ಮಿಥುನ ರಾಶಿ ಗುಣ ಲಕ್ಷಣಗಳು

0

ಮಿಥುನರಾಶಿಯ ಗುಣಲಕ್ಷಣಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮಿಥುನ ರಾಶಿಯವರು ತುಂಬಾ ಕ್ರಿಯೇಟಿವ್ ಆಗಿ ಇರುತ್ತಾರೆ. ಇವರ ತಲೆಯಲ್ಲಿ ಯಾವಾಗಲೂ ಹೊಸ ಹೊಸ ಯೋಜನೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ. ಇವರು ಹೊಸ ಹೊಸ ವಿಷಯಗಳಲ್ಲಿ ಅನುಭವ ಪಡೆಯಲು ಇಷ್ಟಪಡುತ್ತಾರೆ.

ಹೊಸ ಹೊಸ ಜನರನ್ನು ಭೇಟಿಯಾಗುವುದು, ಪ್ರಯಾಣ ಮಾಡುವುದು, ಹೊಸ ಆಹಾರ ಸೇವನೆ ಮಾಡುವುದು, ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಇಷ್ಟಪಡುತ್ತಾರೆ. ಒಟ್ಟಾರೆಯಾಗಿ ಎಲ್ಲಾ ವಿಷಯಗಳಲ್ಲಿ ಅನುಭವಗಳನ್ನು ಪಡೆಯಲು ಇಷ್ಟಪಡುತ್ತಾರೆ. ಯಾವುದೇ ವಿಷಯದಲ್ಲೂ ಒಂದರಲ್ಲೇ ತೃಪ್ತಿಪಡುವುದಿಲ್ಲ. ಒಂದಕ್ಕಿಂತ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಇವರ ಮಾತನಾಡುವ ಶೈಲಿಯೇ ಇವರಿಗೆ ಶಕ್ತಿ. ಇವರಿಗೆ ಯಾರ ಜೊತೆ ಯಾವ ರೀತಿ ಮಾತನಾಡಬೇಕೆನ್ನುವುದು ಗೊತ್ತಿರುತ್ತದೆ.

ಇವರ ಕಂಮ್ಯುನಿಕೇಷನ್ ಸ್ಕಿಲ್ ಚೆನ್ನಾಗಿರುವುದರಿಂದ ಮಾರ್ಕೆಟಿಂಗ್ ಇವರಿಗೆ ಚೆನ್ನಾಗಿ ಆಗಿ ಬರುತ್ತದೆ. ಮೀಡಿಯಾ, ಆರ್ಟಿಸ್ಟ್ , ಟ್ರಾವೆಲ್, ಬ್ಯಾಂಕಿಂಗ್, ಟೀಚಿಂಗ್, ಜ್ಯೋತಿಷ್ಯ ಕ್ಷೇತ್ರಗಳು ಆಗಿ ಬರುತ್ತವೆ. ಬ್ಯುಜಿನೆಸ್ ಕೂಡ ಚೆನ್ನಾಗಿ ಆಗಿ ಬರುತ್ತದೆ ಆದರೇ ನೀವು ತಾಳ್ಮೆಯಿಂದ ನಿಭಾಯಿಸಬೇಕಾಗುತ್ತದೆ. ಇವರಿಗೆ ಯಾವುದೇ ವಿಷಯ ಚೆನ್ನಾಗಿ ಗೊತ್ತಾದರೇ ಸಾಕು ಅದನ್ನು ಚೆನ್ನಾಗಿ ಮ್ಯಾನೇಜ್ ಮಾಡಿಕೊಂಡು ಹೋಗುತ್ತಾರೆ. ಇವರು ಯಾವುದೇ ವಿಷಯದಲ್ಲೂ ಎಮೋಷನ್ ಆಗಿ ಇರಲು ಇಷ್ಟಪಡುವುದಿಲ್ಲ.

ಎಲ್ಲಾ ವಿಷಯದಲ್ಲೂ ಬುದ್ಧಿಶಕ್ತಿಯನ್ನು ಉಪಯೋಗಿಸುತ್ತಾರೆ. ಆ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಇವರು ಖರ್ಚನ್ನು ಹೆಚ್ಚು ಮಾಡುತ್ತಾರೆ. ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದೇ ಇವರ ವಿಶೇಷತೆ. ಇವರ ರಾಶಿಯ ಅಧಿಪತಿ ಬುಧಗ್ರಹ ಆಗಿರುವುದರಿಂದ ಯಾವುದೇ ವಿಷಯದಲ್ಲೂ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ ಆದರೇ ಅನುಭವವನ್ನು ಪಡೆದುಕೊಳ್ಳುತ್ತಾರೆ. ಅನಾವಶ್ಯಕ ಖರ್ಚನ್ನು ಕಡಿಮೆ ಮಾಡಬೇಕಾಗುತ್ತದೆ. ಮಿಥನ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಚೆನ್ನಾಗಿದೆ. ನಿಮ್ಮ ನೆಗೆಟಿವ್ ಗುಣ ಏನೆಂದರೇ ಎರಡು ಮೂರು ಕೆಲಸವನ್ನು ಒಂದೇ ಸಲ ಪ್ರಾರಂಭ ಮಾಡುತ್ತೀರಿ ಇದರಿಂದ ಗೊಂದಲದಲ್ಲೇ ಇರುತ್ತೀರಿ ಆದ್ದರಿಂದ ಯಾವುದಾದರೂ ಒಂದು ಕೆಲಸವನ್ನು ತೆಗೆದುಕೊಂಡು ಗಮನಕೊಟ್ಟು ಸಂಪೂರ್ಣ ಮಾಡಿ.

Leave A Reply

Your email address will not be published.