ಮೇಷ ರಾಶಿ: 5 ವರ್ಷದ ಗುರು ಫಲ

0

ಮೇಷರಾಶಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಗುರು ಬಲಿಷ್ಠನಾಗುವುದು ಯಾವಾಗ, ಗುರು ಯಾವ ರೀತಿಯ ಫಲಗಳನ್ನು ನೀಡುತ್ತಾನೆ? ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಣ, ಆಸ್ತಿ, ಐಶ್ವರ್ಯಕ್ಕೆ ಗುರುವೇ ಅಧಿಪತಿ. ಹೆಚ್ಚಿನವರಿಗೆ ಬರಬೇಕಾಗಿರುವ ಹಣ ವಾಪಸ್ಸು ಬರುತ್ತದೆ. ನೀವು ಬಾಕಿ ಕೊಡುವುದಿದ್ದರೂ ಅದನ್ನು ತೀರಿಸುವ ಶಕ್ತಿ ಬರುತ್ತದೆ.

ನೀವು ಅಪೇಕ್ಷೆ ಪಟ್ಟಂತೆ ನಿಮ್ಮ ಬಳಿ ಇರುವ ಸೈಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುವಿರಿ. ಮೇ 1, 2024ರಿಂದ ಮೇ 14 2025ರ ವರೆಗೆ ಗುರುವು ವೃಷಭರಾಶಿಯಲ್ಲೇ ಇರುತ್ತಾನೆ. ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುವ ದಿನಗಳಾಗಿರುತ್ತವೆ. ಹೂಡಿಕೆ ಮಾಡಲು ಒಳ್ಳೆಯ ಅವಕಾಶಗಳು ಬರುತ್ತವೆ. ಕಡಿಮೆ ಬೆಲೆಯಲ್ಲಿ ಕೊಂಡುಕೊಂಡ ನಿಮ್ಮ ಷೇರಿಗೆ ಈಗ ಒಳ್ಳೆಯ ಬೆಲೆಯು ಸಿಗುತ್ತದೆ.

ನೀವು ಸ್ವಂತ ಅಂಗಡಿ ಇಟ್ಟಿದ್ದರೇ ವ್ಯಾಪಾರ ಚೆನ್ನಾಗಿ ಆಗುತ್ತದೆ. ಕಂಪನಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಬರಬಹುದು. ಉದ್ಯೋಗದಲ್ಲಿ ಉನ್ನತ ಸ್ಥಾನ ಮತ್ತು ಸಂಬಳ ಹೆಚ್ಚಿಗೆ ಆಗಬಹುದು. ವಾಹನ, ಜಮೀನು ಖರೀದಿಗೆ ಅವಕಾಶವಿದೆ. ಗುರು ಬಲಿಷ್ಠನಾಗಿದ್ದಾಗ ಗುರುಹಿರಿಯರ ಆಶೀರ್ವಾದ ಪ್ರೇರಣೆ, ಸಲಹೆಗಳನ್ನು ಪಡೆಯುತ್ತೀರಿ. ಕೀರ್ತಿ, ಯಶಸ್ಸನ್ನು ನೀಡುವವನು ಗುರು.

ಹಿತೈಷಿಗಳು ನಿಮಗೆ ಒಳ್ಳೆಯದಾಗಲಿ ಎಂದು ಬಯಸುವವರ ಸಂಖ್ಯೆ ಹೆಚ್ಚು ಇರುತ್ತದೆ. ನೀವು ಸ್ನೇಹಪರ, ಯಾರ ಜೊತೆ ಹೇಗೆ ಇರಬೇಕೆಂಬುದು ಗೊತ್ತು. ಹಾಡುಗಾರಿಕೆ, ನೃತ್ಯ, ಕಲೆ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಬಹುದು. ಗುರು ಬಲಿಷ್ಠನಾಗಿರುವುದರಿಂದ ಒಳ್ಳೆಯ ಮಾತು, ನಡವಳಿಕೆಯಿಂದ ಒಳ್ಳೆಯವರು ಎಂದು ಕರೆಯಿಸಿಕೊಳ್ಳುತ್ತೀರಿ. ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿಯ ವಾತಾವರಣವಿರುತ್ತದೆ. ಮಕ್ಕಳ ವಿಚಾರದಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಬಹುದು.

ಗುರು ಯಾವಾಗ ದುರ್ಬಲನಾಗುತ್ತಾನೆ ಎಂದರೆ ಏಫ್ರಿಲ್ 13, 2022 ರಿಂದ ಮೇ 1, 2024ರವರೆಗೆ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಹಣ ಸಂಪಾದನೆ ಮಾಡಲು ಬಹಳ ಕಷ್ಟವಾಗುವ ಸಮಯ ಆಗಿರುತ್ತದೆ. ತಿಂಗಳ ಮಧ್ಯೆದಲ್ಲೇ ಹಣ ಖಾಲಿಯಾಗುತ್ತಿರುತ್ತದೆ. ಹೆಚ್ಚು ಖರ್ಚು ಮಾಡುವ ಮನಸ್ಸು. ಬೇರೆಯವರು ಐಷಾರಾಮಿಯ ಜೀವನ ನಡೆಸಿದರೇ ನಾವು ಅವರಂತೆ ಆಗೋಣ ಎನಿಸುತ್ತದೆ.

ಆಡಂಬರದ ಜೀವನ ಇಷ್ಟವಾಗುವುದು ಹೆಚ್ಚಾಗಿರುತ್ತದೆ. ಮೊದಲೇ ಹಣ ಹುಟ್ಟುತ್ತಿಲ್ಲ, ಸಾಲ ಮಾಡಬೇಕೆಂಬ ಭಯ ಹುಟ್ಟಬಹುದು. ಇದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಇರುವುದಿಲ್ಲ. ಮನಸ್ಥಾಪಗಳು, ಜಗಳಗಳು ಆಗಬಹುದು. ಕೆಲಸವನ್ನು ಮುಂದೂಡುವ ಸೋಮಾರಿತನ ಬೆಳೆಯುತ್ತದೆ ಅಥವಾ ಕೆಲಸ ಮಾಡುವ ಕಡೆ ಬೈಸಿಕೊಳ್ಳುವುದು. ಅತಿಯಾದ ಆತ್ಮವಿಶ್ವಾಸದಿಂದ ಏನೋ ಮಾಡಲು ಹೊರಟಿರುತ್ತೀರಿ,

ಏನೋ ಮಾಡಲು ಹೋಗಿ ಇನ್ನೇನೋ ಮಾಡುವುದು ಹೆಚ್ಚಿದೆ. ನಿಮಗೆ ಆಗದೇ ಇರುವವರು ನಿಮ್ಮ ಬಗ್ಗೆ ಇಲ್ಲಸಲ್ಲದೇ ವಿಷಯಗಳನ್ನು ಹಬ್ಬಿಸಬಹುದು ಇದರಿಂದ ದುಃಖ, ಹತಾಶೆಗೆ ಒಳಗಾಗುತ್ತೀರಿ ಎಚ್ಚರವಾಗಿರಿ. ಕೆಲಸದಲ್ಲಿ ವಿಘ್ನವಾಗುವ ಸಂಭವವಿದೆ. ನೆಗೆಟಿವ್ ಎನರ್ಜಿಇರುವ ಸಮಯ ಯಾವುದು ಎಂದರೆ ಮೇ 14, 2025ರಿಂದ ಪ್ರಾರಂಭವಾಗಿ ಅಕ್ಟೋಬರ್ 31, 2026ರವರೆಗೆ ಇರುತ್ತದೆ. ಇಲ್ಲಿ ಅಶುಭ ಫಲಗಳು ಇರುತ್ತದೆ, ಕೆಲವರು ಮಿಶ್ರ ಫಲಗಳನ್ನು ಅನುಭವಿಸುತ್ತಾರೆ.

ಗುರುವಿನ ಈ ಮಂತ್ರವನ್ನು ಆದಷ್ಟು ಪಠಿಸಿ, ಗುರುವಿನ ಅನುಗ್ರಹ ನಿಮ್ಮ ಮೇಲೆ ಇರಲಿ. ಓಂ ನಿಧಹೆ ಸರ್ವವಿದ್ಯಾನಾಮ್ ಭಿಜಷೇ ಭವರೋಗಿನಾಮ್ ಗುರವೇ ಸರ್ವಲೋಕನಾಮ್ ದಕ್ಷಿಣಾಮೂರ್ತಯೇ ನಮಃ ಈ ಮಂತ್ರವನ್ನು ಪಠಿಸಿ. ಇದೇ ರೀತಿ ಮನೆಯಲ್ಲಿ ಹಣಕಾಸಿನ ಕೊಡುಗೆ, ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಪ್ರಾಪ್ತವಾಗುವುದು ಇದೆ. ಆ ಸಮಯ ಯಾವಾಗ ಎಂದರೇ ಅಕ್ಟೋಬರ್ 31, 2025ಕ್ಕೆ ಗುರುವು ಸಿಂಹರಾಶಿಯಲ್ಲಿ ಪ್ರವೇಶ ಮಾಡಿದಾಗ, ಜನವರಿ ನಂತರ ನಾಲ್ಕೈದು ತಿಂಗಳು ನೋಡಿಕೊಂಡು ಖರ್ಚು ಮಾಡಬೇಕಾಗುತ್ತದೆ.

ನಂತರ ನವೆಂಬರ್ 26, 2027ರವರೆವಿಗೂ ಶುಭದಿನಗಳೇ ಆಗಿರುತ್ತದೆ. ನಿಂತು ಹೋದ ಕೆಲಸಗಳು ಪ್ರಾರಂಭವಾಗುತ್ತವೆ. ಹಣಕಾಸಿನ ಕೊರತೆಯಾಗುವುದಿಲ್ಲ. ಚುರುಕಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವುದರಿಂದ ನಿಮ್ಮ ಬಾಸ್ ನಿಂದ ಹೊಗಳಿಕೆಯೂ ಸಿಗುತ್ತದೆ. ಬೇಕಾದ ಕಡೆ ವರ್ಗಾವಣೆ ಸಿಗುವ ಸೂಚನೆಯು ಇದೆ. ಗುರುವು ವಿದ್ಯಾಕಾರಕನಾಗಿರುವುದರಿಂದ ಮಕ್ಕಳು ಕಲಿಕೆಯಲ್ಲಿ ಮುಂದೆ ಇರುತ್ತಾರೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದೆ ಇರುತ್ತಾರೆ.

ಒಳ್ಳೆಯ ಮಾತುಗಾರರು, ಭಾಷಣಕಾರರು ಆಗಬಹುದು. ಈ ಸಮಯದಲ್ಲಿ ದೇವರ ಅನುಗ್ರಹ ಮತ್ತು ನಿಮ್ಮ ಇಚ್ಛೇಗಳು ಸ್ಟ್ರಾಂಗ್ ಆಗಿರುವುದರಿಂದ ಅಂದುಕೊಂಡಿದ್ದನ್ನ ಸಾಧಿಸಬಹುದು. ಯಾರೇ ಏನೇ ಕೇಳಿದರೂ ಮಾಡುವ ಗುಣ ಗುರು ಕೊಡುವ ವರವಾಗಿದೆ. ಹಿರಿಯರಿಂದ ಬೆಂಬಲ ಮತ್ತು ಆಶೀರ್ವಾದ ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಒಳ್ಳೆಯದಾಗುವ ಮತ್ತೊಂದು ವಿಚಾರ ಏನೆಂದರೇ ಆರೋಗ್ಯಕರ ಮಕ್ಕಳ ಜನನ ನಿಮ್ಮ ಜೀವನದಲ್ಲಿ ನಡೆಯುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಒಳ್ಳೆಯ ವಾತಾವರಣವನ್ನು ನೋಡಬಹುದು.

Leave A Reply

Your email address will not be published.