ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಈ ಎರಡು ನೆಗೆಟಿವ್ ಸ್ವಭಾವವನ್ನು ಬದಲಿಸಿಕೊಂಡರೇ ಅವರನ್ನ ಇಡಿಯೋರೇ ಇಲ್ಲ ಎನ್ನುವ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ. ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ವ್ಯಕ್ತಿತ್ವ ಹೇಗಿರುತ್ತದೆ ಹಾಗೂ ಅವರ ಜೀವನದ ಅತೀ ರಹಸ್ಯ ಮಾಹಿತಿಗಳನ್ನು ಈ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ.
ನಾವು ಯಾರ ಜೊತೆ ಇರುತ್ತೀವೋ ಅವರ ವ್ಯಕ್ತಿತ್ವವನ್ನು ತಿಳಿದುಕೊಂಡಿರಬೇಕು ಏಕೆಂದರೆ ಅವರ ಜೊತೆ ನಾವು ಹೇಗಿರಬೇಕು? ಅವರ ಸ್ವಭಾವ ಹೇಗಿರುತ್ತದೆ? ಅವರು ಹೇಗೆ ರಿಯಾಕ್ಟ್ ಮಾಡುತ್ತಾರೆ ಅದನ್ನು ಮೊದಲೇ ತಿಳಿದುಕೊಂಡಿರಬೇಕು. ಆ ವ್ಯಕ್ತಿ ನಮಗೆ ಇಷ್ಟವಾದರೇ ಜೀವನ ಪೂರ್ತಿ ನಮ್ಮ ಬಾಂಧವ್ಯ ಚೆನ್ನಾಗಿಯೇ ಇರುತ್ತದೆ. ಒಳ್ಳೆಯ ವ್ಯಕ್ತಿ, ಕೆಟ್ಟ ವ್ಯಕ್ತಿ ಎಂಬುದನ್ನು ಆ ವ್ಯಕ್ತಿಯ ಮೊದಲನೇ ಅಕ್ಷರವೇ ತಿಳಿಸಿಬಿಡುತ್ತದೆ. ಪ್ರತಿಯೊಬ್ಬರ ಹೆಸರು ಬೇರೆ ಬೇರೆ ಅಕ್ಷರಗಳಿಂದ ಪ್ರಾರಂಭವಾಗುತ್ತದೆ.
ಆ ಅಕ್ಷರಗಳು ವ್ಯಕ್ತಿಗಳ ಗುಣರಹಸ್ಯವನ್ನು ತಿಳಿಸಿಕೊಡುತ್ತವೆ. ಇದನ್ನು ಬಹಳ ಸುಲಭವಾಗಿ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿದ್ದಾರೆ. ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಶಾಂತಚಿತ್ತವಾಗಿರುವುದಿಲ್ಲ. ಮನಸ್ಸಿನಲ್ಲಿ ಬೇಡದ ವಿಚಾರ ಓಡುತ್ತನೇ ಇರುತ್ತದೆ. ಅಶಾಂತಿ ಮತ್ತು ನೆಗೆಟಿವ್ ಫೀಲಿಂಗ್ಸ್ ತುಂಬಿಕೊಂಡಿರುತ್ತದೆ. ಆದರೇ ಇದನ್ನು ಬೇರೆಯವರ ಮುಂದೆ ತೋರಿಸಿಕೊಳ್ಳುವುದಿಲ್ಲ. ಅವರ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬುದು ಎದರುಗಡೆ ಇರುವವರಿಗೆ ಗೊತ್ತಾಗುವುದೇ ಇಲ್ಲ.
ಅವರಿಗೆ ಒಳಗಡೆ ಸಾವಿರ ಚಿಂತೆ ಇರಲಿ, ಹೊರಗಡೆ ಮಾತ್ರ ನಾನು ಸೂಪರ್ ಆಗಿದ್ದೀನಿ ಎಂದು ತೋರಿಸಿಕೊಳ್ಳುತ್ತಾರೆ. ಯಾವ ವ್ಯಕ್ತಿ ಸದಾ ನಗುತ್ತಿರುತ್ತಾನೋ, ಎಲ್ಲದಕ್ಕೂ ನಗಿಸುತ್ತಿರುತ್ತಾನೋ ಅವನ ಮನಸ್ಸಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾನೆಂದು ತುಂಬಾ ಸಲ ಕೇಳಿರುತ್ತೀವಿ. ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಬೇರೆ ಯಾರಿಗೂ ಹಂಚಿಕೊಳ್ಳುವುದಿಲ್ಲ. ತಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಇನ್ನೊಬ್ಬರನ್ನು ಖುಷಿಯಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತಾರೆ.
ಆ ವ್ಯಕ್ತಿಯ ಮನಸ್ಸು ಶುದ್ಧವಾಗಿರುತ್ತದೆ. ಮನಸ್ಸಿನಲ್ಲಿ ಕೊಳಕು ಇರುವುದಿಲ್ಲ. ದೇವರ ಮೇಲೆ ತುಂಬಾ ನಂಬಿಕೆ ಇರುತ್ತದೆ. ಭವಿಷ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಈ ವ್ಯಕ್ತಿಗಳು ಯಾವಾಗಲೂ ಅದರ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾರೆ. ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಅವರ ಕರಿಯರ್ ಅವರು ಅಂದುಕೊಂಡಂಗೆ ಆಗಿರುವುದಿಲ್ಲ. ಇದೇ ಅವರ ಮನಸ್ಸಿಗೆ ಹಿಂಸೆ ಕೊಡುತ್ತಿರುತ್ತದೆ. ಇವರ ಮುಂದೆ ಅನೇಕ ಆಯ್ಕೆಗಳು ಇರುತ್ತವೆ. ಇವರು ತೆಗೆದುಕೊಂಡ ತಪ್ಪು ಆಯ್ಕೆಗಳಿಂದ ಇವರಿಗೆ ಸಿಗಬೇಕಾಗಿದ್ದು ಲೇಟಾಗಿ ಸಿಗುತ್ತದೆ.
ಇವರು ತಮ್ಮ ಕೆಲಸದಲ್ಲಿ ಯಾವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಏನೇ ಕೆಲಸ ಕೊಟ್ಟರೂ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುತ್ತಾರೆ. ಇಷ್ಟೆಲ್ಲಾ ಮಾಡಿದರೂ ಇವರಿಗೆ ಯಶಸ್ಸು ಬೇಗನೇ ಸಿಗುವುದಿಲ್ಲ. ತಮ್ಮ ಕಾರ್ಯಕ್ಷೇತ್ರದಲ್ಲಿ ಪದೇ ಪದೇ ಮುಗ್ಗರಿಸುತ್ತಾರೆ. ಇವರ ದೊಡ್ಡ ಪಾಸಿಟಿವ್ ಗುಣವೆಂದರೆ ನಿರಾಶೆ ಹೊಂದುವುದಿಲ್ಲ. ಸ್ವಲ್ಪ ಲೇಟಾದರೂ ಯಶಸ್ಸನ್ನು ಸಾಧಿಸುತ್ತಾರೆ. ಹಠ ಬಿಡದ ವ್ಯಕ್ತಿಗಳು. ಎಲ್ಲರ ಜೀವನದಲ್ಲಿ ಪ್ರೀತಿಪಾತ್ರರೂ ಇದ್ದೇ ಇರುತ್ತಾರೆ.
ಪಿ ಅಕ್ಷರದ ವ್ಯಕ್ತಿಗಳು ನೋಡಲು ಸುಂದರ ಮತ್ತು ಆಕರ್ಷಕವಾಗಿರುತ್ತಾರೆ. ಈ ವ್ಯಕ್ತಿಗಳು ಪ್ರೀತಿಯನ್ನು ಎದುರಿಸಬೇಕಾದರೇ ಅನೇಕ ಸಮಸ್ಯೆಗಳನ್ನು ಫೇಸ್ ಮಾಡಬೇಕಾಗುತ್ತದೆ. ಇವರು ಯಾರನ್ನು ಪ್ರೀತಿಸುತ್ತಾರೋ ಆ ಪ್ರೀತಿ ಮೋಸವಿರುವುದಿಲ್ಲ ನಿಜವಾಗಿರುತ್ತದೆ. ಇವರು ಪ್ರೀತಿ ಮಾಡಿದವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಮತ್ತು ಅವರಿಗೆ ಯಾವುದೇ ರೀತಿಯ ಕೊರತೆ ಇರಬಾರದ್ದೆಂದು ಎಚ್ಚರಿಕೆ ವಹಿಸುವ ಗುಣವನ್ನು ಹೊಂದಿರುತ್ತಾರೆ. ಇವರು ಪರೋಪಕಾರಿ, ದಯಾಮಯಿ, ಧರ್ಮವನ್ನು ಪಾಲಿಸುವವರು,
ಕೋಮಲ ಹೃದಯದವರಾಗಿರುತ್ತಾರೆ. ಯಾರಾದರೂ ತೊಂದರೆಯಲ್ಲಿದ್ದರೇ ತಮ್ಮ ಕೈಯಲ್ಲಿರುವ ಕೆಲಸವನ್ನು ಬಿಟ್ಟು ಅವರ ಸಹಾಯಕ್ಕೆ ಮುಂದಾಗುತ್ತಾರೆ. ಬೇರೆಯವರ ಕಷ್ಟವನ್ನು ನೋಡಲು ಇವರಿಂದ ಆಗುವುದಿಲ್ಲ. ಇವರು ಅನೇಕ ರಹಸ್ಯಗಳನ್ನು ತಮ್ಮ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ. ಪ್ರಕೃತಿ ಪ್ರಿಯರಾಗಿದ್ದು ಪ್ರಕೃತಿ ಮಡಿಲಿನಲ್ಲಿ ವಾಸ ಮಾಡಲು ಇಷ್ಟಪಡುತ್ತಾರೆ. ಇವರ ಜೀವನ ಸುಖ ಮತ್ತು ದುಃಖ ಎರಡರಿಂದಲೂ ಕೂಡಿರುತ್ತದೆ.
ಆದರೇ ಇವರ ಜೀವನದಲ್ಲಿ ಸುಖಕ್ಕಿಂತ ಹೆಚ್ಚು ದುಃಖವನ್ನೇ ನೋಡುತ್ತಾರೆ. ಈ ವ್ಯಕ್ತಿಗಳು ಮನೆ ಮತ್ತು ಮನೆಯಲ್ಲಿರುವ ಸದಸ್ಯರ ಚಿಂತೆಯಲ್ಲಿರುತ್ತಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಭಾವನೆಯುಳ್ಳವರು. ಇವರ ನೆಗೆಟಿವ್ ಅಂಶವೇನೆಂದರೆ ತಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹಾಕುವಂತಹ ಗುಣವನ್ನು ಹೊಂದಿರುತ್ತಾರೆ. ಆಗಾಗಿ ಮನೆ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ವಿರೋಧವನ್ನು ಎದುರಿಸುತ್ತಾರೆ.