ಪುಷ್ಯ ರಾಗ ಅಥವಾ ಕನಕ ಪುಷ್ಯ ರಾಗ ಇದು ಗುರು ಗ್ರಹಕ್ಕೆ ಅತ್ಯಂತ ಪ್ರಿಯವಾಗಿರುತ್ತದೆ. ಗುರು ಗ್ರಹದ ಅನುಗ್ರಹ ಬೇಕಾಗಿರುವವರು ಕನಕಪುಷ್ಯರಾಗವನ್ನು ಧರಿಸಬೇಕು. ರತ್ನ ವಿಶೇಷತೆಗಳಲ್ಲಿ ಹಳದಿ ಬಿಳಿ ಮತ್ತು ಬಂಗಾರದ ಬಣ್ಣದಲ್ಲಿ ಈ ರತ್ನ ದೊರಕುತ್ತದೆ. ಬಂಗಾರದ ಬಣ್ಣದ ರತ್ನ ವಿಶೇಷವಾದ ರತ್ನವಾಗಿದೆ. ವಿಶೇಷವಾಗಿ ಮಹಿಳೆಯರು ವಿವಾಹದ ವಿಚಾರವಾಗಿ ಅಮಂಗಳಗಳು ಸಂಭವಿಸುತ್ತಿದ್ದರೆ ಅಂತಹ ಹೆಣ್ಣು ಮಕ್ಕಳು ಶೀಘ್ರ ವಿವಾಹಕಾಗಿ ಅಥವಾ ವಿವಾಹ ಪ್ರತಿಬಂಧಕ ದೋಷ ನಿವಾರಣೆಗಾಗಿ
ಈ ರತ್ನವನ್ನು ಶರೀರದ ಮೇಲೆ ಧರಿಸಬೇಕು. ಇದರಿಂದ ಗುರು ಬಲವು ಶೀಘ್ರದಲ್ಲಿ ಉಂಟಾಗುತ್ತದೆ. ಅಂತಹ ವಿವಾಹಕ್ಕೆ ಅಣಿಯಾಗಿರುವ ಹೆಣ್ಣುಮಕ್ಕಳಿಗೆ ಗುರುವಿನ ಬಲವನ್ನು ತಂದು ಕೊಡುವಂತದ್ದು ಈ ಕನಕ ಪುಷ್ಯರಾಗವಾಗಿರುತ್ತದೆ. ಈ ರತ್ನವನ್ನು ಧಾರಣೆ ಮಾಡುವುದರಿಂದ ಪತಿ ಪತ್ನಿಯರಲ್ಲಿ ಪ್ರೇಮ ರಾಗವು ವೃದ್ಧಿಯಾಗುತ್ತದೆ.
ಅರ್ಥಾತ್ ಸುಖ ದಾಂಪತ್ಯ ಜೀವನದ ನಿರ್ವಹಣೆಗಾಗಿಯೂ ಸಹ ಸಹಕಾರಿಯಾಗುತ್ತದೆ. ಪ್ರಸವವೇಳೆಯಲ್ಲಿ ಹೆಣ್ಣು ಮಕ್ಕಳು ಸೊಂಟದಲ್ಲಿ ಈ ರತ್ನವನ್ನು ಧಾರಣೆ ಮಾಡುವುದರಿಂದ, ಪ್ರಸವ ವೇದನೆಯಿಂದ ಉಂಟಾಗುವಂತಹ ಗಾದೆಯು ಸ್ವಲ್ಪಮಟ್ಟಿಗೆ ದೂರವಾಗುತ್ತದೆ ಸಹಕಾರಿಯಾಗುತ್ತದೆ. ಕನಿಷ್ಠಪಕ್ಷ ಮೂರು ಕ್ಯಾರಟ್ ಇರುವಂತಹ ಈ ರತ್ನವನ್ನು ಧಾರಣೆ ಮಾಡುವುದರಿಂದ ಕಾಮಾಲೆ ರೋಗವನ್ನು ದೂರ ಮಾಡಬಹುದು.
ಕೆಲವೊಬ್ಬರ ಬಾಯಿ ದುರ್ಗಂಧವನ್ನು ಹೊರಸುಸುತ್ತಿರುತ್ತದೆ ಅವರು ಕನಕಪುಷ್ಯರಾಗವನ್ನು ಶರೀರದಲ್ಲಿ ಧಾರಣೆ ಮಾಡುವುದರಿಂದ ಈ ದೋಷವು ದೂರವಾಗುತ್ತದೆ. ಗುರುವಿನ ಅನುಗ್ರಹದಿಂದ. ಕನಿಷ್ಠಪಕ್ಷ 5 ಕ್ಯಾರೆಟ್ ಕನಕ ಪುಷ್ಯ ರಾಗವನ್ನು ಶರೀರದಲ್ಲಿ ದಾರಣೆಯನ್ನು ಶುಭಮುಹೂರ್ತದಲ್ಲಿ ಮಾಡುವುದರಿಂದ ಖಂಡಿತವಾಗಿಯೂ ದಾಂಪತ್ಯ ಜೀವನದಲ್ಲಿ ಬಿರುಕು ದೂರವಾಗುತ್ತದೆ.
ಪುತ್ರ ಸಂತಾನವಿಲ್ಲದವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳ ಜ್ಞಾನ ವಿವರ್ಧನೆಯಾಗಲು ಸಹಕಾರಿ.
ಆರೋಗ್ಯದ ಸುಸ್ಥಿತಿಗಾಗಿಯು ಅನುಕೂಲಕರ. ಸಮಾಜದಲ್ಲಿ ಗೌರವಮಾನ ಸನ್ಮಾನ ದೊರಕಲು, ಸ್ತ್ರೀಯರಲ್ಲಿ ದಾಂಪತ್ಯದಲ್ಲಿ ಸದಾ ಪ್ರೇಮ ಕುರವಾಗಲು. ಪತಿಯಾಯುಷ್ಯ ಅಭಿವೃದ್ಧಿಗಾಗಿ, ಕಲುಷಿತ ವಿಚಾರಗಳು ಮನಸ್ಸಿನಿಂದ ದೂರವಾಗಲು, ಮೂತ್ರ ಸಂಬಂಧಿತ ಸಮಸ್ಯೆ ದೂರವಾಗಲು, ಕನಿಷ್ಠಪಕ್ಷ ಆರು ಕ್ಯಾರಟ್ ಇರುವ ಕನಕ ಪುಷ್ಯ ರಾಘವನು ಶರೀರದಲ್ಲಿ ಧಾರಣೆ ಮಾಡುವುದರಿಂದ, ಗುರುವಾರದ ದಿನ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಈ ರತ್ನಮ್ಮನ ಧಾರಣೆ ಮಾಡಿಕೊಳ್ಳಿ, ಬೆಳ್ಳಿ ಅಥವಾ ಬಂಗಾರದಲ್ಲಿ ಲೋಹದಲ್ಲಿ ಧಾರಣೆ ಮಾಡಿಕೊಳ್ಳುವುದು.
ದೇವಾನಾಂಚ ಋಷಿ ನಾಂಚ ಗುರು ಕಾಂಚನ ಸನ್ನಿಪಂ ಬುದ್ಧಿ ಬೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ಈ ಮಂತ್ರವನ್ನು ಶ್ಲೋಕದ ರೂಪದಲ್ಲಿ ಉಚ್ಛರಿಸುತ್ತಾ ಶಸ್ತ್ರೋಕ್ತವಾಗಿ ರತ್ನವನ್ನು ಧರಿಸಬೇಕು.