ನಾವು ಈ ಲೇಖನದಲ್ಲಿ, ವೃಷಭ ರಾಶಿಯವರ, ಬಹು ನಿರೀಕ್ಷಿತ, ಯುಗಾದಿಯ ವರ್ಷ ಭವಿಷ್ಯದ, ಬಗ್ಗೆ ತಿಳಿದುಕೊಳ್ಳೋಣ. 2024ರಲ್ಲಿ ವೃಷಭ ರಾಶಿಯವರಿಗೆ, ಏನು ಫಲಗಳು ಸಿಗುತ್ತದೆ . ಮತ್ತು ಅವರು ಎದುರಿಸಬೇಕಾದಂತಹ , ಸವಾಲುಗಳೇನು , ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಫಲಗಳನ್ನು , ಹೇಗೆ ಪಡೆದುಕೊಳ್ಳಬೇಕು . ಎಂಬುದರ ಬಗ್ಗೆ , ವಿವರವಾಗಿ ತಿಳಿದುಕೊಳ್ಳೋಣ. ಮತ್ತು ಪರಿಹಾರಗಳನ್ನು ತಿಳಿದುಕೊಳ್ಳೋಣ. ವೃಷಭ ರಾಶಿಯವರಿಗೆ , ಗುರುವಿನ ಗೋಚಾರ ಫಲ ಅಷ್ಟೇನೂ ಇರುವುದಿಲ್ಲ .ನೀವು ಜನ್ಮ ಜಾತಕವನ್ನು , ಸಹ ಪರಿಶೀಲಿಸಿಕೊಳ್ಳಬೇಕಾಗುತ್ತದೆ.
ಗುರು ಒಂದನೇ ಮನೆಯಲ್ಲಿ, ಇರುತ್ತಾರೆ .ಅಂದರೆ ಸ್ವ ಕ್ಷೇತ್ರದಲ್ಲಿ, ಇರುತ್ತಾರೆ .ಇದರಿಂದ ಗುರುವಿನ ಪ್ರಭಾವ ಅಷ್ಟಾಗಿ ಇರುವುದಿಲ್ಲ. ನಿಮ್ಮ ಮೇಲೆ ,ಬಹಳಷ್ಟು ಜವಾಬ್ದಾರಿಗಳಿರುತ್ತದೆ .ಈ ವರ್ಷದಲ್ಲಿ ಕೆಲವೊಂದು ಯೋಜನೆಗಳನ್ನು , ಸಹ ರೂಪಿಸಿಕೊಳ್ಳುತ್ತೀರಾ. ಕೆಲಸವನ್ನು ಪೂರ್ಣ ಮಾಡಬೇಕು . ಎಂಬ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ , ಇರುತ್ತದೆ. ಎಲ್ಲದಕ್ಕೂ, ಪರಿಹಾರವಿರುತ್ತದೆ. ಸಮಸ್ಯೆಗಳನ್ನು ಸರಿ ಮಾಡಿಕೊಂಡು , ಮುಂದೆ ಹೋಗಲಿಕ್ಕೆ .
ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ಈ ಎಚ್ಚರಿಕೆಗಳನ್ನು ಪಾಲಿಸಿದರೆ , ನಿಮಗೆ ಅನುಕೂಲವಾಗುತ್ತದೆ. ಮೊದಲನೇಯದಾಗಿ, ನೀವು ದುಡಿಯುತ್ತೀರಾ , ಕಷ್ಟ ಪಡುತ್ತೀರಾ, ನೀವು ವೃಷಭ ರಾಶಿಯವರು ಎಂದರೆ, ಯಾವತ್ತಿಗೂ ಬೇರೆಯವರ ಮೇಲೆ ಅವಲಂಬಿತರಾಗುವಂತಹ ವ್ಯಕ್ತಿಗಳಲ್ಲ . ಅದು ಸ್ತ್ರೀಯರೂ ಆಗಿರಬಹುದು, ಅಥವಾ ಪುರುಷರೇ, ಆಗಿರಬಹುದು . ಸ್ವಂತ ಆಲೋಚನೆಗಳು , ನಿಮ್ಮ ಮನಸ್ಸಿನಲ್ಲಿ ಇರುತ್ತವೆ. ಇಂತಹ ಸಂದರ್ಭದಲ್ಲಿ. ಏನಾಗುತ್ತದೆ ಅಂದರೆ , ಬಹಳಷ್ಟು ಜವಾಬ್ದಾರಿಗಳು, ಒತ್ತಡಗಳು, ಇರುತ್ತವೆ. ಆದರೆ ದುಂದು ವೆಚ್ಚಕ್ಕೆ, ಕಡಿವಾಣ ಹಾಕಬೇಕಾಗುತ್ತದೆ.
ಬೇರೆಯವರಿಗೆ ಸಹಾಯವನ್ನು ಮಾಡಿ, ಆದರೆ ನಿಮ್ಮ ಪರಿಸ್ಥಿತಿಯನ್ನು ತಿಳಿದುಕೊಂಡು ಅವರಿಗೆ ಸಹಾಯ ಮಾಡಿ. ಯಾರ ಜೊತೆಗೂ , ದ್ವೇಷವನ್ನು ಕಟ್ಟಿಕೊಳ್ಳಲು ಹೋಗಬೇಡಿ. ಬಂದು ಬಾಂದವರೆ ಆಗಿರಬಹುದು . ಸ್ನೇಹಿತರೆ ಆಗಿರಬಹುದು . ಯಾರ ಹತ್ತಿರವೂ ದ್ವೇಷವನ್ನು. ಮುಂದುವರಿಸಲು, ಹೋಗಬೇಡಿ . ಇದರಿಂದ ನೀವು ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಅಲ್ಲಿಯ ಸಮಸ್ಯೆಯನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ಇಲ್ಲದಿದ್ದರೆ ನೀವು ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ . ಮತ್ತು ಕೆಲಸದ ಕಡೆ ತುಂಬಾ ಆದ್ಯತೆಯನ್ನು ನೀಡಿ . ಯಾರ ಮೇಲೂ ಸಹ ನಿಮ್ಮ ಕೆಲಸವನ್ನು ವಹಿಸಬೇಡಿ. ನಿಮ್ಮ ಕೆಲಸವನ್ನು ,
ನೀವೇ ಮುಂಜಾಗ್ರತೆಯಾಗಿ , ನಿರ್ವಹಿಸಿರಿ. ಬೇರೆಯವರ ಗೊಂದಲಕ್ಕೆ ಅಥವಾ ಅವರ ವಿಷಯಗಳಿಗೆ ನೀವು ತಲೆ ಹಾಕುವುದು ಒಳ್ಳೆಯದಲ್ಲ. ಇಲ್ಲದಿರುವ ಸಮಸ್ಯೆಗಳನ್ನು ನಿಮ್ಮ ಮೈ ಮೇಲೆ ಎಳೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು, ಇನ್ನೂ ಉನ್ನತಿಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿಧಾನವಾದರೂ , ಸರಿ ಹೆಚ್ಚಿನ ಶ್ರಮವನ್ನು , ನೀವು ಹಾಕಬೇಕಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ ನಿಮಗೆ ತುಂಬಾ ತೊಂದರೆಯಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಕೆಲವು ಗೊಂದಲಮಯ ವಾತಾವರಣಗಳು ಉಂಟಾಗುತ್ತದೆ.
ಇದರ ಬಗ್ಗೆ ನೀವು ತುಂಬಾ ಎಚ್ಚರಿಕೆ ವಹಿಸಿ, ನಡೆದುಕೊಳ್ಳಬೇಕು. ಈ ವರ್ಷದಿಂದ ಅಂದರೆ ಈ ಯುಗಾದಿಯಿಂದ ನಂತರದ ಯುಗಾದಿಯವರೆಗೂ ಬೇರೆ ಬೇರೆ ಕಡೆಗಳಿಂದ ನಿಮಗೆ ಕೆಟ್ಟ ವಿಚಾರಗಳು ಮತ್ತು ದುಷ್ಟ ಜನಗಳ ಸಹವಾಸ ಇರುವ ಹಾಗೆ ಆಗುತ್ತದೆ . ಆದ್ದರಿಂದ ನೀವು ಅವರಿಂದ ದೂರವಿರಬೇಕು . ನೀವು ಏನೇ ಕೆಲಸ ಮಾಡಿದರೂ, ತುಂಬಾ ಜಾಗರೂಕರಾಗಿ, ಯೋಚನೆ ಮಾಡಿ ಮುಂದಕ್ಕೆ ಹೆಜ್ಜೆ ಇಡಬೇಕು. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮತ್ತು ಮಕ್ಕಳ ಆರೋಗ್ಯದ ಮೇಲೆ , ನಿಗಾ ಇರಬೇಕು.
ನಿಮಗೆ ಅಥವಾ ನಿಮ್ಮ ಮಕ್ಕಳಿಗೆ , ಊಟದ ವ್ಯತ್ಯಾಸವಾಗುವ ಪರಿಣಾಮ ಹೊಟ್ಟೆ ಕೆಡುವ ಸಂಭವವಿದೆ. ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ .ಆದ್ದರಿಂದ ನೀವು ಒಳ್ಳೆಯ ಆಹಾರ , ನೀರು , ಒಳ್ಳೆಯ ವಾತಾವರಣ ಇರುವಂತೆ, ನೋಡಿಕೊಳ್ಳಬೇಕು . ನಿಮ್ಮ ಸಂಸಾರ ಜೀವನದ ಬಗ್ಗೆ , ನಿಗಾ ವಹಿಸಬೇಕು. ಆರ್ಥಿಕವಾಗಿ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ದುಂದು ವೆಚ್ಚವನ್ನು , ಕಡಿಮೆ ಮಾಡಿದರೆ ಈ ಆರ್ಥಿಕ ಬಿಕ್ಕಟ್ಟಿನಿಂದ , ಪಾರಾಗಬಹುದು. ಬಂಧು ಮಿತ್ರರಿಂದ , ಯಾವ ಸಹಾಯ ಹಸ್ತವನ್ನು ನಿರೀಕ್ಷಿಸಬೇಡಿ. ಸ್ವಾವಲಂಬನೆಯಿಂದ ,ಕೆಲಸ ಮಾಡಿ ನಿಮಗೆ ಒಳ್ಳೆಯ ಪರಿಹಾರ ಸಿಗುತ್ತದೆ.
ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾಭ್ಯಾಸದತ್ತ ಗಮನ ಕೊಡಿ. ಇನ್ನು ಶನಿ ದೇವನ ಕೃಪೆಯು, ಸಾಧಾರಣ ಮಟ್ಟಿಗೆ, ನಿಮ್ಮ ಮೇಲೆ ಒಳ್ಳೆಯ ಪ್ರಭಾವಗಳನ್ನು, ತಂದುಕೊಡುತ್ತದೆ. ಹಿತ ಶತ್ರುಗಳಿಂದ , ಕಿರಿಕಿರಿ ನಿಮಗೆ ಕಡಿಮೆಯಾಗುತ್ತದೆ. ಶನಿಪ್ರಭಾವದಿಂದ , ನಿಮಗೆ ಒಳ್ಳೆಯ ಫಲಗಳು, ಸಿಗುತ್ತದೆ . ದಾನ ಧರ್ಮಗಳಲ್ಲಿ, ಪೂಜಾ ಕಾರ್ಯಗಳಲ್ಲಿ, ತೊಡಗಿಕೊಳ್ಳುವ ಸಾಧ್ಯತೆ ಹೆಚ್ಚು. ಕೋರ್ಟ್ , ಮತ್ತು ಕಚೇರಿಯ ವಿಷಯಗಳಲ್ಲಿ ನಿಮಗೆ ಜಯ ದೊರಕುತ್ತದೆ. ಸರ್ಕಾರಿ ಕೆಲಸಗಳಲ್ಲಿ , ಒಂದು ಒಳ್ಳೆಯ ಶುಭ ಸಮಾಚಾರವನ್ನು, ನೀವು ಕೇಳಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿ ನಿಧಾನ ಗತಿಯಾದರೂ ಒಂದು ಒಳ್ಳೆಯ ಶುಭ ಫಲಗಳನ್ನೇ ಪಡೆಯುತ್ತೀರಾ.
ಭೂಮಿ ಸಾಗುವಳಿಯ ವಿಚಾರದಲ್ಲಿ ಒಂದು ಒಳ್ಳೆಯ ಯೋಚನೆಗಳು , ನಿಮ್ಮದಾಗಿರುತ್ತದೆ. ದಾನ ಧರ್ಮಗಳಲ್ಲಿ ಪರೋಪಕಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತಾಗುತ್ತದೆ. ಸಾರ್ವಜನಿಕ ಜೀವನದಲ್ಲಿ, ನಿಮ್ಮನ್ನು ಗುರುತಿಸಿ ಕೊಳ್ಳುವಂತಾಗುತ್ತದೆ. ದೇವರ ಮಂತ್ರಗಳನ್ನು ಪಠಿಸುವುದರಿಂದ , ನೆಮ್ಮದಿಯ ವಾತಾವರಣವನ್ನು ಪಡೆಯಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ದೂರ ಮಾಡಿಕೊಂಡು , ಹೊಂದಾಣಿಕೆಯ ಜೀವನವನ್ನು ಮಾಡಿಕೊಳ್ಳಿ.
ಸರ್ಕಾರಿ ಕೆಲಸದಲ್ಲಿರುವವರು ಅವರ ಮೇಲಾಧಿಕಾರಿಗಳ, ಮನಸ್ಸಿಗೆ ಸಂತೋಷವಾಗುವಂತಹ, ಕೆಲಸಗಳನ್ನು ಅಂದರೆ ನಿಮ್ಮ ಕೆಲಸದಲ್ಲಿ ಲೋಪ ದೋಷಗಳಾಗದಂತೆ , ಎಚ್ಚರಿಕೆ ವಹಿಸಿ. ಮಿತ್ರರಿಂದ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ಕುಟುಂಬದಲ್ಲಿ ಸಣ್ಣ ಪುಟ್ಟ ಕಷ್ಟಗಳಿಗೆ ,ಮುಂಜಾಗ್ರತೆ ಕ್ರಮಗಳನ್ನು , ಕೈಗೊಳ್ಳಿ. ಮಿತವಾಗಿ ಖರ್ಚು ಮಾಡಿ , ವಿಶೇಷವಾಗಿ ಈ ವರ್ಷದಲ್ಲಿ ವ್ಯಾಪಾರಸ್ಥರು ಹೂಡಿಕೆಯನ್ನು ಮಾಡುವ ಮೊದಲು ಬಹಳ ಯೋಚನೆ ಮಾಡಿ . ಅಥವಾ ಆ ಕೆಲಸವನ್ನು ಮುಂದೂಡಿಕೊಳ್ಳಿ .
ವ್ಯಾಪಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲವಿರುತ್ತದೆ. ಅಧಿಕ ಖರ್ಚು ಸಹ ಇರುತ್ತದೆ. ಅದಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ರೈತರಿಗೂ ಸಹ ತುಂಬಾ ಸವಾಲುಗಳು, ಎದುರಾಗುತ್ತದೆ . ಆ ಸವಾಲುಳಿಗೆ ಮುಂಜಾಗ್ರತೆ ಕ್ರಮಗಳನ್ನು, ಕೈಗೊಳ್ಳುವುದು ಒಳ್ಳೆಯದು. ವಿದ್ಯಾರ್ಥಿಗಳು, ಹೆಚ್ಚಿಗೆ ಓದಿನ ಕಡೆ ಗಮನಹರಿಸಬೇಕು. ಒಟ್ಟಾರೆಯಾಗಿ ಗುರು ಒಂದನೇ ಸ್ಥಾನದಲ್ಲಿರುವುದರಿಂದ, ಗುರುವಿನ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಇದಕ್ಕೆ ಅದ್ಭುತ ಪರಿಹಾರಗಳೆಂದರೆ, ಮಾರ್ಗಶಿರ ಮಾಸ ಐದು ಹತ್ತು ಹದಿನೈದು ತಿಥಿಗಳು ,
ಶನಿವಾರ ಹಸ್ತ ನಕ್ಷತ್ರ, ಇವುಗಳು ಘತವಾಗಿರುತ್ತದೆ . ಶನಿ ದೇವರ ಮಂತ್ರವನ್ನು ಪಠಿಸಿಕೊಳ್ಳಿ. ಮತ್ತು ಪ್ರತಿ ಗುರುವಾರ ರುದ್ರಾಭಿಷೇಕವನ್ನು, ಮಾಡಿಸಿಕೊಳ್ಳಿ . ಮತ್ತು ಕಪ್ಪು ದಾರದಲ್ಲಿ ಗಂಧದ ಕಟ್ಟಿಗೆಯನ್ನು, ಧರಿಸುವುದು ಒಳ್ಳೆಯದು. ಕಷ್ಟದಲ್ಲಿರುವವರಿಗೆ ,ನೋವಿನಲ್ಲಿ ಇರುವವರಿಗೆ ,ನಿಮ್ಮ ಕೈಲಾದಂತಹ ಸಹಾಯವನ್ನು ಮಾಡಿ . ಗುರುಗಳಿಗೆ ಮತ್ತು ಮಾತಾ ಪಿತೃಗಳಿಗೆ, ಸೇವೆಯನ್ನ ಮಾಡಿ , ಅವರ ಮನಸ್ಸಿಗೆ ನೋವನ್ನುಂಟು ಮಾಡದಂತೆ ಎಚ್ಚರಿಕೆವಹಿಸಿ ಗುರುವಿನ ಅನುಗ್ರಹ, ನಿಮ್ಮದಾಗುತ್ತದೆ .ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಿ. ಮೇಲೆ ಹೇಳಿದಂತಹ ಪರಿಹಾರಗಳನ್ನು, ಅನುಸರಿಸಿದರೆ ,ಒಟ್ಟಾರೆಯಾಗಿ ಈ ವರ್ಷ ಒಳ್ಳೆಯ ಫಲಗಳನ್ನು, ಪಡೆದುಕೊಳ್ಳುತ್ತೀರಾ ಎಂದು ಹೇಳಲಾಗಿದೆ.