ಅಕ್ಷಯ ತೃತೀಯ ಸರಳ ಪೂಜಾ ವಿಧಾನ

0

ಅಕ್ಷಯ ತೃತೀಯ ಈ ಬಾರಿಯ ಅಕ್ಷಯ ತೃತೀಯ ಬಹಳ ವಿಶೇಷವಾಗಿ 10 ಮೇ 2024ರಂದು ಬಂದಿದೆ.
ಇನ್ನೂ ಈ ದಿನ ಯಾವುದೇ ಶುಭ ಕಾರ್ಯ ಮತ್ತು ಬೆಲೆಬಾಳುವ ವಸ್ತುವನ್ನು ಕೊಂಡುಕೊಂಡರೆ ಅಕ್ಷಯವಾಗುತ್ತದೆ ಎಂಬ ಪ್ರತೀತಿ ಇದೆ. ಇನ್ನೂ ಅಕ್ಷಯ ತೃತೀಯ ದಿನ ಯಾವ ರೀತಿ ಸರಳ ಪೂಜೆ ಮಾಡಬೇಕು ಎಂದು ತಿಳಿಯೋಣ ಬನ್ನಿ.

ಮೊದಲಿಗೆ 1 ಟೇಬಲ್ ಮೇಲೆ ಶುಚಿಯಾಗಿರುವಂತಹ ವಸ್ತ್ರವನ್ನು ಹಾಕಿ ಅದರ ಮೇಲೆ ಶ್ರೀ ಮಹಾಲಕ್ಷ್ಮೀದೇವಿಯ ಫೋಟೋವನ್ನು ಇಡಬೇಕು. ಹೂವಿನ ಅಲಂಕಾರವನ್ನು ಮಾಡಿ , 2 ದೀಪಗಳನ್ನು ಇಟ್ಟು ಬೆಳಗಿಸಬೇಕು. ದೀಪವನ್ನು ಬೆಳಗಿಸುವಾಗ ಈ ಕೆಳಗಿನ ಮಂತ್ರವನ್ನು ಹೇಳಿಕೊಳ್ಳಿ.

” ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ

ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ

ದೀಪೋ ಹರತುಮೆ ಪಾಪಂ ಸಂಧ್ಯಾದೀಪ ನಮೋಸ್ತುತೆ “

ನಂತರ 3ಅಥವಾ 5ಅಳತೆಯ ಅಕ್ಕಿಯನ್ನು ತೆಗೆದುಕೊಂಡು 1 ತಟ್ಟೆಯಲ್ಲಿ ಹಾಕಿ ,
ಆ ತಟ್ಟೆಯಲ್ಲಿ ಅಷ್ಟದಳ ಪದ್ಮವನ್ನು ಬರೆಯಬೇಕು.

ಆ ಅಕ್ಕಿಯ ಮಧ್ಯ ಅರಿಶಿನ ಕುಂಕುಮ ಅಕ್ಷತೆಗಳನ್ನು ಹಾಕಿ ಕಳಸವನ್ನು ಇಟ್ಟು ಅರಿಶಿನ ಕುಂಕುಮ ಶುದ್ಧವಾಗಿರುವಂತಹ ನೀರು ಜೊತೆಗೆ 1 ನಾಣ್ಯವನ್ನು ಕಲಸದೊಳಗೆ ಹಾಕಿ ಗಂಗಾದೇವಿಯನ್ನು ಪ್ರಾರ್ಥನೆ ಹೀಗೆ ಮಾಡಿ .

“ಗಂಗೇಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು”

ಹೀಗೆ ಪ್ರಾರ್ಥನೆ ಮಾಡಿದ ನಂತರ ದೇವಿಗೆ ಹೂವಿನ ಸಹಾಯದಿಂದ ಮನೆಗೆಲ್ಲ ಪ್ರೋಕ್ಷಣೆ ಮಾಡಿ
ಇದರಿಂದ ಅಶುದ್ಧತೆ ನಿವಾರಣೆಯಾಗುತ್ತದೆ.

ಈಗ ಚಿಕ್ಕ ಲಕ್ಷ್ಮೀ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ ನಂತರ ಕಳಸದ ಮೇಲೆ ಒಂದು ಚಿಕ್ಕ ತಟ್ಟೆಯನ್ನು ಇಟ್ಟು ಅದರ ಮೇಲೆ ಚಿಕ್ಕ ಪಂಚಾಮೃತ ಅಭಿಷೇಕ ಮಾಡಿದಂತಹ ಲಕ್ಷ್ಮೀ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು.ನಂತರ ಕಳಸದ ಮೇಲೆ ಹೂವು ಗಂಧ ಅರಿಸಿನ ಕುಂಕುಮ ಇತ್ಯಾದಿಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಬೇಕು.

ಇನ್ನು ಮನೆಯಲ್ಲಿ ಇರುವ ಯಾವುದೇ ರೀತಿಯ ಬಂಗಾರವನ್ನು ಅರಿಶಿನದ ನೀರಿನಿಂದ ಶುಭ್ರವಾಗಿ ಲಕ್ಷ್ಮಿ ದೇವಿಗೆ ಸಮರ್ಪಿಸಬೇಕು. ಬಂಗಾರದ ಜೊತೆಗೆ ನೀವೇನಾದರೂ ಹೊಸದಾಗಿ ಯಾವುದೇ ರೀತಿಯ ಬೆಲೆ ಬಾಳುವ ಅಗತ್ಯವಾದ ಅತ್ಯಮೂಲ್ಯವಾದ ವಸ್ತುವನ್ನು ಖರೀದಿ ಮಾಡಿದ್ದರೆ ಅದನ್ನು ಸಹ ಸಮರ್ಪಣೆ ಮಾಡಬೇಕು.

ಇನ್ನೂ ಈ ದಿನ ದೇವರಿಗೆ ಸಮರ್ಪಿಸುವ ಪ್ರತಿಯೊಂದು ವಸ್ತುವೂ ದುಪ್ಪಟ್ಟು ಜಾಸ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಂದರೆ ಅಕ್ಷಯವಾಗುತ್ತದೆ.ಹಾಗೂ ಕಾಯನ್ನು ಸಂಕಲ್ಪ ಮಾಡಿ ಬಲಗಡೆಗೆ ಇಟ್ಟು ಬಾಳೆಹಣ್ಣಿನ ತೊಟ್ಟನ್ನು ಬಿಡಿಸಿ ,ಕಾಯನ್ನು ಊದಿನ ಕಡ್ಡಿಗೆ ಹಿಡಿದು ಕಾಯನ್ನು ಹಿಡಿಯಬೇಕು.

ಇನ್ನೂ ಕಳಸವನ್ನು ಇಟ್ಟಿರುವ ತಟ್ಟೆಗೆ ಅಂದರೆ ಅಕ್ಕಿ ಹಾಕಿರುವ ತಟ್ಟೆಗೆ 108 ನಾಣ್ಯಗಳನ್ನು ಹಾಕಬೇಕು.ಅರ್ಚನೆಯನ್ನು ಮಾಡಲು ನಾಣ್ಯಗಳು , ಪುಷ್ಪಗಳು , ಅಡಕೆ , ಕವಡೆ ಇತ್ಯಾದಿಗಳನ್ನು ಬಳಸಬಹುದಾಗಿದೆ. ಈಗ ಮತ್ತೆ ದೂಪ , ಕರ್ಪೂರಾದಿಗಳನ್ನು ಬೆಳಗಿಸಿ ನಂತರ ಮತ್ತೊಮ್ಮೆ ಊದುಗಡ್ಡಿ ಯಲ್ಲಿ ಬೆಳಗಿಸಬೇಕು.

ಇನ್ನೂ ಈ ಅಕ್ಷಯ ತೃತೀಯ ದಿನ ವನ್ನು ಲಕ್ಷ್ಮೀ ಹುಟ್ಟಿದ ದಿನ ಎಂದು ಹೇಳಲಾಗುತ್ತದೆ. ಹಾಗಾಗಿ
ನೈವೇದ್ಯಕ್ಕೆ ಹಾಲು ಪಾಯಸ ಅಥವಾ ಯಾವುದೇ ಸಿಹಿ ಖಾದ್ಯ ಮಾಡಿದರೆ ಬಹಳ ಶ್ರೇಷ್ಠವಾಗಿರುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಅರಿಶಿನ , ಕುಂಕುಮವನ್ನು ಮುತ್ತೈದೆಯರಿಗೆ ನೀಡಿ ಸಂಕಲ್ಪ ಮಾಡಿಕೊಳ್ಳಿ. ಹಾಗೂ ಬಡವ ಬಲ್ಲಿದರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

ಇನ್ನೂ ಅಕ್ಷಯ ತೃತೀಯ ದಿನದಂದೇ ರಾತ್ರಿ ಮಲಗುವ ಸಮಯದಲ್ಲಿ ಸರಿಯಾದ ಸಮಯ ನೋಡಿಕೊಂಡು ಕಳಸವನ್ನು ಕದಲಿಸಿ ಕಳಸವನ್ನು ಬಲಭಾಗಕ್ಕೆ 3 ಬಾರಿ ಹಾಗೂ ಫೋಟೋವನ್ನು 3 ಬಾರಿ ಕದಲಿಸಿ. ನಂತರ ಬೆಳಿಗ್ಗೆ ತೆಗೆಯಬಹುದು.ಇನ್ನು ನಿಮ್ಮ ಮನೆಯಲ್ಲಿ ಕಳಸಾ ಇಟ್ಟಿದ್ದರೆ , ಆ ಕಳಸಕ್ಕೆ ಪೂಜೆ ಮಾಡಬಹುದು. ಧನ್ಯವಾದಗಳು.

Leave A Reply

Your email address will not be published.