ಆರೋಗ್ಯವಾಗಿರಲು 20 ನಿಯಮಗಳು

0

ನಾವು ಈ ಲೇಖನದಲ್ಲಿ ಆರೋಗ್ಯವಾಗಿ ಇರಲು 20 ನಿಯಮಗಳನ್ನು ತಿಳಿಸಲಾಗಿದೆ. ಅವುಗಳು ಈ ಕೆಳಕಂಡಂತೆ ಇವೆ : -ಬೆಳಿಗ್ಗೆ ಬೇಗನೆ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ , ನೀವು ಪ್ರತಿದಿನ ಎದ್ದೇಳಬೇಕು. ಬೆಳಗಿನ ವಾತಾವರಣ ವನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6 ರ ನಡುವೆ ಎದ್ದರೆ , ದೇಹ ಮತ್ತು ಮನಸ್ಸು ಎರಡೂ ಕೂಡ ಫಿಟ್ ಆಗಿರುತ್ತವೆ.

ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಕೂಡ ಇದು ಅತ್ಯುತ್ತಮ ಸಮಯ . ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಹ ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೆ, ಇಡೀ ದಿನ ವ್ಯರ್ಥವಾಗುತ್ತದೆ. ನೀವು ಕನಿಷ್ಟ 6 ಗಂಟೆಗಳ ಕಾಲ ನಿದ್ದೆ ತೆಗೆದುಕೊಳ್ಳಬೇಕು . ಮತ್ತು 8 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡಬಾರದು.

ನಿದ್ರೆಯ ಸಮಯದಲ್ಲಿ, ನಮ್ಮ ದೇಹದ ಚೈತನ್ಯವು ದೇಹವನ್ನು ಸರಿಪಡಿಸುತ್ತದೆ . ದೇಹವು ವಿಶ್ರಾಂತಿ ಪಡೆಯುತ್ತದೆ . ಇದರಿಂದಾಗಿ ನಾವು ಸಂಪೂರ್ಣವಾಗಿ ರೀಚಾರ್ಜ್ ಆಗುತ್ತೇವೆ ಸಂರ್ಪೂಣ ನಿದ್ರೆ ಆದರೆ ಮನುಷ್ಯನ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ. ಯಾವುದೇ ಕೆಲಸ ಮಾಡಲು ಜೋಶ್ ಬರುತ್ತೆ. ಇಡೀ ದಿನ ತುಂಬಾ ಸಕ್ರಿಯವಾಗಿ ಇರುತ್ತೇವೆ.

ಅದರಿಂದ ಕನಿಷ್ಠ 6 ರಿಂದ 8 ಗಂಟೆ ನಿರಂತರ ನಿದ್ರೆ ಮಾಡಿ . ಪ್ರತಿ ದಿನ ವ್ಯಾಯಾಮ ಮಾಡಿ . ಪ್ರತಿ ದಿನ ವ್ಯಾಯಾಮ ಮಾಡುವುದರಿಂದ ನಿಮ್ಮನ್ನು ಆರೋಗ್ಯವಾಗಿಡಲು ಹೆಚ್ಚು ಸಹಾಯ ಮಾಡುತ್ತದೆ. ಕನಿಷ್ಟ 20 ನಿಮಿಷಗಳನ್ನು ವ್ಯಾಯಾಮಕ್ಕಾಗಿ ಸರಿ ಹೊಂದಿಸಿ ಮಾಡಿಕೊಳ್ಳಿ . ಬೆಳಗಿನ ವ್ಯಾಯಾಮವು ನಿಮ್ಮನ್ನು ಪೂರ್ಣ ಶಕ್ತಿಯಿಂದ ತುಂಬಿರುತ್ತದೆ ಮತ್ತು ದಿನವಿಡೀ ಸಂತೋಷವನ್ನು ನೀಡುತ್ತದೆ.

ಆರೋಗ್ಯವಾಗಿರಲು ನೀರು ಕುಡಿಯಿರಿ ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ 3 ರಿಂದ 4 ಗ್ಲಾಸ್ ನೀರು ಕುಡಿಯುವುದು ಅತಿ ಅವಶ್ಯಕ . (ಅಂದರೆ ಸುಮಾರು ಒಂದು ಲೀಟರ್) ಉಗುರು ಬೆಚ್ಚನೆಯ ನೀರನ್ನು ಕುಡಿದರೆ , ಅದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ . ನೀರು ಕುಡಿದು 45 ನಿಮಿಷಗಳವರೆಗೆ ನೀವು ಏನನ್ನೂ ತಿನ್ನ ಬೇಕಾಗಿಲ್ಲ ಎಂಬುದನ್ನು ನೆನಪಿನಲ್ಲಿ ಇರಲಿ ,

ಬೆಳಿಗ್ಗೆ ಯಾವಾಗಲೂ ಆರೋಗ್ಯಕರ ಆಹಾರ ಮಾಡಿ, ನೀವು ತಿನ್ನುವ ಆಹಾರವನ್ನು ನುಂಗುವ ಮುನ್ನ ಕನಿಷ್ಠ 25 ಬಾರಿ ಕಚ್ಚಿ . ಬೆಳಗಿನ ಆಹಾರವನ್ನು ಸೂರ್ಯ ನೆತ್ತಿಯ ಮೇಲೆ ಇರೋ ಮುಂಚೆ ಸೇವಿಸಬೇಕು . ತಿಂಡಿಯ ಜೊತೆ ಹಣ್ಣು , ಜ್ಯೂಸ್, ಇದ್ದರೆ , ಇನ್ನೂ ಒಳ್ಳೆಯದು . ರಾತ್ರಿ ವೇಳೆ ಲಘು ಊಟ ಮಾಡಿ . ಅಥವಾ ಸ್ವಲ್ಪ ಊಟ ಮಾಡಬೇಕು. ಊಟ ಮಾಡಿದ ತಕ್ಷಣವೇ ನೀರು ಕುಡಿಯಬಾರದು . 45 ನಿಮಿಷ ಮೊದಲು ಅಥವಾ ನಂತರ ಕುಡಿಯಿರಿ .

ಆದಷ್ಟು ಜಂಕ್ ಫುಡ್ , ಪಿಜ್ಜಾ ಬರ್ಗರ್ , ಸ್ಯಾಂಡ್ ವಿಚ್ ಇತ್ಯಾದಿ ಗಳನ್ನು ದೂರ ಮಾಡಿ . ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸಿ . ಪ್ರತಿದಿನ ಆಹಾರ ಸೇವಿಸಿದ ನಂತರ ಒಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ . ಐಸ್ ಕ್ರೀಮ್ , ಚಾಕಲೇಟ್ , ಕೋಲ್ಡ್ ಡ್ರಿಂಕ್ಸ್ , ಅಥವಾ ಯಾವುದೇ ಸ್ವೀಟ್ಸ್ ಪದಾರ್ಥ ಸೇವನೆ ಕಡಿಮೆ ಮಾಡಿ . ಏಕೆಂದರೆ , ಆ ಕಂಪನಿ ಬಳಕೆ ಮಾಡಿ , ಹೀಗೆ ಸಂರಕ್ಷಣೆ ಮಾಡಿರುವ ಆಹಾರ ತುಂಬಾ ಹಾನಿಕಾರಕ .

ಸಕ್ಕರೆ ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ . ನಿಮಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ , ಅದನ್ನು ಸ್ವಲ್ಪ ಕಡಿಮೆ ಮಾಡಿ . ಜೇನು , ಬೆಲ್ಲದ ಮಿಠಾಯಿ , ಬೆಲ್ಲ ಇತ್ಯಾದಿಗಳನ್ನು ಬಳಸಿ . ಅಲ್ಲದೆ ಉಪ್ಪನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಿ .ನೀವು ತಿನ್ನುವುದಾದರೆ ರಾಕ್ ಸಾಲ್ಟ್ ಅಥವಾ ಕಲ್ಲುಪ್ಪು ಬಳಸಿ . ನಿಮಗೆ ಉಪವಾಸ ಮಾಡೋ ಅವಕಾಶ ಸಿಕ್ಕಾಗ ಉಪವಾಸ ಮಾಡಿ .

Leave A Reply

Your email address will not be published.