ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ. ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಶುಕ್ರವಾರದ ದಿನ ನೀವು ಮನೆಯಲ್ಲಿ ಮಾಡಿದ್ದೇ ಆದರೇ ಜೀವನದಲ್ಲಿ ಏಳಿಗೆ ಅನ್ನುವುದು ಆಗುವುದಿಲ್ಲ. ಎಲ್ಲಾ ರೀತಿಯಾದ ಸಂಕಷ್ಟಗಳು ಎದುರಾಗುತ್ತದೆ.

ಆದರೇ ಈ ತಪ್ಪುಗಳು ಯಾವುದು ಯಾವ ರೀತಿಯ ತಪ್ಪುಗಳನ್ನ ಮಾಡಬಾರದು. ಶುಕ್ರವಾರದ ದಿನ ಲಕ್ಷ್ಮಿದೇವಿಯ ಉಪಾಸನೆ ಮಾಡಿದರೆ ಮನೆಯಲ್ಲಿ ಧನ ಧಾನ್ಯ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ ಆದರೇ ಅದರ ಜೊತೆಗೆ ಇಂತಹ ತಪ್ಪುಗಳನ್ನು ಮಾಡಬಾರದು.

ಮನೆಯ ಹೆಂಗಸರು ಮನೆಯಲ್ಲಿ ಬಳಸುವ ಅರಿಶಿನ ಅಥವಾ ಉಪ್ಪು ಶುಕ್ರವಾರದ ದಿನ ಖಾಲಿಯಾದರೆ, ಖಾಲಿಯಾಯಿತು ಎಂದು ನಿಮ್ಮ ಬಾಯಿಂದ ಈ ಮಾತು ಬರಬಾರದು. ಉಪ್ಪು ಹಾಗೂ ಅರಿಶಿನ ಖಾಲಿ ಆಗುತ್ತಿದ್ದ ಹಾಗೆ ಅದನ್ನು ನೀವು ಮನೆಗೆ ತಂದು ಡಬ್ಬಿಗಳಿಗೆ ತುಂಬಿ ಇಟ್ಟುಕೊಳ್ಳಬೇಕು. ಅದು ಖಾಲಿಯಾಗುವ ತನಕ ಬಿಡಬಾರದು ಇದು ದಾರಿದ್ರ್ಯಕ್ಕೆ ಸಂಕೇತವಾಗಿದೆ.

ಸಾಮಾನ್ಯವಾಗಿ ಎಲ್ಲರೂ ನಿಮ್ಮ ಮನೆಯ ಅಕ್ಕಿ ಡಬ್ಬದ ಒಳಗಡೆ ಅಕ್ಕಿ ಅಳತೆಗೆ ಒಂದು ಗ್ಲಾಸ್ ಅನ್ನು ಇಟ್ಟುಕೊಂಡಿರುತ್ತೀರಾ ಅದನ್ನು ನೀವು ಯಾವುದೇ ಕಾರಣಕ್ಕೂ ಉಲ್ಟಾ ಮಾಡಿ ಇಡಬಾರದು ಡಬ್ಬದ ಒಳಗಡೆಯಾಗಲಿ ಅಥವಾ ಡಬ್ಬದ ಹೊರಗಡೆಯಾಗಲಿ, ಗ್ಲಾಸ್ ಅನ್ನು ನೇರವಾಗಿ ಇಡಬೇಕು.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಈ ನಿಯಮಗಳನ್ನು ಪಾಲಿಸುತ್ತಾರೆ ಏನೆಂದರೆ ರಾತ್ರಿ ಹೊತ್ತು ಎಲ್ಲರ ಊಟ ಆದ ನಂತರ ಪಾತ್ರೆಯನ್ನು ತೊಳೆಯುವುದಕ್ಕೂ ಮುಂಚೆ ಸ್ವಲ್ಪ ಅನ್ನವನ್ನು ಲಕ್ಷ್ಮಿದೇವಿಗೆ ಅಂತ ಎತ್ತಿಡುವ ಅಭ್ಯಾಸವನ್ನು ಆಗಿನ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ ಯಾರೇ ಆಗಲಿ ರಾತ್ರಿ ಸ್ವಲ್ಪ ಅನ್ನವನ್ನು ತೆಗೆದು ಇಡಬೇಕು ಇಡೀ ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಆಹಾರ ಇಲ್ಲದಂತೆ ಮಾಡಬಾರದು. ಲಕ್ಷ್ಮಿದೇವಿ ಮನೆಗೆ ಬಂದು ರಾತ್ರಿ ಸಮಯದಲ್ಲಿ ನೋಡುತ್ತಾಳಂತೆ. ಆದ್ದರಿಂದ ಅನ್ನವನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಎತ್ತಿಡಬೇಕು ಇದು ಮುಖ್ಯವಾದ ವಿಚಾರ ಅದರಲ್ಲೂ ಶುಕ್ರವಾರದ ದಿನ ರಾತ್ರಿ ಮನೆಯಲ್ಲಿ ಅನ್ನ ಖಾಲಿ ಮಾಡಿ ಇಡಬಾರದು.

ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಅದು ಗಂಡಾಗಲಿ, ಹೆಣ್ಣಾಗಲಿ, ಚಿಕ್ಕವರಾಗಲಿ, ದೊಡ್ಡವರಾಗಲಿ ವಿದ್ಯಾರ್ಥಿಗಳಾಗಲಿ ಯಾರೇ ಆಗಲಿ ಹಣೆಗೆ ತಿಲಕವನ್ನು ತಪ್ಪದೇ ಇಡಬೇಕು. ತಿಲಕವೆಂದರೆ ಕುಂಕುಮವನ್ನು ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಲಿ ಹಣೆಯಲ್ಲಿ ಹೊರಗಡೆ ಹೋಗಬಾರದು ಅದರಲ್ಲೂ ಶುಕ್ರವಾರದ ದಿವಸ ಹಣೆಗೆ ತಿಲಕವನ್ನು ಇಟ್ಟುಕೊಂಡು ಹೊರಗಡೆ ಹೋಗಬೇಕು ಇದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಬಹಳ ಮುಖ್ಯವಾಗಿರುವುದು ಮುಂಜಾನೆ, ಮಧ್ಯಾಹ್ನ, ಸಂಜೆ ಆಗಿರಬಹುದು ಅಥವಾ ರಾತ್ರಿ ಆಗಿರಬಹುದು ಮತ್ತು ಶುಕ್ರವಾರದ ದಿನ ಮನೆಯಲ್ಲಿ ಉಗುರನ್ನು ತೆಗೆಯಬಾರದು ಮುಖ್ಯವಾಗಿ ಶುಕ್ರವಾರ ಇದು ನಿಮಗೆ ದಟ್ಟ ದರಿದ್ರವನ್ನು ಉಂಟುಮಾಡುತ್ತದೆ.

ಶುಕ್ರವಾರದ ದಿನ ಮನೆಯಲ್ಲಿ ಬಟ್ಟೆಗಳನ್ನು ಒಗೆಯಬಾರದು ಇದು ನಿಮ್ಮ ದರಿದ್ರಕ್ಕೆ ಕಾರಣವಾಗುತ್ತದೆ ಇದರಿಂದ ಹಣಕಾಸಿನ ಸಮಸ್ಯೆಗಳು ಕಾಡುತ್ತದೆ. ನಿಮ್ಮ ಜೀವನದಲ್ಲಿ ಏಳಿಗೆ ಅನ್ನುವುದು ಆಗುವುದಿಲ್ಲ. ಶುಕ್ರವಾರದ ದಿನ ಧರಿಸಿರುವ ಬಟ್ಟೆಗಳನ್ನು ಮತ್ತೆ ಧರಿಸಬಾರದು ಮತ್ತೆ ಮತ್ತೆ ಧರಿಸಿದರೆ ನಕಾರಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗುತ್ತದೆ. ನಕಾರಾತ್ಮಕ ಶಕ್ತಿ ಬಂದರೆ ಆ ದಿನವೆಲ್ಲ ಶಾಂತಿ ಇರುವುದಿಲ್ಲ, ಕಿರಿಕಿರಿಗಳು ಉಂಟಾಗುತ್ತದೆ. ಯಾವ ಕೆಲಸ ಮಾಡಿದರೂ ಯಶಸ್ಸು ಸಿಗೋದಿಲ್ಲ ಆದ್ದರಿಂದ ಶುಕ್ರವಾರ ಮಡಿ ಬಟ್ಟೆಗಳನ್ನು ಸ್ನಾನ ಮಾಡಿ ಧರಿಸಬೇಕು. ಈ ದಿನ ಮನೆಯ ಗೃಹಿಣಿಯರು ಸಾಧ್ಯವಾದಷ್ಟು ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆ ಶುಚಿ ಮಾಡಿದರೇ ಒಳ್ಳೆಯದು ಮತ್ತು ಮನೆಗೆ ಶುಭ ಫಲಗಳು ದೊರೆಯುತ್ತದೆ.

Leave a Comment