ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು

ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು ತಾಳ್ಮೆಯಿಂದ ಪೂರ್ತಿ ನೋಡಿರಿ, ಆಲೋಚಿಸಬೇಡಿ, ಚಿಂತಿಸಬೇಡಿ. ಹೆಣ್ಣು ಸದಾ ನಗು ಮುಖದಿಂದ ಸದಾ ಹಸನ್ಮುಖಿಯಾಗಿ ಇರಬೇಕು ಹೀಗಿದ್ದರೆ ಗಂಡ, ಮಕ್ಕಳು, ಮನೆಗೆ ಯಶಸ್ಸು. ಮನೆಯಲ್ಲಿರುವ ಹೆಣ್ಣು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಹೊಸ್ತಿಲ ಭಾಗಕೆಕ ಅರಿಶಿಣ ಕುಂಕುಮ ಇಟ್ಟು ರಂಗೋಲಿ ಹಾಕಬೇಕು.

ಮನೆಯ ಬಾಗಿಲನ್ನು ಲಕ್ಷ್ಮಿ ಎಂದು ಕರೆಯಲಾಗುತ್ತದೆ ಆದ್ದರಿಂದ ಮನೆಯ ವಸ್ತುಗಳು ಯಾವಾಗಲೂ ಶುಭ್ರವಾಗಿರಬೇಕು. ಮನೆಯ ಅಂಗಳದಲ್ಲಿ ಪೂರ್ವಾಭಿಮುಖವಾಗಿ ತುಳಸಿ ಗಿಡ ಇರಬೇಕು ಅದಕ್ಕೆ ಮನೆಯ ಹೆಣ್ಣು ಪ್ರತಿದಿನ ಪೂಜೆ ಮಾಡಬೇಕು. ಮನೆಯಲ್ಲಿ ಕೂದಲು ಬಿಟ್ಟುಕೊಂಡು ಇರಬಾರದು ಇದರಿಂದ ಮನೆಯ ಕೆಲಸಗಳಿಗೆ ವಿಘ್ನಗಳಾಗುತ್ತವೆ.ಸಂಜೆ ವೇಳೆ ಕೂದಲನ್ನು ಬಾಚಬಾರದು, ಶುಕ್ರವಾರ ಮತ್ತು ಮಂಗಳವಾರ ಮನೆಯಿಂದ ದಾನ ಮಾಡಬಾರದು, ಮುಖ್ಯವಾಗಿ ದುಡ್ಡು ಯಾರಿಗೂ ಕೊಡಬಾರದು.

ಹೆಣ್ಣು ಯಾವುದೇ ಕಾರಣಕ್ಕೂ ಹೊಸ್ತಲಿನ ಒಳಗಿನಿಂದ ಯಾರಿಗೂ ದಾನ ಕೊಡಬಾರದು. ಲಕ್ಷ್ಮಿ ಸ್ವರೂಪಿಯಾದ ಹೆಣ್ಣು ಮುಸ್ಸಂಜೆಯಲ್ಲಿ ಕಣ್ಣೀರು ಹಾಕಬಾರದು ಇದರಿಂದ ಮನೆಯು ಏಳಿಗೆ ಆಗುವುದಿಲ್ಲ. ಸ್ನಾನ ಮುಗಿಸಿ ಕೂದಲು ಬಿಟ್ಟುಕೊಂಡು ಪೂಜೆ ಮಾಡಬಾರದು. ಸ್ತ್ರೀ ಆದವಳು ಮನೆಗೆ ಬಂದ ಅತಿಥಿಗಳಿಗೆ ಒಳ್ಳೆಯ ಅತಿಥಿ ಸತ್ಕಾರ ಮಾಡಬೇಕು ಆಗ ದೇವರಿಗೆ ಸೇವೆ ಮಾಡಿದಂತೆ ಮನೆಯಲ್ಲಿರುವ ಹೆಣ್ಣು ಹೀಗಿದ್ದರೇ ಮಾತ್ರ ಲಕ್ಷ್ಮಿ ಒಲಿಯುತ್ತಾಳೆ.

ಮನೆಯ ಹೆಣ್ಣು ಸಂಜೆ ಒಗೆಯುವುದಾಗಲಿ ಮನೆಯಲ್ಲಿ ಕಸ ಗುಡಿಸುವುದಾಗಲೀ ಮಾಡಬಾರದು. ಮನೆಯಲ್ಲಿ ಹೆಣ್ಣು ಮುನಿಸಿಕೊಳ್ಳುವುದಾಗಲಿ, ಜಗಳ ಮಾಡುವುದಾಗಲೀ ಮಾಡಬಾರದು. ಮನೆಯಲ್ಲಿ ಹೆಣ್ಣು ಯಾವ ವಸ್ತುವನ್ನು ಇಲ್ಲ ಅಂತ ಹೇಳಬಾರದು. ಅಶ್ವಿನಿ ದೇವತೆಗಳು ಅಸ್ತು ಎಂದು ಬಿಡುತ್ತಾರೆ ಇದರಿಂದ ದಿನಸಿಗಳಿಗೆ ಕೊರತೆ ಉಂಟಾಗುತ್ತದೆ.

ಮನೆಯ ಮಹಾಲಕ್ಷ್ಮಿಯಾದ ಹೆಣ್ಣು ಹಣೆಗೆ ಕುಂಕುಮ,ಕೈಗೆ ಗಾಜಿನ ಬಳೆ, ಕಾಲಿಗೆ ಕಾಲುಂಗುರ ಕಾಲ್ಜಗೆಜ್ಜೆ ಕುತ್ತಿಗೆಗೆ ಮಾಂಗಲ್ಯ ಸರ ಕಡ್ಡಾಯವಾಗಿ ಧರಿಸಬೇಕು. ಸ್ತ್ರೀಯಾದವಳು ಮನೆಯಲ್ಲಿ ಕಾಲನ್ನು ನೆಲಕೆಕ ಒರೆಸುತ್ತಾ ನಡೆಯಬಾರದು ಇದರಿಂದ ದಾರಿದ್ರ್ಯ ಬರುತ್ತದೆ. ಸ್ತ್ರೀಯಾದವಳು ಮೈತುಂಬ ಬಟ್ಟೆ ಹಾಕಬೇಕು ಯಾವುದೇ ಕಾರಣಕ್ಕೂ ಹೊಕ್ಕುಳ ಬಳ್ಳಿ ಇತರರಿಗೆ ಕಾಣಬಾರದು.

ಯಾವುದೇ ಕಾರಣಕ್ಕೂ ಸ್ತ್ರೀಯ ಪಾದದಡಿ ಹೊಡೆದಿರಬಾರದು ಮತ್ತು ಸ್ತ್ರೀಯ ಬಾಯಿಂದ ದುರ್ವಾಸನೆ ಬರಬಾರದು. ಸ್ತ್ರೀಯ ಬಾಯಲ್ಲಿ ಯಾವುದೇ ಕಾರಣಕ್ಕೂ ಕೆಟ್ಟ ಮಾತುಗಳು ಬರಬಾರದು ಮತ್ತು ಇನ್ನೊಬ್ಬರನ್ನು ಬಯ್ಯಬಾರದು. ಸ್ತ್ರೀಯು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಜೇಡರ ಬಲೆ ಧೂಳು ನೋಡಿಕೊಳ್ಳಬೇಕು. ಸ್ತ್ರೀಯರು ದಿನಾ ಕಾಲಿಗೆ ಅರಿಶಿನ ಹಚ್ಚಿಕೊಳ್ಳಬೇಕು.

ಸ್ತ್ರೀಯರು ದಿನಾ ಗೋದೋಳಿ ಸಮಯದಲ್ಲಿ ದೀಪವನ್ನು ಹಚ್ಚಬೇಕು. ಸ್ತ್ರೀಯರು ದಿನಾ ತಲೆಗೆ ಒಂದು ಚಿಕ್ಕ ಹೂವಾನಾದರೂ ಇಟ್ಟುಕೊಳ್ಳಬೇಕು. ಸ್ತ್ರೀಯಾದವಳು ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡಬೇಕು.
ಸ್ತ್ರೀಯು ಉಳಿತಾಯ ಮಾಡುವ ಗುಣವನ್ನು ಹೊಂದಿರಬೇಕು. ಬೇಕಾಬಿಟ್ಟಿ ಖರ್ಚು ಮಾಡಬಾರದು. ಸ್ತ್ರೀಯಾದವಳು ಕಷ್ಟದ ಸಮಯದಲ್ಲಿ ಧೈರ್ಯ ಮತ್ತು ಸಲಹೆಗಳನ್ನು ಕೊಡಬೇಕು.

ಸ್ತ್ರೀಯಲ್ಲಿ ಅಹಂಕಾರ ಅನ್ನುವುದು ಇರಲೇಬಾರದು. ಸ್ತ್ರೀಯರು ರಾತ್ರಿ ಮಲಗುವ ವೇಳೆ ಓಲೆ ಮತ್ತು ಬಳೆಗಳನ್ನು ಬಿಚ್ಚಿಡುತ್ತಾರೆ ಇದನ್ನು ಮಾಡಲೇಬಾರದು. ಸ್ತ್ರೀಯಾದವಳು ತಾನು ಮುಡಿದ ಹೂವನ್ನು ಬೇರೆಯವರಿಗೆ ಕೊಡಬಾರದು. ಬೇರೆಯವರು ಮುಡಿದ ಹೂವನ್ನು ತಾನು ಇಟ್ಟುಕೊಳ್ಳಬಾರದು.

ಸ್ತ್ರೀಯಾದವಳು ಕಪ್ಪು ಬಣ್ಣದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಸ್ತ್ರೀಯಾದವಳು ಕಾಲು ಅಲುಗಾಡಿಸುವುದು ಮತ್ತು ಕಾಲೆ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಮಾಡಬಾರದು. ಸ್ತ್ರೀಯಾದವಳು ರಾತ್ರಿ ಕೋಪ ಮಾಡಿಕೊಂಡು ಊಟ ಮಾಡದೇ ಮಲಗಬಾರದು. ಸ್ತ್ರೀಯಾದವಳು ಯಾವುದೇ ಕಾರಣಕ್ಕೂ ಯಾವ ವಸ್ತುಗಳನ್ನು ಎಡಗೈಯಿಂದ ಬೇರೆಯವರಿಗೆ ಕೊಡಬಾರದು.

Leave a Comment