ಯಾರಿಗೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಒಳಗೆ ಎಚ್ಚರ ಆಗುತ್ತೋ

ನಾವು ಈ ಲೇಖನದಲ್ಲಿ ಯಾರಿಗೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಒಳಗೆ ಎಚ್ಚರ ಆಗುವವರಿಗೆ ಇಲ್ಲಿ ರಹಸ್ಯ ಮಾಹಿತಿಯನ್ನು ತಿಳಿಸಲಾಗಿದೆ.ಇಡೀ ಜಗತ್ತು ಮಲಗಿರುವ ಸಮಯದಲ್ಲಿ ಅಚಾನಕ್ಕಾಗಿ ನಿಮಗೆ ಎಚ್ಚರ ಆಗುತ್ತದೆ. ಕೆಲವೊಮ್ಮೆ ಭಯ, ಚಿಂತೆ , ಒತ್ತಡದ ಕಾರಣದಿಂದ ನಿದ್ದೆಯಿಂದ ಎಚ್ಚರವಾಗತ್ತದೆ. ಇದು ಪದೇ ಪದೇ ಆಗುತ್ತಿದ್ದರೆ, ಇದು ಒಂದು ಗಂಭೀರವಾದ ಸಮಸ್ಯೆ ಆಗಬಹುದು. ಇಡೀ ದಿನ ಕೆಲಸ ಕಾರ್ಯಗಳನ್ನು ಮಾಡಿ , ರಾತ್ರಿ ಮಲಗಿದಾಗ ಆಳವಾದ ನಿದ್ರೆ ಬರುತ್ತದೆ. ಪ್ರತೀ ದಿನ ಒಂದೇ ಸಮಯಕ್ಕೆ ಎಚ್ಚರವಾಗುತ್ತಿದ್ದರೆ,

ಇದು ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳ ಸಂಕೇತವನ್ನು ಕೊಡುತ್ತದೆ. ಹಾಗಾಗಿ ಇವುಗಳನ್ನು ನಿರ್ಲಕ್ಷ್ಯ ಮಾಡಬಾರದು . ಮಾಹಿತಿಯ ಅನುಸಾರವಾಗಿ ರಾತ್ರಿ ನಿದ್ರೆಯಿಂದ ಪದೇ ಪದೇ ಎಚ್ಚರ ಆಗುವುದು ಸಾಮಾನ್ಯವಾದ ವಿಚಾರ ಅಲ್ಲ . ಇದರ ಅರ್ಥ ಇಲ್ಲಿ ಅಜ್ಞಾತ ಶಕ್ತಿ ನಿಮ್ಮನ್ನು ಸಂಪರ್ಕ ಮಾಡುತ್ತಿದೆ ಎಂದರ್ಥ . ಅವುಗಳು ನಿಮಗೆ ಏನನ್ನೋ ಹೇಳಲು ಇಷ್ಟ ಪಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ತುಂಬಾ ಎಚ್ಚರ ವಹಿಸಬೇಕು .ಭಿನ್ನ ಭಿನ್ನವಾದ ಸಮಯದಲ್ಲಿ ಎಚ್ಚರವಾಗುವುದಕ್ಕೆ ಭಿನ್ನ ಭಿನ್ನವಾದ ಅರ್ಥಗಳು ಇರುತ್ತವೆ.

ಮೊದಲನೆಯದು ರಾತ್ರಿ 9 ಗಂಟೆಯಿಂದ 11 ಗಂಟೆಯ ಮಧ್ಯೆ ನಿದ್ರೆಯಿಂದ ಎಚ್ಚರವಾದರೆ, ಎಷ್ಟೇ ಪ್ರಯತ್ನ ಮಾಡಿದರೂ ನಿದ್ರೆ ಬರುತ್ತಿಲ್ಲಾ ಎಂದರೆ, ಇಲ್ಲಿ ವ್ಯಕ್ತಿಯೂ ಯಾವುದೋ ವಿಷಯದ ಬಗ್ಗೆ ಅಧಿಕವಾಗಿ ಚಿಂತೆ ಮಾಡುತ್ತಿರುತ್ತಾರೆ. ಅವಶ್ಯಕತೆಗಿಂತ ಹೆಚ್ಚಿನ ಆಲೋಚನೆಯನ್ನು ಆ ವಿಷಯದ ಮೇಲೆ ಮಾಡುತ್ತಿರುತ್ತಾರೆ. ಇಂತಹ ಸ್ಥಿತಿಯಲ್ಲಿ ತಂಪಾದ ನೀರಿನಲ್ಲಿ ಮುಖವನ್ನು ತೊಳೆದುಕೊಂಡು ಸಕಾರಾತ್ಮಕ ಮಂತ್ರಗಳನ್ನು ಜಪ ಮಾಡಬೇಕು. ಪ್ರತೀ ದಿನ ಈ ಕ್ರಿಯೆಯನ್ನು ನಿಯಮಿತ ರೂಪದಲ್ಲಿ ಮಾಡುತ್ತಾ ಹೋದರೆ ಇಲ್ಲಿ ಚಿಂತೆಗಳಿಂದ ಮುಕ್ತಿ ಸಿಗುವುದಲ್ಲದೇ ಬದಲಿಗೆ ನಿಮಗೆ ಒಳ್ಳೆಯ ನಿದ್ರೆ ಕೂಡ ಬರುತ್ತದೆ.

ಎರಡನೇಯದು ರಾತ್ರಿ 11 ಗಂಟೆಯಿಂದ 1 ಗಂಟೆಯ ಮಧ್ಯೆ ನಿದ್ರೆಯಿಂದ ಎಚ್ಚರ ಆದರೆ, ಯಾವುದೋ ವಿಷಯದ ಮೇಲೆ ತುಂಬಾ ಚಿಂತೆ ಮಾಡುತ್ತಿರುತ್ತಾರೆ . ಅಷ್ಟೇ ಅಲ್ಲದೆ ನಿಮ್ಮ ಮನಸ್ಸು ಅಲ್ಲಿ ಇಲ್ಲಿ ಅಲೆದಾಡುತ್ತಿರುತ್ತದೆ. ಇಲ್ಲಿ ಸಾಧ್ಯವಾದಷ್ಟು ಮೊದಲು ನಿಮ್ಮ ಮೇಲೆ ನೀವು ನಂಬಿಕೆ ಇಡಿ. ಮಲಗುವ ಮುನ್ನ ನಿಮ್ಮ ತಲೆಯಲ್ಲಿ ಇರುವ ವಿಷಯವನ್ನು ತೆಗೆದು ಹಾಕಿ.

ಮೂರನೆಯದು 12 ಗಂಟೆಯಿಂದ 2 ಗಂಟೆಯ ಮಧ್ಯೆ ನಿಮಗೆ ಎಚ್ಚರ ಆಗುತ್ತಿದ್ದರೆ, ಯಾವುದೋ ಅಜ್ಞಾತ ಶಕ್ತಿಯು ನಿಮ್ಮ ಹತ್ತಿರದಲ್ಲಿ ಇದ್ದು, ನಿಮ್ಮನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿರುತ್ತದೆ. ಇವು ನಿಮ್ಮ ಜೀವನದ ಉದ್ದೇಶದ ಮೇಲೆ ಜಾಗೃತಿಯನ್ನು ಮೂಡಿಸುತ್ತವೆ. ಇದು ನಿಮ್ಮ ಜೀವನದಲ್ಲಿ ಸಮಸ್ಯೆ ಕೂಡ ಮೂಡಿಸುತ್ತದೆ. ಇದಕ್ಕಾಗಿ ದೇವರ ನಾಮ ಸ್ಮರಣೆ ಮಾಡಿ ಮಲಗುವುದು ಒಳ್ಳೆಯದು.

ನಾಲ್ಕನೆಯದು ರಾತ್ರಿ 1 ಗಂಟೆಯಿಂದ 3 ಗಂಟೆಯ ಮಧ್ಯೆ ನಿದ್ರೆಯಿಂದ ಎಚ್ಚರ ಆಗುತ್ತಿದ್ದರೆ , ಇದು ವ್ಯಕ್ತಿಯ ಸಿಟ್ಟಿನತ್ತ ಸೂಚನೆಯನ್ನು ಕೊಡುತ್ತದೆ . ಈ ಸಮಸ್ಯೆಯಿಂದ ಆಚೆ ಬರಲು ನೀವು ತಂಪಾದ ನೀರು ಕುಡಿದು , ಈ ಸಮಸ್ಯೆಯಿಂದ ಆಚೆ ಬರಲು ರಾತ್ರಿ ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆದುಕೊಳ್ಳಬೇಕು . ಈ ರೀತಿ ಪ್ರತೀ ದಿನ ಮಾಡಿದರೆ, ನಿಮಗೆ ಸಕಾರಾತ್ಮಕ ಬದಲಾವಣೆ ಕಾಣುತ್ತದೆ. ನಿಮ್ಮ ಕೋಣೆಯ ತಾಪಮಾನ ಸರಿಯಾಗಿ ಇರಬೇಕು. ನೀವು ಮಲಗುವ ಕೋಣಿ ತುಂಬಾ ಬಿಸಿಯಾಗಿ ಇದ್ದರೆ, ಕೆಟ್ಟ ಕನಸುಗಳು ಬೀಳುತ್ತವೆ. ಇದಲ್ಲದೇ ರಾತ್ರಿ ನೀರನ್ನು ಅತಿಯಾಗಿ ಕುಡಿದು ಮಲಗಿದರೂ, ಕೂಡ ಇದು ನಿಮ್ಮ ನಿದ್ರೆಗೆ ತೊಂದರೆ ಮಾಡುತ್ತವೆ.

ಐದನೇಯದು ರಾತ್ರಿ 3 ಗಂಟೆ ಇಂದ 5 ಗಂಟೆ ಒಳಗೆ ಎಚ್ಚರವಾಗುತ್ತಿದ್ದರೆ , ಅಜ್ಞಾತ ಶಕ್ತಿಗಳು ನಿಮ್ಮನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿರುತ್ತವೆ . ಮುಂಜಾನೆ ಮೂರು ಗಂಟೆಯಿಂದ 5 ಗಂಟೆ ಒಳಗೆ ಇರುವ ಸಮಯವನ್ನು ಅಮೃತ ವೇಳೆ ಎಂದು ಕರೆಯುತ್ತಾರೆ . ಈ ಕಾರಣದಿಂದ ಈ ಸಮಯದಲ್ಲಿ ಅನೇಕ ಅಲೌಕಿಕ ಶಕ್ತಿಗಳ ಪ್ರಭಾವ ಇರುತ್ತದೆ. ಮಾಹಿತಿ ಪ್ರಕಾರವಾಗಿ ಈ ಶಕ್ತಿಗಳು ಹಲವಾರು ರೀತಿಯ ಸಂಕೇತಗಳನ್ನು ಕೊಡುತ್ತವೆ . ಈ ಸಮಯದಲ್ಲಿ ಎಚ್ಚರವಾಗುವ ಜನರಿಗೆ ಸುಖವನ್ನು ನೀಡಲು ಇಷ್ಟ ಪಡುತ್ತದೆ .

ಈ ಶಕ್ತಿಗಳು ನಿಮಗೆ ಸಂತೋಷವನ್ನು ನೀಡುವ ಸೂಚನೆಯನ್ನು ಕೊಡುತ್ತವೆ . ಇವುಗಳ ಜೊತೆಗೆ ಮುಂಜಾನೆ ಬೇಗ ಹೇಳುವ ವ್ಯಕ್ತಿಗಳು ಅದ್ಭುತ ವಾತಾವರಣದ ಅನುಭವವನ್ನು ಪಡೆದುಕೊಳ್ಳುತ್ತಾರೆ . ಮುಂಜಾನೆ ಮೂರರಿಂದ ಐದು ಗಂಟೆಯೊಳಗೆ ಎಚ್ಚರವಾಗುತ್ತಿದ್ದರೆ, ವಾಸ್ತವದಲ್ಲಿ ನೀವು ತುಂಬಾ ಅದೃಷ್ಟವಂತರು ಆಗುತ್ತೀರಿ . ಶಾಸ್ತ್ರದಲ್ಲಿ ಯಾವುದೇ ಮಾಹಿತಿಯನ್ನು ಸುಮ್ಮನೆ ಬರೆದಿರುವುದಿಲ್ಲ . ಪದೇ ಪದೇ ಎಚ್ಚರವಾಗಲು ಶಾರೀರಿಕ ಮತ್ತು ಮಾನಸಿಕವಾಗಿ ಹಲವಾರು ರೀತಿಯ ಕಾರಣಗಳು ಇರುತ್ತದೆ .

ಆದರೆ ಇವುಗಳ ಹಿಂದೆ ಒಂದು ಕಾರಣ ಕೂಡ ಇರುತ್ತದೆ . ಇವುಗಳನ್ನು ಜನರು ಹೆಚ್ಚಾಗಿ ನಿರ್ಲಕ್ಷ್ಯ ಮಾಡುತ್ತಾರೆ . ಇದು ನಮಗೆ ಸಮಯದ ರಹಸ್ಯವನ್ನು ಕೂಡ ಕೊಡುತ್ತದೆ . ಒಂದು ವೇಳೆ ನಾಲ್ಕರಿಂದ ಐದು ಬಾರಿ ಪದೇ ಪದೇ ಎಚ್ಚರವಾಗುತ್ತಿದ್ದರೆ , ಇದು ಯಾವುದೋ ಒಂದು ವಿಷಯದ ಸಂಕೇತ ಆಗುತ್ತದೆ. ಇದರ ಜೊತೆಗೆ ಮರಳಿ ನಿದ್ರೆ ಮಾಡಲು 15 ನಿಮಿಷದಿಂದ 30 ನಿಮಿಷಗಳ ಸಮಯ ಹಿಡಿಯಬಾರದು. ಮರಳಿ ನಿದ್ರೆ ಮಾಡಲು ತುಂಬಾ ಸಮಯ ಬೇಕಾದರೆ, ನೀವು ಸೈಕಾಲಜಿ ವೈದ್ಯರ ಜೊತೆ ಮಾತನಾಡಬೇಕು .

ಆರನೇಯದು ಮುಂಜಾನೆ 5 ರಿಂದ 6 ಗಂಟೆಯೊಳಗೆ ನಿದ್ರೆಯಿಂದ ಎಚ್ಚರವಾಗುತ್ತಿದ್ದರೆ , ಈ ಸಮಯ ಅಪರೂಪವಾದ ಸಮಯ ಆಗಿರುತ್ತದೆ . ಇದು ಋಷಿಮುನಿಗಳ ಸಮಯ ಆಗಿರುತ್ತದೆ . ಮಾಹಿತಿಯ ಅನುಸಾರವಾಗಿ ಸಂತ ಪುರುಷರು ಈ ಸಮಯದಲ್ಲಿ ಸ್ನಾನವನ್ನು ಮಾಡುತ್ತಾರೆ . ತಮ್ಮ ಸಾಧನೆಗಳಲ್ಲಿ ಲೀನರಾಗಿ ಇರುತ್ತಾರೆ . ಈ ಸಮಯದಲ್ಲಿ ನೀವು ಭಗವಂತನಲ್ಲಿ ಏನೇ ಬೇಡಿ ಕೊಂಡರೂ ಅವರು ನಿಮ್ಮ ಮನಸ್ಸಿನ ಇಚ್ಛೆಯನ್ನು ಪೂರ್ತಿ ಮಾಡುತ್ತಾರೆ .

ಏಳನೇಯದು ಮುಂಜಾನೆ 6 ಗಂಟೆಯಿಂದ 7 ಗಂಟೆಯ ಮಧ್ಯೆ ನಿದ್ರೆಯಿಂದ ನಿಮಗೆ ಎಚ್ಚರವಾಗುತ್ತಿದ್ದರೆ , ಇಲ್ಲಿ ಕೆಲವು ವಿಚಾರಗಳು ನಿಮ್ಮನ್ನು ಭಾವನಾತ್ಮಕ ರೀತಿಯಲ್ಲಿ ನಿಲ್ಲಿಸುತ್ತವೆ . ಈ ಸಮಯದಲ್ಲಿ ಎಚ್ಚರವಾಗುವ ವ್ಯಕ್ತಿಗಳು ಭಾವನಾತ್ಮಕವಾಗಿ ದುರ್ಬಲರಾಗಿ ಇರುತ್ತಾರೆ .ಈ ಸ್ಥಿತಿಯಲ್ಲಿ ನೀವು ಧ್ಯಾನ ಕ್ರಿಯೆಗಳನ್ನು ಮಾಡಬೇಕು . ಹಾಗಾಗಿ ಹೆಚ್ಚಿನ ವ್ಯಾಯಾಮಗಳನ್ನು ಮಾಡಿಕೊಂಡು ಮಾನಸಿಕ ರೂಪದಲ್ಲಿ ಶಕ್ತಿ ಶಾಲಿಗಳಾಗಿ ಆಗಬೇಕು .
ರಾತ್ರಿ ಹನ್ನೆರಡು ಗಂಟೆಯಿಂದ 1 ಗಂಟೆಯ ಮಧ್ಯೆ ನೀವು ಯಾವುದಾದರು ಕನಸುಗಳನ್ನು ಕಾಣುತ್ತಿದ್ದರೆ, ಅದು ಮೂರು ವರ್ಷಗಳ ನಂತರ ನಿಜವಾಗುತ್ತದೆ ಎಂಬ ನಂಬಿಕೆ ಇದೆ .

ಕೆಲವು ಮಾಹಿತಿಯ ಅನುಸಾರವಾಗಿ ಮುಂಜಾನೆ ಭಗವಂತನ ಪ್ರಾರ್ಥನೆಯನ್ನು ಮಾಡಲಾಗುತ್ತದೆ . ಹಾಗಾಗಿ ಮುಂಜಾನೆಯ ಸಮಯವನ್ನು ಪವಿತ್ರ ಎಂದು ತಿಳಿಸಿದ್ದಾರೆ .ಹಾಗಾಗಿ ನಾವು ಮುಂಜಾನೆ ಕಾಣುವ ಕನಸುಗಳು ಹಲವಾರು ಬಾರಿ ನಿಜವಾಗುವ ಸಾಧ್ಯತೆ ಇರುತ್ತದೆ . ಇನ್ನೊಂದೆಡೆ ರಾತ್ರಿ ಕಂಡ ಕನಸು ಕೂಡ ಕೆಲವೊಮ್ಮೆ ನಿಜ ಆಗುವ ಸಾಧ್ಯತೆ ಇರುತ್ತದೆ . ಇನ್ನು ಕೆಲವೊಮ್ಮೆ ನಿಜ ಆಗುವುದಿಲ್ಲ . ಬ್ರಹ್ಮ ಮುಹೂರ್ತದ ಸಮಯ ಅಂದರೆ , ಮುಂಜಾನೆ ಮೂರು ಗಂಟೆಯಿಂದ 5 ಗಂಟೆ ಒಳಗೆ ಕಂಡ ಕನಸುಗಳು ನಿಜ ಆಗುತ್ತದೆ ಎನ್ನುವ ನಂಬಿಕೆ ಇದೆ .

ಇದು ಒಂದರಿಂದ ಆರು ತಿಂಗಳ ಒಳಗೆ ಫಲವನ್ನು ಕೊಡುತ್ತದೆ . ಒಂದು ವೇಳೆ ಈ ಸಮಯದ ಕನಸಿನಲ್ಲಿ ಎತ್ತರಕ್ಕೆ ಏರುತ್ತಿದ್ದರೆ , ಈ ಕನಸ್ಸು ಯಶಸ್ಸನ್ನು ಕೊಡುವ ಕನಸು ಆಗಿರುತ್ತದೆ . ಧನ ಸಂಪತ್ತಿನಲ್ಲಿ ವೃದ್ಧಿ ಮಾಡುವ ಸೂಚನೆಯನ್ನು ಕೊಡುತ್ತದೆ .ಕನಸಿನಲ್ಲಿ ದೇವಾಲಯ ಭಗವಂತನ ದರ್ಶನ ಆದರೆ , ಕುಬೇರ ದೇವರ ಕೃಪೆ ಸಿಗುವ ಸಾಧ್ಯತೆ ಇರುತ್ತದೆ . ಒಂದು ವೇಳೆ ಮುಂಜಾನೆ ನಿಮಗೆ ಕೆಟ್ಟ ಕನಸು ಬಿದ್ದರೆ, ಆ ಸಮಯದಲ್ಲಿ ಎಚ್ಚರದಿಂದ ನಡೆದುಕೊಳ್ಳಬೇಕು .

Leave a Comment