ಒಂದು ಎಲೆಯನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ

0

ನಾವು ಈ ಲೇಖನದಲ್ಲಿ ಒಂದು ಎಲೆಯನ್ನು ಆಯ್ಕೆ ಮಾಡಿ ಹಾಗೂ ನಿಮಗಿಷ್ಟ ಇರುವ ವ್ಯಕ್ತಿಗಳ ಬಗ್ಗೆ ತಿಳಿಯಿರಿ . ಇಲ್ಲಿ 1 – 2 – 3 – 4 – 5 ಅಂತ ಐದೂ ನಂಬರ್ ಗಳನ್ನು ಕೊಡಲಾಗಿದೆ. ನಿಮಗೆ ಇಷ್ಟ ಇರುವ ಅಥವಾ ನೀವು ಯಾವುದಾದರೂ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಇಷ್ಟ ಇದ್ದರೆ , ಆ ವ್ಯಕ್ತಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಇಲ್ಲಿ ನೀಡಿರುವ ಒಂದು ನಂಬರ್ ಅಲ್ಲಿ ಯಾವ ಒಂದು ನಂಬರ್ ನಿಮಗೆ ಆಕರ್ಷಕವಾಗಿ ಕಾಣುತ್ತದೆ. ಆ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕು . ಇದರ ಮೂಲಕ ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿಕೊಡಲಾಗುತ್ತದೆ. ಇದರ ಪ್ರಕಾರ ಆಯ್ಕೆ ಮಾಡಿ .

ಮೊದಲನೇ ಒಂದು ನಂಬರನ್ನು ನೀವು ಆಯ್ಕೆ ಮಾಡಿದರೆ , ನೀವು ಯಾರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ನಂಬರ್ ಆಯ್ಕೆ ಮಾಡಿದ್ದೀರಾ , ಆ ವ್ಯಕ್ತಿಯ ಬಗ್ಗೆ ಹೇಳುವುದಾದರೆ , ಆ ವ್ಯಕ್ತಿಗೆ ನಿಮ್ಮ ಮೇಲೆ ಗೌರವ ಇರುತ್ತದೆ. ವಿಶೇಷವಾಗಿ ಅವರು ನಿಮ್ಮ ಸ್ನೇಹಿತರಾಗಿ ಇರಬಹುದು , ಅಥವಾ ಸಹೋದ್ಯೋಗಿಗಳಾಗಿ ಇರಬಹುದು. ನಿಮ್ಮ ಮೇಲೆ ಗೌರವವನ್ನು ಇಟ್ಟಿರುತ್ತಾರೆ . ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳು ಕೂಡ ಆಗಿರುತ್ತಾರೆ . ನಿಮ್ಮ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗುತ್ತದೆ . ನಿಮಗೆ ಸಮಸ್ಯೆಗಳನ್ನು ತಂದು ಕೊಡುವ ಕೆಲಸಗಳನ್ನು ಅವರು ಮಾಡುವುದಿಲ್ಲ .ತುಂಬಾ ನಂಬಿಕೆ ಇಟ್ಟುಕೊಂಡಿರುವುದರಿಂದ , ನಂಬಿಕೆ ದ್ರೋಹ ಮಾಡುವ ಕೆಲಸವನ್ನು ಅವರು ಮಾಡುವುದಿಲ್ಲ .ಇವರಿಬ್ಬರ ನಡುವೆ ಒಳ್ಳೆಯ ಸಂಬಂಧ ಇರುತ್ತದೆ .

ಇನ್ನು ಮುಂದೆ ನಂಬರ್ ಎರಡನ್ನು ಆಯ್ಕೆ ಮಾಡಿದರೆ , ಈ ಒಂದು ವ್ಯಕ್ತಿಗಳಿಗೆ ನಿಮ್ಮ ಮೇಲೆ ಯಾವ ಭಾವನೆ ಇರುತ್ತದೆ ಅಂದರೆ , ನೀವು ತುಂಬಾ ಚಂಚಲ ಸ್ವಭಾವದವರು , ನೀವು ತುಂಬಾ ಯೋಚನೆಗಳನ್ನು ಮಾಡುತ್ತೀರಾ , ಹಲವಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರುತ್ತದೆ. ಇಂತಹ ಒಂದು ಯೋಚನೆ ಇರುತ್ತದೆ. ನಿಮ್ಮ ಮೇಲೆ ಇವರಿಗೆ ತುಂಬಾ ನಂಬಿಕೆ ಇರುವುದಿಲ್ಲ . ನಿಮ್ಮ ಮೇಲೆ ಇವರಿಗೆ ನಕಾರಾತ್ಮಕ ಯೋಚನೆಗಳು ಹೆಚ್ಚಾಗಿ ಇರುತ್ತದೆ . ಈ ಒಂದು ಸಂಬಂಧ ತುಂಬಾ ದಿನ ನಡೆಯುವದಿಲ್ಲ . ಇಂತಹ ಒಂದು ಸಮಸ್ಯೆ ಈ ಒಂದು ನಂಬರ್ ನಲ್ಲಿ ಇರುತ್ತದೆ. ಈ ಒಂದು ವ್ಯಕ್ತಿಯ ಮೇಲೆ ಬಲವಾದ ಭಾವನೆ ಇದ್ದರೆ, ಸ್ವಲ್ಪ ತಡೆಯುವುರು ಒಳ್ಳೆಯದು.

ಇನ್ನು ಮೂರನೆಯದಾಗಿ ನಂಬರ್ ಮೂರನ್ನು ತೆಗೆದುಕೊಂಡರೆ , ಈ ಒಂದು ವ್ಯಕ್ತಿಗಳು ನಿಮ್ಮ ಬಗ್ಗೆ ಏನನ್ನು ಯೋಚಿಸುತ್ತಾರೆ ಅಂದರೆ, ನಿಮ್ಮನ್ನ ಬಲವಾದ ವ್ಯಕ್ತಿತ್ವ ಇರುವ ವ್ಯಕ್ತಿ ಅಂತ ಭಾವಿಸುತ್ತಾರೆ. ಇದರ ಜೊತೆಗೆ ಅವರು ನಿಮ್ಮ ಮೇಲೆ ಅವಲಂಭಿತವಾಗಬೇಕು ಅಂತ ಅಂದುಕೊಳ್ಳುತ್ತಾರೆ. ಯಾವುದಾದರೂ ಕೆಲಸ ಅಂತ ಬಂದಾಗ , ಅವರು ನಿಮ್ಮನ್ನು ಕೇಳುವಂತ ವರಾಗುತ್ತಾರೆ . ಇವರಿಗೆ ನಿಮ್ಮ ಮೇಲೆ ನಂಬಿಕೆ ಇರುತ್ತದೆ . ಯಾಕೆಂದರೆ ನೀವು ಯಾವುದಾದರೂ ಒಂದು ಕೆಲಸವನ್ನು ಕೈ ಹಿಡಿದರೆ , ಆ ಕೆಲಸವನ್ನು ಪರಿಪೂರ್ಣವಾಗಿ ಮಾಡುತ್ತೀರಾ , ಎಂಬ ನಂಬಿಕೆ ಅವರಿಗೆ ಇರುತ್ತದೆ . ಇಬ್ಬರ ನಡುವೆ ಸ್ನೇಹ ತನ ತುಂಬಾ ಬಲವಾಗಿ ಇರುತ್ತದೆ . ಸಂಬಂಧ ಕೂಡ ತುಂಬಾ ಮುಂದೆ ಹೋಗುವ ಸಂಬಂಧ ಆಗಿರುತ್ತದೆ . ಇದು ಮುಂದೆ ಬದಲಾವಣೆ ಆಗುವ ಸಾಧ್ಯತೆ ಕೂಡ ಇರುತ್ತದೆ .

ಇನ್ನು ಮುಂದಿನದಾಗಿ ನಂಬರ್ ನಾಲ್ಕನ್ನು ಆಯ್ಕೆ ಮಾಡಿದರೆ, ಈ ಒಂದು ವ್ಯಕ್ತಿಗೆ ನಿಮ್ಮ ಮೇಲೆ ಯಾವ ಭಾವನೆ ಇರುತ್ತದೆ ಎಂದರೆ , ಈ ವ್ಯಕ್ತಿ ತುಂಬಾ ಮುಗ್ಧರಾಗಿರುತ್ತಾರೆ. ನಿಮಗೆ ಧೈರ್ಯ , ಬಲ , ಗಟ್ಟಿತನ ಈ ವ್ಯಕ್ತಿತ್ತ ನಿಮ್ಮಲ್ಲಿ ಇಲ್ಲ ಅಂದುಕೊಂಡಿರುತ್ತಾರೆ. ನಿಮ್ಮಲ್ಲಿ ದೊಡ್ಡದಾದ ಕನಸು ಇರುವುದಿಲ್ಲ ಅಂದುಕೊಂಡಿರುತ್ತಾರೆ . ಈ ಒಂದು ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಬಹುದು. ಈ ಒಂದು ಸಂಬಂಧವನ್ನು ನಿರ್ಲಕ್ಷ ಮಾಡುವುದು ಒಳ್ಳೆಯದು .

ಕೊನೆಯದಾಗಿ ನೀವು ನಂಬರ್ ಐದನ್ನು ಆಯ್ಕೆ ಮಾಡಿದರೆ , ವಿಶೇಷವಾಗಿ ಈ ವ್ಯಕ್ತಿಗಳಿಗೆ ನೀವು ಅಂದರೆ , ತುಂಬಾ ಪ್ರೀತಿ ಇರುತ್ತದೆ . ಇದರ ಜೊತೆಗೆ ನಿಮ್ಮ ಮೇಲೆ ಅಪಾರ ನಂಬಿಕೆ ಇರುತ್ತದೆ. ನಿಮ್ಮ ಮೇಲೆ ಹೆಚ್ಚಾಗಿ ಅವಲಂಭಿತರಾಗುತ್ತಾರೆ . ನಿಮ್ಮ ಮೇಲೆ ಗೌರವ ಕೂಡ ಇರುತ್ತದೆ . ಯಾವುದಾದರೂ ಕೆಲಸವನ್ನು ಮಾಡಬೇಕು ಅಂದರೆ , ಅದನ್ನು ಹಠದಿಂದ ಮಾಡಿ ಮುಗಿಸುತ್ತಾರೆ . ಕೆಲವೊಂದು ಕಾರಣದಿಂದ ನಂಬಿಕೆ ಜಾಸ್ತಿ ಇರುವುದರಿಂದ , ಕೆಲವೊಂದು ವಿಚಾರದಲ್ಲಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತಾರೆ . ಸ್ನೇಹ ತನ ಅಥವಾ ಸಂಬಂಧ ಎರಡೂ ಕೂಡ ಹೆಚ್ಚಿನ ಬಂಧದಿಂದ ಕೂಡಿರುತ್ತದೆ . ಸಾಕಷ್ಟು ದಿನಗಳವರೆಗೆ ಈ ಸಂಬಂಧ ಮುಂದುವರೆಯುತ್ತದೆ ಎಂದು ಹೇಳಬಹುದು.

Leave A Reply

Your email address will not be published.