ಹೆಣ್ಣು ಮಾಡುವ ಈ 4 ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿಯಾಗುತ್ತದೆ, ಆ ತಪ್ಪುಗಳು ಯಾವುದು ಗೊತ್ತಾ..?

0

ಮನುಷ್ಯ ಅಂದಮೇಲೆ ಅವನ ಜೀವನಕ್ಕೆ ಒಂದು ಗುರಿ ಇರಬೇಕು ಇಲ್ಲವಾದರೆ ಅವನ ಜೀವನಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ, ಜೀವನದಲ್ಲಿ ಗುರಿಯನ್ನ ತಲುಪುವುದಕ್ಕೆ ನಮಗೆ ಸಾಕಷ್ಟು ಅಡಚಣೆಗಳು ಆಗುತ್ತದೆ ಮತ್ತು ನಾವು ಮಾಡುವ ಕೆಲವು ತಪ್ಪುಗಳೇ ಆ ಅಡಚಣೆಗಳಿಗೆ ಕಾರಣ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ನಾವು ಈಗಿನ ಜನ್ಮದಲ್ಲಿ ಕೆಲವು ಕಷ್ಟಗಳನ್ನ ಎದುರಿಸುತ್ತ ಇರುತ್ತೇವೆ, ಇನ್ನು ಹೆಣ್ಣು ಮಾಡುವ ಕೆಲವು ತಪ್ಪುಗಳಿಂದ ಕೂಡ ಅವರ ಗಂಡ ಅವರ ಮನೆಯವರು ಬೀದಿಗೆ ಬರಬಹುದು ಎಂದು ಹೇಳುತ್ತಿದೆ ಕೆಲವು ಪುರಾಣಗಳು. ಹೆಣ್ಣು ಮಾಡುವ ಈ ಕೆಲವು ತಪ್ಪುಗಳಿಂದ ಅವಳ ಗಂಡನಿಗೆ ಅಥವಾ ಅವರ ಮನೆಯವರಿಗೆ ತಮ್ಮ ಗುರಿಯನ್ನ ತಲುಪಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಹೆಣ್ಣು ಮಾಡುವ ಈ ತಪ್ಪುಗಳಿಂದ ಅವರ ಗಂಡ ಅಥವಾ ಮನೆಯವರು ಕಷ್ಟಕರವಾದ ಜೀವನವನ್ನು ಎದುರಿಸಬೇಕಾಗುತ್ತದೆ ಮತ್ತು ವ್ಯಾಪಾರ ಅಥವಾ ವ್ಯವಹಾರದಲ್ಲಿ ಲಾಭ ಅವರಿಗೆ ಸಿಗುವುದಿಲ್ಲ. ಹಾಗಾದರೆ ಆ ಕೆಲವು ತಪ್ಪುಗಳು ಯಾವುದರ ಬಗ್ಗೆ ಎಂದು ಮಾಹಿತಿ ನೀಡಲಿದ್ದೇವೆ.

ಹೆಣ್ಣು ಮಕ್ಕಳು ತಿಳಿಯದೆ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಮೊದಲನೆಯದಾಗಿ ಹೆಣ್ಣು ಮಕ್ಕಳು ಬೆಳಗ್ಗೆ ತಡವಾಗಿ ಏಳುವುದು. ಹೆಣ್ಣು ಮಕ್ಕಳಿಗೆ ಬೆಳಗ್ಗೆ ತಡವಾಗಿ ಏಳುವುದು ಒಳ್ಳೆಯದು ಅಲ್ಲ ಮತ್ತು ಇದು ದರಿದ್ರವನ್ನು ತರುತ್ತದೆ. ಮನೆಯ ಹೆಣ್ಣು ಮಕ್ಕಳು ಬೆಳಗ್ಗೆ ಬೇಗ ಏಳುವುದರಿಂದ ದೊಡ್ಡ ಬದಲಾವಣೆಯನ್ನು ಕಾಣಬಹುದು.

ಎರಡನೇಯದಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಕೆಟ್ಟ ಮಾತುಗಳನ್ನು ಆಡಬಾರದು. ಯಾಕೆಂದರೆ ಆ ಮನೆ ಏಳಿಗೆಗೆ ಆಗುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ. ಜಗಳ ಮಾಡುವ ಹೆಣ್ಣು ಮಕ್ಕಳು ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ಇರುವುದಿಲ್ಲ. ಹೆಣ್ಣು ಮಕ್ಕಳು ಲಕ್ಷ್ಮಿಯ ರೂಪ ಅದರಿಂದ ಮನೆಯಲ್ಲಿ ಖುಷಿಯಿಂದ ಇರುವುದು ಮನೆಗೆ ಒಳಿತಾಗುತ್ತದೆ. ಹೆಣ್ಣಿನ ಕಣ್ಣೀರು ಆ ಮನೆಗೆ ಒಳ್ಳೆಯದಲ್ಲ.

ಮೂರನೇಯದಾಗಿ ಹೆಣ್ಣು ಮಕ್ಕಳು ಬಳಸುವ ಬಳೆ ಹಾಗೂ ಗೆಜ್ಜೆಗಳ್ಳನ್ನು ಬೇರೆಯವರಿಗೆ ಕೊಡಬಾರದು. ಯಾಕೆಂದರೆ ಲಕ್ಷ್ಮಿ ದೇವಿಯನ್ನು ಬೇರೆಯವರಿಗೆ ಕೊಟ್ಟ ಹಾಗೇ ಆಗುತ್ತದೆ.

ನಾಲ್ಕನೇಯದಾಗಿ ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಯಾರ ಮನೆ ಸ್ವಚ್ಛವಾಗಿ ಇರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.

Leave A Reply

Your email address will not be published.