ಯಾವ ಸ್ತ್ರೀ ಈ ಸಮಯದಲ್ಲಿ ಕಸ ಗುಡಿಸುವರೋ ಅವರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯ ವಾಸ ಇರುತ್ತದೆ

0

ತಾಯಿ ಲಕ್ಷ್ಮಿ ಹೇಳಿದ ಮಾತು, ಯಾವ ಸ್ತ್ರೀ ಈ ಸಮಯದಲ್ಲಿ ಕಸಗುಡಿಸುವರೋ ಆ ಮನೆಯಿಂದ ಬಡತನ ನಾಶವಾಗುತ್ತೆ. ನಮ್ಮ ಶಾಸ್ತ್ರಗಳಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ ಅಂದ್ರೆ, ಇವುಗಳ ಸಂಬಂಧ ನೇರವಾಗಿ ತಾಯಿ ಲಕ್ಷ್ಮಿ ದೇವಿಯೊಂದಿಗೆ ಇರುತ್ತದೆ. ಈ ದಿವ್ಯ ವಸ್ತುಗಳಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ್ತವ್ಯವಿರುತ್ತದೆ. ಹಾಗಾಗಿ ನಾವು ಈ ವಸ್ತುಗಳಿಗೆ ತಾಯಿ ಲಕ್ಷ್ಮಿ ದೇವಿಗೆ ಸಮಾನವಾಗಿ ಗೌರವವನ್ನು ಕೊಡಬೇಕು. ಈ ವಸ್ತುಗಳನ್ನು ಪೂಜೆ ಮಾಡಬೇಕು.

ಇವುಗಳನ್ನು ಬಳಸುವಂತಹ ಸಮಯದಲ್ಲಿ ಇವುಗಳಿಗೆ ಸಂಬಂಧಿಸಿದಂತ ಶಾಸ್ತ್ರೀಯ ನಿಯಮಗಳನ್ನು ಸಹ ಪಾಲಿಸಬೇಕು. ತಾಯಿ ಲಕ್ಷ್ಮಿ ದೇವಿ ಧನ ಸಂಪತ್ತಿನ, ಸಿರಿ ಸಂಪತ್ತಿನ ದೇವಿ ಆಗಿದ್ದಾರೆ. ಇವರು ಮನುಷ್ಯರಿಗೆ ಎಲ್ಲಾ ಪ್ರಕಾರದ ಭೌತಿಕ ಸುಖವನ್ನು ಪ್ರಾಪ್ತಿ ಮಾಡ್ತಾರೆ. ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ದೇವಿ ಒಲಿಯುತ್ತಾರೋ ಅಂತವರು ಜೀವನದಲ್ಲಿ ಯಾವತ್ತಿಗೂ ದರಿದ್ರತೆಯನ್ನು ಎದುರಿಸುವ ಸ್ಥಿತಿ ಬರೋದಿಲ್ಲ. ಆದ್ರೆ ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗುತ್ತಾರೋ ಅಂತವರು ಎಲ್ಲವನ್ನು ಕಳೆದುಕೊಳ್ಳುತ್ತಾರೆ.

ಹಾಗಾಗಿ ಸ್ನೇಹಿತರೆ ಯಾವತ್ತಿಗೂ ನಾವು ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ತಾಯಿ ಲಕ್ಷ್ಮಿ ದೇವಿಗೆ ಸಂಬಂಧಪಟ್ಟಂತ ವಸ್ತುಗಳನ್ನು ಖಂಡಿತವಾಗಿ ಮನೆಯಲ್ಲಿ ಇಡಬೇಕು. ಮತ್ತು ಆ ವಸ್ತುಗಳನ್ನು ಪೂಜೆ ಮಾಡಬೇಕು. ಯಾಕಂದ್ರೆ ಈ ಮೂಲಕ ತಾಯಿ ಲಕ್ಷ್ಮಿ ದೇವಿ ವಾಸ ಯಾವತ್ತಿಗೂ ಮನೆಯಲ್ಲೇ ಇರಲಿ ಅಂತ. ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿಗೆ ಸಂಬಂಧಪಟ್ಟಂತಹ ವಸ್ತುಗಳು ಈ ರೀತಿ ಇವೆ. ಪೊರಕೆ, ತುಳಸಿಯ ಗಿಡ, ಕಮಲದ ಹೂಗಳು, ಮಂಗಳಸೂತ್ರ, ಶಂಖ, ಶ್ರೀ ಯಂತ್ರ.

ಇನ್ನು ಹಲವಾರು ರೀತಿಯ ವಸ್ತುಗಳು ಯಾವ ರೀತಿ ಇವೆ ಎಂದರೆ ಇವುಗಳ ವರ್ಣನೆ ಶಾಸ್ತ್ರಗಳಲ್ಲಿ ಸಿಗುತ್ತದೆ. ಈ ಸಾಧಾರಣವಾದ ವಸ್ತುಗಳು ತಾಯಿ ಲಕ್ಷ್ಮಿ ದೇವಿಗೆ ಅತೀ ಪ್ರಿಯವಾಗಿದವೆ. ಯಾವ ಸ್ಥಾನದಲ್ಲಿ ಈ ವಸ್ತುಗಳು ಇರುತ್ತವೆಯೋ ಅಲ್ಲಿ ತಾಯಿ ಲಕ್ಷ್ಮಿ ದೇವಿ ಯಾವತ್ತಿಗೂ ವಾಸ ಮಾಡುತ್ತಾರೆ. ಇಂದು ನಾವು ತಾಯಿ ಲಕ್ಷ್ಮಿ ದೇವಿಗೆ ಎಲ್ಲಕ್ಕಿಂತ ಪ್ರಿಯವಾದ ಪೊರಕೆಯ ಬಗ್ಗೆ ತಿಳಿದುಕೊಳ್ಳೋಣ.

ಪೊರಕೆ ಒಂದು ದಿವ್ಯವಾದ ವಸ್ತು ಆಗಿದೆ. ಇದರ ಒಳಗಡೆ ಸಾಕ್ಷಾತ್ ತಾಯಿ ಲಕ್ಷ್ಮೀದೇವಿ ವಿರಾಜಮಾನರಾಗಿದ್ದಾರೆ. ಇದೇ ಒಂದು ಕಾರಣದಿಂದಾಗಿ ಮನೆಯಲ್ಲಿರುವಂತ ಪೊರಕೆಗೆ ಮಹತ್ವಪೂರ್ಣವಾದ ಸ್ಥಾನವನ್ನು ನೀಡಲಾಗಿದೆ. ಪೊರಕೆಯು ಮನೆಯಲ್ಲಿರುವ ಕಸವನ್ನು ಸ್ವಚ್ಛ ಮಾಡುವುದರ ಜೊತೆಗೆ ನಕರಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ. ತಾಯಿ ಲಕ್ಷ್ಮಿ ದೇವಿಗೆ ಸ್ವಚ್ಛತೆ ಅತಿ ಪ್ರಿಯ. ಇಲ್ಲಿ ಪೊರಕೆಯ ಪ್ರಯೋಗದಿಂದಲೇ ಮನೆಯನ್ನ ಸ್ವಚ್ಛಗೊಳಿಸಲಾಗುತ್ತದೆ.

ಒಂದು ವೇಳೆ ಮನೆಯಲ್ಲಿ ಸ್ವಚ್ಛತೆ ಇಲ್ಲ ಅಂದ್ರೆ ಆ ಸ್ಥಾನದಲ್ಲಿ ತಾಯಿ ಲಕ್ಷ್ಮಿ ದೇವಿ ಯಾವತ್ತಿಗೂ ವಾಸ ಮಾಡುವುದಿಲ್ಲ. ಹಾಗಾದರೆ ಬನ್ನಿ ಪೊರಕೆಗೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ವಾಸ್ತು ನಿಯಮಗಳನ್ನ ತಿಳಿದುಕೊಳ್ಳೋಣ. ಇಂತಹ ಮಹತ್ವಪೂರ್ಣವಾದ ಉಪಾಯಗಳು ನಿಮ್ಮ ದರಿದ್ರತೆಯನ್ನು ದೂರ ಮಾಡುತ್ತದೆ. ಸ್ನೇಹಿತರೆ ಪೊರಕೆಯನ್ನು ಅತ್ಯಂತ ಪವಿತ್ರವಾದ ವಸ್ತು ಅಂತ ತಿಳಿಯಲಾಗಿದೆ. ಹಾಗಾಗಿ ನಾವು ಪೊರಕೆಯನ್ನು ಬಳಕೆ ಮಾಡುವಂತ ಸಮಯದಲ್ಲಿ ಶಾಸ್ತ್ರಗಳಲ್ಲಿ ಇರುವಂತ ನಿಯಮಗಳನ್ನು ಖಂಡಿತವಾಗಿ ಪಾಲಿಸಬೇಕು. ಪೊರಕೆಯನ್ನು ಮನೆಯಲ್ಲಿ ಎಲ್ಲಿ ಇಡಬೇಕು?

ಕಸ ಗುಡಿಸುವ ಸರಿಯಾದ ಸಮಯ ಏನಿದೆ? ಪೊರಕೆಯನ್ನು ಯಾವ ದಿನ ಖರೀದಿ ಮಾಡಬೇಕು? ಹಾಗೆ ಹಳೆಯದಾಗಿರುವಂತ ಪೊರಕೆಯನ್ನ ಎಲ್ಲಿ ಇಡಬೇಕು? ಇತ್ಯಾದಿ ವಿಷಯಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವಪೂರ್ಣವಾದ ವಿಷಯಗಳನ್ನು ತಿಳಿಸಿದ್ದಾರೆ. ಒಂದು ವೇಳೆ ನೀವು ಹಳೇದಾಗಿರೋ ಪೊರಕೆಯನ್ನು ಒಂದು ನಿಶ್ಚಿತ ಸ್ಥಾನದಲ್ಲಿ ಮುಚ್ಚಿಟ್ರೆ ನಿಮ್ಮ ಮನೆಯಲ್ಲಿ ಯಾವತ್ತಿಗೂ ಧನ ಸಂಪತ್ತಿನ ಕೊರತೆ ಆಗುವುದಿಲ್ಲ. ಹಳೆದಾಗಿರೋ ಪೊರಕೆ ಕೂಡ ನಿಮಗೆ ತುಂಬಾನೇ ಉಪಯೋಗಕ್ಕೆ ಬರುತ್ತದೆ.

ನೀವು ಕೇವಲ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾದ ಒಂದು ಅತ್ಯಂತ ಗುಪ್ತವಾದ ಸ್ಥಾನದಲ್ಲಿ ಪೊರಕೆಯನ್ನು ಮುಚ್ಚಿಡಬೇಕು. ಇದರ ಬಗ್ಗೆ ನಾವು ನಿಮಗೆ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ. ಸ್ನೇಹಿತರೆ ಎಲ್ಲಕ್ಕಿಂತ ಮೊದಲು ವಿಷಯ ಏನಂದ್ರೆ ಯಾವತ್ತಿಗೂ ನೀವು ಪೊರಕೆಗೆ ಅಥವಾ ಕಸಬರಗಿಗೆ ಅವಮಾನ ಮಾಡಬಾರದು. ಪೊರಕೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ . ಹಾಗಾಗಿ ಯಾವತ್ತಿಗೂ ಅದಕ್ಕೆ ಕಾಲನ್ನ ಸ್ಪರ್ಶ ಮಾಡಬಾರದು. ಅಪ್ಪಿ ತಪ್ಪಿ ನಿಮ್ಮ ಕಾಲು ಏನಾದರೂ ಪೊರಕೆಗೆ ಸ್ಪರ್ಶ ಆದ್ರೆ ಅದಕ್ಕೆ ಕ್ಷಮೆಯನ್ನು ಕೇಳಬೇಕು.

ಯಾವತ್ತಿಗೂ ಪೊರಕೆಯನ್ನ ದಾಟಿ ಹೋಗಬಾರದು. ಪೊರಕೆಯಿಂದ ಯಾವತ್ತಿಗೂ ಗಲೀಜನ್ನು ಸ್ವಚ್ಛಗೊಳಿಸಬಾರದು. ಉದಾಹರಣೆಗೆ ನಾಯಿ, ಬೆಕ್ಕು ಮಾಡಿರುವಂತ ಗಲೀಜುಗಳಾಗಿರಲಿ ಇತ್ಯಾದಿಗಳನ್ನು ಕ್ಲೀನ್ ಮಾಡೋದು ಅಶುಭ ಆಗಿರುತ್ತೆ. ಎರಡನೇ ವಿಷಯ ಯಾವತ್ತಿಗೂ ಪೊರಕೆಯನ್ನು ಮುಚ್ಚಿಡಬೇಕು. ನಿಮ್ಮ ಮನೆಯಲ್ಲಿ ಇರುವಂತ ಪೊರಕೆಯು ನಿಮ್ಮ ಮನೆಯ ಲಕ್ಷ್ಮಿಗೆ ಸಮಾನವಾಗಿರುತ್ತೆ. ಹೇಗೆ ನೀವು ನಿಮ್ಮ ಹಣವನ್ನ, ಬೆಳ್ಳಿ ಬಂಗಾರವನ್ನು ಹಣ

ಇಡುವಂತ ಕಪಾಟಿನಲ್ಲಿ ಮುಚ್ಚಿ ಇಡುತ್ತೀರೋ ಅದೇ ರೀತಿಯಾಗಿ ಪೊರಕೆಯನ್ನು ಯಾವ ರೀತಿಯ ಸ್ಥಾನದಲ್ಲಿಡಬೇಕಂದ್ರೆ ಇದರ ಮೇಲೆ ಆಚೆ ಇರುವಂತಹ ಜನರ ದೃಷ್ಟಿ ಬೀಳಬಾರದು. ವಾಸ್ತು ಶಾಸ್ತ್ರದಲ್ಲಿ ಈ ರೀತಿ ಹೇಳ್ತಾರೆ. ಪೊರಕೆಯ ಮೇಲೆ ಆಚೆ ಇರುವಂತಹ ಜನರ ದೃಷ್ಟಿ ಬಿದ್ದರೆ ಹಣದ ಖರ್ಚು ಹೆಚ್ಚಾಗುತ್ತೆ. ಹಾಗಾಗಿ ಇದರ ಬಳಕೆ ಆದ ನಂತರ ಒಂದು ಯಾವ ರೀತಿಯ ಸ್ಥಾನದಲ್ಲಿ ಇಡಬೇಕೆಂದರೆ ಇದರ ಮೇಲೆ ಆಚೆ ಇರುವ ಜನರ ದೃಷ್ಟಿ ಸುಲಭವಾಗಿ ಬೀಳಬಾರದು.

ಮೂರನೇ ಮಾತು ಪೊರಕೆಯನ್ನು ಬಳಸುವ ಮುನ್ನ ಅದಕ್ಕೆ ನಮಸ್ಕಾರ ಮಾಡಬೇಕು. ಪೊರಕೆಯ ಬಳಿ ಅನುಮತಿಯನ್ನು ಪಡೆದು ನಂತರ ಅದನ್ನು ಬಳಕೆ ಮಾಡಬೇಕು. ಈ ಪ್ರಕಾರದಲ್ಲಿ ಪೊರಕೆಗೆ ನಾವು ಪ್ರಾರ್ಥನೆಯನ್ನು ಮಾಡಿದ್ರೆ ಪೊರಕೆ ನಿಮ್ಮ ಮನೆಯಲ್ಲಿ ಇರುವಂತ ದುರ್ಭಾಗ್ಯ ಮತ್ತು ನಕರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ.

ಪೊರಕೆಗೆ ನಮಸ್ಕಾರ ಮಾಡಿದ್ರೆ ಪೊರಕೆಯಲ್ಲಿರುವಂತ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ನಮಗೆ ಸಿಗುತ್ತದೆ. ಸ್ನೇಹಿತರೆ ಪೊರಕೆಯನ್ನು ಇಡಲು ಸರ್ವೋತ್ತಮ ಸ್ಥಾನ ಪಶ್ಚಿಮ ದಿಕ್ಕು ಅಂತ ತಿಳಿಯಲಾಗಿದೆ. ಈ ದಿಕ್ಕಿನಲ್ಲಿ ಪೊರಕೆಯನ್ನು ಇಟ್ಟರೆ ಶುಭ ಪರಿಣಾಮಗಳು ಸಿಗುತ್ತವೆ. ಪಶ್ಚಿಮ ದಿಕ್ಕಿನಲ್ಲಿ ಪೊರಕೆಯನ್ನು ಇಡುವುದರಿಂದ ವಾಸ್ತುದೋಷಗಳು ಕಡಿಮೆಯಾಗುತ್ತವೆ.

ಪೊರಕೆಯನ್ನ ಯಾವತ್ತಿಗೂ ಅಡುಗೆ ಮನೆಯಲ್ಲಿ ಇಡಬಾರದು. ಇದರಿಂದ ನಕರಾತ್ಮಕ ಶಕ್ತಿ ಹುಟ್ಟುತ್ತದೆ. ನೆನಪಿಡಿ, ಯಾವತ್ತಿಗೂ ಪೊರಕೆಯನ್ನು ನಿಲ್ಲಿಸಿ ಇಡಬಾರದು. ಶಾಸ್ತ್ರಗಳ ಅನುಸಾರವಾಗಿ ಲಕ್ಷ್ಮಿಯನ್ನಾಗಲಿ ಅಥವಾ ಪೊರಕೆಯನ್ನಾಗಲಿ ನಿಂತಿರುವ ಅವಸ್ಥೆಯಲ್ಲಿ ಇಟ್ಟರೆ ಲಕ್ಷ್ಮಿ ಮನೆಯಿಂದ ಆಚೆ ಹೋಗುತ್ತಾರೆ ಅಂತ ತಿಳಿಸಿದ್ದಾರೆ. ಹಾಗಾಗಿ ಯಾವತ್ತಿಗೂ ಪೊರಕೆಯನ್ನು ಮಲಗಿಸಿ ಇಡಬೇಕು. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನೆಯಲ್ಲಿ ಯಾವತ್ತಿಗೂ ಮುರಿದಿರುವಂತ ಅಥವಾ ಕರಾಬ್ ಆಗಿರುವಂತ ಪೊರಕೆಯನ್ನು ಬಳಕೆ ಮಾಡಬಾರದು. ಇದರಿಂದ ಮನೆಯಲ್ಲಿ ನಕರಾತ್ಮಕತೆ ಹೆಚ್ಚಾಗುತ್ತದೆ.

ಪೊರೆಕೆನಾ ಸಮಯಕ್ಕೆ ಸರಿಯಾಗಿ ಬದಲಾಯಿಸುತ್ತಿರಬೇಕು. ಪೊರಕೆ ಏನಾದರೂ ತುಂಬಾನೇ ಸವೆದು ಹೋಗಿದ್ದರೆ ಅಥವಾ ಅದರಲ್ಲಿ ಇರುವಂತ ಕಡ್ಡಿಗಳು ಉದುರಿ ಬೀಳ್ತಾ ಇದ್ರೆ ಅದರ ಬಳಕೆಯನ್ನು ಮಾಡಬಾರದು. ಅದರ ಬದಲಿಗೆ ಹೊಸ ಪೊರಕೆಯನ್ನ ಖರೀದಿ ಮಾಡ್ಕೊಂಡು ತನ್ನಿರಿ. ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ಮನೆಯಲ್ಲಿ ಯಾವತ್ತಿಗೂ ಹಸಿಯಾಗಿರುವಂತ ಪೊರಕೆಯ ಬಳಕೆಯನ್ನು ಮಾಡಬಾರದು. ಮತ್ತು ಪೊರಕೆಯಿಂದ ಹಸಿಯಾದ ವಸ್ತುಗಳನ್ನು ಸ್ವಚ್ಛಗೊಳಿಸಬಾರದು.

ಇದರಿಂದ ಮನೆಯಲ್ಲಿ ರೋಗಗಳು ಹರಡುತ್ತವೆ. ಪೊರಕೆಯಿಂದ ಯಾವತ್ತಿಗೂ ಯಾರಿಗೂ ಹೊಡೆಯಬಾರದು . ಪೊರಕೆಯಿಂದ ಹಲ್ಲಿಯಾಗಲಿ ಅಥವಾ ಜೀವಜಂತುಗಳನ್ನು ಹೊಡೆಯಬಾರದು. ಇದನ್ನ ಪಾಪ ಅಂತ ತಿಳಿಯಲಾಗಿದೆ. ಒಂದು ವೇಳೆ ಇವುಗಳಿಂದ ನಿಮಗೆ ಸಮಸ್ಯೆ ಆಗ್ತಾ ಇದ್ರೆ ಅವುಗಳನ್ನ ಮನೆಯಿಂದ ದೂರ ಓಡಿಸಿರಿ. ಆದರೆ ಯಾವತ್ತಿಗೂ ಅವುಗಳನ್ನು ಪೊರಕೆಯಿಂದ ಹೊಡೆಯಬಾರದು. ಇದರಿಂದ ತಾಯಿ ಲಕ್ಷ್ಮಿ ದೇವಿ ಸಿಟ್ಟಾಗುವರು. ಸ್ನೇಹಿತರೆ ಕಸಗುಡಿಸುವ ಸರಿಯಾದ ಸಮಯ ಏನಿದೆ ಗೊತ್ತಾ?

ವಾಸ್ತು ಶಾಸ್ತ್ರದ ಅನುಸಾರವಾಗಿ ಕಸಗುಡಿಸಲು ಇರುವಂತಹ ಸರಿಯಾದ ಸಮಯವು ಮುಂಜಾನೆ ಸೂರ್ಯೋದಯದ ಸಮಯ ಆಗಿರುತ್ತದೆ. ಮುಂಜಾನೆ ಯಾವಾಗ ಸೂರ್ಯನ ಮೊದಲ ಕಿರಣ ಮನೆಯ ಒಳಗಡೆ ಪ್ರವೇಶ ಮಾಡುತ್ತದೆಯೋ, ಆ ಸಮಯದಲ್ಲಿ ಕಸ ಗುಡಿಸುವುದು ಅತ್ಯಂತ ಶುಭ ಆಗಿರುತ್ತದೆ. ಇಂತಹ ಸಮಯದಲ್ಲಿ ಕಸವನ್ನು ಗುಡಿಸಿದರೆ ಸೂರ್ಯನ ಪ್ರಕಾಶದಿಂದ ಸಂಪೂರ್ಣ ನಕಾರಾತ್ಮಕ ಶಕ್ತಿ ನಷ್ಟಗೊಳ್ಳುತ್ತದೆ. ಆದರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಯಾವತ್ತಿಗೂ ಸೂರ್ಯ ಮುಳುಗಿದ ನಂತರ ಅಂದರೆ ಸಾಯಂಕಾಲದ ಸಮಯದಲ್ಲಿ ಕಸವನ್ನು ಗುಡಿಸಬಾರದು.

ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯಲ್ಲಿ ವೃದ್ಧಿಯಾಗುತ್ತದೆ. ಸಾಯಂಕಾಲ ಕಸವನ್ನು ಗುಡಿಸಿದರೆ ಶುಭ ಕಾರ್ಯಗಳಲ್ಲಿ ವಿಘ್ನಗಳು ಹುಟ್ಟುತ್ತವೆ. ಒಂದು ವೇಳೆ ಯಾವುದಾದರೂ ವ್ಯಕ್ತಿ ಮಹತ್ವಪೂರ್ಣ ಕಾರ್ಯಕ್ಕಾಗಿ ಮನೆಯಿಂದ ಆಚೆ ಹೋಗ್ತಾ ಇದ್ರೆ, ಆ ಸಮಯದಲ್ಲಿ ಕಸವನ್ನು ಗುಡಿಸಬಾರದು. ಸ್ನೇಹಿತರೆ ಪೊರಕೆಯು ಒಂದು ಯಾವ ರೀತಿಯ ವಸ್ತು ಆಗಿದೆ ಅಂದ್ರೆ, ಇದನ್ನು ಬೇರೆಯವರಿಗೆ ಉದರಿಯ ಹಾಗೆ ಅಥವಾ ಇದನ್ನು ಬೇರೆಯವರಿಗೆ ಬಳಸಲು ಕೊಡಬಾರದು.

ಇಲ್ಲಿ ಬೇಕಾದ್ರೆ ಅವರು ಎಷ್ಟೇ ಬೇಡಿಕೊಂಡರೂ ನಿಮ್ಮ ಮನೆಯಲ್ಲಿನ ಪೊರಕೆಯನ್ನು ಅವರಿಗೆ ಕೊಡಬಾರದು. ಇಲ್ಲವಾದರೆ ನಿಮ್ಮ ಮನೆಯಿಂದ ಲಕ್ಷ್ಮಿ ಹೋಗುತ್ತಾರೆ. ಬೇಕಾದ್ರೆ ಹೊಸ ಪೊರಕೆಯನ್ನು ನೀವು ಖರೀದಿ ಮಾಡಿ ಅವರಿಗೆ ಕೊಡಬಹುದು. ಆದರೆ ನಿಮ್ಮ ಮನೆಯ ಪೊರಕೆಯನ್ನು ನೀವು ಬೇರೆಯವರಿಗೆ ಕೊಡಬಾರದು. ಜೊತೆಗೆ ಬೇರೆಯವರ ಮನೆಯ ಪೊರಕೆಯನ್ನು ನೀವು ನಿಮ್ಮ ಮನೆಗೆ ತರಬೇಡಿ. ಅವರ ಪೊರಕೆಯಿಂದ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಬಾರದು.

ಪೊರಕೆಯನ್ನು ಕೇವಲ ಸ್ವಂತ ಹಣದಿಂದ ಖರೀದಿ ಮಾಡಿ ತರಬೇಕು. ಅದರಿಂದಲೇ ಮನೆಯನ್ನು ಸ್ವಚ್ಛಗೊಳಿಸಬೇಕು. ಪೊರಕೆಯನ್ನು ಖರೀದಿ ಮಾಡಲು ಉತ್ತಮವಾದ ದಿನ ಶನಿವಾರ ಅಂತ ತಿಳಿಯಲಾಗಿದೆ. ಶನಿವಾರದ ದಿನ ನೀವು ಹೊಸ ಪೊರಕೆಯನ್ನು ಖರೀದಿ ಮಾಡಿ ತನ್ನಿರಿ. ಇದರ ಪೂಜೆಯನ್ನು ಮಾಡಿದ ನಂತರವೇ ಇದರ ಬಳಕೆ ಪ್ರಾರಂಭಿಸಿರಿ. ಪೊರಕೆಯನ್ನು ಪೂಜೆ ಮಾಡದೆಯೇ ಯಾವತ್ತಿಗೂ ಅದರ ಬಳಕೆಯನ್ನು ಮಾಡಬಾರದು.

ಪೊರಕೆಯನ್ನು ಒಂದು ಕೋಣೆಯಲ್ಲಿ ಇಟ್ಟು ಅರಿಶಿಣ ಕುಂಕುಮದಿಂದ ಅದರ ಪೂಜೆಯನ್ನು ಮಾಡಿರಿ. ಅದರ ಮಾರನೆಯ ದಿನ ಅದರ ಬಳಕೆಯನ್ನು ಪ್ರಾರಂಭಿಸಿರಿ. ಹಳೆದಾಗಿರುವ ಪೊರಕೆಯನ್ನು ಯಾವತ್ತಿಗೂ ಏಕಾದಶಿಯಾಗಲಿ, ಗುರುವಾರದ ದಿನ ಆಗಲಿ ಮನೆಯಿಂದ ಆಚೆ ತೆಗೆದು ಬಿಸಾಕಬಾರದು. ಈ ದಿನ ಪೊರಕೆಯನ್ನು ಮನೆಯಿಂದ ಆಚೆ ಎಸೆದರೆ ತಾಯಿ ಲಕ್ಷ್ಮಿ ದೇವಿ ಮನೆಯನ್ನು ಬಿಟ್ಟು ಹೋಗ್ತಾರೆ. ಇದರ ಬದಲಿಗೆ ಹಳೆದಾಗಿರುವ ಪೊರಕೆಯನ್ನ ಮನೆಯ

ಉತ್ತರ ದಿಕ್ಕಿನಲ್ಲಿ ಜೋಪಾನವಾಗಿ ಇಟ್ಟುಬಿಡಿ. ಇಲ್ಲಿ ಬೇರೆಯವರ ದೃಷ್ಟಿ ಬೀಳಬಾರದು. ಈ ದಿಕ್ಕಿನಲ್ಲಿ ಹಳೆಯದಾಗಿರುವ ಪೊರಕೆಯನ್ನು ಇಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ನಾಶವಾಗುತ್ತವೆ. ಒಂದು ಮಾತನ್ನ ನೆನಪಿಟ್ಟುಕೊಳ್ಳಿ. ಪೊರಕೆಯನ್ನು ಯಾವತ್ತಿಗೂ ಸುಟ್ಟು ಹಾಕಬಾರದು. ಇದರಿಂದ ಜೀವನದಲ್ಲಿ ದುರ್ಭಾಗ್ಯ ಬರುತ್ತದೆ. ಶಾಸ್ತ್ರಗಳ ಅನುಸಾರವಾಗಿ ಪೊರಕೆಯ ದಾನ ಅತ್ಯಂತ ಶುಭವಾಗಿರುತ್ತದೆ. ನೀವು ಯಾವುದಾದರು ದೇವಾಲಯದಲ್ಲಿ ಶನಿವಾರದ ದಿನ ಪೊರಕೆಯನ್ನ ದಾನವಾಗಿ ಕೊಟ್ಟುಬಿಡಿ.

ಇದರಿಂದ ನಿಮ್ಮ ಜೀವನದಲ್ಲಿ ಸುಖ ಸಮೃದ್ಧಿ ಬರುತ್ತದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ರೆ, ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಅಂದ್ರೆ, ಗುರುವಾರದ ದಿನ ಭಗವಂತನಾದ ವಿಷ್ಣು ಮತ್ತು ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಪೊರಕೆಯ ಪೂಜೆಯನ್ನು ಸಹ ಮಾಡಿರಿ. ನೆಲದ ಮೇಲೆ ಸ್ವಲ್ಪ ಅಕ್ಷತೆಗಳನ್ನು ಹಾಕಿ ಅದರ ಮೇಲೆ ಪೊರಕೆಯನ್ನು ಇಟ್ಟು ಅದರ ಪೂಜೆಯನ್ನು ಮಾಡಿರಿ ಮತ್ತು ಆ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಿರಿ. ನಿಮ್ಮ ಮನೆಯಲ್ಲಿರುವಂತ ಎಲ್ಲಾ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಮನೆಯಲ್ಲಿ ಸುಖ, ಸಮೃದ್ಧಿ ಬರುತ್ತದೆ.

Leave A Reply

Your email address will not be published.