ಈ ದಿನಗಳಲ್ಲಿ ಜನಿಸಿದ್ದರೆ ಲವ್ ಮ್ಯಾರೇಜ್ ಗ್ಯಾರಂಟಿ.

ಈ ದಿನಗಳಲ್ಲಿ ಜನಿಸಿದ್ದರೆ ಲವ್ ಮ್ಯಾರೇಜ್ ಗ್ಯಾರಂಟಿ. ಇವತ್ತಿನ ವಿಷಯ ತುಂಬಾ ಕ್ಯೂರಿಯಸ್ ಆಗಿದೆ, ಆಸಕ್ತಿಕರವಾಗಿದೆ, ಕುತೂಹಲಕಾರಿಯಾಗಿದೆ ಮತ್ತು ರಹಸ್ಯಮಯವಾಗಿದೆ. ಯಾಕಪ್ಪ ಅಂತಂದ್ರೆ ಯಾವ ದಿನಾಂಕದಂದು ಜನಿಸಿದ್ರೆ ಪ್ರೇಮ ವಿವಾಹ ಅಥವಾ ಲವ್ ಮ್ಯಾರೇಜ್ ಆಗುತ್ತೆ ಎನ್ನುವ ವಿಷಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅದಕ್ಕೆ ಮೊದಲು ನೀವೇನು ಮಾಡಬೇಕು ಅಂತ ಹೇಳಿದ್ರೆ ಈ ಜನ್ಮ ದಿನಾಂಕದಲ್ಲಿ ಒಂದು ಕ್ಯಾಲ್ಕುಲೇಷನ್ ಮಾಡ್ಕೋ ಬೇಕಾಗುತ್ತೆ. ಅದರ ಕ್ಯಾಲ್ಕುಲೇಷನ್ ಹೇಗಿರುತ್ತೆ? ಹೇಗೆ ಮಾಡ್ಕೋಬೇಕು? ಅನ್ನೋದನ್ನ ಈಗ ನಾನು ನಿಮಗೆ ತಿಳಿಸಿಕೊಡುತ್ತೇನೆ. ಇಲ್ಲಿ ನಾನು ನಿಮಗೆ ಎರಡು ಉದಾಹರಣೆಗಳನ್ನು ಕೊಡುತ್ತೇನೆ. ಮೊದಲನೆಯದಾಗಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕ ಎರಡು2-1-1990 ಇದ್ದರೆ ಇದನ್ನ ಕ್ಯಾಲ್ಕುಲೇಟ್ ಮಾಡಿಕೊಳ್ಳುವುದು ಹೇಗೆ ಅಂದರೆ, 2 ಇದು ಡೇಟ್ ಆಫ್ ಬರ್ತ್,

1 ಇದು ಮಂತ್ ಆಫ್ ಬರ್ತ್, ಹಾಗೆ 1990 ಇದು ಇಯರ್ ಆಫ್ ಬರ್ತ್. 2+1+1+9+9+0=22 ಇದೆಲ್ಲವನ್ನು ಸೇರಿಸಿದರೆ ಅಂದರೆ ದಿನಾಂಕ, ತಿಂಗಳು, ವರ್ಷ ಇದೆಲ್ಲವನ್ನು ಕೂಡಿಸಿದರೆ 22 ಬರುತ್ತದೆ. ಈ 22 ನೀವು ಮತ್ತೆ ಆಡ್ ಮಾಡಬೇಕಾಗುತ್ತೆ. 2+2= 4 ಬರುತ್ತೆ. ಹಾಗೆ ಇನ್ನೊಂದು ಎಕ್ಸಾಂಪಲ್ ತಗೊಳೋಣ. 20-4-1976 ಒಬ್ಬ ವ್ಯಕ್ತಿ ಜನ್ಮ ದಿನಾಂಕ ಈ ರೀತಿಯಾಗಿ ಇದ್ದರೆ 20 ಡೇಟ್ ಆಫ್ ಬರ್ತ್, 4 ಮಂತ್ ಆಫ್ ಬರ್ತ್, 1976 ಇಯರ್ ಆಫ್ ಬರ್ತ್. 2+0+4+1+9+7+6=29 ಎಲ್ಲವನ್ನು ಸೇರಿಸಿದಾಗ 29 ಬರುತ್ತದೆ.

ಅದನ್ನು ಮತ್ತೆ ಆಡ್ ಮಾಡಿದಾಗ 2+9=11 ಬರುತ್ತದೆ. ಆ 11 ನ್ನು ಆಡ್ ಮಾಡಿದಾಗ 1+1=2 ಬರುತ್ತದೆ. ಅಂದ್ರೆ ನಿಮ್ಮ ಒಂದು ಮೂಲಂಕ ಒಂದರಿಂದ ಒಂಭತ್ತರ ಒಳಗಡೆ ಮಾತ್ರ ಬರಬೇಕು. ಸೊ ಹಾಗಾಗಿ ನೀವು ಏನ್ ಮಾಡಬೇಕು ಅಂತ ಅಂದ್ರೆ, ಡೇಟ್ ಆಫ್ ಬರ್ತ್ ಅನ್ನ ಒಂದು ಪೇಪರ್ ನಲ್ಲಿ ನೀಟಾಗಿ ಬರೆದುಕೊಳ್ಳಿ. ಜನ್ಮ ದಿನಾಂಕ, ತಿಂಗಳು ಮತ್ತೆ ವರ್ಷ ಎಲ್ಲವನ್ನು ನೀಟಾಗಿ ಬರೆದುಕೊಂಡು ಅದನ್ನ ಆಡ್ ಮಾಡಿ. ಆಡ್ ಮಾಡಿದಾಗ ಒಂದು ಸಂಖ್ಯೆ ಬರುತ್ತದೆ.

ಅದನ್ನು ಮತ್ತೆ ಕೂಡಿಸಿಕೊಂಡು ಮೂಲಾಂಕವನ್ನು ಕಂಡುಹಿಡಿದುಕೊಳ್ಳಿ. ಒಂದರಿಂದ ಒಂಭತ್ತು ಏನ್ ಮೂಲಾಂಕ ಬರುತ್ತೆ ಅದರ ಮೇಲೆ ನಾವು ಪ್ರೆಡಿಕ್ಷನ್ ಕೊಡ್ತಾ ಹೋಗ್ತಿವಿ. ಮೂಲಾಂಕ 1 ಬಂದರೆ ಅವರ ಸ್ವಭಾವ ಹೇಗಿರುತ್ತದೆ ಅಂದರೆ, ಅಧಿಕಾರಯುತವಾಗಿರುತ್ತದೆ. ಅವರಲ್ಲಿ ನಾಯಕತ್ವದ ಗುಣ ಇರುತ್ತೆ. ಹಾಗೆ ಅವರು ತಾಳ್ಮೆಯಿಂದ ಕಾದು ತಮ್ಮ ಜೀವನ ಸಂಗಾತಿಯನ್ನು ಹುಡುಕುತ್ತಾರೆ. ಹಾಗಾಗಿ 1 ಮೂಲಾಂಕ ಬರ್ತಿದ್ರೆ ಇವರಿಗೆ ಅರೆಂಜ್ ಮ್ಯಾರೇಜ್ ಆಗುತ್ತೆ.

ಲವ್ ಮ್ಯಾರೇಜ್ ಆಗುವ ಸಂಭವನೀಯತೆ ಪ್ರೊಬ್ಯಾಬಿಲಿಟಿ 99% ಕಡಿಮೆ. ಸೊ ಹಾಗಾಗಿ ನಂಬರ್ 1 ಮೂಲಾಂಕ ಬರುವುದು ಅರೇಂಜ್ ಮ್ಯಾರೇಜ್ ಆಗುತ್ತೆ ಹೊರತಾಗಿ ಲವ್ ಮ್ಯಾರೇಜ್ ಆಗೋದಿಲ್ಲ. ಇನ್ನು ಮೂಲಾಂಕ ಎರಡು ಬಂದ್ರೆ ಇವರು ತುಂಬಾ ಸೆನ್ಸಿಟಿವ್ ಆಗಿ ಯೋಚನೆ ಮಾಡುತ್ತಾರೆ. ಇವರ ತಲೆಯಿಂದ ಅಂದ್ರೆ ಮೈಂಡ್ ಇಂದ ಯೋಚನೆ ಮಾಡೋದಕ್ಕಿಂತ ಜಾಸ್ತಿ ಹೃದಯದಿಂದ ಯೋಚನೆಯನ್ನು ಮಾಡುತ್ತಾರೆ. ಬೇಗ ಇವರು ಹರ್ಟ್ ಆಗ್ತಾರೆ. ತುಂಬಾ ಸೂಕ್ಷ್ಮ, ಮೃದು ಹೃದಯದ ಜೀವಿಗಳು ಅಂತ ಹೇಳಬಹುದು.

ಹಾಗಾಗಿ ಇವರು ಜಾಸ್ತಿ ಈ ಪ್ರೇಮ ವಿವಾಹ ಅಂತ ಹೋದರೂನು ಕೂಡ ಅದರಲ್ಲಿ ಅವರು ದಂತ ಭಗ್ನ ಆಯ್ತು ಅಂತಾರಲ್ಲ ಹಾಗೆ ಒಂತರ ಡಿಸಿಪಾಯಿಂಟ್ಮೆಂಟ್ ಆಗಿ ಮತ್ತೆ ಅರೇಂಜ್ ಮ್ಯಾರೇಜ್ ಆಗುವಂತ ಸಂಭವನೀಯತೆ ಜಾಸ್ತಿ ಇರುತ್ತೆ. ಹಾಗೆ ಮೂಲಾಂಕ ಮೂರನ್ನು ನಾವು ನೋಡುವುದಾದರೆ ಮೂಲಾಂಕ ಮೂರರಲ್ಲಿ ಇವರು ಪ್ರೇಮ ವಿವಾಹ ಅಂದ್ರೆ ಲವ್ ಮ್ಯಾರೇಜ್ ಗಿಂತ ತಮ್ಮ ಕೆರಿಯರ್, ವ್ಯಾಪಾರ, ವೃತ್ತಿ ಇದಕ್ಕೆ ಜಾಸ್ತಿ ಪ್ರಾಮಿನೆನ್ಸ್ ಕೊಡೋದ್ರಿಂದ ಇವರಿಗೂ ಕೂಡ ಲವ್ ಮ್ಯಾರೇಜ್ ಆಗಿ ಬರೋದಿಲ್ಲ.

ಇವರೂ ಕೂಡ ಅರೇಂಜ್ ಮ್ಯಾರೇಜ್ ಆಗ್ತಾರೆ. ನಾಲ್ಕನೆಯ ಮೂಲಾಂಕ ನೋಡೋದಾದ್ರೆ ಇವರು ತುಂಬಾ ಅಟ್ರಾಕ್ಟಿವ್ ಆಗಿರ್ತಾರೆ, ಡಾಮಿನೆಂಟ್ ಆಗಿ ಇರ್ತಾರೆ. ಹಾಗೆ ಇವರು ಒಂದಕ್ಕಿಂತ ಹೆಚ್ಚು ಪ್ರೇಮದ ಒಂದು ಪ್ರಕರಣದಲ್ಲಿಯೂ ಮದುವೆಗಿಂತ ಮುಂಚೆ ಇರುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತೆ. ಯಾಕೆ ಅಂತ ಅಂದ್ರೆ ಇವತ್ತು ಈ ನಾಲ್ಕು ಅನ್ನುವಂತ ಸಂಖ್ಯೆ ಹೇಗಿದೆ ಅಂತಂದ್ರೆ ಚಾರ್ಮಿಂಗಾಗಿರುತ್ತೆ. ಹುಡುಗಿಯರು ಹುಡುಗರ ಹತ್ರ ಅಟ್ರಾಕ್ಟ್ ಆಗಿ ಹೋಗ್ತಾರೆ,

ಹುಡುಗರಾದರೆ ಹುಡುಗೀರ ಹತ್ತಿರ ಅಟ್ರಾಕ್ಟ್ ಆಗಿ ಹೋಗುತ್ತಾರೆ. ಸೋ ಹಾಗಾಗಿ 4 ರ ಸಂಖ್ಯೆ ಲವ್ ಮ್ಯಾರೇಜ್ ಆಗುವಂತಹ ಸಂಭವನೀಯತೆ ಜಾಸ್ತಿ ಇರುತ್ತೆ. ಆದರೆ ಅವರ ಮಾತು, ವಾಣಿ ಕಠೋರ ಆಗಿರೋದ್ರಿಂದ ಕೆಲವೊಂದು ದಾಂಪತ್ಯಗಳು ಡೈವರ್ಸ್ ಗೆ ಹೋಗುತ್ತೆ. ಹಾಗೆ ಇವರ ಮೂಲಾಂಕ 4 ಬಂದರೆ ನೀವು ಒಂದು ಸ್ವಲ್ಪ ತಾಳ್ಮೆಯಿಂದ ದಾಂಪತ್ಯದಲ್ಲಿರುವುದು ಒಳ್ಳೆಯದು. ಹಾಗೆ ಇವರ ರಿಲೇಶನ್ ಶಿಪ್ ಚೆನ್ನಾಗಿ ಉಳಿದುಕೊಳ್ಳುತ್ತದೆ. ಇನ್ನು ಮೂಲಾಂಕ 5 ಇವರು ನೋಡೋದಕ್ಕೆ ಅಟ್ಟ್ರಾಕ್ಟಿವ್ ಆಗಿರುತ್ತಾರೆ, ಸುಂದರವಾಗಿರುತ್ತಾರೆ. ಅದೇ ರೀತಿ ಫ್ರೆಂಡ್ಸ್ ಇವ್ರಿಗೆ ಜಾಸ್ತಿ ಇರ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಇರ್ತಾರೆ.

ಮದುವೆಗೆ ಮುನ್ನ ಆಗ್ಲೇ ನಾನ್ ಹೇಳಿದಂಗೆ ಇವ್ರಿಗೆ ಒಂದಕ್ಕಿಂತ ಜಾಸ್ತಿ ಪ್ರಪೋಸಲ್ ಬಂದಿರುತ್ತೆ. ಹಾಗಾಗಿ ನಾನ್ ಹೇಳಿದ ಹಾಗೆ 5 ಮೂಲಾಂಕ ಬಂದರೆ ಲವ್ ಮ್ಯಾರೇಜ್ ಗ್ಯಾರಂಟಿ ಆಗ್ತಾರೆ. ಇದನ್ನ ನೀವು ನೋಟ್ ಮಾಡಿಕೊಳ್ಳಿ. ನಿಮ್ಮ ಡೇಟ್ ಆಫ್ ಬರ್ತ್ ಹಾಗೆ ತಿಂಗಳು ಮತ್ತು ವರ್ಷವನ್ನು ಸೇರಿಸಿದಾಗ ಯಾವ ಮೂಲಾಂಕ ಬರುತ್ತೆ ನೋಡಿ. ಅದರಲ್ಲಿ 5 ಬಂದರೆ ಲವ್ ಮ್ಯಾರೇಜ್ ಪಕ್ಕ ಅಂತಾನೆ ಹೇಳಬಹುದು. ಅದೇ ರೀತಿ ಮೂಲಾಂಕ ಆರನ್ನು ತೆಗೆದುಕೊಂಡರೆ ಇವರು ಲ್ಯಾವಿಶ್ ಆಗಿರುತ್ತಾರೆ,

ಲಕ್ಸುರಿ ಲೈಫನ್ನು ಇಷ್ಟಪಡುತ್ತಾರೆ, ಕನಸನ್ನ ನನಸು ಮಾಡ್ಕೋತಾರೆ. ಯಾಕೆಂದರೆ ಈ ಸಂಖ್ಯೆಯನ್ನು ಶುಕ್ರ ಆಳುವುದರಿಂದ ಇವರಿಗೆ ತುಂಬಾ ಒಂದು ಚಾರ್ಮಿಂಗ್ ಇರುತ್ತದೆ. ಇವರು ಅಟ್ರಾಕ್ಟಿವ್ ಆಗಿರುತ್ತಾರೆ. ಈ 6 ಮೂಲಾಂಕ ಬಂದರೂ ಕೂಡ ಲವ್ ಮ್ಯಾರೇಜ್ ಪಕ್ಕ ಅಂತಾನೇ ಹೇಳಬಹುದು. ಇನ್ನು ಮೂಲಾಂಕ 7. ಇವರು ಹೆತ್ತವರಿಗೆ, ತಂದೆ ತಾಯಿಗಳಿಗೆ ಮತ್ತು ಕುಟುಂಬದ ವ್ಯಾಲ್ಯೂ ಎಥಿಕ್ಸ್ ಗೆ ಅತ್ಯಂತ ಬೆಲೆ ಕೊಡೋದ್ರಿಂದ ಇವರು ಅರೇಂಜ್ ಮ್ಯಾರೇಜ್ ಆಗ್ತಾರೆ.

ಮನೆಯಲ್ಲಿ ಯಾವ ಹುಡುಗಿಯನ್ನು ತೋರಿಸುತ್ತಾರೆ ಅಥವಾ ಯಾವ ಹುಡುಗನನ್ನು ತೋರಿಸುತ್ತಾರೆ, ಅವರು ಕೂಡ ತಂದೆ ತಾಯಿಗೆ ಅಥವಾ ಕುಟುಂಬಕ್ಕೆ, ಗೌರವಕ್ಕೆ ಬೆಲೆಕೊಟ್ಟು ಅವರನ್ನೇ ಮದುವೆಯಾಗುತ್ತಾರೆ. ಅಕಸ್ಮಾತಾಗಿ ಇವರು ಪ್ರೀತಿ ಪ್ರೇಮಕ್ಕೆ ಕಾಲಿಟ್ಟರೂ ಕೂಡ ಮನೆಯಲ್ಲಿ ತಿಳಿಸಿ ಅರೆಂಜ್ ಮ್ಯಾರೇಜ್ ಆಗುತ್ತಾರೆ. ಹಾಗಾಗಿ ಮೂಲಾಂಕ 7 ಬಂದರೆ ಅರೇಂಜ್ ಮ್ಯಾರೇಜ್ ಆಗುತ್ತಾರೆ. ಇನ್ನು ಎಂಟನೆಯ ಮೂಲಾಂಕದವರು ಹೇಗಪ್ಪ ಅಂತ ಅಂದ್ರೆ, ಇವರು ಸಂಗಾತಿಗೆ ತುಂಬಾನೇ ಲಾಯಲ್ ಆಗಿ ಇರ್ತಾರೆ.

ಮೌಲ್ಯ ಮತ್ತು ಎಥಿಕ್ಸ್ ಗೆ ಜಾಸ್ತಿ ಬೆಲೆ ಕೊಡೋದ್ರಿಂದ ಇವರು ಕೂಡ ಅರೇಂಜ್ ಮ್ಯಾರೇಜ್ ಆಗ್ತಾರೆ ಅಂತಾನೆ ಹೇಳಬಹುದು. ಇನ್ನು 9 ಮೂಲಾಂಕದಲ್ಲಿ ಬಂದರೆ ಇವರು ಸ್ವಲ್ಪ ಈ ಪ್ರೀತಿ ಪ್ರೇಮಗಳಿಂದ ದೂರ ಇರ್ತಾರೆ. ಹಾಗಾಗಿ ಇವರು ಅರೇಂಜ್ ಅರೆಂಜ್ ಮ್ಯಾರೇಜ್ ಆಗ್ತಾರೆ ಅಂತಾನೆ ಹೇಳಬಹುದು. ಇನ್ನು ಮೂಲಾಂಕಗಳನ್ನ ನಾವು ಇಲ್ಲಿ ತಿಳ್ಕೊಂಡ್ವಿ.

ಇನ್ನೂ ಒಂದು ಇಂಪಾರ್ಟೆಂಟ್ ವಿಷಯ ಏನಪ್ಪಾ ಅಂತ ಅಂದ್ರೆ ಈ ಪ್ರೀತಿ ಪ್ರೇಮ ಅನ್ನುವಂಥದ್ದು ಆ ವಯಸ್ಸಿಗೆ ಸಹಜವಾಗಿ ಮೂಡುವಂತದ್ದು. ಹಾಗಾಗಿ ನಾವು ನಮ್ಮ ಭಾರತೀಯ ಸಂಪ್ರದಾಯ ಸಂಸ್ಕೃತಿಗಳಿಗೆ ತಲೆಬಾಗಲೇಬೇಕು. ಹಾಗೆ ಹೆತ್ತವರಿಗೆ ಕೂಡ ತಲೆ ಬಾಗಬೇಕು. ದಯಮಾಡಿ ಮಕ್ಕಳು ಯಾವತ್ತಿಗೂ ಹೆತ್ತವರ ಮನಸ್ಸಿಗೆ ನೋವನ್ನು ಮಾಡಬೇಡಿ. ಅವರು ಯಾವ ರೀತಿ ಹೇಳ್ತಾರೆ, ಅದೇ ರೀತಿ ಆ ಮಾರ್ಗದಲ್ಲಿ ನಡೆದುಕೊಂಡು ಹೋದರೆ ತುಂಬಾನೇ ಒಳ್ಳೇದಾಗುತ್ತೆ. ಯಾಕೆಂದರೆ ಹೆತ್ತವರ ಮನಸ್ಸಿಗೆ ಯಾವತ್ತು ನಾವು ನೋವನ್ನ ಕೊಡಬಾರದು.

Leave a Comment