ದೈರ್ಯ ಇದ್ದರೆ ಹೋಳಿ ಹುಣ್ಣಿಮೆಯ ದಿನ ಈ ಮರವನ್ನ ಮುಟ್ಟಿ ಬನ್ನಿ ತಕ್ಷಣ ಬಡತನ ದೂರ ಆಗುತ್ತದೆ 

0

ನಾವು ಈ ಲೇಖನದಲ್ಲಿ ಧೈರ್ಯ ಇದ್ದರೆ ಹೋಳಿ ಹುಣ್ಣಿಮೆಯ ದಿನ ಈ ಮರವನ್ನು ಮುಟ್ಟಿ ಬನ್ನಿ ತಕ್ಷಣ ಬಡತನ ಹೇಗೆ ದೂರ ಆಗುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಹೋಳಿ ಹುಣ್ಣಿಮೆಯ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದರ ಗೆಲುವು ಎಂದು ತಿಳಿಯಲಾಗಿದೆ . ಇದನ್ನು ತುಂಬಾ ಪವಿತ್ರವಾದ ಹಬ್ಬ ಎಂದು ತಿಳಿಯಲಾಗಿದೆ . ಹೋಳಿ ಹುಣ್ಣಿಮೆಯ ದಿನ ಎಲ್ಲಾ ಪ್ರಕಾರದ ಮರ ಗಿಡಗಳು, ಜೀವ ಜಂತುಗಳು , ಜಾಗೃತ ಅವಸ್ಥೆಯಲ್ಲಿ ಇರುತ್ತದೆ . ಅಂದರೆ ನಿಮ್ಮಲ್ಲಿ ಆಸೆ , ಏನೇ ಮನಸ್ಸಿನ ಇಚ್ಛೆಗಳು ಇದ್ದರೂ ,

ಅವುಗಳನ್ನು ಪೂರ್ತಿಗೊಳಿಸಲು ಇವು ನಿಮಗೆ ಸಹಾಯವನ್ನು ಮಾಡುತ್ತವೆ . ಧೈರ್ಯ ಇದ್ದರೆ ರಾತ್ರಿ 12 ಗಂಟೆಗೆ ಈ ಸಸ್ಯವನ್ನು ಸ್ಪರ್ಶ ಮಾಡಿ ಬನ್ನಿ . ಇಡೀ ವರ್ಷ ಹಣ ಓಡಿ ಬರುತ್ತದೆ . ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿ ನೀವು ಶ್ರೀಮಂತರಾಗುವುದನ್ನು ತಡೆಯಲು ಸಾಧ್ಯವಿಲ್ಲ . ಹೋಳಿ ಹುಣ್ಣಿಮೆಯ ದಿನ ಈ ಐದು ಸಸ್ಯಗಳು ಜಾಗೃತ ಅವಸ್ಥೆಯಲ್ಲಿ ಇರುತ್ತದೆ . ಇವುಗಳಲ್ಲಿ ಒಂದು ಗಿಡಕ್ಕೆ ಸ್ವತಹ ನರಸಿಂಹಸ್ವಾಮಿ ಆಶೀರ್ವಾದವನ್ನು ಕೊಟ್ಟಿದ್ದಾರೆ . ಹೋಳಿ ಹುಣ್ಣಿಮೆ ಹಬ್ಬವು ತುಂಬಾ ಸುಂದರವಾದ ಹಬ್ಬ ಆಗಿದೆ .

ಈ ದಿನ ಸಮಾಜದಲ್ಲಿ ಜನರು ಮೇಲು ಕೀಳು , ಶ್ರೀಮಂತ – ಬಡವ ಎಲ್ಲಾ ಮತ ಭೇದಗಳನ್ನು ಮರೆತು , ತುಂಬಾ ಖುಷಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ . ಇದನ್ನು ರೈತರ ಹಬ್ಬ ಎಂದು ಕೂಡ ತಿಳಿಯಲಾಗಿದೆ . ಈ ಸಮಯದಲ್ಲಿ ಗೋಧಿಯ ಫಸಲನ್ನು ಹೋಳಿಕಾ ದೇವಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ . ಹೋಳಿ ಹುಣ್ಣಿಮೆಯ ಹಬ್ಬ ಉತ್ಸಾಹ ಮತ್ತು ಆನಂದದಿಂದ ತುಂಬಿದ ಹಬ್ಬ ಆಗಿದೆ . ವಿಶೇಷವಾಗಿ ವಿಷ್ಣು ಭಕ್ತರಿಗೆ ಈ ಹಬ್ಬ ತುಂಬಾ ಪ್ರಮುಖವಾಗಿರುತ್ತದೆ .

ಈ ದಿನ ಅವರು ವ್ರತವನ್ನು ಕೂಡ ಮಾಡುತ್ತಾರೆ . ಹೋಳಿ ದಹನಕ್ಕಾಗಿ ಜನರು ಒಂದು ತಿಂಗಳಿಂದ ಮೊದಲೇ
ತಯಾರಾಗಿರುತ್ತಾರೆ. ಹೊಸ ಬಟ್ಟೆಗಳನ್ನು ಖರೀದಿ ಮಾಡಿ ಇಟ್ಟಿರುತ್ತಾರೆ . ಉಡುಗೊರೆಗಳನ್ನು ಖರೀದಿ ಮಾಡಿ ತಂದಿರುತ್ತಾರೆ . ಸಾಮೂಹಿಕ ರೂಪದಲ್ಲಿ ಜನರು ಕಟ್ಟಿಗೆಗಳನ್ನು ಸಗಣಿ ಮತ್ತು ಕುಳ್ಳುಗಳನ್ನು ಕೂಡಿ ಹಾಕಿರುತ್ತಾರೆ . ಪಾಲ್ಗುಣ ಶುಕ್ಷ ಹುಣ್ಣಿಮೆಯ ದಿನ ಸಾಯಂಕಾಲದಲ್ಲಿ ಭದ್ರ ದೋಷ ಇಲ್ಲ ಎಂದರೆ , ಆ ಸಮಯದಲ್ಲಿ ಹೋಳಿಕಾ ದಹನ ನಡೆಯುತ್ತದೆ . ಕೆಲವೆಡೆ ಕಾಮಣ್ಣನನ್ನು ಸುಡುತ್ತಾರೆ .

ಹೋಳಿ ದಹನ ಮಾಡುವ ಮುನ್ನ ಕೆಲವು ಕಡೆ ಹೋಳಿಕಾ ದೇವಿಯ ಪೂಜೆಯನ್ನು ಮಾಡುತ್ತಾರೆ . ಅಗ್ನಿ ಭಗವಂತನಾದ ನಾರಾಯಣರು ಆಗಿದ್ದಾರೆ . ಅವರಿಗೆ ಆಹುತಿಯನ್ನು ನೀಡಲಾಗುತ್ತದೆ . ಹೋಳಿಕಾ ದಹನದ ಪವಿತ್ರವಾದ ಅಗ್ನಿಯ ಸುತ್ತಲೂ ಜನರು ನೃತ್ಯವನ್ನು ಮಾಡುತ್ತಾರೆ . ಹೋಳಿ ಹುಣ್ಣಿಮೆಯ ದಿನ ರಾಧಾ ಕೃಷ್ಣ ರಿಗೆ ತುಂಬಾ ಪ್ರಿಯವಾದ ದಿನವೂ ಆಗಿದೆ . ಹಾಗಾಗಿ ಈ ದಿನ ಕೃಷ್ಣನ ಭಕ್ತರು ಮನೆಯಲ್ಲಿ ಹಲವಾರು ಪ್ರಕಾರದ ವ್ಯಂಜನಗಳನ್ನು ತಯಾರಿಸುತ್ತಾರೆ.

ತಮ್ಮ ಮನೆಯ ಕುಲ ದೇವರಿಗೂ ಅರ್ಪಿಸುತ್ತಾರೆ .ಈ ದಿನ ಖಂಡಿತವಾಗಿ ಪೂರ್ವಜರಿಗೆ ಏನನ್ನಾದರೂ ನೈವೇದ್ಯವಾಗಿ ಅರ್ಪಿಸಬೇಕು . ಯಾರು ಅವರಿಗೆ ನೈವೇದ್ಯವನ್ನು ನೀಡುವುದಿಲ್ಲವೋ , ಅವರಿಗೆ ಪಿತೃ ಶಾಪ ಅಂಟುತ್ತದೆ . ಹಾಗಾಗಿ ಖಂಡಿತವಾಗಿ ಹೋಳಿ ಹುಣ್ಣಿಮೆಯ ದಿನ ನಿಮ್ಮ ಪೂರ್ವಜರನ್ನು ನೀವು ನೆನೆಯಬೇಕು . ಹೋಳಿ ಹಬ್ಬ ಆಚರಿಸುವ ಮುನ್ನ ಸಾಯಂಕಾಲದ ಸಮಯದಲ್ಲಿ ಹೋಳಿ ದಹನ ನಡೆಯುತ್ತದೆ . ಇದರ ಹಿಂದೆ ಒಂದು ಪ್ರಾಚೀನ ಕಥೆಯು ಇದೆ .

ಇಲ್ಲಿ ದಿಥಿ ಪುತ್ರ ಹಿರಣ್ಯ ಕಶ್ಯಪೂ ಭಗವಂತನಾದ ಕೃಷ್ಣನ ಮೇಲೆ ದೊಡ್ಡದಾದ ಶತ್ರುತ್ವ ಹೊಂದಿದ್ದರು .ಇವರು ತಮ್ಮ ಶಕ್ತಿಯ ಅಹಂಕಾರದಲ್ಲಿ ಬಂದು ಸ್ವತಹ ತನ್ನನ್ನು ತಾನು ಈಶ್ವರ ಎಂದು ಹೇಳಿಕೊಳ್ಳಲು ಶುರು ಮಾಡಿದರು . ಕೇವಲ ಇವರ ಪೂಜೆ ಮಾತ್ರ ನಡೆಯಬೇಕೆಂದು ರಾಜ್ಯದಲ್ಲಿ ಘೋಷಣೆ ಮಾಡಿರುತ್ತಾರೆ .ಇಲ್ಲಿ ದೇವಾನು ದೇವತೆಗಳಿಗೆ ಕೂಡ ಯಜ್ಞ ನಡೆಯದಂತೆ ಕೂಡ ಮಾಡಿರುತ್ತಾರೆ .

ಸಂತ ಪುರುಷರಿಗೆ ಈತ ತೊಂದರೆ ಕೊಡಲು ಕೂಡ ಶುರು ಮಾಡಿರುತ್ತಾನೆ . ಈ ರಾಜ ಹಿರಣ್ಯ
ಕಶ್ಯಪ ಅವರ ಪುತ್ರ ಪ್ರಹ್ಲಾದನು ಭಗವಂತನಾದ ವಿಷ್ಣುವಿನ ಪರಮ ಭಕ್ತನು ಆಗಿದ್ದನು .ತಂದೆ ಯು ಸಾವಿರಾರು ಮಾತುಗಳನ್ನು ಹೇಳಿದ ನಂತರವೂ , ಮಗನಾದ ಭಕ್ತ ಪ್ರಹ್ಲಾದ ಭಗವಂತನಾದ ವಿಷ್ಣುವಿನ ಭಕ್ತಿಯಲ್ಲಿ ಲೀನವಾಗುತ್ತಿದ್ದ . ಹಿರಣ್ಯ ಕಶ್ಯಪ ತನ್ನ ಮಗನನ್ನು ಸಾಯಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾನೆ .ಪ್ರಹ್ಲಾದನನ್ನು ಸ್ವತಹ ಭಗವಂತನಾದ ವಿಷ್ಣು ರಕ್ಷಣೆ ಮಾಡುತ್ತಿದ್ದರು .

ಅಸುರ ರಾಜನ ತಂಗಿಗೆ ಭಗವಂತನಾದ ಶಿವನು ಯಾವ ರೀತಿಯ ಬಟ್ಟೆ ಕೊಟ್ಟಿದ್ದರು ಎಂದರೆ , ಅದನ್ನು ಧರಿಸಿದಾಗ ಅಗ್ನಿ ಆಕೆಯನ್ನು ಏನನ್ನು ಸಹ ಮಾಡಲು ಸಾಧ್ಯವಾಗುತ್ತಿರಲಿಲ್ಲ . ಆ ದೇವಿಯ ಹೆಸರು ಹೋಳಿಕಾ ಆಗಿತ್ತು . ಕೋಳಿಕಾ ದೇವಿಯ ಆ ಬಟ್ಟೆಯನ್ನು ತನ್ನ ಮೇಲೆ ಹಾಕಿಕೊಂಡು , ಭಕ್ತ ಪ್ರಹ್ಲಾದನನ್ನು ತನ್ನ ಮಡಿಲಿನಲ್ಲಿ ಕೂರಿಸಿಕೊಂಡು , ಬೆಂಕಿಯ ಚಿತೆ ಮೇಲೆ ಕುಳಿತುಕೊಳ್ಳುತ್ತಾಳೆ .

ದಿವ್ಯ ಯೋಗದಿಂದ ಆ ಹೋಳಿಕಾ ದೇವಿಯ ಮೇಲಿನ ಆ ಬಟ್ಟೆಯು ಹಾರಿ ಹೋಗುತ್ತದೆ . ಆ ಬಟ್ಟೆ ಮರಳಿ ಆ ಪ್ರಹ್ಲಾದ ನ ಮೇಲೆ ಬರುತ್ತದೆ . ಇದರಿಂದ ಪ್ರಹ್ಲಾದನ ಪ್ರಾಣ ಉಳಿಯುತ್ತದೆ . ಇಲ್ಲಿ ಹೋಳಿಕಾ ದೇವಿಯು ಸುಟ್ಟೆ ಬಸ್ಮವಾಗುತ್ತಾಳೆ . ಹಾಗಾಗಿ ಹೋಳಿ ಹುಣ್ಣಿಮೆಯ ದಿನ ಹೋಳಿಕಾ ಎಂಬ ಕೆಟ್ಟ ಭಾವನೆಯನ್ನು ಸುಟ್ಟು , ಭಗವಂತನ ಮೂಲಕ ಭಕ್ತ ಪ್ರಹ್ಲಾದನ ರಕ್ಷಣೆ ಮಾಡಿದಂತಹ ಹಬ್ಬವನ್ನು ಆಚರಿಸಲಾಗುತ್ತದೆ .
ಹೋಳಿ ಹುಣ್ಣಿಮೆಯ ದಿನದ ರಾತ್ರಿ ನೀವು ಯಾವ ಮರವನ್ನು ಸ್ಪರ್ಶ ಮಾಡಿ ಬರಬೇಕು ಎಂದು ತಿಳಿಸಲಾಗಿದೆ.
ಈ ಗಿಡಗಳಿಗೆ ಸ್ವತಃ ನರಸಿಂಹ ದೇವರು ಆಶೀರ್ವಾದವನ್ನು ಕೊಟ್ಟಿದ್ದಾರೆ .

ಯಾವಾಗ ನರಸಿಂಹ ಸ್ವಾಮಿಯು ಹಿರಣ್ಯ ಕಶ್ಯಪೂವಿನ ವಧೆ ಮಾಡಿದರು ಆಗ ಅವರು ತಮ್ಮ ಉಗುರಿನ ಬಳಕೆಯನ್ನು ಮಾಡಿದರು . ಇದರಿಂದ ಆ ಅಸುರ ರಾಕ್ಷಸನ ರಕ್ತವು ಅವರ ಬೆರಳಿನ ಉಗುರುಗಳಿಗೆ ಅಂಟಿಕೊಂಡಿತು .ಈ ಕಾರಣದಿಂದಾಗಿ ಬೆರಳುಗಳಿಗೆ ತುಂಬಾ ತೊಂದರೆ ಆಗುತ್ತಿತ್ತು . ಆ ನೋವನ್ನು ಕಡಿಮೆ ಮಾಡಿಕೊಳ್ಳಲು ನರಸಿಂಹ ಸ್ವಾಮಿಯ ತಮ್ಮ ಬೆರಳಿನ ಉಗುರುಗಳನ್ನು ಒಂದು ಮರಕ್ಕೆ ಚುಚ್ಚುತ್ತಾರೆ . ಇದರಿಂದ ನರಸಿಂಹ ಸ್ವಾಮಿಯ ನೋವು ಕಡಿಮೆ ಆಗುತ್ತದೆ . ಆದರೆ ಆ ವೃಕ್ಷ ಭಯದಿಂದ ಈ ರೀತಿಯಾಗಿ ಹೇಳುತ್ತದೆ . ಆ ವೃಕ್ಷ ಪ್ರಾರ್ಥನೆಯನ್ನು ಮಾಡುತ್ತದೆ .

ಹೇ ಭಗವಂತ ನೀವು ನಿಮ್ಮ ತೊಂದರೆಯನ್ನು ದೂರ ಮಾಡಿ ಕೊಂಡಿರಿ, ಆದರೆ ಈ ಅಸುರನ ರಕ್ತವು ನಮ್ಮ ಶರೀರದಲ್ಲಿ ಬಂದಿದೆ .ಇದರಿಂದ ನಾವು ಅಶುದ್ಧಿಯಾಗಿದ್ದೇವೆ . ಹೇ ಪ್ರಭು ನೀವು ಯಾವ ಬೆರಳಿನ ಉಗುರನ್ನು ನಮ್ಮಲ್ಲಿ ಚುಚ್ಚಿದ್ದೀರಾ , ಈ ನೋವು ನನಗೆ ಪ್ರತಿದಿನ ಕಾಡುತ್ತದೆ . ಈ ನೋವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ . ಹೇ ಭಗವಂತ ಈ ನೋವಿನಿಂದ ನನ್ನನ್ನು ರಕ್ಷಣೆ ಮಾಡಿ . ಈ ರೀತಿ ಪ್ರಾರ್ಥನೆ ಮಾಡಿದ ನಂತರ , ಭಗವಂತನಾದ ನರಸಿಂಹ ಸ್ವಾಮಿ ಆ ವೃಕ್ಷಕ್ಕೆ ಒಂದು ಆಶೀರ್ವಾದವನ್ನು ಕೊಡುತ್ತಾರೆ .

ಹೇ ವೃಕ್ಷ ನಾನು ನಿನಗೆ ಒಂದು ಆಶೀರ್ವಾದವನ್ನು ಕೊಡುತ್ತೇನೆ . ಯಾವಾಗ ಹೋಳಿ ಹುಣ್ಣಿಮೆಯ ದಿನ ಬರುತ್ತದೆಯೋ , ಮತ್ತು ಪ್ರತಿ ಹುಣ್ಣಿಮೆಯ ದಿನ ನಾನು ನಿನ್ನಲ್ಲಿ ವಾಸ ಮಾಡುತ್ತೇನೆ . ಹಾಗಾಗಿ ಯಾವ ದಿನ ಹೋಳಿ ಅಗ್ನಿ ಉರಿಸಲಾಗುತ್ತದೆಯೋ ,ಆ ದಿನ ಸ್ವತಹ ನರಸಿಂಹಸ್ವಾಮಿ ತಾಯಿ ಲಕ್ಷ್ಮಿ ದೇವಿಯ ಜೊತೆಗೆ ಈ ಮರದಲ್ಲಿ ವಾಸ ಮಾಡುತ್ತಾರೆ . ಒಂದು ನಂಬಿಕೆಯ ಅನುಸಾರವಾಗಿ ಹೋಳಿ ಹುಣ್ಣಿಮೆಯ ದಿನ ಈ ವೃಕ್ಷಕ್ಕೆ ನೀವು ಒಳ್ಳೆಯ ಮನಸ್ಸಿನಿಂದ ಬೇಡಿಕೊಂಡರೆ ,

ಇದು ನಿಮ್ಮ ಎಲ್ಲಾ ಪ್ರಕಾರದ ಪಾಪಗಳು ದೋಷಗಳನ್ನು ದೂರ ಮಾಡುತ್ತದೆ . ಆದರೆ ಈ ವೃಕ್ಷವನ್ನು ಸ್ಪರ್ಶ ಮಾಡಲು ಕೆಲವು ನಿಯಮಗಳಿವೆ . ಇವುಗಳನ್ನು ಪಾಲಿಸುವುದು ತುಂಬಾ ಪ್ರಮುಖವಾಗಿದೆ . ನಂತರ ಇದರ ನೂರು ಪಟ್ಟು ಲಾಭ ನಿಮಗೆ ಖಂಡಿತವಾಗಿ ದೊರೆಯುತ್ತದೆ . ಈ ವೃಕ್ಷವನ್ನು ಸ್ಪರ್ಶ ಮಾಡಿ ಬೇಡಿಕೊಳ್ಳುವ ಮುನ್ನ , ನಿಮ್ಮ ಮನೆಯಿಂದ ಒಂದು ತೆಂಗಿನಕಾಯಿಯನ್ನು ತರಬೇಕು . ಜೊತೆಗೆ ಸ್ವಲ್ಪ ಸಕ್ಕರೆ , ಜೊತೆಗೆ ಒಂದು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು . ಈ ತೆಂಗಿನ ಕಾಯಿಯನ್ನು ಆ ವೃಕ್ಷಕ್ಕೆ ಅರ್ಪಿಸಬೇಕು .

ನೀವು ತೆಗೆದುಕೊಂಡು ಹೋಗಿರುವ ಸಕ್ಕರೆಯನ್ನು ಅಲ್ಲಿರುವ ಯಾವುದಾದರೂ ಎಲೆಯ ಮೇಲೆ ಇಡಬೇಕು . ಅಲಿ ಧೂಪ ದೀಪಗಳನ್ನು ಬೇಕಾದರೂ ಹಚ್ಚಬಹುದು . ನಂತರ ಆ ವೃಕ್ಷದಲ್ಲಿ ಪ್ರಾರ್ಥನೆಯನ್ನು ಮಾಡಿ . ಹೇ ವೃಕ್ಷ ರಾಜ ನೀವು ನಮ್ಮ ಬಡತನ, ದರಿದ್ರತೆ , ನಮ್ಮ ಸಮಸ್ಯೆ ಕಷ್ಟಗಳನ್ನು ದೂರ ಮಾಡಿ . ಹೇ ವೃಕ್ಷ ರಾಜ ನಿಮ್ಮ ಮೇಲೆ ವಾಸ ಮಾಡುತ್ತಿರುವ ನರಸಿಂಹಸ್ವಾಮಿ ಮತ್ತು ತಾಯಿ ಲಕ್ಷ್ಮೀ ದೇವಿಗೆ ನನ್ನ ನಮಸ್ಕಾರಗಳನ್ನು ಹೇಳುತ್ತೇನೆ . ಪೂರ್ಣ ರೂಪದಲ್ಲಿ ನಮ್ಮ ಬಡತನ ಮತ್ತು ದರಿದ್ರತೆಯನ್ನು ಮತ್ತು ಕಷ್ಟಗಳನ್ನು ದೂರ ಮಾಡಿರಿ .

ಈ ರೀತಿಯಾಗಿ ನಿಮ್ಮ ಕಷ್ಟದ ಬಗ್ಗೆ ವೃಕ್ಷದ ಬಳಿ ಬೇಡಿಕೊಳ್ಳಬೇಕು. ಇದರ ಒಂದು ಹಣ್ಣನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮರಳಿ ಮನೆಗೆ ತರಬೇಕು . ಇದನ್ನು ತರುವಾಗ ಮರಳಿ ಹಿಂದಕ್ಕೆ ತಿರುಗಿ ನೋಡಬಾರದು . ಯಾವಾಗ ಆ ವೃಕ್ಷಕ್ಕೆ ತೆಂಗಿನಕಾಯಿ ಮತ್ತು ಸಕ್ಕರೆಯನ್ನು ಅರ್ಪಿಸುತ್ತೀರೋ, ತಕ್ಷಣವೇ ಮರವನ್ನು ಸ್ಪರ್ಶ ಮಾಡಬಾರದು .ಮೊದಲಿಗೆ ವೃಕ್ಷಕ್ಕೆ ನಮಸ್ಕಾರವನ್ನು ಮಾಡಿ, ಆ ವೃಕ್ಷದಲ್ಲಿ ಅಲ್ಲಿ ವಾಸ ಮಾಡುತ್ತಿರುವ ಶಕ್ತಿಗಳಿಗೆ ನಮಸ್ಕಾರ ಮಾಡಿ ಬೇಡಿ ಕೊಳ್ಳಬೇಕು .

ಆ ನಂತರ ಸ್ಪರ್ಶ ಮಾಡುವ ಮುನ್ನ ಈ ರೀತಿ ಬೇಡಿಕೊಳ್ಳಬೇಕು . ಹೇ ವೃಕ್ಷ ರಾಜ ನಾನು ನಿಮ್ಮನ್ನು ಸ್ಪರ್ಶ ಮಾಡಲು ಹೊರಟಿದ್ದೇನೆ . ನನ್ನಲ್ಲಿ ದರಿದ್ರ ಲಕ್ಷ್ಮಿ ಕಷ್ಟಗಳು ಇದ್ದರೆ , ನಕಾರಾತ್ಮಕ ಶಕ್ತಿ ಗಳು ಇದ್ದರೆ, ಅವುಗಳನ್ನು ನಾಶ ಮಾಡಿ ನೀವು ನನಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುವಂತೆ ಮಾಡಿ ಎಂದು ಬೇಡಿ ಕೊಳ್ಳಬೇಕು . ನನ್ನಲ್ಲಿ ಎಷ್ಟು ಹವಾ ಗುಣಗಳು ಇದೆಯೋ , ಅವುಗಳನ್ನು ಎಳೆದು ನಾಶ ಮಾಡಿ ಎಂದು ಬೇಡಿ ಕೊಳ್ಳಬೇಕು . ಯಾಕೆಂದರೆ ಈ ವೃಕ್ಷಕ್ಕೆ ನರಸಿಂಹ ಸ್ವಾಮಿ ಆಶೀರ್ವಾದ ಸಿಕ್ಕಿದೆ .

ಈ ಮರವನ್ನು ಯಾರೆಲ್ಲಾ ಮುಟ್ಟುತ್ತಾರೋ , ಅವರೆಲ್ಲರ ಪಾಪ ಹೋಳಿ ಹುಣ್ಣಿಮೆ ದಿನ ಸ್ವತಹ ನಷ್ಟವಾಗುತ್ತದೆ . ಅವುಗಳನ್ನು ಈ ವೃಕ್ಷ ಎಳೆದುಕೊಂಡು ಪುಣ್ಯವನ್ನು ನೀಡುತ್ತದೆ .ಈ ರೀತಿಯಾಗಿ ಪ್ರಾರ್ಥನೆ ಮಾಡಿ ಆ ವೃಕ್ಷವನ್ನು ಮುಟ್ಟಬೇಕು . ಈ ಪವಿತ್ರವಾದ ವೃಕ್ಷದ ಹೆಸರು ಹತ್ತಿ ಮರ . ಮಾಹಿತಿಯ ಅನುಸಾರವಾಗಿ ಹೋಳಿ ಹುಣ್ಣಿಮೆಯ ದಿನ ಹತ್ತಿ ಮರವನ್ನು ಸ್ಪರ್ಶ ಮಾಡಿ ಬಂದರೆ, ಅದರ ಬಳಿ ಪ್ರಾರ್ಥನೆ ಮಾಡಿ ಬಂದರೆ , ನಿಮ್ಮೊಳಗಿರುವ ಎಲ್ಲಾ ಹವಾ ಗುಣಗಳು ನಾಶವಾಗುತ್ತದೆ .

ನಿಮ್ಮೊಳಗೆ ಕೂತಿರುವ ದರಿದ್ರಲಕ್ಷ್ಮಿ ಓಡಿ ಹೋಗುತ್ತಾರೆ . ನಿಮ್ಮೊಳಗಿನ ಪ್ರಾರ್ಥನೆ ಮಾಡಬೇಕು . ಇದಾದ ನಂತರ ಇದರ ಒಂದು ಹಣ್ಣನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಂಡು ಮರಳಿ ಮನೆಗೆ ಬರಬೇಕು . ರಾತ್ರಿ 12 ಗಂಟೆಯ ಸಮಯದಲ್ಲಿ ಹೋಗಬೇಕು. ಧೈರ್ಯ ಇದ್ದರೆ ಈ ಉಪಾಯವನ್ನು ಮಾಡಿ . ಜಗತ್ತಿನಲ್ಲಿರುವ ಯಾವ ಶಕ್ತಿಗೂ ನೀವು ಕೋಟ್ಯಾಧೀಶ್ವರರು ಆಗುವುದನ್ನು ತಡೆಯಲು ಸಾಧ್ಯವಿಲ್ಲ .

ಹಣ್ಣನ್ನು ತೆಗೆದುಕೊಂಡು ಬಂದ ನಂತರ , ಯಾರಿಗೂ ಹೇಳದೆ ಗುಪ್ತವಾಗಿ ಹಣ ಇಡುವ ಸ್ಥಾನದಲ್ಲಿ ಅದನ್ನು ಇಡಬೇಕು . ಈ ಉಪಾಯವನ್ನು ಮಾಡುವಾಗ ಗುಪ್ತವಾಗಿ ಮಾಡಬೇಕು . ಯಾವುದಾದರೂ ಉಪಾಯವನ್ನು ಮಾಡಿದಾಗ ಗುಪ್ತವಾಗಿ ಮಾಡಿದರೆ ಮಾತ್ರ ಫಲವನ್ನು ಕೊಡುತ್ತದೆ . ಇಲ್ಲಿ ನಿಮ್ಮ ಹೆಂಡತಿ ಅಥವಾ ಗಂಡನಿಗೂ ಸಹ ಹೇಳಬಾರದು . ಮಕ್ಕಳಿಗೂ ಸಹ ಹೇಳಬಾರದು . ಎಲ್ಲಕ್ಕಿಂತ ಮೊದಲು ನೀವು ನಂಬಿಕೆಯನ್ನು ಇಡುವುದು ತುಂಬಾ ಮುಖ್ಯವಾಗಿರುತ್ತದೆ .

Leave A Reply

Your email address will not be published.