ಆದ್ರೂ ಏನೋ ಒಂದಷ್ಟು ವಿಶೇಷ ಕುಂಭ ರಾಶಿಗೆ!

0

ನಾವು ಈ ಲೇಖನದಲ್ಲಿ ಮಾರ್ಚ್ ತಿಂಗಳ ಕುಂಭ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ. ಯಾವುದೇ ಒಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಮನೋ ವೈಜ್ಞಾನಿಕವಾಗಿ ಒಂದು ರೀತಿಯ ಸಾಮೀಪ್ಯ ಬೇಕಾಗುತ್ತದೆ. ನಮ್ಮ ಸಮಸ್ಯೆ ನಮಗೆ ಬೆಟ್ಟದ ರೀತಿ ಕಾಣುತ್ತದೆ. ಇದಕ್ಕೆ ಒಂದು ಪರಿಹಾರ ಸಿಗುತ್ತದೆ ಎನ್ನುವ ಭರವಸೆ ನಿಮ್ಮ ಮನಸ್ಸಿನಲ್ಲಿ ಇರಬೇಕು . ಸ್ವಲ್ಪ ಮಟ್ಟಿಗಾದರೂ ಪರಿಹಾರದ ಕಡೆ ಯೋಚನೆ ಮಾಡಬೇಕು. ಮಾರ್ಚ್ ತಿಂಗಳಲ್ಲಿ ಅಷ್ಟೊಂದು ಧನಾತ್ಮಕವಾಗಿ ಇರುವುದಿಲ್ಲ.

ಒಂದಷ್ಟು ವಿಷಯದಲ್ಲಿ ಗೆಲುವು ಆಗುವ ಸಾಧ್ಯತೆ ಇದೆ. ಇನ್ನಷ್ಟು ವಿಚಾರಗಳು ತೊಳಲಾಟ ಗೊಂದಲಗಳಿಗೆ ಕಾರಣವಾಗುತ್ತದೆ. ಕೆಲವರಿಗೆ ಆಶ್ಚರ್ಯ ಆಗಬಹುದು. ಇನ್ನು ಕೆಲವರಿಗೆ ಶಾಕ್ ಅಥವಾ ಗಾಬರಿಯಾಗುವ ಸಾಧ್ಯತೆ ಇದೆ. ಸಾಡೇಸಾತಿ ನಡೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು . ಅವಮಾನದ ವೈಪರಿತ್ಯಗಳು , ವಾತಾವರಣದ ಏರು ಪೇರು , ಜಗತ್ತಿನ ಎಲ್ಲಾ ಸದ್ದುಗಳು ನಿಮ್ಮ ಕಿವಿಗೆ ಬಂದು ಅಪ್ಪಳಿಸುವ ಹಾಗೆ ಆಗುತ್ತದೆ. ಆದ್ದರಿಂದ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.

ವಿರುದ್ಧವಾದ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಬರುತ್ತವೆ. ಎರಡೂ ತರಹದ ಯೋಜನೆಗಳು ಏಕಕಾಲಕ್ಕೆ ಬರುತ್ತವೆ. ಒಂದಾದ ಮೇಲೆ ಒಂದರಂತೆ ಬರುವ ಸಾಧ್ಯತೆ ಇರುತ್ತದೆ . ನಿಮ್ಮ ಮನಸ್ಸು ಧನಾತ್ಮಕವಾಗಿ ಇದ್ದಾಗ , ನಮ್ಮ ಯೋಗ್ಯತೆ ಮತ್ತು ತೃಪ್ತಿಯ ಮಟ್ಟಕ್ಕೆ ನಿಮ್ಮ ಜೀವನ ಇದೆ ಎಂದು ಗೊತ್ತಾಗುತ್ತದೆ. ಮತ್ತೊಂದು ಸಲ ಜೀವನ ತೃಪ್ತಿಯ ಮಟ್ಟದಲ್ಲಿ ಇಲ್ಲ ಎಂದು ಅನ್ನಿಸುತ್ತದೆ. ಈ ರೀತಿಯ ದ್ವಂದ್ವಗಳು ಬರುತ್ತಿರುತ್ತವೆ. ಸರಿ-ತಪ್ಪುಗಳ ನಡುವೆ ಗಮನ ಹರಿಸುತ್ತವೆ.

ನಿಮ್ಮ ಗಮನ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬೇಕು ಅನ್ನುವುದರ ಬದಲು ಸರಿ-ತಪ್ಪುಗಳ ಕಡೆ ಹೋಗುತ್ತೀರಾ. ಇದಕ್ಕೆ ಪರಿಹಾರ ಜೀವನದಲ್ಲಿ ಯಾವುದಾದರೂ ಒಂದು ದಾರಿಯಲ್ಲಿ ಹೋಗಬೇಕು. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು. ರಸ್ತೆಯಲ್ಲಿ ಓಡಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಆಗ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದು ತುಂಬಾ ಪ್ರಮುಖವಾಗುತ್ತದೆ. ಕಣ್ಣಿಗೆ ಬೀಳುವುದು ನಿಜವಾಗಿ ಇರುವುದಿಲ್ಲ . ನಿಮ್ಮಲ್ಲಿ ಪರಿವರ್ತನೆ ತರುವ ಧನಾತ್ಮಕ ಬದಲಾವಣೆಯಿಂದ ಮುಂದೆ ಹೋಗುವುದಕ್ಕೆ ಕಾರಣವಾಗುತ್ತದೆ. ಯಾವುದಾದರು ಕೆಲಸ ಮುಂದುವರಿಯುತ್ತಿದ್ದರೆ, ಅದನ್ನು ನಡೆಸಿಕೊಂಡು ಹೋಗುವುದು ಒಳ್ಳೆಯದು .

ಒಂದು ಒಳ್ಳೆಯ ಮಾತು ಆಡುವವರು ಯಾರೂ ಇರುವುದಿಲ್ಲ . ಈ ರೀತಿಯ ವಾತಾವರಣ ನಿಮ್ಮನ್ನು ಪದೇ ಪದೇ ಕಾಡುತ್ತದೆ. ಹೊಸದಾಗಿ ಶುರು ಮಾಡಿರುವ ವ್ಯವಹಾರ ಮುಂದೆ ಹೋಗದೆ ನಿಂತಲ್ಲೇ ನಿಲ್ಲುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳಲ್ಲಿ ಗೊಂದಲ , ವಿಚಾರಗಳಲ್ಲಿ ಗಮನ ಸರಿಯಾಗಿ ಹರಿಸದೇ ಇರಬಹುದು. ಸಾಡೇಸಾತಿ ಸಮಯದಲ್ಲಿ ಕೇಂದ್ರಿಕೃತವಾಗಿ ಇರುತ್ತಾರೆ. ವಿಶೇಷವಾಗಿ ತಮ್ಮ ಬಗ್ಗೆ ಪದೇ ಪದೇ ಯೋಜನೆ ಮಾಡುತ್ತಿರುತ್ತಾರೆ. ನಿಮ್ಮ ಬಗ್ಗೆ ಮತ್ತು ನಿಮ್ಮ ಸುತ್ತಮುತ್ತಲಿನ

ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಕೆಲಸದ ಬಗ್ಗೆ ಹೆಚ್ಚಾಗಿ ಗಮನ ಕೊಡಿ, ಪ್ರತಿಫಲಗಳು ನಿಮಗಾಗಿ ಕಾಯುತ್ತಿರುತ್ತವೆ. ಬಹಳ ಅದ್ಭುತವಾದ ವಿಚಾರಗಳು ನಿಮ್ಮದಾಗುತ್ತವೆ. ದ್ವಿತೀಯಾದಲ್ಲಿ ಬುಧ ಗ್ರಹ ಇದೆ. ಬುಧ ಗ್ರಹದ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಆಗುತ್ತದೆ. ಸಾಮಾನ್ಯ ಜನರ ವಿಚಾರದಲ್ಲಿ ಹೇಳುವುದಾದರೆ, ಮಾತಿನಲ್ಲಿ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಬಹಳಷ್ಟು ಬದಲಾವಣೆ , ಧನ ಆಗಮನ ಕೂಡ ಆಗುತ್ತದೆ. 7 ನೇ ತಾರೀಖಿನ ನಂತರ ಬುಧ ಗ್ರಹದಿಂದ ಬಹಳ ಒಳ್ಳೆಯದು ಆಗಲಿದೆ. ಶುಕ್ರ ಗ್ರಹ ಕೂಡ ನಿಮ್ಮ ರಾಶಿಗೆ ಬರುತ್ತದೆ. ಶುಕ್ರ ಗ್ರಹ ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ

ಈ ತಿಂಗಳುಗಳಲ್ಲಿ ಕೈಗೆ ಎಟಕುವ ಸಾಧ್ಯತೆ ಶುಕ್ರನಿಂದ ದೊರೆಯುತ್ತದೆ. ಆದರೆ ಕೆಲಸ ನಿರ್ವಹಿಸುವವರಿಗೆ ನಿರೀಕ್ಷೆಯ ಮಟ್ಟದಲ್ಲಿ ಲಾಭ ಇರುವುದಿಲ್ಲ . ಕೆಲವು ವ್ಯಕ್ತಿಗಳಿಗೆ ಅಚಾನಕ್ಕಾಗಿ ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ . ಮನಸ್ಸು ಎರಡೂ ಕಡೆ ತೊಳಲಾಡಿದಾಗ , ಮನಸ್ಸು ಧನಾತ್ಮಕತೆಯ ಕಡೆ ಬಂದಾಗ, ಇಲ್ಲಿ ಉಳಿಯುವುದಕ್ಕೆ ಪ್ರಯತ್ನ ಮಾಡಬೇಕು. ಮನಸ್ಸಿಗೆ ಖುಷಿ ಆಯಿತು ಎಂದರೆ, ನಕಾರಾತ್ಮಕ ವಿಚಾರಗಳನ್ನು ನೆನಪು ಮಾಡಿಕೊಳ್ಳಬೇಡಿ. ಅದು ನೆನಪಿಗೆ ಬಂದರೂ ಕೂಡ, ಅದನ್ನು ಮರೆಯಲು ಪ್ರಯತ್ನ ಮಾಡಿ, ಈ ಸಂದರ್ಭದಲ್ಲಿ ಖುಷಿಯಾಗಿರಲು ಎಷ್ಟು ಸಾಧ್ಯವೋ, ಅಷ್ಟು ನೆನಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ ಪ್ರಯತ್ನ ಮಾಡಿ, ಭವಿಷ್ಯದ ಬಗ್ಗೆ ಯೋಚನೆ ತಲೆಯಲ್ಲಿ ಬಂದಾಗ ಅದನ್ನು ತೆಗೆದು ಹಾಕಿ . ನೀವು ಖುಷಿಯನ್ನು ಹಂಚಿಕೊಂಡಾಗ ಅದು ಜಾಸ್ತಿಯಾಗುತ್ತದೆ. ಈ ರೀತಿಯ ಕ್ರಮಗಳ ಮೂಲಕ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಂಡು ಎಚ್ಚರವಾಗಿ ಇರಬೇಕು ಎಂದು ಹೇಳಲಾಗಿದೆ.

Leave A Reply

Your email address will not be published.