ಫೆಬ್ರವರಿಯಲ್ಲಿ ಮಕರ ರಾಶಿಗೆ ಹೀಗೆಲ್ಲ! 

0

ನಾವು ಈ ಲೇಖನದಲ್ಲಿ ಮಕರ ರಾಶಿಯ ಫೆಬ್ರವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳೋಣ. ಒಂದು ವಿಚಾರ ನೀವು ಗಮನಿಸಿರಬಹುದು ಈ ಸಾಡೇಸಾತಿ ಅನ್ನೋ ಸಮಯ ಮುಗಿಯುತ್ತಾ ಬಂದಿದೆ. ಮಕರ ರಾಶಿಗೆ ಬಹಳಷ್ಟು ವಿಚಾರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇರುತ್ತದೆ .ವಿಚಾರಗಳು ಸರಿಯಾಗುವುದರ ಕಡೆ ಹೋಗುವುದನ್ನು ನೀವು ಗಮನಿಸಿರಬಹುದು . ಪರಿವರ್ತನೆಗಳಿಗೆ ವೇಗ ಕೊಡುವಂತಹ ಗ್ರಹ . ಅದರ ಪ್ರಭಾವ ದಿನೇ ದಿನೇ ಜಾಸ್ತಿ ಆಗುತ್ತಿದೆ .

ಇದು ನಿಮ್ಮನ್ನು ಸರಿಯಾದ ದಾರಿಗೆ ತೆಗೆದುಕೊಂಡು ಹೋಗುತ್ತದೆ . ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿವರ್ತನೆಯನ್ನು ತರುತ್ತದೆ ಅನ್ನುವುದು ಬಹಳ ಪ್ರಮುಖವಾಗುತ್ತದೆ . ಮಕರ ರಾಶಿಯವರಿಗೆ ಈ ತಿಂಗಳಲ್ಲಿ ಶುಕ್ರ ಗ್ರಹದ ಅನುಗ್ರಹ ಇರುತ್ತದೆ. ಮೊದಲು ವ್ಯಯ ಭಾವದಲ್ಲಿ ಇರುತ್ತದೆ. ಆಮೇಲೆ ರಾಶಿಯಲ್ಲಿ ಬಂದು ಕೂರುತ್ತದೆ. ಆದರೆ ಧನು ಮತ್ತು ಮಕರ ರಾಶಿಯಲ್ಲಿ ಶುಕ್ರ ಗ್ರಹ ಇದ್ದಾಗ, ಯಾವ ಒಂದು ಒಳ್ಳೆಯ ಫಲಗಳನ್ನು ತಂದು ಕೊಡುತ್ತದೆ ಎಂದು ನೋಡೋಣ .

ಶುಕ್ರ ಗ್ರಹ ಎಂದರೆ ಖುಷಿಗೆ ಇನ್ನೊಂದು ಹೆಸರು. ಮೊದಲನೆಯದಾಗಿ ಸಿಗುವುದು ಮನಸ್ಸಿಗೆ ಒಂದು ರೀತಿಯ ಸಾಂತ್ವನ ಮತ್ತು ಸಮಾಧಾನ . ಖುಷಿ ಅನ್ನೋದು ಬಹಳ ಸ್ವಾಭಾವಿಕವಾದದ್ದು . ಏನೂ ಇರಬೇಕಾದ ಅವಶ್ಯಕತೆ ಇರುವುದಿಲ್ಲ . ಖುಷಿಯಾಗಿ ಇರುವುದಕ್ಕೆ ಬೇಕಾಗಿ ಇರೋದು ಒಂದೇ ಒಂದು ಪ್ರಪಂಚದಲ್ಲಿರುವ ಒಳ್ಳೆಯ ಅಂಶವನ್ನು ಗುರುತಿಸುವ ನಮ್ಮ ಸಾಮರ್ಥ್ಯ . ಇದು ಬಹಳ ಖುಷಿಯನ್ನು ತಂದು ಕೊಡುತ್ತದೆ . ಪ್ರಪಂಚದಲ್ಲಿ ಬಹಳಷ್ಟು ಒಳ್ಳೆಯ ಸಂಗತಿಗಳು ಇರುತ್ತವೆ .

ಸುಂದರವಾದ ವಿಚಾರಗಳು .ಆ ಸುಂದರವಾದ ವಿಚಾರಗಳನ್ನು ಗುರುತಿಸುವುದೇ ಸಾಕು ಸಹಜವಾಗಿ ಬಹಳಷ್ಟು ಖುಷಿಯನ್ನು ತಂದುಕೊಡುತ್ತದೆ . ಖುಷಿ ಅನ್ನೋದು ನಮ್ಮ ಮನಸ್ಸಿನಲ್ಲಿ ಆಗುವ ಪರಿವರ್ತನೆ . ಅದಕ್ಕೂ ಮತ್ತು ಜೀವನದಲ್ಲಿ ನಡೆಯುವ ಘಟನೆಗಳಿಗೆ ಯಾವುದಕ್ಕೂ ಸಂಬಂಧ ಇರುವುದಿಲ್ಲ . ತುಂಬಾ ಹಣ ಯಶಸ್ಸು ಗಳಿಸಿರುವ ವ್ಯಕ್ತಿಗಳು ಕೂಡ ಕೆಟ್ಟ ಕೆಲಸಗಳನ್ನು ಮಾಡುವ ಸಾಧ್ಯತೆ ಇರುತ್ತದೆ . ಇದಕ್ಕೆಲ್ಲಾ ಕಾರಣ ನಿಮ್ಮಲ್ಲಿ ನೀವು ಖುಷಿಯನ್ನು ತಂದುಕೊಳ್ಳಲು ಆಗದೆ ಇರುವಂತದ್ದು .

ಅಂತಹ ಒಂದು ಖುಷಿ ಮಕರ ರಾಶಿಯವರನ್ನು ಫೆಬ್ರವರಿ ತಿಂಗಳಲ್ಲಿ ಹುಡುಕಿಕೊಂಡು ಬರುತ್ತಿದೆ . ನೀವು ಅದನ್ನು ಗುರುತಿಸಬೇಕು ಅಷ್ಟೇ . 11ನೇ ತಾರೀಖಿಗೆ ಶುಕ್ರ ಪರಿವರ್ತನೆಯಾಗಿ ಮಕರ ರಾಶಿಗೆ ಬರುತ್ತಾನೆ . ಆ ಒಂದು ಸಂದರ್ಭದಲ್ಲಿ ಇರುವವರು ತಮ್ಮ ಮಟ್ಟಿಗೆ ಯಾವ ರೀತಿಯ ಖುಷಿ ಇದೆ ಎಂದು ಗುರುತಿಸಿಕೊಂಡು ಖುಷಿ ಪಡುತ್ತಾರೆ . ಇಲ್ಲದೇ ಇರುವವರು ಇರುವುದರಲ್ಲೇ ತೃಪ್ತಿ ಪಟ್ಟು ಖುಷಿ ಪಡುತ್ತಾರೆ. ಹಾಗೆಯೇ ಸ್ವಾಭಾವಿಕವಾಗಿ ಶುಕ್ರ ಬರೀ ಖುಷಿಯನ್ನೇ ಕೊಡುವುದಿಲ್ಲ .

ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಕೆಲಸ ಕಾರ್ಯಗಳಲ್ಲಿ ಜಯ . ಪ್ರಯತ್ನಗಳಿಗೆ ಮನ್ನಣೆ ಸಿಗುವಂತದ್ದು . ಸಣ್ಣ ಪುಟ್ಟ ಪ್ರಗತಿ .ವ್ಯಾಪಾರಿಗಳಿಗೆ ಲಾಭ , ಇದೆಲ್ಲವನ್ನು ತಂದು ಕೊಟ್ಟೇ ಕೊಡುತ್ತದೆ . ಸುಖ , ನೆಮ್ಮದಿ, ಸಂತೋಷ, ಹಣ , ಇವುಗಳ ಮೇಲೆ ಒಳ್ಳೆಯ ನಿಯಂತ್ರಣ ಬರುತ್ತದೆ .ಆದಾಯ ಜಾಸ್ತಿ ಆಗುತ್ತದೆ . ಬಹಳ ಸಮೃದ್ಧಿಯನ್ನು ಶುಕ್ರ ಗ್ರಹ ನಿಮ್ಮ ಮಟ್ಟಿಗೆ ತಂದುಕೊಡುತ್ತದೆ . ಕುಜ ಗ್ರಹ ಕೂಡ ರಾಶಿಯಲ್ಲಿ ಇರುವುದರಿಂದ , ಕುಜ ಶುಕ್ರ ಯೋಗ ಉಂಟಾಗಿ , ವ್ಯಾಪಾರದಲ್ಲಿ ಬೇಗ ಯಶಸ್ಸು ಆಗುವ ಸಾಧ್ಯತೆ ಇರುತ್ತದೆ .

ಲಾಭದಾಯಕವಾದ ವಾತಾವರಣ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ . ಬಹಳ ಏರು ಪೇರುಗಳಿಂದ ಕೂಡಿರುವ ತಿಂಗಳು ಕೂಡ ಇದಾಗಿರುತ್ತದೆ . ಕಳೆದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿ ಇದೆ . ದ್ವಿತೀಯದಲ್ಲಿ ಶನಿ ಗ್ರಹ ಇದೆ . ರವಿ ಮತ್ತು ಬುಧ ಸೇರಿಕೊಂಡು ಹಣಕಾಸಿನ ಪರಿಸ್ಥಿತಿಯ ಮೇಲೆ ಸ್ವಲ್ಪ ಸಮಸ್ಯೆಗಳು ಆಗುವ ಸಾಧ್ಯತೆ ಇದೆ . ಖರ್ಚುಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು . ಪರಿಸ್ಥಿತಿಯನ್ನು ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ . ವಿಪರೀತ ಕೆಲಸದ ಒತ್ತಡ ಇರುತ್ತದೆ .

ಉದ್ವೇಗ ಹೆಚ್ಚಾಗುವ ಸಾಧ್ಯತೆಗಳಿವೆ . ತುಂಬಾ ಹಣ ಇರುವ ವ್ಯಕ್ತಿಗಳಿಗೂ ಕೂಡ ಈ ಉದ್ವೇಗ ಅನ್ನೋದು ಇದ್ದೇ ಇರುತ್ತದೆ . ಕೆಲಸ ಒತ್ತಡದಿಂದ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ . ಆದ್ದರಿಂದ ನೀವು ಎಚ್ಚರಿಕೆ ವಹಿಸುವುದು ಬಹಳ ಅಗತ್ಯ . ವಿಶೇಷವಾಗಿ ಅತಿಯಾದ ಉಷ್ಣತೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು . ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಇರುವುದರಿಂದ ಚೆನ್ನಾಗಿ ನೀರು ಕುಡಿದು ಒಳ್ಳೆಯ ನಿದ್ರೆ ಮಾಡಿ . ಕೆಲಸದ ಒತ್ತಡವನ್ನು ನಿದ್ರೆಯ ತನಕ ತೆಗೆದುಕೊಂಡು ಹೋಗಬೇಡಿ .

ನಿದ್ರೆ ಮಾಡುವಾಗ ನೆಮ್ಮದಿಯಿಂದ ಮಲಗಿ . ಆರಾಮಾಗಿ ಕೂತು ಊಟ ಮಾಡಿ . ಕೆಲಸದ ಒತ್ತಡವನ್ನು ವೈಯಕ್ತಿಕ ವಿಚಾರದಲ್ಲಿ ತೆಗೆದುಕೊಂಡು ಬರಬೇಡಿ .ವಿಶ್ರಾಂತಿ ಕೂಡ ಚೆನ್ನಾಗಿ ತೆಗೆದುಕೊಳ್ಳಬೇಕು ಈ ತಿಂಗಳಲ್ಲಿ . ಒಳ್ಳೆಯ ಆರೋಗ್ಯಕ್ಕೆ ಊಟ, ವಿಶ್ರಾಂತಿ , ನಿದ್ರೆ ಈ ಮೂರು ವಿಚಾರಗಳು ಬಹಳ ಪ್ರಮುಖವಾಗುತ್ತದೆ . ನಿಮ್ಮ ಜೀವನದಲ್ಲಿ ಅನುಭವಿಸುವ ಒಂದೊಂದು ಕ್ಷಣಗಳು ಇದೆಲ್ಲಾ ಸೇರಿಕೊಂಡು ನಾಳೆ ಅನ್ನುವುದು ನಿರ್ಮಾಣವಾಗುತ್ತದೆ .ಅಂದರೆ ನಿಮ್ಮ ನಾಳೆಯನ್ನು ಇವತ್ತು ತಂದುಕೊಳ್ಳುವುದು .

ಅದೃಷ್ಟ ದೇವರು ಅನ್ನುವ ನಮಗೆ ಕಾಣದೆ ಇರುವ ಒಂದು ಶಕ್ತಿ ನಿಗೂಢವಾಗಿ ಕೆಲಸ ಮಾಡುತ್ತಿರುತ್ತದೆ . ಅದಕ್ಕೆ ಪ್ರೇರಣೆ ಕೂಡ ಇರುತ್ತದೆ .ನಾವು ನಿರೀಕ್ಷೆ ಮಾಡಿದ ಒಂದಷ್ಟು ಘಟನೆಗಳು ನಡೆಯುತ್ತವೆ . ಆಕಸ್ಮಿಕವಾಗಿಯೂ ನಡೆಯಬಹುದು , ಅಥವಾ ನಿಮ್ಮ ಪ್ರಯತ್ನದಿಂದ ನಡೆಯಬಹುದು .ನೀವೇ ಸ್ವಂತ ಪ್ರಯತ್ನ ಪಡಬೇಕು ಎಂದರೆ , ಸ್ವಲ್ಪ ಅದೃಷ್ಟವೂ ಕೂಡ ಬೇಕಾಗುತ್ತದೆ. ಆಗ ನಿಮ್ಮ ಕೈಯಲ್ಲಿ ಧನಾತ್ಮಕವಾಗಿ ಯೋಚನೆ ಮಾಡುವುದು ಮತ್ತೊಂದು ಪ್ರಯತ್ನ ಮಾಡುವುದು .

ಈ ಎರಡು ವಿಚಾರಗಳು ಮಾತ್ರ ನಿಮ್ಮ ಕೈಯಲ್ಲೇ ಇರುತ್ತವೆ . ಏನೇ ಬಂದರೂ ಧೈರ್ಯವಾಗಿ ಪ್ರಯತ್ನ ಮಾಡುತ್ತಾ ಹೋಗುವುದು . ಇವೆರಡರಲ್ಲೂ ನೀವು ಸೋಲಬಾರದು .ನಿಮ್ಮನ್ನು ಆಶಾವಾದ ಕಡೆ ಎಳೆಯುವುದಕ್ಕೆ ಒಂದು ನಿಗೂಢವಾದ ಶಕ್ತಿ ಪ್ರಯತ್ನ ಮಾಡುತ್ತಿರುತ್ತದೆ . ರಾಹು ಗ್ರಹ ತೃತೀಯದಲ್ಲಿ ಇದ್ದಾನೆ. ಅಂದರೆ, ವಿಕ್ರಮ ಸ್ಥಾನದಲ್ಲಿ ಇದ್ದಾನೆ . ಸಾಡೇ ಸಾತಿ ಕಳೆದು ನೀವು ಮುಂದೆ ಹೋಗುತ್ತಿದ್ದೀರಾ .ಇದನ್ನು ಧೈರ್ಯವಾಗಿ ನಿಂತು ಎದುರಿಸಬೇಕು .ಇಂತಹ ಶಕ್ತಿಯನ್ನು ರಾಹು ಗ್ರಹ ನಿಮಗೆ ನೀಡುತ್ತಿದ್ದಾನೆ . ಬಂಡ ಧೈರ್ಯ ಅಲ್ಲ ನಿಜವಾದ ಸಾಹಸಿ ಗುಣ ನಿಮಗೆ ಬರುತ್ತಿದೆ.

Leave A Reply

Your email address will not be published.