತ್ತದೆ .ಇದು ಎಲ್ಲರಿಗೂ ಅನ್ವಯಿಸುವುದಿಲ್ಲ . ಸದಾ ಗುರು ಪೂಜೆ ಭಜನೆ ಮಾಡುವವರೆಗೆ ಸ್ವಲ್ಪ ನೀಚ ಸ್ಥಾನದಲ್ಲಿದ್ದರೂ ಗುರು ಒಳ್ಳೆಯದನ್ನು ಮಾಡುತ್ತದೆ . ಆದರೆ ಕೆಲವರಿಗೆ ಈ ರೀತಿ ಅನುಭವ ಹೆಚ್ಚಾಗಿ ಆಗುತ್ತದೆ .
ಇನ್ನು ಕೆಲವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಜೀವನ ನಡೆಸುತ್ತಾರೆ . ಬೇವು ಒಂದೇ ಇದ್ದರೂ ಜೀವನ ಚೆನ್ನಾಗಿರುವುದಿಲ್ಲ . ಬೆಲ್ಲ ಒಂದೇ ಇದ್ದರು ಆರೋಗ್ಯ ಚೆನ್ನಾಗಿರುವುದಿಲ್ಲ .ಎರಡು ಇದ್ದಾಗ ಮಾತ್ರ ಜೀವನ ಸಾಧ್ಯ .ಗುರು ಬೃಹಸ್ಪತಿ ಅನ್ನು ಮತ್ತು ಗುರುಗಳ ಸ್ಥಾನದಲ್ಲಿ ಇರುವವರನ್ನು ರಾಯರ ಅಥವಾ ರಾಘವೇಂದ್ರ ಸ್ವಾಮಿಯನ್ನು ಪೂಜಿಸಬೇಕು .
“ದೇವ ಮಂತ್ರಿ ವಿಶಾಲಾಕ್ಷ ಸದಾ ಲೋಕ ಹಿತೇ ರತಹ ಅನೇಕ ಶಿಷ್ಯ ಸಂಪೂರ್ಣ ಪೀಡಾಂ ಹರತು ಮೇ ಗುರು ಹು” ಈ ಮಂತ್ರವನ್ನು ಕಷ್ಟ ಕಾಲದಲ್ಲಿ 108 ಬಾರಿ ಹೇಳಬೇಕಾಗುತ್ತದೆ .ಪೂರ್ತಿಯಾಗಿ ಕಷ್ಟ ದೂರವಾಗಿದೆ ಇದ್ದರೂ ನಮ್ಮ ನೆಮ್ಮದಿ ಗೋಸ್ಕರ ಅಥವಾ ಪರಿಹಾರ ಮಾರ್ಗ ಸಿಗುತ್ತದೆ. ಮತ್ತೊಂದು ಒಳ್ಳೆಯದಾಗುವುದು ಸಮಯ ಬರುತ್ತದೆ ಎಂದು ಹೇಳಬಹುದು . ಮೇ 1. 2024 ರಿಂದ ಜನವರಿ 25. 2027ರ ವರೆಗೆ ಅಂದರೆ ಮಧ್ಯದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಮನಸ್ತಾಪಗಳು ಉಂಟಾಗಬಹುದು .
ಗುರು ಇದನ್ನು ದೊಡ್ಡದಾಗಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಬಹುದು . ಗುರು ಅಷ್ಟಮದಲ್ಲಿ ಇರುವುದರಿಂದ ಯಾವುದು ತಪ್ಪು ಯಾವುದು ಸರಿ ಏನು ಮಾಡಿದರೆ ಒಳ್ಳೆಯದು ಜೀವನದಲ್ಲಿ ಮುಂದೆ ಹೋಗುವುದಕ್ಕೆ ಗುರು ಮಾರ್ಗದರ್ಶನವನ್ನು ನೀಡುತ್ತಾನೆ . ಈ ರಾಶಿಯವರು ಏನು ಮಾಡದೇ ಇದ್ದರೂ ಪರವಾಗಿಲ್ಲ ತೊಂದರೆ ಕೊಡಬಾರದು ಎಂಬ ನಿಯಮ ಹೊಂದಿರುತ್ತಾರೆ. ಯಾವಾಗಲೂ ಇವರಿಗೆ ಧನಾತ್ಮಕ ಚಿಂತನೆಗಳು ಇರುತ್ತದೆ .
ಇವರಿಗೆ ಅಗತ್ಯಕ್ಕೆ ತಕ್ಕಂತೆ ಮಾತನಾಡುವ ಗುಣ ಗುರುವಿನಿಂದ ಬಂದಿರುತ್ತದೆ .ಆಧ್ಯಾತ್ಮಿಕತೆ ದೇವರ ಮೇಲೆ ಭಕ್ತಿ ತೋರಿಸಲು ಶುರುಮಾಡುತ್ತಾರೆ . ಗುರು ಭಕ್ತಿ ಗುರುವಿನ ಸೇವೆಯನ್ನು ಮಾಡಲು ಹೆಚ್ಚಾಗಿ ಮನಸ್ಸು ಬಯಸುತ್ತದೆ . ಶಿಕ್ಷಣದ ವಿಚಾರದಲ್ಲಿ ಧನಾತ್ಮಕ ಶಕ್ತಿಯನ್ನು ಕಾಣಬಹುದು .ಇವರು ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡುವುದರಿಂದ ಆರೋಗ್ಯ ಕೆಡದೆ ಚೆನ್ನಾಗಿರುತ್ತದೆ . ಶಾಲಾ ಕಾಲೇಜುಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಾರೆ .
ಯಾರೇ ಕಷ್ಟದಲ್ಲಿ ಇದ್ದರೂ ಬೇಸರವನ್ನು ಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ .ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಈ ರಾಶಿಯವರಿಗೆ ಇರುತ್ತದೆ . ಗಟ್ಟಿಯಾಗಿ ನಿಂತು ಛಲವನ್ನು ಎದುರಿಸುವ ಗುಣವನ್ನು ಕಾಣಬಹುದು .ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ . ಮಾಡುವ ಕೆಲಸದಲ್ಲಿ ಅಡಚಣೆಗಳು ಬರುವುದು ಕಡಿಮೆ ಇರುತ್ತದೆ .ಇವರಿಗೆ ಗುರುಬಲ ಹೆಚ್ಚಾಗಿರುವುದರಿಂದ ಯಾವುದೇ ಶಾಪಗಳು ಕೂಡ ಇವರಿಗೆ ತಟ್ಟುವುದಿಲ್ಲ .ಸಂತೋಷ ಧೈರ್ಯ ನಗುವಿನ ಜೊತೆಗೆ ಸಹ ಲವಲವಿಕೆ ಇಂದ ದಿನ ಕಳೆಯಲು ಬಯಸುತ್ತಾರೆ .ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣಬಹುದು ಎಂದು ಹೇಳಲಾಗಿದೆ.