ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ .

0

ನಾವು ಈ ಲೇಖನದಲ್ಲಿ ಸಕ್ಕರೆ ಕಾಯಿಲೆಯ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ .
ಡಯಾಬಿಟಿಸ್ (ಮಧುಮೇಹ ಅಥವಾ ಸಕ್ಕರೆ ಕಾಯಿಲೆ) ಎನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನಮ್ಮ ದೇಹ ಹೋರಾಡುವ ಸ್ಥಿತಿಯೆಂದು ಸರಳ ಭಾಷೆಯಲ್ಲಿ ಹೇಳಬಹುದು .

ಆರಂಭದಲ್ಲಿ ಡಯಾಬಿಟಿಸ್ ಬಂದರೂ ಕೂಡ ನಮಗೆ ಗೊತ್ತಾಗದೆ ಹೋಗಬಹುದು. ಆದ್ದರಿಂದ ನಮಗೆ ಡಯಾಬಿಟಿಸ್ ಬಂದಿದೆಯಾ ? ಅಥವಾ ಬರಲಿದೆಯಾ? ಎಂಬುದನ್ನು ಈ ಕೆಳಗಿನ ಲಕ್ಷಣಗಳಿಂದ ತಿಳಿದುಕೊಳ್ಳಬಹುದು .

1.ರಾತ್ರಿ ಹೊತ್ತಿನಲ್ಲಿ ಪದೇ ಪದೇ ಮೂತ್ರ ಬರುವುದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ಫಿಲ್ಟರ್ ಮಾಡಲು ಕಿಡ್ನಿಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ರಾತ್ರಿ ಹೊತ್ತು ಪದೇ ಪದೇ ಮೂತ್ರ ಬರುವುದು.

ಕಂಕುಳು (Armpit), ಕುತ್ತಿಗೆ, ತೊಡೆ , ಸಂದುಗಳಲ್ಲಿ Dark Patches ಕಂಡು ಬರುವುದು. (Acanthosis nigricans)

3 . ಹೆಚ್ಚು ಸಿಹಿ ತಿನ್ನಬೇಕೆನ್ನಿಸುವುದು (carving for Sagar) ದೇಹದ ಜೀವಕೋಶಗಳಿಗೆ ಗ್ಲುಕೋಸ್ ಸರಿಯಾಗಿ ಸಿಗದೇ ಹಸಿವು ಆದಂತೆ ಅನ್ನಿಸುವುದು.

ಆಗಾಗ ಮಸುಕು ಮಸುಕಾಗಿ ಕಾಣುವುದು (blurred vision) ರಕ್ತದಲ್ಲಿನ ಸಕ್ಕರೆಯ ಅಂಶವು ಕಣ್ಣಿನ ರಕ್ತನಾಳಗಳನ್ನು ಘಾಸಿಗೊಳಿಸಿ(damage) ಕಣ್ಣುಗಳ ಮಸೂರ(lens) ದಲ್ಲಿ ದ್ರವ ಪದಾರ್ಥವು ಶೇಖರವಾಗುವುದು .

ಊದಿಕೊಂಡಂತೆ ಕಾಣುವ ಮುಖ (puffy face) ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಅಂಶವು Fluid retention ಗೆ ಕಾರಣವಾಗುತ್ತದೆ. ಮುಖವು puffy ಆಗಿ ಗಲ್ಲಗಳು ಊದಿಕೊಂಡಂತೆ ಕಣ್ಣುಗಳ ಸುತ್ತ ಬಾವು ಬಂದಂತೆ ಕಾಣುವುದು.

ನೋವು ಸೆಳೆತ ಮತ್ತು ಜೋಮು(tingling and numbness) ಕೈ ಕಾಲುಗಳಲ್ಲಿ ನೋವು ಸೆಳೆತ ಮತ್ತು ಜೋಮು (ಅರಿವಿಲ್ಲದಂತೆ) ಉಂಟಾಗುವುದು . ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶದಿಂದ ನರಗಳು ಮತ್ತು ರಕ್ತನಾಳಗಳು ಘಾಸಿಗೊಳ್ಳುವುದು. (Peripheral neuropathy)

ನರುಲಿಗಳು(skin tags) ರಕ್ತದಲ್ಲಿ ಹೆಚ್ಚಿದ ಸಕ್ಕರೆಯ ಅಂಶದಿಂದಾಗಿ ಜೀವಕೋಶಗಳು ಪ್ರತಿ ವೇಗದಿಂದ ಉತ್ಪನ್ನ ಆಗುವುದರಿಂದ ಹೆಚ್ಚು ಹೆಚ್ಚು ನರುಲಿಗಳು ಉಂಟಾಗಬಹುದು .

ಜೋತು ಬಿದ್ದಿರುವ ಹೊಟ್ಟೆ ( saggling belly Fat) ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆ ಅಂಶವು ಹೊಟ್ಟೆಯ ಭಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ .

ಊಟವಾದ ನಂತರ ಆಯಾಸ ಆಗುವುದು. ರಕ್ತದಲ್ಲಿ ಸಕ್ಕರೆಯ ಅಂಶವು ಊಟವಾದ ನಂತರ ಇನ್ನೂ ಹೆಚ್ಚಾಗಿ ಆಯಾಸ ಎನಿಸುವುದು. ಆರೋಗ್ಯವಂತ ಮನುಷ್ಯನಿಗೆ ಊಟವಾದ ನಂತರ ಹೆಚ್ಚು ಶಕ್ತಿ ಮತ್ತು ಚೈತನ್ಯ ಬರುವುದು .

ಚರ್ಮದಲ್ಲಿ ನವೆ (skin itching) ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶದಿಂದಾಗಿ ಚರ್ಮಕ್ಕೆ ಪೋಕ್ಷಕಾಂಶಗಳು ಸಿಗದಂತಾಗುತ್ತವೆ. ಇದರಿಂದ ಚರ್ಮದ ಆರೋಗ್ಯಕರ ಬೆಳವಣಿಗೆಗೆ ಕುಂದುಂಟಾಗಿ ಚರ್ಮವು ಒಣಗಿದಂತಾಗಿ ನವೆ, ಕಿರಿಕಿರಿಯಾಗುವುದು.

ಗಾಯ ಮಾಯುವುದು ನಿಧಾನವಾಗುವುದು. ರಕ್ತದಲ್ಲಿನ ಸಕ್ಕರೆ ಅಂಶ ರಕ್ತ ಪರಿಚಲನೆಯನ್ನು (decreases blood circulation) ಕಡಿಮೆ ಮಾಡುತ್ತದೆ.

ಮೆದುಳಿಗೆ ಮಬ್ಬು ಕವಿದಂತಾಗುವುದು (brain fog) ರಕ್ತದಲ್ಲಿ ಹೆಚ್ಚಿದ ಸಕ್ಕರೆ ಅಂಶದಿಂದಾಗ ಮೆದುಳಿಗೆ ರಕ್ತ ಸಂಚಾರವು ಕಡಿಮೆಯಾಗಿ, ಆಕ್ಸಿಜನ್ ಕೊರತೆ ಉಂಟಾಗುತ್ತದೆ. ಇದರಿಂದ ಚುರುಕುತನ ಕಡಿಮೆಯಾಗಿ ಮಬ್ಬು ಕವಿದಂತಾಗುತ್ತದೆ.

Leave A Reply

Your email address will not be published.