ನಾವು ಈ ಲೇಖನದಲ್ಲಿ ಕಾಲಿಗೆ ಬಿದ್ದು ಬೇಡಿದರೂ ಆ ಒಂದು ವಸ್ತುವನ್ನು ಏಕೆ ಕೊಡಬಾರದು , ಎಂದು ತಿಳಿದುಕೊಳ್ಳೋಣ . ಕಾಲಿಗೆ ಬಿದ್ದು ಕೇಳಿದರೂ ಈ ವಸ್ತುಗಳನ್ನು ಕೊಡ ಬೇಡಿ. ಕೊಟ್ಟರೆ, ಕಷ್ಟಗಳು ತಪ್ಪುವುದಿಲ್ಲ. ಇಂತಹ ರಹಸ್ಯವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಯೋಣ . ದಾನಗಳಲ್ಲಿ ಕೆಲವೊಂದು ಶ್ರೇಷ್ಠ ದಾನಗಳಿದೆ , ಅಂತ ಹೇಳಲಾಗಿದೆ. ಅನ್ನದಾನ , ರಕ್ತದಾನ , ವಿದ್ಯಾ ದಾನ , ಮತ್ತು ನೇತ್ರದಾನ, ಇವುಗಳನ್ನು ಮಾಡುವುದರಿಂದ , ಜೀವನದಲ್ಲಿ ತುಂಬಾ ಶುಭಫಲಗಳು ದೊರೆಯುತ್ತದೆ .
ದಾನ ಮಾಡುವ ಮೊದಲು ನಾವು ಕೆಲವೊಂದು ವಿಷಯಗಳನ್ನು ತಿಳಿದು ಕೊಳ್ಳುವುದರಿಂದ , ಒಳಿತಾಗುತ್ತದೆ . ಯಾಕೆಂದರೆ ಕೆಲವೊಂದು ವಸ್ತುಗಳನ್ನು ನಾವು ದಾನ ಮಾಡುತ್ತೇವೆ . ಆದರೆ ತಪ್ಪಾದ ಕ್ರಮದಲ್ಲಿ ದಾನ ಮಾಡುವುದರಿಂದ , ಒಳ್ಳೆಯದಕ್ಕಿಂತ ಕೆಟ್ಟ ಫಲಗಳೇ ದೊರೆಯಬಹುದು. ಮನೆಯಲ್ಲಿ ಸಮಸ್ಯೆಗಳು ತಲೆ ದೋರಬಹುದು . ಮತ್ತು ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು . ಮುಂದೆ ಹೇಳುವ ವಸ್ತುಗಳನ್ನು ದಾನ ಮಾಡುವುದರಿಂದ, ಸಂಪೂರ್ಣವಾಗಿ ದರಿದ್ರತನ ಅಂಟು ಕೊಳ್ಳಬಹುದು. ಜೀವನದಲ್ಲಿ ಕಷ್ಟಗಳು ಒಂದಾದ ಮೇಲೆ ಒಂದು ಬರಲು ಶುರುವಾಗಬಹುದು .
ಮೊದಲನೆಯದಾಗಿ ಪೊರಕೆ . ಕೊರತೆಯನ್ನು ಮಾತೆ ಮಹಾಲಕ್ಷ್ಮಿಯ ಸ್ವರೂಪ ಎಂದು ಕರೆಯಲಾಗಿದೆ . ಮನೆಯನ್ನು ಸ್ವಚ್ಛ ಗೊಳಿಸುವುದಕ್ಕೆ ಪೊರಕೆ ಬಳಸಲಾಗುತ್ತದೆ. ಮನೆಯಿಂದ ಕಸದ ರೂಪದಲ್ಲಿ ನಕಾರಾತ್ಮಕತೆಯನ್ನು ಹೊರಗೆ ಹಾಕುತ್ತದೆ. ಪೊರಕೆಯನ್ನು ನಾವು ಪೂಜೆ ಕೂಡ ಮಾಡುತ್ತೇವೆ. ಪೊರಕೆಗೆ ಕಾಲು ತಾಗಿದರೆ, ಅದನ್ನು ಮುಟ್ಟಿ ನಮಸ್ಕಾರ ಮಾಡುತ್ತೇವೆ. ಕೆಲವರು ಹೊಸ ಮನೆಗೆ ಹೋದಾಗ, ಪೊರಕೆಯನ್ನು ತೆಗೆದುಕೊಂಡು ಹೋಗುತ್ತಾರೆ.
ಇದು ಲಕ್ಷ್ಮಿಯನ್ನು ಹೊಸ ಮನೆಗೆ ತೆಗೆದುಕೊಂಡು ಹೋಗುವ ಸಂಕೇತ ಎಂದು ಹೇಳಲಾಗಿದೆ. ಪೊರಕೆಯನ್ನು ಬೇರೆಯವರಿಗೆ ಕೊಡಬಾರದು . ನಿಮ್ಮ ಮನೆಯ ಲಕ್ಷ್ಮಿಯನ್ನು ಬೇರೆಯವರಿಗೆ ಕೊಟ್ಟಂತೆ ಎಂದು ಪರಿಗಣಿಸಲಾಗುತ್ತದೆ . ಹಾಗಾಗಿ ಬೇರೆಯವರ ಮನೆಯ ಪೊರಕೆಯನ್ನು ನೀವು ಬಳಕೆ ಮಾಡಬಾರದು . ಮತ್ತು ನಿಮ್ಮ ಮನೆಯ ಪೊರಕೆಯನ್ನು ಬೇರೆಯವರಿಗೆ ನೀಡಬಾರದು . ಹೀಗೆ ಮಾಡಿದರೆ, ಮನೆಯಲ್ಲಿ ಹಣ ಉಳಿಯುವುದಿಲ್ಲ . ಹಣಕಾಸಿನ ಸಮಸ್ಯೆಗಳು ಕಾಡುತ್ತದೆ .
ಎರಡನೇಯದಾಗಿ ಸ್ಟೀಲ್ ಪಾತ್ರೆ ಅಥವಾ ಕಬ್ಬಿಣದ ಪಾತ್ರೆ . ಕೆಲವರು ನಾವು ಕಷ್ಟದಲ್ಲಿ ಇದ್ದೇವೆ ಅಡುಗೆ ಮಾಡಲು ಪಾತ್ರೆಗಳನ್ನು ದಾನ ಮಾಡಿ ಎಂದು ಕೇಳುತ್ತಾರೆ. ಆದರೆ ನೀವು ಯಾವುದೇ ಕಾರಣಕ್ಕೂ ಪಾತ್ರೆಗಳನ್ನು ದಾನ ಮಾಡಬಾರದು .ಯಾಕೆಂದರೆ ನೀವು ಅದರಲ್ಲಿ ಅಡುಗೆ ಮಾಡಿ ಊಟ ಮಾಡಿರುತ್ತೀರಿ . ಅದನ್ನು ನೀವು ಬೇರೆಯವರಿಗೆ ದಾನ ಮಾಡಿದರೆ , ದರಿದ್ರತನ ಆರೋಗ್ಯದಲ್ಲಿ ಸಮಸ್ಯೆ , ಅನ್ನದ ಕೊರತೆ ಕೂಡ ಆಗುತ್ತದೆ . ಕಬ್ಬಿಣವನ್ನು ದಾನ ಮಾಡುವುದರಿಂದ ದರಿದ್ರ ತನ ಮತ್ತು ಕಷ್ಟ ನಿಮಗೆ ಅಂಟಿಕೊಳ್ಳುತ್ತದೆ . ಆದ್ದರಿಂದ ಯಾವತ್ತೂ ನೀವು ಪಾತ್ರೆಗಳನ್ನು ದಾನ ಮಾಡಬೇಡಿ .
ಮೂರನೇಯದು ವಸ್ತ್ರ ದಾನ . ನೀವು ಹರಿದ ಅಥವಾ ಹಳೆಯದಾದ , ನೀವು ಉಪಯೋಗಿಸದೆ ಇರುವ ಬಟ್ಟೆಯನ್ನು ಯಾವತ್ತೂ ದಾನ ಮಾಡಬೇಡಿ. ನೀವು ಹೊಸ ಬಟ್ಟೆಗಳನ್ನು ಮಾತ್ರ ಬಡವರಿಗೆ ಅಥವಾ ಅವಶ್ಯಕತೆ ಇರುವವರಿಗೆ ದಾನ ಮಾಡಬೇಕು . ಹೊಸ ಬಟ್ಟೆಗಳನ್ನು ದಾನ ಮಾಡುವುದರಿಂದ , ನೀವು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಬಹುದು . ಹಳೆ ಬಟ್ಟೆಗಳನ್ನು ನೀವು ಬೇರೆಯವರಿಗೆ ಕೊಟ್ಟರೆ , ಜೀವನದಲ್ಲಿ ಕಷ್ಟಗಳು ಬರುವುದಕ್ಕೆ ಶುರುವಾಗುತ್ತದೆ . ಹಳೆ ಬಟ್ಟೆಗಳನ್ನು ಕೊಡುವ ಮುನ್ನ ರೆಮಿಡಿ ಮಾಡಿಕೊಂಡು ಕೊಡಬೇಕು. ಹಳೆ ಬಟ್ಟೆಗಳನ್ನು ರೆಮಿಡಿ ಮಾಡದೆ, ಬೇರೆಯವರಿಗೆ ಕೊಟ್ಟರೆ ಜೀವನದಲ್ಲಿ ಕಷ್ಟಗಳು ಬಂದೇ ಬರುತ್ತವೆ. ಜೀವನದಲ್ಲಿ ಲಾಭ ಅನ್ನುವುದು ನಷ್ಟ ಆಗುತ್ತಾ ಹೋಗುತ್ತದೆ . ದಾನ ಮಾಡುವುದಾದರೆ ಹೊಸ ಬಟ್ಟೆಗಳನ್ನು ದಾನ ಮಾಡಿ . ಆದರೆ ಹಳೆ ಬಟ್ಟೆಗಳನ್ನು ನೀವು ಯಾವತ್ತೂ ದಾನ ಮಾಡಬೇಡಿ .
ನಾಲ್ಕನೇಯದಾಗಿ ವಿಧ್ಯಾಭ್ಯಾಸದ ವಸ್ತುಗಳು . ನೀವು ಉಪಯೋಗಿಸಿರುವ ಪೆನ್ನು ಪುಸ್ತಕಗಳನ್ನು ಯಾವತ್ತೂ ಯಾರಿಗೂ ದಾನ ಮಾಡಬೇಡಿ . ಇದರಲ್ಲಿ ನೀವು ಅರ್ಧ ಬರೆದಿರುತ್ತೀರಾ, ಅರ್ಧ ಓದಿರುತ್ತೀರಾ, ಈ ತರಹದ ಪುಸ್ತಕಗಳನ್ನು ಬೇರೆಯವರಿಗೆ ಕೊಡಬಾರದು . ಈ ರೀತಿ ಮಾಡುವುದರಿಂದ ನಿಮಗೆ ಜೀವನದಲ್ಲಿ ಕಷ್ಟಗಳು ಬರುವುದಕ್ಕೆ ಶುರುವಾಗುತ್ತದೆ . ಹಾಗಾಗಿ ಪೆನ್ನು ಪುಸ್ತಕಗಳನ್ನು ದಾನ ಮಾಡುವುದೇ ಆದರೆ, ಹೊಸ ಪೆನ್ನು ಹೊಸ ಪುಸ್ತಕಗಳನ್ನು ದಾನ ಮಾಡಿ .
ಐದನೇಯದಾಗಿ ಅಡುಗೆಗೆ ಬಳಸುವ ಉಪ್ಪು. ಅಕ್ಕ ಪಕ್ಕದ ಮನೆಯವರು ಉಪ್ಪು ಕೇಳಿಕೊಂಡು ಬಂದಾಗ, ಉಪ್ಪನ್ನು ಕೊಡಬಾರದು . ಉಪ್ಪನ್ನು ದಾನ ಮಾಡುವುದರಿಂದ ಅದನ್ನು ಪಡೆದವನು ಶಾಶ್ವತವಾಗಿ ನಿಮ್ಮ ಋಣದಲ್ಲಿ ಬೀಳುತ್ತಾರೆ . ಅದಕ್ಕಾಗಿಯೇ ಉಪ್ಪನ್ನು ತೆಗೆದುಕೊಳ್ಳಬಾರದು . ಉಪ್ಪನ್ನು ದಾನ ಮಾಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ .
ಆರನೆಯದಾಗಿ ಹರಿತವಾದ ಕತ್ತರಿ ಮತ್ತು ಚಾಕು ಮುಂತಾದ ಚೂಪಾದ ವಸ್ತುಗಳನ್ನು ಎಂದಿಗೂ ದಾನ ಮಾಡಬಾರದು . ಇವುಗಳನ್ನು ದಾನ ಮಾಡುವುದು ಅಶುಭ ಎಂದು ಹೇಳಲಾಗಿದೆ. ಇವುಗಳನ್ನು ದಾನ ಮಾಡುವುದರಿಂದ ಬೇರೆಯವರ ಜೊತೆ ಸಂಬಂಧ ಹಾಳಾಗುತ್ತದೆ .ಮನೆಯಲ್ಲಿ ಜಗಳವಾಗುವ ಸಂಭವ ಇರುತ್ತೆ .
ಏಳನೇಯದಾಗಿ ಅರಿಶಿಣ , ಅರಿಶಿಣವನ್ನು ಗುರುವಿನ ಅಂಶ ಎಂದು ಹೇಳಲಾಗುತ್ತದೆ . ಸೂರ್ಯಾಸ್ತದ ನಂತರ ಅರಿಶಿಣವನ್ನು ದಾನ ಮಾಡುವುದು ಒಳ್ಳೆಯದಲ್ಲ .ಹಾಗೊಂದು ವೇಳೆ ಯಾರಾದರೂ ಅರಿಶಿಣವನ್ನು ಕೇಳಿಕೊಂಡು ಬಂದರೆ ಕೊಡಬಾರದು . ಹೀಗೆ ದಾನ ಮಾಡುವುದರಿಂದ , ಮನೆಯಲ್ಲಿ ಸಮೃದ್ಧಿ ಕಡಿಮೆಯಾಗುತ್ತದೆ . ಸೂರ್ಯಾಸ್ತದ ನಂತರ ಯಾವ ವಸ್ತುಗಳನ್ನು ದಾನ ಮಾಡುತ್ತೇವೆಯೋ ,
ಆ ವಸ್ತುವಿನ ಕೃಪೆ ನಮ್ಮ ಮೇಲೆ ಇರುವುದಿಲ್ಲ . ಅರಿಶಿಣ ಶುಭ ಸೂಚಕವಾಗಿ ಇರುವ ಕಾರಣದಿಂದ ಸೂರ್ಯಾಸ್ತದ ನಂತರ ಅದನ್ನು ದಾನ ಮಾಡಬಾರದು . ಕೊನೆಯ ವಸ್ತು ಎಂದರೆ ಹಾಲು . ಹಾಲು ನೇರವಾಗಿ ಚಂದ್ರನಿಗೆ ಸಂಬಂಧಿಸಿದೆ .ಮತ್ತು ಇದನ್ನು ಲಕ್ಷ್ಮಿ ಮತ್ತು ವಿಷ್ಣುವಿನ ರೂಪ ಎಂದು ಪರಿಗಣಿಸಲಾಗಿದೆ . ಆದ್ದರಿಂದ ಸೂರ್ಯಾಸ್ತವಾದ ಮೇಲೆ ಹಾಲು ದಾನ ಮಾಡುವುದರಿಂದ , ಮನೆಯಲ್ಲಿ ಹಣದ ಕೊರತೆ ಉಂಟುಮಾಡುತ್ತದೆ .