ಮೇಷ ರಾಶಿಯವರ ಆರನೇ ತಿಂಗಳಿನ ಜೂನ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಮೇಷ ರಾಶಿಯವರ ಆರನೇ ತಿಂಗಳಿನ ಜೂನ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೇಷ ರಾಶಿಯ ಲಾಂಛನವು ಮೇಕೆ ಆಗಿರುತ್ತದೆ. ರಾಶ್ಯಾಧಿಪತಿ ಕುಜನಾಗಿರುತ್ತಾನೆ. ಅಗ್ನಿ ತತ್ವದ ರಾಶಿ ಆಗಿರುತ್ತದೆ. ಮೇಷ ರಾಶಿಯ ‌ ದಿಕ್ಕು ಪೂರ್ವವಾದರೆ ಇದು ಪುರುಷ ಲಿಂಗದರಾಶಿಯಾಗಿರುತ್ತದೆ. ಕ್ಷತ್ರಿಯ ವರ್ಣದ ರಾಶಿ ಜೊತೆಗೆ ರಾಶಿಯ ರತ್ನವು ಹವಳವಾಗಿರುತ್ತದೆ. ಮೇಷ ರಾಶಿಗೆ ಬಿಳಿ ಮತ್ತು ಕೆಂಪು ಅದೃಷ್ಟಬಣ್ಣವಾಗಿರುತ್ತದೆ. ಭಾನುವಾರ ಮತ್ತು ಮಂಗಳವಾರ ಮೇಷ ರಾಶಿಯವರಿಗೆ ಅದೃಷ್ಟದ ದಿನಗಳಾಗಿರುತ್ತದೆ .

ಮತ್ತು ಅದೃಷ್ಟದ ದೇವತೆಗಳು ಮಹಾಶಿವ ಮತ್ತು ಆಂಜನೇಯ ಸ್ವಾಮಿ ಆಗಿರುತ್ತದೆ. ಅದೃಷ್ಟದ ಸಂಖ್ಯೆ ಆರು ಮತ್ತು ಒಂಬತ್ತು ಆಗಿರುತ್ತದೆ. ಅದೃಷ್ಟದ ದಿನಾಂಕಗಳು 9, 8, 27 ಆಗಿರುತ್ತದೆ . ಮಿತ್ರ ರಾಶಿಗಳು ಸಿಂಹ ಧನು ತುಲಾ ರಾಶಿ ಆಗಿರುತ್ತದೆ. ಶತ್ರು ರಾಶಿಯು ಮಿಥುನ ಮತ್ತು ಕನ್ಯಾ ರಾಶಿ ಆಗಿರುತ್ತದೆ. ಮೇಷ ರಾಶಿಯವರು ತುಂಬಾ ಧೈರ್ಯವಂತರಾಗಿರುತ್ತಾರೆ . ಎಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಅದನ್ನು ಧೈರ್ಯವಾಗಿ ಎದುರಿಸುವಂತಹ ಶಕ್ತಿವಂತರು ಮತ್ತು ಬುದ್ಧಿವಂತರಾಗಿರುತ್ತಾರೆ .

ಮತ್ತು ಕೋಪಿಷ್ಟರು ಸಹ ಆಗಿರುತ್ತಾರೆ. ಎಂತಹ ತುರ್ತು ಪರಿಸ್ಥಿತಿಯನ್ನಾದರೂ ಎದುರಿಸುವ ಶಕ್ತಿ ಸಾಮರ್ಥ್ಯ ಮೇಷ ರಾಶಿಯವರಿಗೆ ಇರುತ್ತದೆ. ಈ ತಿಂಗಳಿನಲ್ಲಿ ಕೆಲಸ ಕಾರ್ಯಗಳು ವೇಗ ಗತಿಯಲ್ಲಿ ನಡೆಯುತ್ತವೆ. ಮಾಡುವ ಕೆಲಸ ಕಾರ್ಯದಲ್ಲಿ ಅಭಿವೃದ್ಧಿಯು ಕಾಣುತ್ತದೆ. ಜೀವನದಲ್ಲಿ ಸೋಮಾರಿತನವು ಕಡಿಮೆಯಾಗಿ ಉತ್ಸಾಹ ಅಭಿವೃದ್ಧಿ ಉಂಟಾಗುತ್ತದೆ. ಮಾಡುವ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ ಸಮಯಕ್ಕೆ ಹೆಚ್ಚು ಪ್ರಾಧ್ಯಾಯನತೆ ಕೊಡುವಂತಾಗುತ್ತದೆ.

ಸದೃಢವಾದ ನಿರ್ಧಾರದಿಂದ ಕೆಲಸವನ್ನು ಮಾಡಿ ಒಲ್ಲದ ಮನಸ್ಸಿನಿಂದ ಕೆಲಸವನ್ನು ಮಾಡಲು ಹೋಗಬೇಡಿ. ಪ್ರಯತ್ನಗಳು ನಿರಂತರವಾಗಿರಲಿ. ಈ ತಿಂಗಳಿನಲ್ಲಿ ಸಣ್ಣ ಪ್ರಯತ್ನದಿಂದಲೂ ಸಹ ದೊಡ್ಡ ಫಲಗಳು ಸಿಗುವ ನಿರೀಕ್ಷೆ ಇದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಉಂಟಾಗುತ್ತದೆ. ಮನೆಕೊಳ್ಳುವ ವಿಚಾರದಲ್ಲಿ ಪ್ರಯತ್ನ ಮಾಡಿದರೆ ಯಶಸ್ವಿ ಹೊಂದಬಹುದು ಆದರೆ ನಿಮ್ಮ ಹಣಕಾಸಿನ ಸ್ಥಿತಿಗತಿಯ ಮೇಲೆ ನಿರ್ಧಾರಗಳನ್ನು ಕೈಗೊಳ್ಳಿ. ವಿದ್ಯಾರ್ಥಿಗಳು ಭಯವನ್ನು ದೂರ ಮಾಡಿಕೊಂಡರೆ ಒಳ್ಳೆಯ ಸಾಧನೆಯನ್ನು ಮಾಡಬಹುದು.

ವಿವಾಹದ ಮಾತುಕತೆಗಳು ನಡೆಯಲಿದೆ. ಮುಖ್ಯವಾದ ಕ್ಷೇತ್ರಗಳಿಗೆ ಭೇಟಿಕೊಡುವ ಸನ್ನಿವೇಶವು ಸಹ ಉಂಟಾಗಬಹುದು ಪ್ರವಾಸಗಳನ್ನು ಕೈಗೊಳ್ಳುವಿರಿ. ನೀವು ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರೆ ಗೊಂದಲದ ವಿಚಾರಗಳಿರುತ್ತದೆ. ಯಾರಂದಿಗೂ ಸಹ ಗೊಂದಲ ಏರ್ಪಡಿಸಿಕೊಳ್ಳಲು ಹೋಗಬೇಡಿ. ತಾಳ್ಮೆ ಮತ್ತು ಬುದ್ದಿವಂತಿಕೆ ಇಂದ ವ್ಯವಹಾರವನ್ನು ನಿರ್ವಹಿಸಿಕೊಳ್ಳಿ.

ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡರೆ ಅದ್ಭುತವಾದ ಲಾಭಗಳನ್ನು ಪಡೆಯುವಿರಿ. ಕಾನೂನಾತ್ಮಕ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಸರಿಪಡಿಸಿಕೊಳ್ಳಿ. ವಿದ್ಯಾರ್ಥಿಗಳು ಮನಸ್ಸನ್ನು ಕೆಡಿಸಿಕೊಂಡರೆ ಅಥವಾ ಬೇಸರ ಮಾಡಿಕೊಂಡರೆ ಇದರ ಪ್ರಭಾವ ಅವರ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅಧಿಕಾರ ವರ್ಗ

ಮತ್ತು ಕಾರ್ಮಿಕ ವರ್ಗದವರು ಸ್ಥಿರವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ಹೆಚ್ಚಿಗೆ ಕೆಲಸಗಳನ್ನು ಬದಲಾಯಿಸಲು ಹೋಗಬೇಡಿ . ವಿಶೇಷವಾಗಿ ಪೊಲೀಸ್ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಉಂಟಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಕ್ರಮೇಣ ಕ್ರಮೇಣವಾಗಿ ಲಾಭದಾಯಕ ಪರಿಸ್ಥಿತಿ ಉಂಟಾಗುತ್ತದೆ. ಷೇರು ವ್ಯಾಪಾರ ಮಾಡುವವರಿಗೆ ವಿದ್ಯುತ್ ಉಪಕರಣಗಳನ್ನು ರಿಪೇರಿ ಮಾಡುವವರಿಗೆ ಒಳ್ಳೆಯ ಲಾಭಗಳು ಸಿಗುತ್ತದೆ. ಮಹಿಳಾ ವೈದ್ಯರುಗಳಿಗೆ

ಅಥವಾ ಯಾವುದೇ ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಕೆಲವೊಂದು ವಿವಾದಗಳು ತಲೆದೋರುವಂತಹ ಪರಿಸ್ಥಿತಿ ಉಂಟಾಗುತ್ತದೆ. ಲೇವಾದೇವಿ ವ್ಯವಹಾರ ಮಾಡುವಾಗ ಬಹಳ ಎಚ್ಚರಿಕೆಯಿಂದ ಹಣಕಾಸಿನ ವ್ಯವಹಾರವನ್ನು ನಿರ್ವಹಿಸಬೇಕಾಗುತ್ತದೆ. ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಚ್ಚಿನ ಬೆಲೆ ಕೊಡಿ. ಕಲಾವಿದರುಗಳಿಗೆ ಅಂದರೆ ಚಿತ್ರೋದ್ಯಮದಲ್ಲಿರಲಿ ಅಥವಾ ಗ್ರಾಮೀಣ ಕಲಾವಿದರಿಗಳಿಗೂ ಸಹ ಒಳ್ಳೆಯ ಅವಕಾಶಗಳು ದೊರೆಯಲಿದೆ .

ರಾಜಕಾರಣಿಗಳಿಗೂ ಸಹ ಸ್ಪರ್ಧೆಯು ಹೆಚ್ಚಿಗೆ ಇರುತ್ತದೆ. ನಿಮ್ಮ ಸ್ಥಾನಮಾನದ ಮೇಲೆ ಬೇರೆಯವರು ಹೆಚ್ಚಿಗೆ ಕಣ್ಣಿಟ್ಟಿರುತ್ತಾರೆ. ಸರಿಯಾದ ರೀತಿಯಲ್ಲಿ ನಿಮ್ಮ ಪ್ರಯತ್ನವಿದ್ದರೆ ಹೆಚ್ಚಿಗೆ ಫಲ ದೊರಕುತ್ತದೆ. ಆರೋಗ್ಯದ ಮೇಲೆ ಹೆಚ್ಚಿಗೆ ನಿಗಾ ವಹಿಸಿ. ಈ ತಿಂಗಳಿನಲ್ಲಿ ನೀವು ಮಾಡಿಕೊಳ್ಳಬೇಕಾದಂತಹ ಪರಿಹಾರಗಳೆಂದರೆ ಶಿವ ಸಹಸ್ತ್ರ ನಾಮಪಠಣೆಯನ್ನು ಮಾಡಿಕೊಳ್ಳಿ. ನರಸಿಂಹಸ್ವಾಮಿ ಆರಾಧನೆಯನ್ನು ಮಾಡಿಕೊಳ್ಳಿ ಮತ್ತು ಕುಲದೇವರ ಪ್ರಾರ್ಥನೆಯನ್ನು ಸಹ ಮಾಡಿ. ಈ ಪರಿಹಾರಗಳನ್ನು ಮಾಡಿಕೊಂಡು ದೈವ ಕೃಪೆಗೆ ಪಾತ್ರರಾಗಿ.

Leave a Comment