ನಾವು ಈ ಲೇಖನದಲ್ಲಿ 2024ರ ಮೀನ ರಾಶಿಯ ಶನಿ ಸಾಡೇಸಾತಿ ಮತ್ತು ಶನಿಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ . ಸಾಡೇಸಾತಿ ಶುರುವಾಗಿ ಒಂದು ವರ್ಷ ಕಳೆದಿರುತ್ತದೆ. ಬಹಳಷ್ಟು ಜನರಿಗೆ ಇದರ ಪರಿಣಾಮ ತಿಳಿದಿರುತ್ತದೆ. ಈ ಸಮಯದಲ್ಲಿ ಧೈರ್ಯ ಕಡಿಮೆಯಾಗುವುದು. ಆರೋಗ್ಯದಲ್ಲಿ ಕಳವಳ, ನಷ್ಟ ಅನುಭವಿಸುವುದು , ಇದನ್ನೆಲ್ಲಾ ಬಹಳಷ್ಟು ಜನರು ಇಷ್ಟು ದಿನ ಅನುಭವಿಸಿರುತ್ತಾರೆ. ಆದರೆ ಈ ವರ್ಷ 2024 ರಲ್ಲಿ ಒಂದಷ್ಟು ದಿನ ಶನಿ ಸಮಾಧಾನ ನೀಡುತ್ತಾನೆ. ಒಂದಷ್ಟು ತಿಂಗಳಲ್ಲಿ ಸಕಾರಾತ್ಮಕ ಫಲಗಳನ್ನು ಕೊಡುತ್ತಾನೆ.
ಸಾಡೇಸಾತಿ ಶುರುವಾಗಿ ಒಂದು ವರ್ಷ ಆಗಿದೆ. 2023ರ ಜನವರಿ 17 ಕ್ಕೆ ಶನಿ ಕುಂಭ ರಾಶಿಯಲ್ಲಿ ಪ್ರವೇಶ ಮಾಡಿದ್ದ. ಅದು ನಿಮ್ಮ12 ನೇ ಮನೆಯಾಗಿರುತ್ತದೆ. ಅದನ್ನು ವ್ಯಯ ಸ್ಥಾನ ಎ೦ದು ಕರೆಯುತ್ತಾರೆ. ಆಗಾಗಿ ಸಾಡೇಸಾತಿಯ ಜೊತೆಗೆ ಖರ್ಚು ಕೂಡ ಹೆಚ್ಚಾಗಿರುತ್ತದೆ. ಕಳ್ಳಕಾಕರ ಭಯ ಒಂದು ಕಡೆಯಾದರೆ , ಯಾರಾದರೂ ಎದುರಿಸಿದರೆ ಅನ್ನೋದು ಇನ್ನೊಂದು ಕಡೆ. ಅಥವಾ ಮೋಸ ಅವಮಾನ ಆಗುವ ಭಯ ಕೂಡ ಕಾಡಿರುತ್ತದೆ. ಇಂತಹುದೇ ಭಯ 2024ರಲ್ಲಿ ಹೆಚ್ಚಿನ ಜನರಿಗೆ ಕಾಡುತ್ತದೆ.
ಅದರಲ್ಲೂ ಫೆಬ್ರವರಿ 11 ಕ್ಕೆ ಶನಿ ಹಸ್ತನಾಗುತ್ತಾನೆ. ಅಂದರೆ ಭೂಮಿಗಿಂತ ಸೂರ್ಯನಿಗೆ ಹತ್ತಿರವಾಗುವುದರಿಂದ ನಿಮಗೆ ಶುಭ ಫಲಗಳು ಹೆಚ್ಚಾಗಿ ದೊರೆಯುತ್ತದೆ ಎಂದು ಹೇಳಲಾಗಿದೆ. ಶನಿ ಹಸ್ತನಾಗಿರುವ ಸಮಯದಲ್ಲಿ ನೀವು ನಿದ್ರೆಯನ್ನು ಹಾಳು ಮಾಡಿಕೊಳ್ಳಬಹುದು. ಬೇಡದ ಯೋಜನೆಗಳು , ಉದ್ವೇಗದಿಂದ ನಿದ್ರೆ ಬರುವುದಿಲ್ಲ . ವಿಚಿತ್ರವಾದ ಕನಸುಗಳು ಬೀಳುವುದಕ್ಕೆ ಶುರುವಾಗಬಹುದು . ಕನಸಿನಲ್ಲಿ ಮಾತನಾಡುವುದು , ಇದಕ್ಕೆಲ್ಲಾ ಭಯ ಬೀಳುವ ಸಾಧ್ಯತೆ ಇರುತ್ತದೆ .
ಕೆಲವರು ಕನಸಿಗೆ ಹೆದರಿ ನಿದ್ರೆ ಹಾಳು ಮಾಡಿಕೊಂಡರೆ, ಇನ್ನೂ ಕೆಲವರಿಗೆ ಖರ್ಚು ಹೆಚ್ಚಾಗುವುದರಿಂದಲೂ ನಿದ್ರೆ ಹಾಳಾಗುವ ಸಾಧ್ಯತೆ ಇರುತ್ತದೆ . ಈ ಕಷ್ಟದ ಸಮಯದಲ್ಲಿ ಕೈಯಲ್ಲಿ ಹಣ ಇರುವುದಿಲ್ಲ . ಯಾರಿಂದಲಾದರೂ ಬೇಡುವ ಕಾಲ ಬಂದರೂ ಬರಬಹುದು . ಪ್ರಯಾಣ ಮಾಡುವಾಗ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ . ಖರ್ಚು ವೆಚ್ಚ ಜಾಸ್ತಿ ಮಾಡುವ ಸಾಧ್ಯತೆ ಇದೆ . ಕಾಲಿನ ಪಾದಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ . ಗೊತ್ತಿಲ್ಲದೆ ತೊಂದರೆ ತಂದುಕೊಳ್ಳುವ ಸಾಧ್ಯತೆ ಇದೆ .
ಆದ್ದರಿಂದ ಎಚ್ಚರಿಕೆಯಿಂದ ಇರಬೇಕು . ಶನಿ ಚೆನ್ನಾಗಿಲ್ಲದ ಸಮಯದಲ್ಲಿ ಕಾಲಿಗೆ ಸರ್ಜರಿ ಆಗುವ ರೀತಿ ಕೂಡ ಆಗಬಹುದು. ಇದರಿಂದ ಆಸ್ಪತ್ರೆ ವಾಸ ಮಾಡಬಹುದು. ಕುಟುಂಬದ ವಿಚಾರದಲ್ಲಿ ನಿಮ್ಮ ಒಡ ಹುಟ್ಟಿದವರ ಜೊತೆ ಒಂದಷ್ಟು ಸಮಸ್ಯೆಗಳು ಆಗಬಹುದು. ಮನಸ್ತಾಪ , ಭಿನ್ನಾಭಿಪ್ರಾಯಗಳು , ನಿಮ್ಮ ಮಾತಿನಿಂದ ನೊಂದುಕೊಳ್ಳುವ ಸಾಧ್ಯತೆ ಇರುತ್ತದೆ . ಮಾತನಾಡುವ ಸಮಯದಲ್ಲಿ ಹುಷಾರಾಗಿರಿ. ನಿಮ್ಮ ಜೊತೆಗಿರುವ ಸ್ನೇಹಿತರು ಹಣವನ್ನು ಖರ್ಚು ಮಾಡಿಸುವ ಸಾಧ್ಯತೆ ಇರುತ್ತದೆ .
ಹಾಗಾಗಿ ಗೆಳೆತನ ಮಾಡುವಾಗ ಎಚ್ಚರ ವಹಿಸಿ ಗೆಳೆತನ ಮಾಡಿ, ಇಂತಹ ಘಟನೆಗಳು ಹೆಚ್ಚಾಗಿ ಫೆಬ್ರವರಿ 11 ರಿಂದ ಮಾರ್ಚ್ 18 ರ ತನಕ ನಡೆಯುತ್ತದೆ. ಕಷ್ಟಗಳು ಇಲ್ಲಿಗೆ ಕೊನೆಯಾಗುವುದಿಲ್ಲ. ಇದೇ ರೀತಿಯ ಕಷ್ಟಗಳು , ಖರ್ಚುಗಳು , ಅಥವಾ ಭಯ ಪಡುವ ವಾತಾವರಣ ಜೂನ್ 29 ರಿಂದ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿ ಆಗುತ್ತದೆ. ಜೂನ್ 29ನೇ ತಾರೀಖಿಗೆ ಒಂದು ದೊಡ್ಡ ಬದಲಾವಣೆ ಆಗುತ್ತದೆ. ಶನಿ ಇಷ್ಟು ದಿನ ಕುಂಭ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದ್ದ ,
ಆದರೆ ಜೂನ್ 29 ರಿಂದ ಹಿಮ್ಮುಖ ಚಲನೆಯನ್ನು ಶುರು ಮಾಡುತ್ತಾನೆ. ಅಂದರೆ , ಅದಕ್ಕೆ ನಾವು ವಕ್ರ ಶನಿ ಎಂದು ಕರೆಯುತ್ತೇವೆ. ಇದು ಕೂಡ ಒಂದು ದೊಡ್ಡ ಶಾಕ್ ಕೊಡುತ್ತದೆ. ಮುಖ್ಯವಾಗಿ ನಿಮ್ಮ ಖರ್ಚು ದುಪ್ಪಟ್ಟಾಗಿ ಹೆಚ್ಚಾಗುತ್ತದೆ. ಅಂದುಕೊಂಡ ರೀತಿಯೇ ಜೀವನವನ್ನು ನಡೆಸುತ್ತಾರೆ. ಸಮಾರಂಭಳಿಗೆ ಹೆಚ್ಚಿನ ಹಣ ಪೋಲು ಮಾಡುವ ಸಾಧ್ಯತೆ ಇದೆ. ದುರಾದುಷ್ಟಾವು ಕಾಡುವುದಕ್ಕೆ ಶುರುವಾಗುವುದರಿಂದ ಹೂಡಿಕೆ ಮಾಡಿದರೂ ಬರುವ ಲಾಭ ಕಡಿಮೆ ಇರುತ್ತದೆ.
ಅದರಲ್ಲೂ ಮೇ ನಂತರ ಗುರು ಬಲ ಕೂಡ ಇರುವುದಿಲ್ಲ. ಅದರಿಂದ ಕೂಡ ಒಂದಷ್ಟು ರೀತಿಯ ಕಷ್ಟ ಹುಡುಕಿಕೊಂಡು ಬರುತ್ತದೆ. ಸಾಡೇಸಾತಿ ಸಮಯದಲ್ಲಿ ಕೆಲಸ ಹೋಗಿದೆ ಎಂದರೆ, ಅದರಿಂದ ಕಷ್ಟ ಪಡುವ ಸಾಧ್ಯತೆ ಇರುತ್ತದೆ . ಎಲ್ಲೂ ಸಹಾಯ ಸಿಗದೇ ಇರುವ ಹಾಗೆ ಕೂಡ ಆಗಬಹುದು . ಜೂನ್ 29 ರ ನಂತರ ಆರೋಗ್ಯಕ್ಕೆ ಹೆಚ್ಚಿನ ನಿಗಾ ವಹಿಸಬೇಕು . ಶನಿ ಮಂತ್ರಗಳನ್ನು ಜಪಿಸುತ್ತಾ , ಪೂಜೆ ಪುನಸ್ಕಾರಗಳನ್ನು ಮಾಡಬೇಕು . ಇದರ ಕಡೆ ಮನಸ್ಸನ್ನು ತಿರುಗುವ ಹಾಗೆ ಮಾಡಿಕೊಳ್ಳಬೇಕು.
ಶನಿಯ ಮಂತ್ರಗಳನ್ನು ಕೇಳುವುದರಿಂದ ಉದ್ವೇಗಕ್ಕೆ ಸಮಾಧಾನ ಸಿಗುವ ಸಾಧ್ಯತೆ ಇರುತ್ತದೆ . ಕೌಟುಂಬಿಕ ನೆಮ್ಮದಿ ಕೂಡ ಸ್ವಲ್ಪ ಹಾಳಾಗುವ ಸಾಧ್ಯತೆ ಇದೆ . ಮನೆಯವರು ನಿಮ್ಮ ವಿರುದ್ಧವಾಗಿ ಮಾತನಾಡಬಹುದು . ಸಂಬಂಧಗಳು ಹಾಳಾಗುವ ಸಾಧ್ಯತೆ ಕೂಡ ಇದೆ . ವ್ಯಾಪಾರ , ವ್ಯವಹಾರ ಮಾಡುವವರಿಗೆ ನಷ್ಟ ಆಗುವ ಸಾಧ್ಯತೆ ಇದೆ . ನಿಮ್ಮ ಆಸ್ತಿ , ಮನೆ ಹರಾಜು ಹಾಕುವ ಪ್ರಸಂಗ ಕೂಡ ಬರಬಹುದು . ಕೆಲವರು ಸಾಲಗಾರರ ಕಾಟದಿಂದ ಮನೆ ಬಿಟ್ಟು ಕೂಡ ಹೋಗಬಹುದು . ಈ ರೀತಿಯಲ್ಲಿ ಶನಿಯ ಕಾಟ ಮುಂದುವರೆಯಲು ಸಾಧ್ಯವಾಗಿದೆ . ಇದೊಂದು ಸೂಚನೆಯಾಗಿದೆ .
ಪಾಲುದಾರಿಕೆಯಲ್ಲಿ ವೃವಹಾರ ನಡೆಸುತ್ತಿದ್ದರೆ, ಅದರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ . ನಿಮ್ಮನ್ನು ಬಳಸಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ . ಫೈಲ್ಗಳ ಮೇಲೆ ಸಹಿ ಹಾಕುವಾಗ ಎಚ್ಚರಿಕೆಯಿಂದ ಇರಬೇಕು . ಕೋರ್ಟ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಮತ್ತು ಅದರಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ . ಸಾಡೇಸಾತಿ ಮುಗಿಯುವವರೆಗೂ ಕೂಡ ಈ ರಗಳೆಗಳು ಇದ್ದೇ ಇರುತ್ತದೆ . ನವೆಂಬರ್ 15 ರ ತನಕ ಈ ರೀತಿಯ ಕಾಟ ಹೆಚ್ಚಾಗಬಹುದು. ನವೆಂಬರ್ ನಿಂದ ಡಿಸೆಂಬರ್ ತನಕ ಇದೇ ರೀತಿಯ ಘಟನೆಗಳು ಮುಂದುವರೆಯುವ ಸಾಧ್ಯತೆ ಇದೆ . ನಿಮಗೆ ಶುಭ ಫಲಗಳನ್ನು ಕೂಡ ಶನಿ ಕೊಡುತ್ತಾನೆ.
ಇದು ಜೂನ್ ಗಿಂತ ಮುಂಚೆಯೇ ಇರುತ್ತದೆ. ಮಾರ್ಚ್ 18ಕ್ಕೆ ಶನಿ ಉದಯನಾಗುತ್ತಾನೆ. ಬಹಳಷ್ಟು ಜನರಿಗೆ ಉದ್ಯೋಗದಲ್ಲಿ ಶುಭ ಸುದ್ದಿಯನ್ನು ಕೇಳುತ್ತಾರೆ. ಶನಿ ಹೇಗೆ ಉದಯವಾಗುತ್ತಾನೋ, ಹಾಗೇ ನಿಮ್ಮ ಜೀವನದಲ್ಲಿ ಹೊಸ ಹೊಸ ಅವಕಾಶಗಳು ಸಿಗುತ್ತಾ ಹೋಗುತ್ತವೆ. ವಿದೇಶದಲ್ಲಿ ಹೊಸ ಅವಕಾಶಗಳು ಸಿಗುವುದು. ಕೆಲವೊಂದು ಮೂಲಗಳಿಂದ ಹಣ ಸಿಗುವ ಸಾಧ್ಯತೆ ಇರುತ್ತದೆ . ಈ ಎಲ್ಲಾ ಘಟನೆಗಳು ಜೂನ್ 29ರ ತನಕ ವಕ್ರ ಶನಿ ಕಾಟ ಶುರುವಾಗುವ ವರೆಗೆ ನಡೆಯುತ್ತದೆ. ಮಾರ್ಚ್ 18 ರಿಂದ ಜೂನ್ 29 ರ ವರೆಗೆ ಮೀನ ರಾಶಿಯವರಿಗೆ ಒಳ್ಳೆಯ ಶುಭ ಫಲಗಳು ದೊರೆಯುತ್ತದೆ ಎಂದು ತಿಳಿಸಲಾಗಿದೆ.