ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು

ನಾವು ಈ ಲೇಖನದಲ್ಲಿ ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳು ಯಾವುದು ಎ೦ದು ತಿಳಿಯೋಣ .1 . ಹಿರಿಯರ ಕಾರ್ಯ ಮಾಡದೇ ಇರುವುದು .2 . ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಮುಂದಕ್ಕೆ ಹಾಕುವುದು ಅಥವಾ ಪರಿಗಣಿಸುವುದು .

3 . ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರೂ ಗಮನಿಸದೇ ಹಾಗೇ ಇರುವುದು .4 . ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ . ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.5 . ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿ ಇದ್ದರೂ ಒಗೆಯದೇ ಅದನ್ನೇ ಬಳಸುವುದು .

6 . ಹಾಲು ನೀರನ್ನು ಒಟ್ಟಿಗೆ ತರುವುದು .7 . ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಜೊತೆಯಲ್ಲಿ ಇಟ್ಟು ಆರತಿ ಮಾಡದೇ ಇರುವುದು .8 . ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿ ಇಲ್ಲದೆ ಇರುವುದು .

9 . ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು ಅದರ ಬದಲು ನಾಳೆ ಕೊಳ್ಳುತ್ತೇನೆ ಎಂದು ಹೇಳಿ .10 . ಮೊಂಡು ಪೊರಕೆಯನ್ನು ಬಳಸುವುದು .11 . ವರ್ಷಕ್ಕೆ ಒಮ್ಮೆಯಾದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸಿಹಿ ಊಟ ಬಟ್ಟೆ ದಾನ ಮಾಡದೇ ಇರುವುದು .

12 . ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು .13 . ರೊಟ್ಟಿಯ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕಬಾರದು .

14 . ಹಾಸಿಗೆಯನ್ನು ಪೂರಕೆಯಿಂದ ಕ್ಲೀನ್ ಮಾಡುವುದು .15 . ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು . ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ನಲ್ಲಿ ಇಡುವುದು .16 . ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು .

17 . ಟವೆಲ್, ಚಿಕ್ಕ ಚಾಪೆ , ಮಣಿ . ಯಾವುದೂ ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು.18 . ದೇವರ ದರ್ಶನ ಪಡೆದು ಮನೆಗೆ ಬಂದ ತಕ್ಷಣ ಕುಣಿದಾಡುವುದು ಪಾದಗಳನ್ನು ತೊಳೆಯುವುದು . 19 . ಹಸಿದವರಿಗೆ ಊಟ ಕೊಡದೆ ಕಳುಹಿಸುವುದು .20 . ಮುರಿದ ಬಾಚಣಿಕೆಯಿಂದ ತಲೆ ಬಾಚುವುದು . ಇದು ರಾಹುವಿನ ತತ್ವ ಹೊಂದಿರುತ್ತದೆ. ಅದು ಬಡತನ ತರುತ್ತದೆ.

21 . ಪರ್ಸ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟುಗಳನ್ನು ಒಟ್ಟಿಗೆ ಇಡುವುದು . 22 . ದೇವಸ್ಥಾನಲ್ಲಿ ದಾನ ಮಾಡದೇ ಊಟ ಮಾಡಿ ಬರುವುದು. 23 . ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು .

24 . ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕರ್ ಗಳನ್ನು ಅಂಟಿಸುವುದು . 25 . ಮನೆ ಒಳಗೆ ರಾತ್ರಿ ಇಡೀ ಕಸ ಅಥವಾ ಮುಸುರೆ ಮಾಡುವುದು . 26 . ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೇ ಇರುವುದು .

27 . ಮುಸ್ಸಂಜೆ ಹೊತ್ತು ಮಲಗುವುದು , ಹಲ್ಲನ್ನು ಕಡಿಯುವುದು . 28 . ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿ ಆಗುವುದು ಅಥವಾ ಅವರ ಮುಂದೆ ಕುಣಿದಾಡುವುದು . 29 . ಊಟ ಇರುವ ತಟ್ಟೆಯನ್ನು ದಾಟುವುದು .

30 . ಹೊಸ್ತಿಲ ಒಳಗೆ ಒಂದು ಕಾಲು ಹೊರಗೆ ಕಾಲು ಹಾಕಿ ನಿಲ್ಲುವುದು . ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು . 31 . ಮನೆಯಲ್ಲಿ ಬೇಧ ಭಾವ ಮಾಡುವುದು .

32 . ಊಟದ ತುತ್ತನ್ನು ತೂಕ ಹಾಕುತ್ತ ತಿನ್ನುವುದು . ಉಂಡೆ ಕಟ್ಟುವುದು ಅಥವಾ ಕುಣಿದಾಡಿ ತಿನ್ನುವುದು . 33 . ಮನೆಯಲ್ಲಿ ಶಾಪ ಹಾಕುವುದು . 34 . ಕೆಲಸವನ್ನು ಮುಂದೂಡುವ ಅಭ್ಯಾಸ .

35 . ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಹಾಗೆಯೇ ಉಪಯೋಗಿಸುವುದು, 36 . ದೇವರ ಪೂಜಾ ಸಾಮಗ್ರಿಗಳು ಮೊಂಡಾಗಿ ಇದ್ದರೆ, ಮುಕ್ಕಾಗಿ ಇದ್ದರೆ, ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು .

37 . ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೆ ಬಿಡುವುದು . 38 . ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸುವುದು .

Leave a Comment