ನಾವು ಈ ಲೇಖನದಲ್ಲಿ ಹಿಂದೂ ಧರ್ಮದಲ್ಲಿ ಮನೆಯ ಮಹಿಳೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಹೇಗೆ ಪರಿಗಣಿಸಲಾಗುತ್ತದೆ ಎಂದು ತಿಳಿಯೋಣ . ಈ ಕಾರಣಕ್ಕಾಗಿ ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ ಹಾಗೂ ನಿಯಮಗಳನ್ನು ಕೂಡ ಹೇಳಲಾಗಿದೆ.
ಮಹಿಳೆಗೆ ಗೌರವ ನೀಡುವ ಮನೆಯಲ್ಲಿ ಮತ್ತು ಉತ್ತಮ ಗುಣವುಳ್ಳ ಮಹಿಳೆಯರು ಇರುವ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ , ಎನ್ನುವ ನಂಬಿಕೆಯೂ ಇದೆ.
ಮನೆಯ ಧನ – ಧಾನ್ಯ, ಸಂಪತ್ತು ಆ ಮನೆಯ ಮಹಿಳೆಯನ್ನು ಆಧರಿಸಿರುತ್ತದೆ. ಈ ಕಾರಣಕ್ಕಾಗಿ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ.
ಶಾಸ್ತ್ರದ ಪ್ರಕಾರ, ಮಹಿಳೆಯರು ಯಾವ ತಪ್ಪುಗಳನ್ನು ಮಾಡಬಾರದು..? 1.ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು. 2. ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು, ಯಾವುದೇ ಕಾರಣಕ್ಕೂ ಸಂಧ್ಯಾಕಾಲದಲ್ಲಿ ಕಣ್ಣಲ್ಲಿ ನೀರು ಹಾಕಬಾರದು.
3. ಮನೆಗೆ ಬಂದ ಹೆಂಗಸರಿಗೆ ಅರಿಶಿಣ, ಕುಂಕುಮ, ಹೂಗಳನ್ನು ಕೊಟ್ಟು ಕಳಿಸಬೇಕು . 4. ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ ಹೊಡೆಯ ಕೂಡದು ಮತ್ತು ಹೊಡೆದ ಜಾಗದಲ್ಲೂ ಇರಕೂಡದು.. 5. ಗರ್ಭಿಣಿ ಸ್ತ್ರೀಯರು ನಿಂಬೆ ಹಣ್ಣನ್ನು ಕತ್ತರಿಸಬಾರದು.
6.ಸೂರ್ಯೋದಯಕ್ಕೆ ಮುಂಚೆ ಬೀದಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡಬೇಕು . 7. ಇದು ಮನೆಯವರೇ ಮಾಡಬೇಕು. 8 . ಕೈಯಲ್ಲಿ ಯಾವಾಗಲೂ ಉಪ್ಪು , ಪಲ್ಯಗಳನ್ನು ಬಡಿಸಬಾರದು. 9 . ಮನೆಯಲ್ಲಿ ಏನಾದರೂ ಇಲ್ಲದಿದ್ದಲ್ಲಿ, ತುಂಬಿದೆ ಎಂದು ಹೇಳಬೇಕು . ಇಲ್ಲ ಎಂದು ಹೇಳಬಾರದು.
10 . ದಿಂಬಿನ ಮೇಲೆ ಕೂರಬಾರದು. 11 . ಮನೆಯಿಂದ ಹೊರಗೆ ಹೋಗುವಾಗ ಹೋಗಿ ಬರುತ್ತೇನೆ. ಎಂದು ಹೇಳಬೇಕು. 12 . ಹೊಸ ಬಟ್ಟೆಯನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು.
13 . ಮನೆಯ ಅಕ್ಕ- ತಂಗಿಯರಿಗೆ ವರ್ಷ ಕೊಮ್ಮೆಯಾದರೂ ತವರಿಗೆ ಕರೆಸಿ , ಅರಿಶಿಣ ಕುಂಕುಮ ಫಲ ತಂಬೂಲದ ಜೊತೆಗೆ ಕೈಲಾದ ಹಣ ಅಥವಾ ಒಡವೆಗಳನ್ನು ಕೊಟ್ಟು , ಹರಸಿದರೆ ಮನೆತನ ತುಂಬ ಎತ್ತರಕ್ಕೆ ಬೆಳೆಯುತ್ತದೆ. 14 . ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.
ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ. 16 . ಉಪ್ಪು ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು . ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ. 17 . ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಕಾಗೆಗೆ ದನಗಳಿಗೆ ನಾವು ಊಟ ಮಾಡುವ ಮುನ್ನ ನಾಯಿ , ಬೆಕ್ಕಿಗೆ , ಊಟ ಮಾಡಿದ ಬಳಿಕ ಊಟ ಮಾಡಿ.
18, ಒಡೆದ ತೆಂಗಿನ ಕಾಯಿ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು . 19 . ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು , ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿ ಕಾಲಿನಲ್ಲಿ ನಿಲ್ಲುವುದು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ.
20 .ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು. ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದವರಿಗೆ ಬೇಡ ಎಂದು ಹೇಳಬಾರದು . ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ, ಎಂದು ಹೇಳಬೇಕು.
22 . ಯಾವಾಗಲೂ ನಮ್ಮ ಬಾಯಲ್ಲಿ , ಪೀಡೆ , ಶನಿ , ದರಿದ್ರ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು. 23 . ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ, ಹತ್ತು ದಿನಗಳಿಗೆ ಒಮ್ಮೆ ಮಂಗಳವಾರ , ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ತೆಗೆದು ಸ್ವಚ್ಛಗೊಳಿಸಿಕೊಳ್ಳಬೇಕು.
24 . ಶ್ರಾದ್ಧ ದಿನದಂದು ಮನೆಯ ಮುಂದೆ ರಂಗೋಲಿ ಹಾಕಬಾರದು . 25 . ದಿಂಬಿನ ಕವರ್, ಬೆಡ್ ಶೀಟ್ ಗಳನ್ನು ಆಗಾಗ ಒಗೆಯುತ್ತಿರಬೇಕು . ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ಕ್ರೀಮಿಗಳು ಸಾಕಷ್ಟು ಇರುತ್ತದೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ.
26 . ಒಳ್ಳೆಯ ಕೆಲಸಗಳನ್ನು ಶುಕ್ಲ ಪಕ್ಷದಿಂದ ಅಂದರೆ, ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು . 27 . ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು . 28 . ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ . ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ.
29 . ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ, ಹೆಣ್ಣು ಮಕ್ಕಳ ಕೂದಲು ಅತ್ಯಂತ ಪವಿತ್ರ . ಮುತ್ತೈದೆಯರ ಕೂದಲು ಅಮೃತ ಸ್ವರೂಪ . ಆದ್ದರಿಂದ ಮುತ್ತೈದೆಯರು ಯಾವತ್ತೂ ಕೂದಲು ತೆಗೆಯಬಾರದು. 30 . ಮುತ್ತೈದೆಯರ ತಲೆಯಲ್ಲಿ ಅಮೃತ ಇದೆ ಎಂಬುದಕ್ಕೆ ನಾರದ ಪುರಾಣದಲ್ಲಿ ಒಂದು ಕಥೆ ಇದೆ.
31 . ಒಮ್ಮೆ ದೇವತೆಗಳಿಗೆ ಅಮೃತವು ಸಿಗುವುದಿಲ್ಲ. ಆಗ ದೇವತೆಗಳು ಇಂದ್ರನಲ್ಲಿ ಪ್ರಾರ್ಥಿಸಿದರು. ಇಂದ್ರನು ಭೂಲೋಕದಲ್ಲಿ ಯಜ್ಞವನ್ನು ಆಚರಿಸುವಾಗ ಬ್ರಾಹ್ಮಣರಿಗೆ ಅವರ ಪತ್ನಿಯರು ಅಗ್ನಿಯನ್ನು ತಂದು ಕೊಡವ ಆ ಸಂದರ್ಭದಲ್ಲಿ ಅವರ ತಲೆಯಲ್ಲಿ ಅಮೃತವು ಉತ್ಪತ್ತಿಯಾಗಲಿ ಎಂದು ಹೇಳಿದ್ದರು.
ಆ ಅಮೃತವನ್ನು ನೀವು ಸ್ವೀಕರಿಸಿ ಎಂದು ಇಂದ್ರನು ಹೇಳಿದನು. ಅಂದಿನಿಂದ ಮುತ್ತೈದೆಯರ ತಲೆಯಲ್ಲಿ ಅಮೃತವು ನೆಲೆಯಾಯಿತು.
ಹೆಣ್ಣು ಮಕ್ಕಳ ಕೂದಲಿನಲ್ಲಿ ಗಂಗಾ , ಯಮುನಾ , ಸರಸ್ಪತಿ, ಲಕ್ಷ್ಮೀ ದೇವಿಯರ ಸನ್ನಿಧಾನವಿದೆ. ಕೂದಲನ್ನು ಮೂರು ಭಾಗ ಮಾಡಿ ಜಡೆ ಹೆಣೆಯಬೇಕು. ಆ ಮೂರು ಭಾಗಗಳಲ್ಲಿ ಗಂಗಾ, ಯಮುನಾ , ಸರಸ್ವತಿಯರು ಇರುತ್ತಾರೆ.
ಮಧ್ಯೆ ಬೈತಲೆಯಲ್ಲಿ ಲಕ್ಷ್ಮಿ ದೇವಿಯ ಸನ್ನಿಧಾನ . ಆದ್ದರಿಂದ ಸ್ತ್ರೀಯರು ಪ್ರತಿನಿತ್ಯ ತಲೆಗೆ ಸ್ನಾನ ಮಾಡಬಾರದು .
ಶುಕ್ರವಾರ , ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನದಂದು ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠ ಪರ್ಯಂತ ಸ್ನಾನ ಮಾತ್ರ . ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ .