ಬದುಕುವ ಬಳ್ಳಿ ಅಂತಹ ದೇಹಕ್ಕಾಗಿ ಈ 10 ಆಹಾರಗಳಿಂದ ದೂರವಿರಿ. ಕೇವಲ ವ್ಯಾಯಾಮ ಮಾಡುವುದರಿಂದ ಸಪುರವಾತ ದೇಹ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಸೇವಿಸುವ ಆಹಾರದ ಮೇಲು ಗಮನವನ್ನು ಹರಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಸಕ್ಕರೆ ಪದಾರ್ಥವನ್ನು ಸಹಿಸುವುದನ್ನು ಕಡಿಮೆ ಮಾಡಬೇಕು.
ಕ್ಯಾಂಡಿ ಮತ್ತು ಇತರ ಚಾಕೊಲೇಟ್ ಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲರಿ ದೊರೆಯುತ್ತದೆ ಇದರಿಂದ ಬೊಚ್ಚು ಹೆಚ್ಚಾಗುತ್ತದೆ. ಇಂತಹ ಆಹಾರ ಪದಾರ್ಥಗಳಿಂದ ದೂರವಿರಿ.
ಕೂಲ್ ಡ್ರಿಂಕ್ಸ್ ತಂಪು ಪಾನೀಯ ಅಥವಾ ಸೋಡಾ ಕುಡಿಯುವುದರಿಂದ ದೇಹದ ಆರೋಗ್ಯಕ್ಕೆ ಋಣಾತ್ಮಕ ಪರಿಣಾಮ ಬೀರುತ್ತದೆ. ಕೆಲವರು ಊಟದ ಬಳಿಕ ತಂಪು ಪಾನೀಯವನ್ನು ಕುಡಿಯಲು ಬಯಸುತ್ತಾರೆ. ಇದಕ್ಕೆ ಬದಲಾಗಿ ಕೋಲ್ಡ್ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಒಂದು ವಾರದೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ನೀವು ಫಾಸ್ಟ್ ಫುಡ್ ಪ್ರಿಯರಾಗಿದ್ದಾರೆ ಅದರಿಂದ ದೂರವಿರಿ. ಏಕೆಂದರೆ ಇವು ಒಮ್ಮೆಗೆ 2,000 ಕ್ಯಾಲೋರಿಗಳನ್ನು ದೇಹಕ್ಕೆ ಒದಗಿಸುತ್ತದೆ ಆದರೆ ಇಷ್ಟು ಕ್ಯಾಲೋರಿಯನ್ನು ನೀವು ಇಡೀ ದಿನ ಸೇವಿಸುವ ಆಹಾರದಿಂದ ಗಳಿಸಿದರೆ ಒಳ್ಳೆಯದು. ಅಲ್ಲದೆ ಫಾಸ್ಟ್ ಫುಡ್ ನಲ್ಲಿ ಪೌಷ್ಟಿಕಾಂಶಗಳು ಸಹ ಕಡಿಮೆ.
ಮದ್ಯಪಾನ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಅಲ್ಲದೇ ಇರಲಿ ಹೆಚ್ಚು ಕ್ಯಾಲೋರಿಗಳು ಇರುವುದರಿಂದ ಹೆಚ್ಚು ಬೊಜ್ಜು ಸಂಗ್ರಹಕ್ಕೆ ಕಾರಣವಾಗುತ್ತದೆ ಆದ್ದರಿಂದ ಆಲ್ಕೋಹಾಲ್ ಸೇವನೆಯಿಂದ ದೂರವಿರಿ.
ಹಾಲಿನ ಉತ್ಪನ್ನಗಳಿಂದ ಹೆಚ್ಚಿನ ಕ್ಯಾಲ್ಸಿಯಂ ಅಂಶಗಳು ಸಿಗುತ್ತದೆ. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ. ಇದರಿಂದ ಆದ್ದರಿಂದ ಕ್ಯಾಲ್ಸಿಯಂ ಹೆಚ್ಚಿರುವ ಹಸಿರು ತರಕಾರಿಯನ್ನು ಹೆಚ್ಚಿ ಸೇವಿಸಿ.
ಧಾನ್ಯಗಳಿಂದ ತಯಾರಿಸಿದ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಕಾರ್ಬೋಹೈಡ್ ಅಂಶ ಅಧಿಕವಾಗಿರುತ್ತದೆ. ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳಿಗೆ ಬದಲಾಗಿ ಮೂಲ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ
ಎಲ್ಲಾ ಹಣ್ಣಿನ ರಸ್ತೆಗಳು ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತದೆ. ಆದರೆ ಅವುಗಳಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಪ್ರತಿದಿನ ಬೆಳಗ್ಗೆ ಒಂದು ಲೋಟ ತಾಜಾ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹಕ್ಕೆ ಯಾವುದೇ ಹಾನಿ ಇಲ್ಲ. ಆದರೆ ಇದನ್ನು ಸಾಮಾನ್ಯ ಪಾನೀಯವಾಗಿ ಬಳಸಕೂಡದು.
ಆಲೂಗಡ್ಡೆನೇ ತರಕಾರಿಗಳ ರಾಜ ಎಂದು ಹೇಳಲಾಗುತ್ತದೆ ಪ್ರತಿನಿತ್ಯ ಒಂದು ಆಲೂಗಡ್ಡೆಯನ್ನು ಸೇವಿಸಿದರೆ ಅದು ಒಂದು ಚಮಚ ಸಕ್ಕರೆಗೆ ಸಮ. ಇದು ದೇಹದಲ್ಲಿ ಹೆಚ್ಚು ಸಕ್ಕರೆ ಅಂಶವನ್ನು ಒದಗಿಸುವುದರಿಂದ ಬಹಳ ಬೇಗ ಹಸಿವಾಗಲು ಆರಂಭವಾಗುತ್ತದೆ ಇದರಿಂದ ನೀವು ಆಹಾರ ಸೇವಿಸುವ ಪ್ರಮಾಣವು ಹೆಚ್ಚಾಗುತ್ತದೆ ಹಾಗಾಗಿ ಆಲೂಗಡ್ಡೆ ಸೇವನೆ ಕಡಿಮೆ ಮಾಡಿ
ಕುರುಕುಲು ತಿಂಡಿಗಳನ್ನು ಕಡಿಮೆ ಮಾಡಿ ಒಂದು ವೇಳೆ ತಿನ್ನಬೇಕು ಎನಿಸಿದರೆ ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಿನ್ನಬೇಕು. ಒಟ್ಟಾರೆಯಾಗಿ ಎಲ್ಲವನ್ನು ಒಂದು ಮಿತಿಯಲ್ಲಿ ಸೇವಿಸಬೇಕು.