ಟೈಟ್ ಆದ ಬಟ್ಟೆ ಆರೋಗ್ಯಕ್ಕೆ ಹಾನಿಕರ ಜೋಕೆ

ಟೈಟ್ ಆದ ಬಟ್ಟೆ ಆರೋಗ್ಯಕ್ಕೆ ಹಾನಿಕರ ಜೋಕೆ. ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್ ಧರಿಸುವ ಮಹಿಳೆಯರಿಗೆ ನೇರ ಮಾತುಗಳು ದಯವಿಟ್ಟು ತಾಳ್ಮೆಯಿಂದ ಪೂರ್ತಿ ಕೇಳಿ. ಆಲೋಚಿಸಬೇಡಿ ಚಿಂತಿಸಬೇಡಿ…ತೆಳುವಾದ ಬಳ್ಳಿಯಂತೆ ಕಾಣಲು ಮತ್ತು ಸಖತ್ ಆಧುನಿಕವಾಗಿ ಕಾಣಲು ಮ*** ಅಂಟಿದ ಬಟ್ಟೆ ತೊಡುವುದು ಈಗಿನವರ ರೂಡಿ. ಅದರ ಹಿಂದಿನ

ಕೆಟ್ಟ ಪರಿಣಾಮದ ಪರಿವಿಲ್ಲದೆ ಟೈಟ್ ಜೀನ್ಸ್ ಟಿ-ಶರ್ಟ್ ಇನ್ನು ಮುಂತಾದ ಬಟ್ಟೆಗಳನ್ನು ಬಿಗಿಯಾಗಿಯೇ ತೊಡುತ್ತಾರೆ ಇಂದಿನ ಹುಡುಗಿಯರು. ಇದರಿಂದ ಆಗುವ ತೊಂದರೆಗಳು… 1 ತೊಡೆನವು: ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ತೊಡೆಯಲ್ಲಿ ನರಸೆಳೆತ ಉಂಟಾಗಿ ನೋವು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಇದನ್ನು ನಿವಾರಿಸಲು ಸಡಿಲವಾದ ಪ್ಯಾಂಟ್ ಧರಿಸುವುದೊಂದೇ ಪರಿಹಾರ.

ಬೆನ್ನು ನೋವು:ಬಿಗಿಯಾದ ಪ್ಯಾಂಟ್ ಧರಿಸಿದರೆ ಬೆನ್ನು ನೋವು ಕೂಡ ಕಂಡುಬರುತ್ತದೆ. ಅದರಿಂದ ಜೀನ್ಸ್ ಪ್ಯಾಂಟ್ ಕೊಡುವಾಗ ತುಂಬಾ ಬಿಗಿಯಾದ ಪ್ಯಾಂಟ್ ಕೊಳ್ಳದಿರುವುದು ಉತ್ತಮ.

ಉಸಿರಾಟದ ತೊಂದರೆ: ತುಂಬಾ ಬಿಗಿಯಾದ ಉಡುಪುಗಳನ್ನು ಧರಿಸಿದರೆ ಉಸಿರಾಡಲು ಕಷ್ಟವಾಗುತ್ತದೆ. ಅಲ್ಲದೆ ಕಾಲುಗಳನ್ನು ಮಡಿಚಲು ಅಥವಾ ಬಗ್ಗಲು ಸಾಧ್ಯವಿಲ್ಲ. ಕುತ್ತಿಗೆಗೆ ತುಂಬಾ ಬಿಗಿಯಾಗಿ ನಿಲ್ಲುವಂತಹ ಟೀ ಶರ್ಟ್ ಕೂಡ ಧರಿಸಬಾರದು.

ಎದೆ ಉರಿ ಮತ್ತು ಹೊಟ್ಟೆಯಲ್ಲಿ ನೋವು: ತುಂಬಾ ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಹೊಟ್ಟೆಯಲ್ಲಿ ನೋವು ಉಂಟಾಗುತ್ತದೆ, ಎದೆ ಉರಿ ಕಾಣಿಸಿಕೊಳ್ಳುತ್ತದೆ, ಬಾಯಿಯಲ್ಲಿ ಕಹಿ ನೀರು ಬರಲಾರಂಭಿಸುತ್ತದೆ. ಆದ್ದರಿಂದ ದಿನವೂ ಬಿಗಿಯಾದ ಉಡುಪುಗಳನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಚರ್ಮದಲ್ಲಿ ಹುಣ್ಣು: ತುಂಬಾ ಹೆಚ್ಚು ಅವಧಿ ಮೈಗಟ್ಟುವ ಬಟ್ಟೆಗಳನ್ನು ತೊಟ್ಟರೆ, ಅದು ಚರ್ಮದ ಮೇಲೆ ಹುಣ್ಣನ್ನು ಉಂಟು ಮಾಡಬಹುದು. ತುಂಬಾ ಬಿಗಿಯಾದ ಉಡುಪು, ತೊಡುವುದರಿಂದ ಚರ್ಮದಲ್ಲಿ ಅತಿಯಾದ ಬೆವರು ಉತ್ಪಾದನೆಯಾಗಿ ಗಾಳಿ ಆಡದೆ ಇದ್ದ ಸಮಯದಲ್ಲಿ ಬೆವರು ಅಲ್ಲೇ ಸೇರಿಕೊಂಡು ತುರಿಕೆ ಉಂಟಾಗುತ್ತದೆ ಕಜ್ಜಿ ಹುಣ್ಣುಗಳಾಗುವ ಸಂಭವ ಹೆಚ್ಚು. ಆದ್ದರಿಂದ ಪ್ಯಾಂಟ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರದಿಂದ ಆಯ್ಕೆ ಮಾಡಿ

ಚರ್ಮದ ಗುಳ್ಳೆ: ಮೈ ಗಂಟು ವಚನಗಳು ಮತ್ತು ಎಲ್ಲಾ ಒಳಉಡುಪುಗಳನ್ನು ಧರಿಸುವಾಗ ಎಚ್ಚರದಿಂದ ಇರಿ. ಅತಿಯಾದ ಒತ್ತಡ ಮತ್ತು ಗಾಳಿಗೆ ಸರಿಯಾದ ಅವಕಾಶವಿಲ್ಲದಿರುವುದು ಕೆಂಪು ಗುಳ್ಳೆಗಳನ್ನು ಉಂಟು ಮಾಡಬಹುದು.

ತುರಿಕೆ: ತುಂಬಾ ಬೆವರುವವರು. ಈ ಟೈಟ್ ಉಡುಪುಗಳನ್ನು ತೊಟ್ಟರೆ ಅದು ಬ್ಯಾಕ್ಟೀರಿಯಾ ಬೇಗನೆ ಬೆವರಿನ ಮೂಲಕ ಚರ್ಮಕ್ಕೆ ಸೋಂಕು ತಗಲುವoತೆ ಮಾಡುತ್ತವೆ. ಗಟ್ಟಿಯಾದ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವುದರಿಂದ ಗುಪ್ತಾಂಗಗಳಲ್ಲಿ ತುರಿಕೆ ಸಂಭವಿಸಬಹುದು. ನೀವು ಎಷ್ಟೇ ಔಷಧಿ ತೆಗೆದುಕೊಂಡರು ಸಹ ಬಿಡಿ ಉಡುಪು ಧರಿಸುವುದನ್ನು ನಿಲ್ಲಿಸುವವರೆಗೂ ನಿಮ್ಮನ್ನು ಬಿಡುವುದಿಲ್ಲ.

ರಕ್ತಸಂಚಲನ ಕುಂದುವಿಕೆ: ನಿಮ್ಮ ಚರ್ಮ ಮತ್ತು ಆರೋಗ್ಯ ಸಮತೋಲನದಲ್ಲಿ ಇರಬೇಕೆಂದರೆ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ನಡೆಯಬೇಕು ಆದರೆ ಈ ಗಟ್ಟಿ ಉಡುಪುಗಳು ರಕ್ತಸಂಚಲನವನ್ನು ಕುಂಠಿತಗೊಳಿಸುತ್ತವೆ.

ಹೊಟ್ಟೆ ನೋವು ಶುರುವಾಗುತ್ತದೆ: ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್ ಧರಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಜಠರ ಮತ್ತು ಕರುಳಿನ ಸಮಸ್ಯೆಗೆ ಕಾರಣವಾಗುತ್ತದೆ. ಈ ಬಿಗಿಯಾದ ಬಟ್ಟೆಯಿಂದ ಹೊಟ್ಟೆಯಲ್ಲಿನ ಆಮ್ಲದಪ್ರಮಾಣವು ಹೆಚ್ಚಾಗುತ್ತದೆ ಇದರಿಂದ ಸೊಂಟಗಳನ್ನು ಹಿಸುಕುವುದು ಮಾತ್ರವಲ್ಲದೆ, ಹೊಟ್ಟೆಯ ಆಮ್ಲವು ಅನ್ನನಾಳದ ಮೇಲೆ ಪರಿಣಾಮ ಬೀರುತ್ತದೆ. ಇದು ಆಸಿಡ್ ರಿಫ್ಲೆಕ್ಸ್ ಮತ್ತು ಎದೆಯರಿಗೆ ಕಾರಣವಾಗಬಹುದು.

ಈಸ್ಟ್ ಸೋಂಕುಗಳಿಗೆ ಕಾರಣವಾಗಬಹುದು: ಮಹಿಳೆಯರು ಟೈಟ್ ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್ ಹಾಕುವುದರಿಂದ ಈಷ್ಟು ಸೋಂಕಿನ ಲಕ್ಷಣವನ್ನು ಕಾಣಬಹುದು ಏಕೆಂದರೆ ತುಂಬಾ ಬಿಗಿಯಾದ ಬಟ್ಟೆಯಿಂದ ಚರ್ಮವು ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ಬೆವರು ಉಂಟಾಗಿ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಇದರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ಗಳು ಉತ್ಪಾದನೆಯಾಗುತ್ತದೆ.
ಮತ್ತು ಬಿಗಿಯಾದವಳ ಉಡುಪುಗಳನ್ನು ಧರಿಸುವುದರಿಂದ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಇದರಿಂದ ದೇಹದ ಆರೋಗ್ಯಕ್ಕೆ ಹಾನಿಕಾರಕ.ಮಹಿಳೆಯರ ಖಾಸಗಿ ಭಾಗಗಳಲ್ಲಿ ನೋವು ಉಂಟುಮಾಡುವ ಸ್ಥಿತಿಯಾಗಿದ್ದು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಜೀನ್ಸ್ ತೊಟ್ಟು ನಡೆದಾಡುವಾಗ ಗಾಳಿಯ ಕೊರತೆಯಿಂದ ಜನನಾಂಗದ ಒಳಭಾಗದಲ್ಲಿ ಹೆಚ್ಚು ಬಿಸಿಯಾಗಿ ಈ ಭಾಗದಲ್ಲಿ ಶಿಲೀಂದ್ರ ಸೋಂಕು ಉಂಟಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಪರಿಣಾಮವಾಗಿ ಮೂತ್ರಕೋಶ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ.

ಇಂತಹ ಬಿಗಿ ಉಡುಪುಗಳನ್ನು ತೊಟ್ಟು ಆರೋಗ್ಯಕ್ಕೆ ಸುಖ ಸುಮ್ಮನೆ ತೊಂದರೆ ತಂದುಕೊಳ್ಳುವ ಬದಲು ಸ್ವಲ್ಪ ಸಡಿಲವಾದ ಉಡುಪುಗಳನ್ನು ತೊಟ್ಟು ನಿಮ್ಮ ತ್ವಚೆ ಸ್ವಚ್ಛಂದವಾಗಿ ಉಸಿರಾಡಲು ಅವಕಾಶ ಮಾಡಿಕೊಡಿ ಆಗ ನಿಮ್ಮ ಆರೋಗ್ಯಕರ ತ್ವಚೆ ಬಿಗಿಡುಪುಗಳ ಹೊರತಾಗಿಯೂ ನಿಮ್ಮ ಚಂದವಾಗಿ ಕಾಣಲು ಅವಕಾಶ ಮಾಡಿಕೊಡುತ್ತದೆ.

ಅಥವಾ ಟೈಟ್ ಬಟ್ಟೆಗಳನ್ನು ಇದ್ದರೆ ಆಗಾಗ ಮಾತ್ರ ತೊಟ್ಟು ಕೊಳ್ಳಿ ಮತ್ತು ವ್ಯಾಯಾಮ ಮಾಡುವುದನ್ನು ಹೆಚ್ಚಾಗಿ ರೂಡಿಸಿಕೊಳ್ಳಿ. ನಮ್ಮ ಸಮಾಜದಲ್ಲಿ ಎಲ್ಲರಂತೆ ನಾವು ತಲೆ ಎತ್ತಿ ಎಲ್ಲರ ಮಧ್ಯೆ ಗೌರವತವಾಗಿ ಬಾಳಬೇಕೆಂದರೆ ನಮ್ಮ ಹುಡುಗಿ ಗಳು ಬಹಳ ಪ್ರಭಾವ ಬೀರುತ್ತವೆ. ಮುಖ ನೋಡಿ ಮಣೆ ಹಾಕುವ ಎಂಬಂತೆ ನಮ್ಮನ್ನು ನೋಡುವ ಜನರು ನಾವು ಹಾಕುವ ಬೆಟ್ಟಗಳ ಮೇಲು ತಮ್ಮ ಗಮನ ಹರಿಸುತ್ತಾರೆ.

ನಾವು ಹಾಕಿದ ಬಟ್ಟೆ ಚೆನ್ನಾಗಿದ್ದರೆ ನಮಗೆ ಎಲ್ಲಿಲ್ಲದ ಗೌರವ ಲಭಿಸುತ್ತದೆ. ಒಂದು ವೇಳೆ ನಮ್ಮ ಬಟ್ಟೆ ಕಳಪೆ ಗುಣಮಟ್ಟದ್ದಾಗಿದ್ದರೆ ಅಥವಾ ನೋಡಲು ಅಷ್ಟೇನೂ ಚೆನ್ನಾಗಿಲ್ಲದಿದ್ದರೆ ಮೂಗು ಮುರಿಯುತ್ತಾರೆ..
ಅದೇನೇ ಇರಲಿ ನಾವು ಹಾಕುವ ಬಟ್ಟೆ ನಮ್ಮ ದೇಹಕ್ಕೆ ಆರಾಮವಾಗಿದೆ ಎನಿಸಬೇಕು. ನಮ್ಮ ಬಟ್ಟೆ ನಮಗೆ ಮುಜುಗರ ಉಂಟುಮಾಡಬಾರದು. ಬೇಸಿಗೆಗಾಲ ಚಳಿಗಾಲ ಮಳೆಗಾಲ ಹೀಗೆ ಕಾಲಕಾಲಕ್ಕೆ ತಕ್ಕಂತೆ ನಮ್ಮ ಉಡುಗೆತೊಡುಗೆಗಳು ಬದಲಾಗುತ್ತಿರುತ್ತವೆ. ಆದರೆ ಯಾವ ಸಮಯದಲ್ಲಿ ಆದರೂ ನಮ್ಮ ಬಟ್ಟೆ ನಮಗೆ ಸರಳವಾಗಿ ಒಪ್ಪುವಂತೆ ಇದ್ದರೆ ಸಾಕು.

Leave a Comment